ETV Bharat / business

5 ವರ್ಷದಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆ ಶೇ 57ರಷ್ಟು ಹೆಚ್ಚಳ - Bengaluru Residential Prices - BENGALURU RESIDENTIAL PRICES

ಕಳೆದ 5 ವರ್ಷಗಳಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆಗಳು ಶೇಕಡಾ 57ರಷ್ಟು ಏರಿಕೆಯಾಗಿವೆ.

5 ವರ್ಷದಲ್ಲಿ ಬೆಂಗಳೂರಿನ ವಸತಿ ಕಟ್ಟಡಗಳ ಬೆಲೆ ಶೇ 57 ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 4, 2024, 4:22 PM IST

ಬೆಂಗಳೂರು: 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಮಹಾನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ವಸತಿ ಕಟ್ಟಡಗಳ ಸರಾಸರಿ ಬೆಲೆಗಳು ಶೇಕಡಾ 57ರಷ್ಟು ಏರಿಕೆಯಾಗಿವೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಈಗಿನ ಟ್ರೆಂಡ್​ಗಳನ್ನು ನೋಡಿದರೆ, 2023ಕ್ಕೆ ಹೋಲಿಸಿದರೆ ಈ ವರ್ಷದ ಅಂತ್ಯದ ವೇಳೆಗೆ ನಗರದಲ್ಲಿ ವಸತಿ ಕಟ್ಟಡಗಳ ನಿರ್ಮಾಣ ಮತ್ತು ಮಾರಾಟ ಶೇಕಡಾ 10ರಿಂದ 15ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಅನಾರಾಕ್ ವರದಿಯ (Anarock Report) ಪ್ರಕಾರ, ಸರಾಸರಿ ಬಂಡವಾಳ ಮೌಲ್ಯಗಳು ನಗರದಾದ್ಯಂತ ಶೇಕಡಾ 10ರಷ್ಟು ಮಧ್ಯಮ ಪ್ರಮಾಣದ ಏರಿಕೆಯಾಗುವ ನಿರೀಕ್ಷೆಯಿದೆ. ನಗರದ ಪ್ರಮುಖ ಸ್ಥಳಗಳು ಮತ್ತು ಟೆಕ್ ಕಾರಿಡಾರ್​ಗಳ ಪ್ರದೇಶಗಳಲ್ಲಿನ ಕಟ್ಟಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

"2024ರ ಮೊದಲಾರ್ಧದ ವೇಳೆಗೆ (ಎಚ್ 1) ನಗರದಲ್ಲಿ ವಸತಿ ಕಟ್ಟಡಗಳ ಸರಾಸರಿ ಬೆಲೆಗಳು ಪ್ರತಿ ಚದರ ಅಡಿಗೆ 7,800 ರೂ.ಗಳಷ್ಟಿದೆ. 2019ರ ಮೊದಲಾರ್ಧದಲ್ಲಿ ಇದು ಪ್ರತಿ ಚದರ ಅಡಿಗೆ 4,960 ರೂ. ಆಗಿತ್ತು" ಎಂದು ಅನಾರಾಕ್ ಗ್ರೂಪ್ ನ ಪ್ರಾದೇಶಿಕ ನಿರ್ದೇಶಕ ಮತ್ತು ಸಂಶೋಧನಾ ಮುಖ್ಯಸ್ಥ ಡಾ.ಪ್ರಶಾಂತ್ ಠಾಕೂರ್ ಹೇಳಿದರು.

ಬೆಂಗಳೂರಿನಲ್ಲಿ ವಸತಿ ಕಟ್ಟಡಗಳ ಬೆಲೆಗಳು ಅತ್ಯಧಿಕ ಏರಿಕೆ ಕಂಡಿದ್ದು, 2023ರ ಮೊದಲಾರ್ಧದ ಅಂತ್ಯದ ವೇಳೆಗೆ ಚದರ ಅಡಿಗೆ 5,900 ರೂ. ಇದ್ದ ಬೆಲೆ 2024ರ ಮೊದಲಾರ್ಧದ ಅಂತ್ಯದ ವೇಳೆಗೆ ಪ್ರತಿ ಚದರ ಅಡಿಗೆ 7,800 ರೂ.ಗೆ ಏರಿಕೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 32ರಷ್ಟು ಹೆಚ್ಚಳವಾಗಿದೆ.

2024ರ ಮೊದಲಾರ್ಧದಲ್ಲಿ ಸುಮಾರು 32,500 ಸಂಖ್ಯೆಯ ವಸತಿ ಕಟ್ಟಡಗಳ ನಿರ್ಮಾಣ ಆರಂಭವಾಗಿದೆ. ಇದು 2023ರ ಮೊದಲಾರ್ಧಕ್ಕೆ ಹೋಲಿಸಿದರೆ ಶೇಕಡಾ 30ರಷ್ಟು ಹೆಚ್ಚಾಗಿದೆ. 2024 ರ ಮೊದಲಾರ್ಧದಲ್ಲಿ ಆರಂಭವಾದ ಸುಮಾರು 32,500 ಕಟ್ಟಡಗಳ ಪೈಕಿ ಪ್ರೀಮಿಯಂ ವಿಭಾಗ (ರೂ 80 ಲಕ್ಷ-ರೂ 1.5 ಕೋಟಿ) ಶೇಕಡಾ 39ರಷ್ಟು ಒಟ್ಟಾರೆ ಪಾಲನ್ನು ಹೊಂದಿದೆ. ಇದರ ನಂತರ ಐಷಾರಾಮಿ ವಿಭಾಗ (ರೂ 1.5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ)ವು ಶೇಕಡಾ 36ರಷ್ಟು ಪಾಲನ್ನು ಹೊಂದಿದೆ.

"2024ರ ಮೊದಲಾರ್ಧದಲ್ಲಿ ಬೆಂಗಳೂರಿನ ಪ್ರೀಮಿಯಂ ಮತ್ತು ಐಷಾರಾಮಿ ವಿಭಾಗಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣವು ಹೆಚ್ಚಾಗಿದ್ದರಿಂದ ಸರಾಸರಿ ಬೆಲೆಗಳ ಏರಿಕೆಗೆ ಕಾರಣವಾಗಿದೆ" ಎಂದು ಡಾ.ಠಾಕೂರ್ ಹೇಳಿದರು. 2024ರ ಮೊದಲಾರ್ಧದ ಅಂತ್ಯದ ವೇಳೆಗೆ, ಬೆಂಗಳೂರಿನಲ್ಲಿ ಲಭ್ಯವಿರುವ ವಸತಿ ಕಟ್ಟಡಗಳ ಸ್ಟಾಕ್ ಸಂಖ್ಯೆ ಸುಮಾರು 45,420 ಯುನಿಟ್​ಗಳಷ್ಟಿತ್ತು. ಸಂಚಾರ ದಟ್ಟಣೆ, ನೀರಿನ ಕೊರತೆ, ವಾಯುಮಾಲಿನ್ಯ, ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಮತ್ತು ಪ್ರವಾಹಕ್ಕೆ ಕಾರಣವಾಗುವ ನಗರ ವಿಸ್ತರಣೆಯಂತಹ ಬೆಂಗಳೂರಿನ ಸವಾಲುಗಳನ್ನು ಕೂಡ ವರದಿ ತೋರಿಸಿದೆ.

ಇದನ್ನೂ ಓದಿ: ಭಾರತವೀಗ ಆರ್ಥಿಕ ಆಶಾವಾದಿ ರಾಷ್ಟ್ರ: ಜನತೆಯ ನಾಡಿಮಿಡಿತ ಬಹಿರಂಗಪಡಿಸಿದ ಸಮೀಕ್ಷೆ - India Most Optimistic Nation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.