ETV Bharat / business

ರತನ್ ಟಾಟಾ ಹೇಳಿದ ಈ ಆರ್ಥಿಕ ತತ್ವಗಳನ್ನ ಪಾಲಿಸಿ: ನೈತಿಕ ಮಾರ್ಗದಲ್ಲಿ ಶ್ರೀಮಂತರಾಗಿ! - ECONOMIC PRINCIPLES BY RATAN TATA

ರತನ್ ಟಾಟಾ ಎಂದಾಗ ನಮಗೆ ಏನು ನೆನಪಾಗುತ್ತದೆ ಎಂದರೆ ವ್ಯಾಪಾರ ಕ್ಷೇತ್ರದಲ್ಲಿ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಮಹಾನ್ ಉದ್ಯಮಿ ಅಂತಾ ಹೌದಲ್ವಾ, ಹಾಗಾದರೆ ಅವರು ಹೇಳಿದ ಆರ್ಥಿಕ ತತ್ತ್ವಗಳು ಯಾವವು ಎಂಬುದನ್ನು ನೋಡೋಣ

Ratan Tata: Economic Principles by Ratan Tata
ರತನ್ ಟಾಟಾ ಹೇಳಿದ ಆರ್ಥಿಕ ತತ್ವಗಳನ್ನ ಪಾಲಿಸಿ, ನೈತಿಕ ಮಾರ್ಗದಲ್ಲಿ ಶ್ರೀಮಂತರಾಗಿ! (IANS)
author img

By ETV Bharat Karnataka Team

Published : Oct 11, 2024, 1:03 PM IST

ರತನ್ ಟಾಟಾ ಎಂದಾಗ ನಮಗೆ ನೆನಪಾಗುವುದು ಅವರ ಉದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆ. ಜಗತ್ತಿನ ನೂರಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಭಾರತೀಯ ಕಂಪನಿಯೊಂದರ ಛಾಪು ಮೂಡಿಸಿದ ಧೀಮಂತ. ಇದನ್ನು ಸಾಧಿಸಲು ಅವರು ಅನೇಕ ನಿರ್ಧಾರಗಳನ್ನು ತೆಗೆದುಕೊಂಡರು. ತ್ಯಾಗವನ್ನೂ ಮಾಡಿದರು. ಹಣ ಸಂಪಾದಿಸುವ ಮತ್ತು ನಿರ್ವಹಿಸುವ ಅವರ ಸಲಹೆ ಯಾವಾಗಲೂ ಪ್ರಾಯೋಗಿಕವಾಗಿದೆ. ಅವರು ಹೇಳಿದ ಕೆಲವು ತತ್ತ್ವಗಳು ಹೀಗಿವೆ.

ನೈತಿಕತೆ: ನಾವೆಲ್ಲರೂ ಹಣ ಸಂಪಾದಿಸಲು ಬಯಸುತ್ತೇವೆ. ಹಣವನ್ನು ಬೆನ್ನಟ್ಟುವುದು ಎಷ್ಟು ಮುಖ್ಯವೋ ಅದನ್ನು ನೈತಿಕವಾಗಿ ಈಡೇರಿಸಿಕೊಳ್ಳಬೇಕಾಗಿರುವುದು ಅಷ್ಟೇ ಮುಖ್ಯವಾಗುತ್ತದೆ. ಗಳಿಕೆಯು ನ್ಯಾಯಯುತವಾಗಿರುವವರೆಗೆ ನಾವು ಆರ್ಥಿಕವಾಗಿ ಯಶಸ್ವಿಯಾಗುತ್ತೇವೆ. ಕೆಟ್ಟ ರೀತಿಯಲ್ಲಿ, ನೀವು ಹಣವನ್ನು ತ್ವರಿತವಾಗಿ ಸಂಗ್ರಹಿಸಲು ಬಯಸಿದರೆ, ಅವನತಿ ಪ್ರಾರಂಭವಾಗುತ್ತದೆ.

ಕೊಡುವುದನ್ನು ಕಲಿಯಿರಿ: ನಾವು ನೀಡಲು ಸಿದ್ಧರಾದಾಗ ಎಲ್ಲವೂ ನಮಗೆ ಹಿಂತಿರುಗುತ್ತದೆ. ಅದೇ ತತ್ವವು ಒಳ್ಳೆಯ ಕಾರ್ಯ ಮತ್ತು ಹಣ ಎರಡಕ್ಕೂ ಅನ್ವಯಿಸುತ್ತದೆ. ಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡಿದರೆ.. ನಿಮಗೆ ಬೇಕು ಎಂದು ಎನಿಸಿದಾಗ ಯಾವುದೇ ರೂಪದಲ್ಲಿ ಅಥವಾ ಯಾರಿಂದಲೂ ಸಹಾಯ ಸಿಗುತ್ತದೆ. ಇದು ನಿಮಗೆ ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ.

ಅವಕಾಶಗಳನ್ನು ತೆಗೆದುಕೊಳ್ಳಿ: ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಭಾವಿಸುವ ಅಭ್ಯಾಸದಿಂದ ನಾವು ನೀವೆಲ್ಲ ಹೊರಬರಬೇಕು. ಆಗ ಮಾತ್ರ ನೀವು ಹಣ, ವೃತ್ತಿ ಮತ್ತು ಕೆಲಸದ ಜೀವನದಲ್ಲಿ ಮುಂದೆ ಬರುತ್ತೀರಿ ಹಾಗೂ ಬೆಳೆಯುತ್ತೀರಿ. ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಧೈರ್ಯವಾಗಿರಿ ಮತ್ತು ವಿಭಿನ್ನವಾಗಿರಿ. ಪ್ರತಿದಿನ ನಿಮ್ಮ ಬಗ್ಗೆ ಸ್ಟಾಕ್ ತೆಗೆದುಕೊಳ್ಳುವುದು ಅತ್ಯಗತ್ಯ.

ನಿರ್ಧಾರಗಳನ್ನು ಗೌರವಿಸಿ: ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ನಂಬಿರಿ. ಒಳ್ಳೆಯದು ಅಥವಾ ಕೆಟ್ಟದು ನಂತರದ ವಿಷಯ. ನಿರ್ಧಾರ ತೆಗೆದುಕೊಳ್ಳುವ ಮೊದಲು ಅದನ್ನು ಕೂಲಂಕಷವಾಗಿ ವಿಶ್ಲೇಷಿಸಬೇಕು. ವಿಶೇಷವಾಗಿ ಹಣವನ್ನು ಹೂಡಿಕೆ ಮಾಡುವಾಗ. ಫಲಿತಾಂಶವನ್ನು ಮೊದಲೇ ಊಹಿಸಬೇಕು. ನಿರ್ಧಾರವನ್ನು ಮಾಡಿದ ನಂತರ, ಅದನ್ನು ಸರಿಯಾಗಿ ಮಾಡಲು ಪ್ರಯತ್ನಿಸಿ.

ಸ್ಮಾರ್ಟ್ ಹೂಡಿಕೆ ಅಗತ್ಯ: ಒಂದೇ ಸ್ಥಳದಲ್ಲಿ ಹೂಡಿಕೆ ಮಾಡುವುದರಿಂದ ಹಣ ಗಳಿಸುವ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ, ವೈವಿಧ್ಯತೆಗೆ ಒತ್ತು ನೀಡಬೇಕು. ಹಲವು ಕ್ಷೇತ್ರಗಳಲ್ಲಿ ವಿಸ್ತರಿಸಿರುವ ಟಾಟಾ ಸಮೂಹವೇ ಇದಕ್ಕೆ ಉದಾಹರಣೆ. ನಮ್ಮ ಹೂಡಿಕೆಗಳು ಬಹು ಯೋಜನೆಗಳಲ್ಲಿವೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಇವುಗಳಲ್ಲಿ ಕೆಲವುದರಗಳಲ್ಲಿ ನಷ್ಟವಾಗಬಹುದು. ಕೆಲವು ಸುರಕ್ಷಿತವಾಗಿ ಕಾಣಿಸುತ್ತವೆ. ಇವೆಲ್ಲವೂ ಸಮನ್ವಯಗೊಂಡಾಗ ಮಾತ್ರ ನಾವು ಆರ್ಥಿಕವಾಗಿ ಉನ್ನತ ಮಟ್ಟ ತಲುಪಲು ಸಾಧ್ಯ.

ಇವುಗಳನ್ನೂ ಓದಿ:ಕರ್ನಾಟಕ ಹೂಡಿಕೆಗೆ ಪ್ರಮುಖ ತಾಣ ಎಂದಿದ್ದರು ರತನ್ ಟಾಟಾ; ರಾಜ್ಯಕ್ಕೆ ಟಾಟಾ ಕೊಡುಗೆಗಳು ಹಲವು

ಟಾಟಾ ಗ್ರೂಪ್​ನ ಬೃಹತ್​​​​​​​​​​​​​​​​ ಬೆಳವಣಿಗೆಗೆ ರತನ್​ ಪಾತ್ರ ಹಿರಿದು; ಹೀಗಿದೆ ಅವರ ಅಭಿವೃದ್ಧಿಯ ಪರ್ವ

ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ: ಅಂಬಾನಿ ನಂ.1, 2ನೇ ಸ್ಥಾನದಲ್ಲಿ ಅದಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.