ETV Bharat / business

ಗುಳ್ಳೆಗಳಂತೆ ಹೆಚ್ಚುತ್ತಿವೆ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳು, ಹೂಡಿಕೆದಾರರೇ ಎಚ್ಚರ: ಸೆಬಿ ಮುಖ್ಯಸ್ಥೆ - price manipulation in SME

ಅನೇಕ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳ ಷೇರು ಮಾರುಕಟ್ಟೆಯಲ್ಲಿ ಗುಳ್ಳೆಗಳಂತೆ ಹೆಚ್ಚುತ್ತಿವೆ ಮತ್ತು ಅವು ಸಮಂಜಸವಾಗಿ ಕಾಣುತ್ತಿಲ್ಲ ಎಂದು ಸೆಬಿ ಮುಖಸ್ಥೆ ಮಾಧಬಿ ಪುರಿ ಬುಚ್ ಹೇಳಿದ್ದಾರೆ.

small and mid cap stocks  capital markets regulator  valuation parameters
ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷೆ ಮಾಧಬಿ ಪುರಿ ಬುಚ್
author img

By PTI

Published : Mar 12, 2024, 9:12 AM IST

ಮುಂಬೈ, ಮಹಾರಾಷ್ಟ್ರ: ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ (ಎಸ್‌ಎಂಇ) ಷೇರು ಬೆಲೆಯನ್ನು ತಿರುಚಲಾಗುತ್ತಿದ್ದು, ಈ ರಿಸ್ಕ್ ವಲಯದಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬಾಚ್ ಎಚ್ಚರಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸಣ್ಣ ಮತ್ತು ಮಿಡ್-ಕ್ಯಾಪ್ ವಿಭಾಗದಲ್ಲಿನ ಷೇರುಗಳ ಬೆಲೆಗಳು ಬಹಳ ವೇಗವಾಗಿ ಏರುತ್ತಿವೆ. ಈ ವಲಯದಲ್ಲಿ ಹೂಡಿಕೆದಾರರು ಹಣ ಕಳೆದುಕೊಳ್ಳುವ ಲಕ್ಷಣಗಳು ಹೆಚ್ಚಾಗಿದೆ. ಅದು ಮಾರುಕಟ್ಟೆಗೆ ಒಳ್ಳೆಯದಲ್ಲ. ಏರುತ್ತಿರುವ ಷೇರಿನ ಬೆಲೆಗಳು ಆಯಾ ಕಂಪನಿಗಳ ಆರ್ಥಿಕ ಮೂಲಗಳಿಗೆ ಸಂಬಂಧಿಸಿದಂತೆ ತೋರುತ್ತಿಲ್ಲ. ಇವುಗಳು ಸಮಂಜಸವಾದ ಬೆಲೆಯಲ್ಲಿ ವ್ಯಾಪಾರವಾಗುತ್ತಿಲ್ಲ. ಜನವರಿ 2023 ರಿಂದ, ಈಕ್ವಿಟಿ ಮಾರುಕಟ್ಟೆಗಳಲ್ಲಿನ ಸಣ್ಣ ಮತ್ತು ಮಧ್ಯಮ-ಕ್ಯಾಪ್ ಷೇರುಗಳು ಪ್ರಮುಖ ಸೂಚ್ಯಂಕಗಳನ್ನು ಮೀರಿಸುತ್ತಿವೆ. ಈಗಾಗಲೇ ಹೆಚ್ಚಿನ ಮ್ಯೂಚುವಲ್ ಫಂಡ್ ಕಂಪನಿಗಳು ಈ ರೀತಿಯ ಯೋಜನೆಗಳಲ್ಲಿ ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಸ್ವೀಕರಿಸುತ್ತಿಲ್ಲ ಎಂದು ಬುಚ್ ವಿವರಿಸಿದರು.

ಐಪಿಒಗಳು ಮತ್ತು ವಹಿವಾಟಿನಲ್ಲಿ ಒಂದೇ ರೀತಿಯ ಪ್ರವೃತ್ತಿ ಇದೆ: ಎಸ್‌ಎಂಇ ವಲಯದ ಷೇರುಗಳ ಐಪಿಒಗಳಲ್ಲಿ ಮತ್ತು ಮಾರುಕಟ್ಟೆಯಲ್ಲಿನ ವಹಿವಾಟಿನ ಬೆಲೆಗಳಲ್ಲಿ ಭಾರೀ ಏರಿಳಿತವಾಗುತ್ತಿದೆ. ಇವುಗಳ ಬಗ್ಗೆ ಇನ್ನೂ ಸಂಪೂರ್ಣ ತೀರ್ಮಾನಕ್ಕೆ ಬಂದಿಲ್ಲ. ನಾವು ಎಲ್ಲಾ ಕೋನಗಳಿಂದ ವಿಶ್ಲೇಷಿಸುತ್ತಿದ್ದೇವೆ. ಯಾವುದೇ ತಪ್ಪು ಕಂಡುಬಂದಲ್ಲಿ, ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. SME ವಲಯದ ಕಂಪನಿಗಳು ಹೂಡಿಕೆದಾರರಿಗೆ ಒಳಗೊಂಡಿರುವ ಅಪಾಯಗಳನ್ನು ವಿವರಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

ಹೂಡಿಕೆಗಳನ್ನು ಆಗಾಗ ಪರಿಶೀಲಿಸಬೇಕು: ಸಣ್ಣ ಮತ್ತು ಮಧ್ಯಮ ಪ್ರಮಾಣದ ಷೇರುಗಳ ಬಗ್ಗೆ ಸೆಬಿ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉದ್ಯಮವು ಪ್ರತಿಕ್ರಿಯಿಸಿದೆ. ಈ ವಿಭಾಗದಲ್ಲಿ ಯಾವುದೇ ಹಿಂಪಡೆಯುವಿಕೆಗಳು (ರಿಡಿಂಪ್ಶನ್‌ಗಳು) ಅಪಾಯಕಾರಿ ರೀತಿಯಲ್ಲಿ ಕಂಡುಬರುವುದಿಲ್ಲ. 2023 ರಲ್ಲಿ ಮಿಡ್‌ಕ್ಯಾಪ್ ಫಂಡ್ ಯೋಜನೆಗಳಲ್ಲಿ ರೂ.23,000 ಕೋಟಿಗಳು ಬಂದಿದ್ದರೆ, ರೂ.41,000 ಕೋಟಿಗಳನ್ನು ಸಣ್ಣ ಪ್ರಮಾಣದ ನಿಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಎಚ್ಚರಿಕೆಯ ಹೊರತಾಗಿಯೂ ಈ ಪ್ರವೃತ್ತಿ ಮುಂದುವರಿಯುತ್ತಿದೆ. ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ವಾರ್ಷಿಕವಾಗಿ ಪರಿಶೀಲಿಸಬೇಕೆಂದು ಬುಚ್​ ಸಲಹೆ ನೀಡುತ್ತಾರೆ.

T+0 ವಹಿವಾಟು: ಈ ತಿಂಗಳ 28 ರಿಂದ ಷೇರುಗಳನ್ನು ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ, ತಕ್ಷಣವೇ ಇತ್ಯರ್ಥವನ್ನು ಮಾಡಲಾಗುತ್ತದೆ. T+0 ಆಗಿ ವ್ಯವಹರಿಸುವ ಈ ನೀತಿಯನ್ನು ಹೂಡಿಕೆದಾರರಿಗೆ ಐಚ್ಛಿಕವಾಗಿ ಮಾಡಲಾಗುವುದು. ಪ್ರಸ್ತುತ, ಸ್ಟಾಕ್ ಮಾರುಕಟ್ಟೆಯಲ್ಲಿನ ಎಲ್ಲಾ ಷೇರುಗಳನ್ನು T+1 ಆಧಾರದ ಮೇಲೆ ಅಂದರೆ ವಹಿವಾಟಿನ ಮುಂದಿನ ವಹಿವಾಟಿನ ದಿನದಂದು ಇತ್ಯರ್ಥಗೊಳಿಸಲಾಗುತ್ತದೆ. ಚೀನಾದ ನಂತರ ಅತಿ ಕಡಿಮೆ ಸಮಯದಲ್ಲಿ ವಹಿವಾಟು ಪ್ರಕ್ರಿಯೆ ಪೂರ್ಣಗೊಳಿಸಲಿ ಹೊರಟಿರುವ ದೇಶ ನಮ್ಮದು. ಪ್ರಸ್ತುತ ಇತರ ಪ್ರಮುಖ ದೇಶಗಳಲ್ಲಿ ವಹಿವಾಟು ಕನಿಷ್ಠ 2 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಬುಚ್ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಟಿ + 0 ಇತ್ಯರ್ಥವನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು ಎಂದು ಸೆಬಿ ಹೇಳಿದೆ. ಮೊದಲ ಹಂತದಲ್ಲಿ, ಈ ವಿಧಾನವನ್ನು ಮಧ್ಯಾಹ್ನ 1:30 ರವರೆಗಿನ ವಹಿವಾಟುಗಳಿಗೆ ಅಳವಡಿಸಲಾಗುವುದು. ನಗದು ಮತ್ತು ಸೆಕ್ಯೂರಿಟಿಗಳ ಇತ್ಯರ್ಥವನ್ನು ಅದೇ ದಿನ ಸಂಜೆ 4:30 ಗಂಟೆಗೆ ಪೂರ್ಣಗೊಳಿಸಬೇಕು. ಎರಡನೇ ಹಂತದಲ್ಲಿ, 3:30 PM ವರೆಗಿನ ವಹಿವಾಟುಗಳಿಗೆ ಐಚ್ಛಿಕ ವ್ಯಾಪಾರದಿಂದ ಇತ್ಯರ್ಥವನ್ನು ಮಾಡಲಾಗುತ್ತದೆ. ಎರಡನೇ ಹಂತದ ಅನುಷ್ಠಾನದ ನಂತರ, ಮೊದಲ ಹಂತವನ್ನು ತೆಗೆದುಹಾಕಲಾಗುತ್ತದೆ. ಆರಂಭದಲ್ಲಿ, ಮಾರುಕಟ್ಟೆ ಬಂಡವಾಳೀಕರಣದ ಆಧಾರದ ಮೇಲೆ ಅಗ್ರ 500 ಕಂಪನಿಗಳು T+0 ವಹಿವಾಟಿಗೆ ಅರ್ಹವಾಗಿರುತ್ತವೆ.

ಸ್ಟಾಕ್ ಬ್ರೋಕರ್‌ಗಳಿಗೆ ಹೆಚ್ಚಿನ ನಿಯಮಾವಳಿ: ಸೋಮವಾರ ಸೆಬಿಯು ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಅರ್ಹ ಸ್ಟಾಕ್ ಬ್ರೋಕರ್‌ಗಳಿಗೆ (ಕ್ಯೂಎಸ್‌ಬಿ) ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವುದಾಗಿ ಘೋಷಿಸಿತು. ಸ್ಟಾಕ್ ಬ್ರೋಕರ್‌ಗಳನ್ನು QSB ಎಂದು ವರ್ಗೀಕರಿಸುವಾಗ ಕೆಲವು ಅಂಶಗಳನ್ನು (ಕ್ಲೈಂಟ್‌ಗಳ ಸಂಖ್ಯೆ, ಕ್ಲೈಂಟ್‌ಗಳೊಂದಿಗಿನ ಒಟ್ಟು ನಿಧಿಗಳು, ಬ್ರೋಕರ್‌ನ ವ್ಯಾಪಾರದ ಪ್ರಮಾಣ, ದಿನದ ಕೊನೆಯಲ್ಲಿ ಎಲ್ಲಾ ಕ್ಲೈಂಟ್‌ಗಳ ಒಟ್ಟು ಮಾರ್ಜಿನ್‌ಗಳು) ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇನ್ನಷ್ಟು ನಿಯಮಗಳನ್ನು ಅನುಸರಿಸಲಾಗುವುದು. ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅಪಾಯ ನಿರ್ವಹಣೆ ನೀತಿಗಳು, ಕಾರ್ಯವಿಧಾನಗಳು, ಬಲವಾದ ಸೈಬರ್ ಭದ್ರತೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬೇಕು.

ಸೆಬಿ ಸೋಮವಾರ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್‌ಗಳಿಗೆ ಪರಿಷ್ಕೃತ ನಿಯಮಗಳನ್ನು ಸಹ ಸೂಚಿಸಿದೆ. ಇದರ ಅಡಿಯಲ್ಲಿ, ಕನಿಷ್ಠ ರೂ.10 ಲಕ್ಷ ಹೂಡಿಕೆಯೊಂದಿಗೆ, ಹೂಡಿಕೆದಾರರು ಬಾಡಿಗೆ ಆಸ್ತಿಗಳಲ್ಲಿ ಭಾಗಶಃ ಮಾಲೀಕತ್ವವನ್ನು ಪಡೆಯಬಹುದಾಗಿದೆ.

ಓದಿ: ನಿಫ್ಟಿ 161 & ಸೆನ್ಸೆಕ್ಸ್​ 617 ಪಾಯಿಂಟ್ಸ್​ ಕುಸಿತ: ಒಂದೇ ದಿನ 3 ಲಕ್ಷ ಕೋಟಿ ನಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.