ETV Bharat / business

ಸಾರ್ವಕಾಲಿಕ ದಾಖಲೆ ಬರೆದ ಭಾರತ ವಿದೇಶಿ ವಿನಿಮಯ ಮೀಸಲು: ದೇಶದ ಆರ್ಥಿಕತೆಗೆ ಬಂತು ಭಾರಿ ಬಲ - All time high Indias forex reserves - ALL TIME HIGH INDIAS FOREX RESERVES

ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ. ಇದು ದೇಶದ ಆರ್ಥಿಕತೆ ಬಲ ತಂದಿದ್ದು. ಭಾರತವು ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಹೊಂದಿರುವ ದೇಶವಾಗಿದೆ.

Record forex reserves to boost economy, promote domestic trade: Industry
ಸಾರ್ವಕಾಲಿಕ ದಾಖಲೆ ಬರೆದ ಭಾರತ ವಿದೇಶಿ ವಿನಿಮಯ ಮೀಸಲು: ದೇಶದ ಆರ್ಥಿಕತೆಗೆ ಬಂತು ಭಾರಿ ಬಲ (IANS)
author img

By ETV Bharat Karnataka Team

Published : Aug 31, 2024, 10:31 AM IST

ನವದೆಹಲಿ: ಭಾರತದ ವಿದೇಶೀ ವಿನಿಮಯ ಮೀಸಲು ಸಾರ್ವಕಾಲಿಕ ದಾಖಲೆ ಬರೆದಿದೆ. ಇದು ಬಾಹ್ಯ ವಲಯದ ಸ್ಥಿತಿಸ್ಥಾಪಕತ್ವ ಹೆಚ್ಚಳಕ್ಕೆ ಕಾರಣವಾಗಿದೆ. ಈ ಮೂಲಕ ಆರ್ಥಿಕತೆ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ವಿದೇಶೀ ವಿನಿಮಯ ಮೀಸಲು $7.023 ಶತಕೋಟಿಯಷ್ಟು ಏರಿಕೆಯಾಗುವ ಮೂಲಕ ಆಗಸ್ಟ್ 23ಕ್ಕೆ ಕೊನೆಗೊಂಡ ವಾರದಲ್ಲಿ $681.68 ಶತಕೋಟಿಗೆ ತಲುಪಿದೆ.

ವಿದೇಶಿ ವಿನಿಮಯ ಮೀಸಲು ಹೆಚ್ಚಾದಷ್ಟು ದೇಶದ ಆರ್ಥಿಕತೆ ಬಲ ಬರುತ್ತದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ PHD ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಸಂಜೀವ್ ಅಗರವಾಲ್, ಕಾರ್ಯತಂತ್ರದ ನೀತಿ ಉಪಕ್ರಮಗಳು ಮತ್ತು ವಿತ್ತೀಯ ನೀತಿ ನಿಲುವುಗಳ ಬೆಂಬಲದೊಂದಿಗೆ ಜಾಗತಿಕ ಆರ್ಥಿಕ ಹೆಡ್‌ವಿಂಡ್‌ಗಳು ಮತ್ತು ಆಳವಾದ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ನಡುವೆಯೂ ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ದಾಖಲೆ ಬರೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದು ಭಾರತದ ಆರ್ಥಿಕತೆ ವೇಗದ ಅಭಿವೃದ್ಧಿ ಪಥದಲ್ಲಿ ಮುಂದುವರೆಯಲು ಉತ್ತೇಜನ ನೀಡುತ್ತದೆ. ಅಂತಾರಾಷ್ಟ್ರೀಯವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ, ವಿದೇಶಿ ಹೂಡಿಕೆಗಳನ್ನು ಸೆಳೆಯಲು ಅನುಕೂಲ ಮಾಡಿಕೊಡುವುದರ ಜತೆ ಜತೆಗೆ ದೇಶೀಯ ವ್ಯಾಪಾರ ಮತ್ತು ಉದ್ಯಮದ ಉತ್ತೇಜನಕ್ಕೂ ಕಾರಣವಾಗುತ್ತದೆ ಎಂದು ಅಗರವಾಲ್ ಹೇಳಿದ್ದಾರೆ.

ಹಿಂದಿನ ವಾರದಲ್ಲಿ ಒಟ್ಟಾರೆ ವಿದೇಶಿ ವಿನಿಮಯ ಮೀಸಲು $674.664 ಶತಕೋಟಿಗೆ ಜಿಗಿದಿತ್ತು. ಒಟ್ಟಾರೆ ಮೀಸಲುಗಳ ಹಿಂದಿನ ಸಾರ್ವಕಾಲಿಕ ಗರಿಷ್ಠ ಮಟ್ಟವು ಆಗಸ್ಟ್ 2 ರ ಹೊತ್ತಿಗೆ $674.919 ಶತಕೋಟಿಗೆ ಏರಿಕೆಯಾಗಿದೆ. ಇನ್ನು ಇದೇ ವಾರದಲ್ಲಿ ಚಿನ್ನದ ಸಂಗ್ರಹವು $893 ಮಿಲಿಯನ್‌ನಿಂದ $60.997 ಶತಕೋಟಿಗೆ ಏರಿಕೆಯಾಗಿದೆ. ವಿದೇಶಿ ವಿನಿಮಯ ಮೀಸಲು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದ್ದರಿಂದ ಆರ್‌ಬಿಐಗೆ ವಿತ್ತೀಯ ನೀತಿ ಮತ್ತು ಕರೆನ್ಸಿ ನಿರ್ವಹಣೆಯಲ್ಲಿ ಹೆಚ್ಚಿನ ನಮ್ಯತೆಯನ್ನು ಒದಗಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೀಸಲುಗಳ ಪ್ರಮುಖ ಅಂಶವಾಗಿರುವ ವಿದೇಶಿ ಕರೆನ್ಸಿ ಆಸ್ತಿಗಳು $5.983 ಶತಕೋಟಿಯಿಂದ $597.552 ಶತಕೋಟಿಗೆ ಏರಿಕೆಯಾಗಿದೆ ಎಂದು ಇತ್ತೀಚಿನ RBI ಅಂಕಿ - ಅಂಶಗಳು ತೋರಿಸಿದ್ದವು. ಇತ್ತೀಚಿನ ಮಾಹಿತಿಯ ಪ್ರಕಾರ, IMF ನೊಂದಿಗೆ ಭಾರತದ ಮೀಸಲು ಸ್ಥಾನವು $ 30 ಮಿಲಿಯನ್‌ನಿಂದ $ 4.68 ಶತಕೋಟಿಗೆ ಏರಿಕೆ ಕಂಡಿದೆ.

ಭಾರತವು ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಹೊಂದಿರುವ ದೇಶವಾಗಿದೆ, ಜೊತೆಗೆ ವಿಶ್ವದ ಅತಿದೊಡ್ಡ ಎಫ್‌ಡಿಐ ಸ್ವೀಕರಿಸುವವರಲ್ಲಿ ಒಂದಾಗಿದೆ ಎಂದು ಅರ್ಥಶಾಸ್ತ್ರಜ್ಞ ಅಮನ್ ಅಗರ್ವಾಲ್ ಹೇಳಿದ್ದಾರೆ.

ಭಾರತಕ್ಕೆ ವಿದೇಶಿ ನೇರ ಒಳಹರಿವು ಶೇಕಡಾ 26.4 ರಷ್ಟು ಏರಿಕೆಯಾಗಿದೆ, ಇದು ಏಪ್ರಿಲ್-ಜೂನ್ 2024 ರ ಅವಧಿಯಲ್ಲಿ $22.4 ಶತಕೋಟಿಗೆ ತಲುಪಿದೆ, ಸುಮಾರು ಐದು ತ್ರೈಮಾಸಿಕಗಳಿಂದ ವೇಗವಾಗಿ ವಿಸ್ತರಣೆಯಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ತಿಳಿಸಿದೆ ಎಂದಿದ್ದಾರೆ. ದೇಶವು ಜಾಗತಿಕವಾಗಿ ಹೂಡಿಕೆಗೆ ನೆಚ್ಚಿನ ತಾಣವಾಗಿದೆ ಎಂದು ಅಗರ್ವಾಲ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ: ಇದು ಗಟ್ಟಿ ಮನಸ್ಸಿನ ನಿರ್ಧಾರ! 15000 ರೂ. ಸಂಬಳದ ಕೆಲಸ ಬಿಟ್ಟು, ಈಗ 10 ಕೋಟಿ ವಹಿವಾಟು ನಡೆಸುತ್ತಿರುವ ಯುವಕ; ಹಲವರಿಗೆ ಅನ್ನದಾತ! - SUCCESS STORY OF AJAY RAI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.