ನವದೆಹಲಿ: ದೈನಂದಿನ ಹಣಕಾಸು ವ್ಯವಹಾರಗಳ ಆ್ಯಪ್ ಪೇಟಿಎಂ ಈ ತ್ರೈಮಾಸಿಕದಲ್ಲಿ ತನ್ನ ಆದಾಯವನ್ನು ಹೆಚ್ಚಳ ಮಾಡಿಕೊಂಡಿದೆ. ವರ್ಷಕ್ಕೆ 38 ಪ್ರತಿಶತದಷ್ಟು ಬಂಪರ್ ಆಪರೇಟಿಂಗ್ ಆದಾಯವನ್ನು ದಾಖಲಿಸಿದೆ. ಫಿನ್‌ಟೆಕ್ ದೈತ್ಯ ಎಂದು ಕರೆಯಿಸಿಕೊಳ್ಳುವ ಕಂಪನಿಯು ಈ ತ್ರೈಮಾಸಿಕದಲ್ಲಿ 14 ಲಕ್ಷ ಡಿವೈಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಪೇಟಿಎಂನ ಪಾವತಿಗಳ ಆದಾಯದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಶೇ 45ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. 1730 ಕೋಟಿ ರೂ.ಗಳಷ್ಟು ಆದಾಯ ಗಳಿಸಿದೆ. ಇದಲ್ಲದೇ ಪಾವತಿಗಳ ವಿಭಾಗದ ಲಾಭದಾಯಕತೆಯು ಗಮನಾರ್ಹ ಸುಧಾರಣೆ ಪ್ರದರ್ಶಿಸಿದೆ.
GMV ಹೆಚ್ಚಳವಾಗಿದ್ದು, ವ್ಯಾಪಾರ ಚಂದಾದಾರಿಕೆ ಆದಾಯ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲಾದ ಸಾಲಗಳ ಬೆಳವಣಿಗೆಯಿಂದ ಈ ಏರಿಕೆ ಕಂಡು ಬಂದಿದೆ ಎಂದು ತ್ರೈಮಾಸಿಕ ವರದಿಯಲ್ಲಿ ಹೇಳಲಾಗಿದೆ. ಇನ್-ಸ್ಟೋರ್ ಪಾವತಿಗಳಲ್ಲಿ 1 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಪ್ರಭಾವಶಾಲಿಯಾಗಿ ಬೆಳದಿದೆ.
ಇದಲ್ಲದೇ ಭಾರತದಲ್ಲಿ ಮೊಬೈಲ್ ಪಾವತಿ ಗ್ರಾಹಕರಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, 2024ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಸರಾಸರಿ ಮಾಸಿಕ ವಹಿವಾಟು ಬಳಕೆದಾರರ ಸಂಖ್ಯೆ 10 ಕೋಟಿಯನ್ನು ಮೀರಿ ಮುಂದುವರೆದಿದೆ. ಇದು ಕಂಪನಿ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಪೇಟಿಎಂ ಸೌಂಡ್ ಬಾಕ್ಸ್ ಮತ್ತು ಪೇಟಿಎಂ ಕಾರ್ಡ್ ಯಂತ್ರಗಳಿಂದ ಪೇಟಿಎಂ ವ್ಯವಹಾರದಲ್ಲಿ ಗಣನೀಯ ಬೆಳವಣಿಗೆಗೆ ಕಾರಣವಾಗಿದೆ. ಇದು ವ್ಯಾಪಾರಿಗಳಿಗೆ ಆಗುತ್ತಿದ್ದ ನಷ್ಟವನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಪೇಟಿಎಂ ಬೆಳವಣಿಗೆಗೆ ಸಹಾಯಕವಾಗಿದೆ.
ನಿವ್ವಳ ಪಾವತಿ ಮಾರ್ಜಿನ್ ಮತ್ತು ಹಣಕಾಸು ಸೇವೆಗಳ ವ್ಯವಹಾರದಲ್ಲಿನ ಬೆಳವಣಿಗೆಯಿಂದಾಗಿ ಇಯರ್ ಆನ್ ಇಯರ್ 1,520ಕೋಟಿ ರೂಗಳಷ್ಟು ಆದಾಯ ಹರಿದು ಬಂದಿದೆ. ಮಾರ್ಕೆಟಿಂಗ್ ಸೇವೆಗಳ ವಿಭಾಗದಲ್ಲಿ (ಹಿಂದೆ ಕ್ಲೌಡ್ ಮತ್ತು ಕಾಮರ್ಸ್), ಕಂಪನಿಯು Paytm ಅಪ್ಲಿಕೇಶನ್ ಟ್ರಾಫಿಕ್‌ನ ಹಣಗಳಿಕೆಯ ಲಾಭ ಹೀಗೆ ಮುಂದುವರೆದಿದೆ. ಈ ವಿಭಾಗವು ಟಿಕೆಟಿಂಗ್ (ಪ್ರಯಾಣ, ಚಲನಚಿತ್ರಗಳು, ಈವೆಂಟ್‌ಗಳು, ಇತ್ಯಾದಿಗಳನ್ನು ಒಳಗೊಂಡಂತೆ), ಜಾಹೀರಾತು, ಕ್ರೆಡಿಟ್ ಕಾರ್ಡ್ ಮಾರ್ಕೆಟಿಂಗ್ ಮತ್ತು ಡೀಲ್‌ಗಳು ಮತ್ತು ಉಡುಗೊರೆ ವೋಚರ್‌ಗಳಂತಹ ವಿವಿಧ ಸೇವೆಗಳನ್ನು ಒಳಗೊಂಡಿದೆ.
ಹಣಕಾಸು ಪಾವತಿಗಳ ನಾಯಕನಾಗಿ ಪೇಟಿಎಂ ಮುಂದುವರೆದಿದೆ. ಸುಧಾರಿತ ಟೇಕ್‌ರೇಟ್‌ನಿಂದಾಗಿ ಕಂಪನಿಯು ವಿತರಿಸಿದ ಸಾಲಗಳ ಮೌಲ್ಯವು 15,535 ಕೋಟಿ ರೂ.ಗೆ ತಲುಪಿದೆ, ಇದು ವರ್ಷದಿಂದ ವರ್ಷಕ್ಕೆ 56 ಪ್ರತಿಶತದಷ್ಟು ಹೆಚ್ಚಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ 490 ಕೋಟಿ ರೂ.ಗಳಷ್ಟು ಹೆಚ್ಚಿನ ಟಿಕೆಟ್ ಸಾಲಗಳನ್ನು ಕಂಪನಿ ವಿತರಣೆ ಮಾಡಿದೆ. ಆಪ್ಟಿಮೈಸ್ಡ್ ವರ್ಕ್‌ಫ್ಲೋಗಳನ್ನು ರಚಿಸುವುದರ ಜೊತೆಗೆ ಆಪರೇಟಿಂಗ್ ಹತೋಟಿಯನ್ನು ಹೆಚ್ಚಿಸಲು AI ಸಹಾಯವನ್ನು Paytm ಬಳಸುತ್ತಿದೆ.