Nvidia Employees Late Night Work: ಎನ್ವಿಡಿಯಾ - ಮೂರು ಟ್ರಿಲಿಯನ್ ಡಾಲರ್ ಮೌಲ್ಯದ ದೈತ್ಯ ಕಂಪನಿ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳೆಲ್ಲ ಲಕ್ಷಾಧಿಪತಿಗಳು. ಇಷ್ಟು ಸಂಪತ್ತು ನಿವೃತ್ತಿ ಪಡೆದು ಆರಾಮವಾಗಿ ಜೀವನ ಕಳೆಯಬಹುದು. ಇದೆಲ್ಲದರ ಹೊರತಾಗಿಯೂ, ಕಂಪನಿಯ ಉದ್ಯೋಗಿಗಳು ವಾರದಲ್ಲಿ ಏಳು ದಿನಗಳು, ನಿಯಮಿತವಾಗಿ ರಾತ್ರಿ 2.00 ಗಂಟೆಯವರೆಗೆ ಕೆಲಸ ಮಾಡುತ್ತಾರೆ.
ಪ್ರತಿ ದಿನ ಹತ್ತಾರು ಸಭೆಗಳಿಗೆ ಹಾಜರಾಗಿ ಮೇಲಧಿಕಾರಿಗಳ ಹೊರೆಯಲ್ಲಿ ತಾವು ಭಾಗಿಯಾಗುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲದಿದ್ದರೂ, ಉದ್ಯೋಗಿಗಳು ಕಂಪನಿಯನ್ನು ಬಿಡುವುದಿಲ್ಲ ಎಂಬ ದೃಢ ನಿಲುವು ಹೊಂದಿದ್ದಾರೆ. ಅವರೆಲ್ಲ ಯಾಕೆ ಹೀಗೆ ಮಾಡುತ್ತಿದ್ದಾರೆ? ತೊಂದರೆಯಿದ್ದರೂ ನೀವು ಯಾಕೆ ಆ ಕಂಪನಿಯಿಂದ ಹೊರಗೆ ಹೋಗುತ್ತಿಲ್ಲ? ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆ ಇಂತಹ ಎಲ್ಲ ವಿವರಗಳೊಂದಿಗೆ ಲೇಖನವನ್ನು ಪ್ರಕಟಿಸಿದೆ. ಅವರಲ್ಲಿ ಕೆಲವರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಎನ್ವಿಡಿಯಾದಲ್ಲಿ ಕೆಲಸದ ವಾತಾವರಣವು ಪ್ರೆಶರ್ ಕುಕ್ಕರ್‌ನಂತಿದೆ ಎಂದು ಹೇಳಿದ್ದಾರೆ.
'ನಾವು ಪ್ರೆಶರ್ ಕುಕ್ಕರ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ!': ಬ್ಲೂಮ್‌ಬರ್ಗ್‌ನ ಲೇಖನದ ಪ್ರಕಾರ, ಕಂಪನಿಯ ಕೆಲವು ಪ್ರಸ್ತುತ ಮತ್ತು ಮಾಜಿ ಉದ್ಯೋಗಿಗಳು ಎನ್ವಿಡಿಯಾದಲ್ಲಿ ದೀರ್ಘಾವಧಿಯ ಕೆಲಸದ ಸಮಯವನ್ನು ಬಹಿರಂಗಪಡಿಸಿದ್ದಾರೆ. ವ್ಯವಸ್ಥಾಪಕರು ನೌಕರರನ್ನು ಗದರಿಸುತ್ತಿದ್ದಾರೆ ಮತ್ತು ಮೀಟಿಂಗ್ಗಳ ಮೇಲೆ ಮೀಟಿಂಗ್ ಮಾಡ್ತಾರೆ. ಈ ಹಿಂದೆ ಎನ್ವಿಡಿಯಾದಲ್ಲಿ ಟೆಕ್ ಸಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಾರಾಂತ್ಯ ಸೇರಿದಂತೆ ಪ್ರತಿ ರಾತ್ರಿ 1-2 ಗಂಟೆಯವರೆಗೆ ಕೆಲಸ ಮಾಡುತ್ತಿದ್ದೇ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರ ಎಂಜಿನಿಯರ್ ಸಹೋದ್ಯೋಗಿಗಳು ಹೆಚ್ಚು ಸಮಯ ಕೆಲಸ ಮಾಡುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಇನ್ನು ಕೆಲವು ನೌಕರರು ಪ್ರತಿದಿನ ಕನಿಷ್ಠ 7 ಮೀಟಿಂಗ್ಗಳಿಗೆ ಹಾಜರಾಗುತ್ತಿದ್ದಾರೆ ಎಂದೂ ಹೆಸರು ಹೇಳದ ಉದ್ಯೋಗಿ ಹೇಳಿದ್ದಾರೆ. ಇದಲ್ಲದೇ, ನಿಗದಿತ ಸಮಯಕ್ಕಿಂತ ಕಡಿಮೆ ಕೆಲಸ ಮಾಡುವ ನೌಕರರನ್ನು ಕರೆದು ಕಂಪನಿ ಕ್ಲಾಸ್ ಸಹ ತೆಗೆದು ಕೊಂಡಿದೆಯಂತೆ.
ಆದಾಗ್ಯೂ, ಎನ್ವಿಡಿಯಾದಲ್ಲಿ ಕೆಲಸದ ವಾತಾವರಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನೌಕರರು ಸಂಸ್ಥೆಯನ್ನು ಬಿಡುತ್ತಿಲ್ಲ. ಕಂಪನಿಯ 2024ರ ವಾರ್ಷಿಕ ಸುಸ್ಥಿರತೆ ವರದಿಯ ಪ್ರಕಾರ - ಉದ್ಯೋಗಿ ವಹಿವಾಟು ದರವು IT ಉದ್ಯಮದಲ್ಲಿಶೇ 17.7 ರಷ್ಟಿದೆ. ಅದರಲ್ಲಿ Nvidia ಪಾಲೇ ಶೇ 2.7 ರಷ್ಟಿದೆ.
ಒತ್ತಡವಿದ್ದರೂ ಕೆಲಸ ತೊರೆಯುವ ಇಚ್ಚೆಯಿಲ್ಲ: ಆದ್ದರಿಂದಲೇ ಉದ್ಯೋಗಿಗಳು ಕಂಪನಿಯನ್ನು ತೊರೆಯುತ್ತಿಲ್ಲ. ಅಂದರೆ ನೌಕರರ ಸಂಬಳಕ್ಕೆ ಸಮನಾದ ಸ್ಟಾಕ್ ಪ್ಯಾಕೇಜ್ ಅನ್ನು ಕಂಪನಿ ನೀಡುತ್ತಿದೆ. 2019 ರಿಂದ ಎನ್ವಿಡಿಯಾ ಷೇರುಗಳು 3,776 ಪ್ರತಿಶತದಷ್ಟು ಏರಿಕೆ ಕಂಡಿವೆ. ಬ್ಲೂಮ್‌ಬರ್ಗ್ ಲೇಖನದ ಪ್ರಕಾರ, ಕಳೆದ ಐದು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಉದ್ಯೋಗಿಗಳು ಮಿಲಿಯನೇರ್‌ಗಳಾಗಿದ್ದಾರೆ. ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ ಪೋರ್ಷೆ, ಕಾರ್ವೆಟ್ಸ್ ಮತ್ತು ಲಂಬೋರ್ಘಿನಿಯಂತಹ ಉನ್ನತ ಮಟ್ಟದ ಕಾರುಗಳು ಕಂಡು ಬರುತ್ತಿವೆ. ಹಲವು ಉದ್ಯೋಗಿಗಳು ತಮ್ಮ ಆದಾಯದ ಶೇ.40ರಿಂದ 60ರಷ್ಟನ್ನು ಕೋಟಿಗಟ್ಟಲೆ ವೆಚ್ಚದ ಮನೆಗಳನ್ನು ಖರೀದಿಸಲು ವ್ಯಯಿಸುತ್ತಿದ್ದಾರೆ.
ಷೇರುಗಳ ಬೆಲೆ ಗಗನಕ್ಕೆ: 10 ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು ನಿವೃತ್ತಿಗೆ ಸಾಕಾಗುವಷ್ಟು ಈಗಲೇ ಹಣವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವರೆಲ್ಲ ಕಂಪನಿಯ ಸ್ಟ್ರಾಕ್ಸ್ ಅನುದಾನಕ್ಕಾಗಿ ಕೆಲಸ ಮಾಡುತ್ತಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಭಾರಿ ಬೆಳವಣಿಗೆ ಕಂಡು ಬರುತ್ತಿರುವುದರಿಂದ ಕಂಪನಿ ಬಿಡಲು ಇಲ್ಲಿನ ನೌಕರರು ಹಿಂದೆ- ಮುಂದೆ ನೋಡುತ್ತಿದ್ದಾರೆ. Nvidia ಚಾಟ್‌ಜಿಪಿಟಿಯಂತಹ AI ಕಂಪನಿಗಳಿಗೆ ಅತ್ಯಾಧುನಿಕ AI ಚಿಪ್‌ಗಳನ್ನು ಒದಗಿಸುತ್ತಿದೆ. ಭವಿಷ್ಯದಲ್ಲಿ ಈ ಕಂಪನಿಯ ಷೇರುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವ ಸಾಧ್ಯತೆಗಳಿವೆ. ಈ ಕಾರಣದಿಂದಲೇ ಕೆಲಸದ ವಾತಾವರಣ ಪ್ರೆಶರ್ ಕುಕ್ಕರ್ ನಂತಿದ್ದರೂ ಉದ್ಯೋಗಿಗಳು ಕಂಪನಿ ಬಿಟ್ಟು ಕದಲಲು ಇಷ್ಟ ಪಡುತ್ತಿಲ್ಲ ಎನ್ನಲಾಗಿದೆ.