ನವದೆಹಲಿ: ಲೋಕಸಭೆ ಚುನಾವಣೆಯ 7ನೇ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿವೆ. 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ₹72 ರೂಪಾಯಿ ಇಳಿಕೆ ಮಾಡಲಾಗಿದೆ. ಈ ಬೆಲೆಗಳು ಇಂದಿನಿಂದಲೇ (ಶನಿವಾರ) ಜಾರಿಗೆ ಬರಲಿವೆ. ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ₹69.50 ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹70.50, ಕೋಲ್ಕತ್ತಾದಲ್ಲಿ ಇದೇ ಸಿಲಿಂಡರ್ ಬೆಲೆ ₹72 ಕಡಿಮೆಯಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ₹69.50 ಮತ್ತು ಚೆನ್ನೈನಲ್ಲಿ ₹70.50ಕ್ಕೆ ಇಳಿಕೆ ಕಂಡಿದೆ.
ಕ್ರಮೇಣ ಕಡಿಮೆಯಾಗುತ್ತಿರುವ ವಾಣಿಜ್ಯ ಅನಿಲ ಸಿಲಿಂಡರ್ ದರ: ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿರುವುದು ಇದೇ ಮೊದಲಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲೂ ಅವುಗಳ ಬೆಲೆ ಕಡಿಮೆಯಾಗಿದೆ.
ಹೊಸ ಬೆಲೆಗಳ ಪ್ರಕಾರ, ವಿವಿಧ ರಾಜ್ಯಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಗಳು ಹೇಗೆ?
- ದೆಹಲಿ - ₹1,676 (ಹಿಂದಿನ ದರ- ₹1,745.50)
- ಬೆಂಗಳೂರು - ₹1,755 (ಹಿಂದಿನ ದರ- ₹1,825.50)
- ಮುಂಬೈ - ₹1,629 (ಹಿಂದಿನ ದರ ₹1,698.50)
- ಕೋಲ್ಕತ್ತಾ - ₹1,787 (ಹಿಂದಿನ ಬೆಲೆ ₹1,859)
- ಚೆನ್ನೈ - ₹1,840 (ಹಿಂದಿನ ದರ ₹1,911)
- ಹೈದರಾಬಾದ್ - ₹1,903 (ಹಿಂದಿನ ಬೆಲೆ ₹1,975.50)
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ: ತೈಲ ಕಂಪನಿಗಳು ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ₹803, ಆದರೆ, ಉಜ್ವಲ ಫಲಾನುಭವಿಗಳಿಗೆ ₹603 ರೂಪಾಯಿಗೆ ಮಾತ್ರ ಸಿಗಲಿದೆ. ಮುಂಬೈನಲ್ಲಿ ಈ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ₹802.50, ಬೆಂಗಳೂರಿನಲ್ಲಿ ₹805.50, ಚೆನ್ನೈನಲ್ಲಿ ₹818.50, ಹೈದರಾಬಾದ್‌ನಲ್ಲಿ ₹855, ವಿಶಾಖಪಟ್ಟಣಂನಲ್ಲಿ ₹812 ಇದೆ.
LPG ಸಿಲಿಂಡರ್ ಬೆಲೆಗಳನ್ನು ಹೇಗೆ ಮತ್ತು ಎಲ್ಲಿ ಪರಿಶೀಲಿಸಬೇಕು?: ಆನ್‌ಲೈನ್‌ನಲ್ಲಿ LPG ಸಿಲಿಂಡರ್‌ಗಳ ನಿಜವಾದ ಬೆಲೆಗಳನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನೀವು ಇಂಡಿಯನ್ ಆಯಿಲ್‌ನ ಅಧಿಕೃತ ವೆಬ್‌ಸೈಟ್ https://iocl.com/prices-of-petroleum-products ನಲ್ಲಿ ಪರಿಶೀಲಿಸಬಹುದು. ಎಲ್‌ಪಿಜಿ ಬೆಲೆಯ ಹೊರತಾಗಿ ಜೆಟ್ ಇಂಧನ, ಆಟೋ ಗ್ಯಾಸ್, ಸೀಮೆಎಣ್ಣೆ ಇತ್ಯಾದಿಗಳ ಬೆಲೆಗಳನ್ನು ಸಹ ಈ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳಬಹುದು.
ಇದನ್ನೂ ಓದಿ: 4ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ - India GDP grows