ETV Bharat / business

ಸಾಫ್ಟ್​ವೇರ್, ಹಾರ್ಡ್​ವೇರ್ ಉದ್ಯಮದಲ್ಲಿ ಫ್ರೆಶರ್ಸ್​ಗಳ ನೇಮಕಾತಿಗೆ ಆದ್ಯತೆ: ವರದಿ - Hiring in India - HIRING IN INDIA

ಭಾರತದ ಹಾರ್ಡ್​ವೇರ್, ಸಾಫ್ಟ್​ವೇರ್ ಉದ್ಯಮದಲ್ಲಿ ಕುಶಲ ಹಾಗೂ ಪ್ರತಿಭಾವಂತ ಫ್ರೆಶರ್ಸ್​ಗಳ ನೇಮಕಾತಿ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಪ್ರತಿಭಾವಂತ ಫ್ರೆಶರ್ಸ್​ಗಳ ನೇಮಕಾತಿಗೆ ಆದ್ಯತೆ
ಪ್ರತಿಭಾವಂತ ಫ್ರೆಶರ್ಸ್​ಗಳ ನೇಮಕಾತಿಗೆ ಆದ್ಯತೆ (Photo: IANS)
author img

By ETV Bharat Karnataka Team

Published : Jun 14, 2024, 1:10 PM IST

ಬೆಂಗಳೂರು: ಭಾರತದಲ್ಲಿನ ಐಟಿ ಕಂಪನಿಗಳು, ವಿಶೇಷವಾಗಿ ಹಾರ್ಡ್​ವೇರ್ ಮತ್ತು ಸಾಫ್ಟ್​ವೇರ್ ಕ್ಷೇತ್ರಗಳಲ್ಲಿ ಈಗ ತಾನೆ ಕಾಲೇಜಿನಿಂದ ಹೊರಬಂದ ಫ್ರೆಶರ್ಸ್​ ಉದ್ಯೋಗಿಗಳನ್ನು ಹೆಚ್ಚಾಗಿ ನೇಮಿಸಿಕೊಳ್ಳುತ್ತಿವೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಕಳೆದ ಆರು ತಿಂಗಳಲ್ಲಿ ಫ್ರೆಶರ್ಸ್​ಗಳಿಗೆ ಶೇ. 5ರಷ್ಟು ಬೇಡಿಕೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಅಂಕಿ-ಅಂಶಗಳ ಪ್ರಕಾರ, ಐಟಿ- ಸಾಫ್ಟ್​ವೇರ್ ಮತ್ತು ಹಾರ್ಡ್​ವೇರ್ ಉದ್ಯಮಗಳಲ್ಲಿ ಹೊಸ ಪದವೀಧರರು ವರ್ಷಕ್ಕೆ ಸರಾಸರಿ 4.07 ಲಕ್ಷದಿಂದ 7.49 ಲಕ್ಷ ರೂ.ಗಳವರೆಗೆ (ಎಲ್​ಪಿಎ) ಅತ್ಯಧಿಕ ವೇತನ ಪಡೆಯುತ್ತಾರೆ ಎಂದು ಟ್ಯಾಲೆಂಟ್ ಪ್ಲಾಟ್​ಫಾರ್ಮ್ ಫೌಂಡಿಟ್ (ಹಿಂದೆ ಮಾನ್​ಸ್ಟರ್ ಎಪಿಎಸಿ ಮತ್ತು ಎಂಇ) ವರದಿ ತಿಳಿಸಿದೆ.

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್ಎಸ್ಐ) ಉದ್ಯಮಗಳು ಇದರ ನಂತರದ ಸ್ಥಾನಗಳಲ್ಲಿದ್ದು, ಈ ವಲಯಗಳಲ್ಲಿ ಫ್ರೆಶರ್ಸ್​ಗಳಿಗೆ ವರ್ಷಕ್ಕೆ ಸರಾಸರಿ 3.06 ರಿಂದ 5.49 ಲಕ್ಷ ರೂ.ಗಳವರೆಗೆ ಸಂಬಳದ ಆಫರ್ ನೀಡಲಾಗುತ್ತಿದೆ.

ಹಾಗೆಯೇ, ಫ್ರೆಶರ್ಸ್​ಗಳಿಗೆ ಉತ್ತಮ ಸಂಬಳ ನೀಡುವ ನೀಡುವ ಇತರ ಕೈಗಾರಿಕೆಗಳಲ್ಲಿ ಆಟೋಮೋಟಿವ್, ಎಂಜಿನಿಯರಿಂಗ್ ಮತ್ತು ಎಫ್ಎಂಸಿಜಿ, ಆಹಾರ ಮತ್ತು ಪ್ಯಾಕೇಜ್ ಮಾಡಿದ ಆಹಾರ ಉದ್ಯಮಗಳು ಸೇರಿವೆ. ಈ ಉದ್ಯಮಗಳಲ್ಲಿ ಫ್ರೆಶರ್ಸ್​ಗಳಿಗೆ ಸರಾಸರಿ 3.11 ರಿಂದ 5.38 ಎಲ್​ಪಿಎ ವರೆಗೆ ಸಂಬಳದ ಆಫರ್ ಮಾಡಲಾಗುತ್ತಿದೆ.

ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು 4.16 ಎಲ್​ಪಿಎ ಸರಾಸರಿ ಫ್ರೆಶರ್ ಸಂಬಳದೊಂದಿಗೆ ಮುಂಚೂಣಿಯಲ್ಲಿದೆ. ಮುಂಬೈನಲ್ಲಿ ಫ್ರೆಶರ್ಸ್​ಗಳಿಗೆ 3.99 ಎಲ್​ಪಿಎ ಸಂಬಳ ನೀಡಲಾಗುತ್ತಿದೆ. ದೆಹಲಿ ಮತ್ತು ಬೆಂಗಳೂರಿನ ಐಟಿ ಕಂಪನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಫ್ರೆಶರ್ಸ್​ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರೆ, ಮುಂಬೈ, ಚೆನ್ನೈ ಮತ್ತು ಪುಣೆ ನಂತರದ ಸ್ಥಾನಗಳಲ್ಲಿವೆ.

"ದೇಶದ ಸ್ಟಾರ್ಟ್ಅಪ್​ಗಳು ಮತ್ತು ಇತರ ಕಂಪನಿಗಳು ಉದ್ಯೋಗಿಗಳ ನೇಮಕಾತಿ ಸಂದರ್ಭದಲ್ಲಿ ಕೇವಲ ಅವರ ಶೈಕ್ಷಣಿಕ ಅರ್ಹತೆಗಳಿಗಿಂತ ಕೌಶಲ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಹೀಗಾಗಿ, ಯುವ ವೃತ್ತಿಪರರು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಬೇಕಾದರೆ, ತಮ್ಮ ವೃತ್ತಿಗೆ ಸಂಬಂಧಿಸಿದ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಶೈಕ್ಷಣಿಕ ಅರ್ಹತೆ ಮತ್ತು ಕೌಶಲ್ಯಗಳ ಮಧ್ಯದ ಅಂತರವನ್ನು ಕಡಿಮೆ ಮಾಡಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೂಡ ಉತ್ತಮ ಕಲಿಕೆ ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ" ಎಂದು ಫೌಂಡಿಟ್ ಸಿಇಒ ಶೇಖರ್ ಗರಿಸಾ ಹೇಳಿದರು.

ಇದನ್ನೂ ಓದಿ : ಏಪ್ರಿಲ್​ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ 5ರಷ್ಟು ಬೆಳವಣಿಗೆ - Industrial Production Of India

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.