ETV Bharat / business

ನಿಯಂತ್ರಣದಲ್ಲಿ ಚಿಲ್ಲರೆ ಹಣದುಬ್ಬರ: ಬಡ್ಡಿದರ ಕಡಿಮೆ ಮಾಡುತ್ತಾ ಆರ್​ಬಿಐ? - RBI Rate Cut - RBI RATE CUT

ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್​ಬಿಐ ಬಡ್ಡಿದರಗಳನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Sep 13, 2024, 1:28 PM IST

ನವದೆಹಲಿ: 2025ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹಣದುಬ್ಬರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಶೇ 4.4ರ ಮುನ್ಸೂಚನೆಗಿಂತ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ, ಮುಂಬರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಗಳಲ್ಲಿ ಆರ್​ಬಿಐ ಬಡ್ಡಿ ದರ ಕಡಿತ ಮಾಡುವ ಬಗ್ಗೆ ಚಿಂತನೆ ನಡೆಸಬಹುದು ಎಂದು ಉದ್ಯಮ ವಿಶ್ಲೇಷಕರು ಗುರುವಾರ ಹೇಳಿದ್ದಾರೆ.

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ವಾರ್ಷಿಕ ಹಣದುಬ್ಬರ ದರ (ಶೇ 3.65)ವು ಆಗಸ್ಟ್ ತಿಂಗಳಲ್ಲಿ ಕಳೆದ ಐದು ವರ್ಷಗಳಲ್ಲಿಯೇ ಎರಡನೇ ಕನಿಷ್ಠ ಮಟ್ಟದಲ್ಲಿದೆ.

ಈ ಬಗ್ಗೆ ಮಾತನಾಡಿದ ಮುಂಬೈನ ಎಂವಿಐಆರ್​ಡಿಸಿ ವಿಶ್ವ ವ್ಯಾಪಾರ ಕೇಂದ್ರದ ಅಧ್ಯಕ್ಷ ಡಾ. ವಿಜಯ್ ಕಳಂತ್ರಿ, "ಸಿಪಿಐ ಹಣದುಬ್ಬರವು ಕಳೆದ ಒಂದು ವರ್ಷದಿಂದ ಶೇಕಡಾ 6 ಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಜುಲೈ 2023 ರಿಂದ ಸತತ 12 ತಿಂಗಳು ಈ ಮಟ್ಟವನ್ನು ಮೀರಿದ ನಂತರ, ಪ್ರಸ್ತುತ ಆಹಾರ ಹಣದುಬ್ಬರವು ಸತತ ಎರಡನೇ ತಿಂಗಳು ಶೇಕಡಾ 6 ಕ್ಕಿಂತ ಕಡಿಮೆ ಮಟ್ಟದಲ್ಲಿದೆ" ಎಂದು ಹೇಳಿದರು.

ಇದಕ್ಕೆ ವ್ಯತಿರಿಕ್ತವಾಗಿ, ಗ್ರಾಮೀಣ ಬಳಕೆಯ ಹೆಚ್ಚಳದಿಂದ ಪ್ರೇರಿತವಾದ ಪ್ರಮುಖ ಹಣದುಬ್ಬರವು ಸತತ ಮೂರನೇ ತಿಂಗಳು ಶೇಕಡಾ 3.41 ಕ್ಕೆ ಏರಿಕೆಯಾಗಿದೆ.

"ಪ್ರಸ್ತುತ ಹಣದುಬ್ಬರ ಪ್ರವೃತ್ತಿಗಳನ್ನು ಗಮನಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಆರ್​ಬಿಐನ ನಿರೀಕ್ಷೆಯಾದ ಶೇಕಡಾ 4.4 ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ" ಎಂದು ಕಳಂತ್ರಿ ತಿಳಿಸಿದರು.

ಹಿಂದಿನ ತಿಂಗಳಲ್ಲಿ ಶೇಕಡಾ 4.7 ರಷ್ಟು ಪರಿಷ್ಕೃತ ಬೆಳವಣಿಗೆಯ ನಂತರ ಭಾರತದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು ಜುಲೈನಲ್ಲಿ ಶೇಕಡಾ 4.8 ಕ್ಕೆ ಏರಿಕೆಯಾಗಿದೆ. ವಿದ್ಯುತ್ ಮತ್ತು ಗಣಿಗಾರಿಕೆ ಕ್ಷೇತ್ರಗಳ ಬೆಳವಣಿಗೆಯಲ್ಲಿನ ಮಂದಗತಿಯ ಪರಿಣಾಮವನ್ನು ಉತ್ಪಾದನಾ ವಲಯದಲ್ಲಿನ ವೇಗವರ್ಧಿತ ಬೆಳವಣಿಗೆಯು ಸಮತೋಲನಗೊಳಿಸಿದೆ. ಕೇರ್ ಎಡ್ಜ್ ರೇಟಿಂಗ್ಸ್​ ಮುಖ್ಯ ಅರ್ಥಶಾಸ್ತ್ರಜ್ಞೆ ರಜನಿ ಸಿನ್ಹಾ ಅವರ ಪ್ರಕಾರ, ಮಾನ್ಸೂನ್ ಉತ್ತಮವಾಗಿದ್ದು, ಖಾರಿಫ್ ಬಿತ್ತನೆಯೂ ಚೆನ್ನಾಗಿ ಆಗಿದೆ. ಇದು ಖಾಸಗಿ ಬಳಕೆಯ ಬೇಡಿಕೆ ಹೆಚ್ಚಾಗಲು ಕಾರಣವಾಗಲಿದೆ.

ಈ ಹಿಂದೆ ಜೂನ್ 7, 2024 ರಂದು ನಡೆದ ಮೂರು ದಿನಗಳ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ಮುಕ್ತಾಯದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು ಶೇಕಡಾ 6.5 ರಲ್ಲಿಯೇ ಮುಂದುವರಿಸಿದೆ.

"ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇಕಡಾ 6.5 ರಲ್ಲಿಯೇ ಮುಂದುವರಿಸಿಕೊಂಡು ಹೋಗಲು 4:2 ಬಹುಮತದಿಂದ ನಿರ್ಧರಿಸಿದೆ. ಇದರ ಪರಿಣಾಮವಾಗಿ, ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್ ಡಿಎಫ್) ದರವು ಶೇಕಡಾ 6.25 ರಷ್ಟಿದ್ದರೆ, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರ ಮತ್ತು ಬ್ಯಾಂಕ್ ದರವು ಶೇಕಡಾ 6.75 ರಷ್ಟಿದೆ." ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದರು.

ಇದನ್ನೂ ಓದಿ : ಕೇಂದ್ರ ತೆರಿಗೆಯಲ್ಲಿನ ರಾಜ್ಯಗಳ ಪಾಲನ್ನು ಶೇಕಡಾ 50 ಕ್ಕೆ ಹೆಚ್ಚಿಸಿ: ಕೇರಳ ಸಿಎಂ ಒತ್ತಾಯ - Union taxes

ETV Bharat Logo

Copyright © 2025 Ushodaya Enterprises Pvt. Ltd., All Rights Reserved.