ETV Bharat / business

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಬ್ಯಾನ್​: ಇಂದಿನಿಂದ ಆಗಲಿದೆ ಈ ಪ್ರಮುಖ ಬದಲಾವಣೆ

author img

By ETV Bharat Karnataka Team

Published : Mar 15, 2024, 2:05 PM IST

ಪೇಟಿಎಂ ಪಾವತಿ ವ್ಯವಸ್ಥೆಗಳಲ್ಲಿ ಪ್ರಮುಖ ಬದಲಾವಣೆಗಳು ಮಾರ್ಚ್​​ 15ರಿಂದ ಜಾರಿಯಾಗಲಿದೆ. ಈ ಕುರಿತು ಗ್ರಾಹಕರು, ಬಳಕೆದಾರರು ಅರಿಯುವುದು ಅವಶ್ಯವಾಗಿದೆ.

Paytm Payments Bank key changes come to force from today

ನವದೆಹಲಿ: ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​​ ಲಿಮಿಟೆಡ್​​ (ಪಿಪಿಬಿಎಲ್​) ಮೇಲೆ ಆರ್​ಬಿಐ ವಿಧಿಸಿರುವ ನಿರ್ಬಂಧ ಇಂದಿನಿಂದ ಜಾರಿಗೆ ಬರಲಿದೆ. ಇದರೊಂದಿಗೆ ಇಂದಿನಿಂದ ಈ ಬ್ಯಾಂಕ್​ನ ವಹಿವಾಟು ಸಂಪೂರ್ಣ ನಿಷೇಧಿಸಲಾಗುವುದು. ಇದರಿಂದ ಬ್ಯಾಂಕಿಂಗ್​​ ವ್ಯವಸ್ಥೆಗಳಲ್ಲಿ ಪ್ರಮುಖ ಬದಲಾವಣೆಗಳು ಮಾರ್ಚ್​​ 15ರಿಂದ ಜಾರಿಯಾಗಲಿದೆ. ಈ ಕುರಿತು ಗ್ರಾಹಕರು, ಬಳಕೆದಾರರು ಅರಿಯುವುದು ಅವಶ್ಯವಾಗಿದೆ.

ಮೊದಲಿಗೆ, ಪೇಟಿಎಂ ಪೇಮೆಂಟ್ಸ್​​ ಬ್ಯಾಂಕ್​ನಲ್ಲಿ ಸದ್ಯ ಖಾತೆ ಹೊಂದಿರುವವರು ಇನ್ಮುಂದೆ ತಮ್ಮ ಖಾತೆಗೆ ಯಾವುದೇ ಠೇವಣಿ ಮಾಡಲು ಸಾಧ್ಯವಿಲ್ಲ.

ಸೆಂಟ್ರಲ್​ ಬ್ಯಾಂಕ್​ ಅನುಸಾರ ಬಡ್ಡಿ ಹೊರತಾಗಿ ಯಾವುದೇ ಸಾಲಗಳು ಅಥವಾ ಠೇವಣಿ ಮಾಡಲು ಸಾಧ್ಯವಿಲ್ಲ. ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​​ಗೆ ಕ್ಯಾಶ್​​ಬಾಕ್ಸ್​​​​, ಪಾಲುದಾರ ಬ್ಯಾಂಕ್​ ನಿಂದ ಹಣ ಪಡೆಯಲು ಅಥವಾ ಮರು ಪಾವತಿಸಲು ಸಾಧ್ಯವಿಲ್ಲ.

ಆದಾಗ್ಯೂ, ಪೇಟಿಎಂ ಖಾತೆಯಲ್ಲಿರುವ ಹಣ ಬಳಕೆ, ಹಿಂಪಡೆಯಲು ಅಥವಾ ವರ್ಗಾವಣೆ ಮಾಡಲು ಸಾಧ್ಯವಿದೆ.

ಪಾಲುದಾರರ ಬ್ಯಾಂಕ್​ನಿಂದ ಮರುಪಾವತಿಗಳು, ಕ್ಯಾಶ್‌ಬ್ಯಾಕ್‌ಗಳು, ಬಡ್ಡಿ ಪಡೆಯಲು ಮಾರ್ಚ್​ 15ರ ಬಳಿಕವೂ ಅನುಮತಿಸಲಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಖಾತೆಯನ್ನು ಪಾಲುದಾರ ಬ್ಯಾಂಕ್‌ಗಳೊಂದಿಗೆ ನಿರ್ವಹಿಸಲಾದಲ್ಲಿ ಆ ಠೇವಣಿಗಳನ್ನು ಹಿಂಪಡೆಯಬಹುದು ಸ್ವೀಪ್-ಇನ್, ಪಾವತಿಗಳ ಬ್ಯಾಂಕ್‌ಗೆ ಸೂಚಿಸಲಾದ ಬ್ಯಾಲೆನ್ಸ್ ಮೇಲಿನ ಸೀಲಿಂಗ್‌ಗೆ ಒಳಪಟ್ಟಿರುತ್ತದೆ ಎಂದು ಆರ್​ಬಿಐ ತಿಳಿಸಿದೆ.

ಆದರೆ, ಪಾಲುದಾರ ಬ್ಯಾಂಕ್​ ಮೂಲಕ ಪೇಟಿಎಂ ಪೇಮೆಂಟ್​​​ ಬ್ಯಾಂಕ್​​ನಲ್ಲಿ ಹೊಸ ಠೇವಣಿ ಮಾಡಲು ಸಾಧ್ಯವಿಲ್ಲ.

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಖಾತೆಗೆ ಒಮ್ಮೆ ವೇತನಗಳು ಕ್ರೆಡಿಟ್​ ಆದಲ್ಲಿ ಅದರ​​ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಜೊತೆಗೆ ನೇರ ಪ್ರಯೋಜನ ಸೇರಿದಂತೆ ಇತರೆ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಮಾರ್ಚ್​ 15ರ ನಂತರ ಖಾತೆಗಳಲ್ಲಿ ಕ್ರೆಡಿಟ್ ಅಥವಾ ಠೇವಣಿ ಮಾಡಲು ಅನುಮತಿಸಲಾಗುವುದಿಲ್ಲ. ಈ ಹಿನ್ನಲೆ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿದೆ.

ಗ್ರಾಹಕರು, ವ್ಯಾಪಾರಿಗಳು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಬಳಸುವ ವ್ಯಾಪಾರಿಗಳು ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಹೊರತುಪಡಿಸಿ ಬೇರೆ ಬ್ಯಾಂಕ್​ ಖಾತೆಗೆ ಲಿಂಕ್​ ಮಾಡಿದ್ದರೆ, ಅವರು ಮಾರ್ಚ್ 15 ರ ನಂತರವೂ ಈ ವ್ಯವಸ್ಥೆಯನ್ನು ಬಳಸುವುದನ್ನು ಮುಂದುವರಿಸಬಹುದು.

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ಗೆ ಮರುಪಾವತಿಗಳು, ಕ್ಯಾಶ್‌ಬ್ಯಾಕ್‌ಗಳು, ವ್ಯಾಲೆಟ್‌ಗೆ ಯಾವುದೇ ಕ್ರೆಡಿಟ್ ಅನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಖಾತೆಗಳಿಗೆ ಯುಪಿಐ ಮತ್ತು ಐಎಂಪಿಎಸ್​​ ಮೂಲಕ ಹಣವನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಪಾಸ್ಟಾಗ್​​ಗಳಲ್ಲಿ ಕೂಡ ಪೇಟಿಎಂ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಪೇಟಿಎಂ ಫಾಸ್ಟ್​​ಟ್ಯಾಗ್​ ​​ಬಳಕೆದಾರರು ಮಾರ್ಚ್​ 15ರೊಳಗೆ ಬೇರೆ ಬ್ಯಾಂಕ್​ ಆಯ್ಕೆ ಮಾಡಿ: ​ಬಳಕೆದಾರರಿಗೆ NHAI ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.