ETV Bharat / business

ಟಾಟಾ ಟ್ರಸ್ಟ್​ ಅಧ್ಯಕ್ಷರಾಗಿ ನೋಯೆಲ್​ ಟಾಟಾ ನೇಮಕ: ನೂತನ ಉತ್ತರಾಧಿಕಾರಿ ಬಗ್ಗೆ ನಿಮಗೆಷ್ಟು ಗೊತ್ತು? - NOEL TATA CHAIRMAN OF TATA TRUSTS

ನೋಯೆಲ್ ಟಾಟಾ ಅವರು ಸದ್ಯ ಟಾಟಾ ಸ್ಟೀಲ್ಸ್​ ಮತ್ತು ವೋಲ್ಟ್ಸ್​​ ಸೇರಿದಂತೆ ಟಾಟಾ ಸಮೂಹದ ವಿವಿಧ ಕಂಪನಿಗಳ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Noel Tata appointed Chairman of Tata Trusts
ನೋಯೆಲ್​ ಟಾಟಾ (IANS)
author img

By ETV Bharat Karnataka Team

Published : Oct 11, 2024, 3:13 PM IST

Updated : Oct 11, 2024, 8:59 PM IST

ಮುಂಬೈ: ಟಾಟಾ ಟ್ರಸ್ಟ್​ನ ಹೊಸ ಉತ್ತರಾಧಿಕಾರಿಯಾಗಿ ನೋಯೆಲ್​ ಟಾಟಾ ಅವರನ್ನು ಅವಿರೋಧವಾಗಿ ಇಂದು ಆಯ್ಕೆ ಮಾಡಲಾಯಿತು. ಟಾಟಾ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೋಯೆಲ್​ ಟಾಟಾ ಅವರು ರತನ್​ ಟಾಟಾರ ಮಲ ಸಹೋದರ. ಟಾಟಾ ಟ್ರಸ್ಟ್​ನ ಶಾಶ್ವತ ಟ್ರಸ್ಟಿಯಾಗಿ ಮೆಹ್ಲಿ ಮಿಸ್ತ್ರಿ ಅವರನ್ನು ನೇಮಿಸಲಾಯಿತು. ಮೆಹ್ಲಿ ಅವರು ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ದಿವಂಗತ ಸೈರಸ್ ಮಿಸ್ತ್ರಿಯವರ ಸಂಬಂಧಿ.

ನೋಯೆಲ್ ಟಾಟಾ ಯಾರು ?: ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ಮಲಸಹೋದರ. ನೇವಲ್ ಹೆಚ್ ಟಾಟಾ ಮತ್ತು ಸಿಮೋನ್ ಎನ್ ಟಾಟಾ ಅವರ ಪುತ್ರನಾಗಿರುವ ನೋಯೆಲ್ ಟಾಟಾ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ ಇವರು ನಾಲ್ಕು ದಶಕಗಳಿಂದ ಟಾಟಾ ಸಮೂಹದ ಭಾಗವಾಗಿದ್ದಾರೆ. ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕ, ಟ್ರೆಂಟ್, ವೋಲ್ಟಾಸ್ ಮತ್ತು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷ, ಹಾಗೆಯೇ ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿ ಲಿಮಿಟೆಡ್‌ನ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಟಾಟಾ ಸಮೂಹದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಟಾಟಾ ಇಂಟರ್‌ನ್ಯಾಶನಲ್‌ ಲಿಮಿಟೆಡ್​​ನಲ್ಲಿ ವೃತ್ತಿಜೀವನ ಆರಂಭಿಸಿದ್ದ ನೋಯೆಲ್ ಟಾಟಾ ಅವರು 1999 ರ ಜೂನ್​ನಲ್ಲಿ ಟ್ರೆಂಟ್‌ನ ವ್ಯವಸ್ಥಾಪಕ ನಿರ್ದೇಶಕರಾದರು. ಈ ಸಂಸ್ಥೆಯನ್ನು ಅವರ ತಾಯಿ ಸಿಮೋನ್ ಡುನೋಯರ್ ಅವರು ಸ್ಥಾಪಿಸಿದ್ದರು. ಈ ಸಂಸ್ಥೆಯ ಎಂಡಿ ಆದ ಬಳಿಕ ಮತ್ತಷ್ಟು ಅಭಿವೃದ್ಧಿಪಡಿಸಿ, ಲಾಭದಾಯಕ ಉದ್ಯಮವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಬಳಿಕ 2003 ರಲ್ಲಿ ಟೈಟಾನ್ ಇಂಡಸ್ಟ್ರೀಸ್ ಮತ್ತು ವೋಲ್ಟಾಸ್‌ನ ನಿರ್ದೇಶಕ ಸ್ಥಾನವನ್ನು ನೋಯೆಲ್ ಅಲಂಕರಿಸಿದರು. ಟೈಟಾನ್ ಕಂಪನಿಯು ತನಿಷ್ಕ್, ಟೈಟಾನ್, ಟೈಟಾನ್ ಐ ಮತ್ತು ಫಾಸ್ಟ್ರ್ಯಾಕ್‌ನಂತಹ ಬ್ರ್ಯಾಂಡ್‌ಗಳನ್ನು ಹೊಂದಿದೆ.

ಟಾಟಾದ ರಿಟೇಲ್ ಅಂಗವಾದ ಟ್ರೆಂಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಇರು ಒಂದೇ ಮಳಿಗೆಯಿಂದ ವಿವಿಧ ಸ್ವರೂಪಗಳಲ್ಲಿ 700 ಕ್ಕೂ ಹೆಚ್ಚು ಮಳಿಗೆಗಳಿಗೆ ವಿಸ್ತರಿಸಿದ್ದರು. ಇವರು 2019 ರಲ್ಲಿ ಸರ್ ರತನ್ ಟಾಟಾ ಟ್ರಸ್ಟ್‌ನ ಮಂಡಳಿಗೆ ಸೇರಿದ್ದಾರೆ. 2018 ರಲ್ಲಿ ಟೈಟಾನ್ ಕಂಪನಿಯ ಉಪಾಧ್ಯಕ್ಷರಾದ ನೋಯೆಲ್ 2022 ರ ಮಾರ್ಚ್​ನಲ್ಲಿ ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿ ನೇಮಕಗೊಂಡರು.

ಟ್ರೆಂಟ್‌ಗೆ ಹೋಗುವ ಮೊದಲು, ನೋಯೆಲ್ ಟಾಟಾ ಅವರು 2010 ಮತ್ತು 2021 ರ ನಡುವೆ ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದರಿಂದ ಈ ಅವಧಿಯಲ್ಲಿ ಕಂಪನಿಯ ಆದಾಯವು $500 ಮಿಲಿಯನ್‌ನಿಂದ $3 ಬಿಲಿಯನ್‌ಗೆ ಏರಿತು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದ ರತನ್ ಟಾಟಾ; ಕೊಡುಗೈ ದಾನಿಯ ಕೊಡುಗೆ ಬಗ್ಗೆ ನಿಮಗೆಷ್ಟು ಗೊತ್ತು?

ಟಾಟಾ ಗ್ರೂಪ್‌ನ ಜಾಗತಿಕ ಚಿಲ್ಲರೆ ಕಾರ್ಯಾಚರಣೆಗಳ ಮೇಲೆ ಹೆಚ್ಚಾಗಿ ಗಮನಹರಿಸಿದ ನೋಯೆಲ್, ಈಗಾಗಲೇ ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ ಟ್ರಸ್ಟಿ ಆಗಿದ್ದಾರೆ. ಈ ಟ್ರಸ್ಟ್​ಗಳು ಟಾಟಾ ಸಮೂಹದ ಶೇಕಡಾ 66 ರಷ್ಟು ಒಡೆತನವನ್ನು ಹೊಂದಿದೆ.

ನೋಯೆಲ್ ಟಾಟಾ ಅವರು ಯುಕೆಯಲ್ಲಿ ಪದವಿ ಪಡೆದು, INSEADನಲ್ಲಿ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ. ಆಲೂ ಮಿಸ್ತ್ರೀ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರಿಗೆ ಮಾಯಾ, ನೆವಿಲ್ಲೆ ಮತ್ತು ಲಿಯಾ ಎಂಬ ಮೂವರು ಮಕ್ಕಳಿದ್ದಾರೆ. ಇವರು ಟಾಟಾ ಟ್ರಸ್ಟ್‌ಗಳಿಗೆ ಸಂಬಂಧಿಸಿದ ವಿವಿಧ ಲೋಕೋಪಕಾರಿ ಸಂಸ್ಥೆಗಳ ಟ್ರಸ್ಟಿಗಳಾಗಿ ನೇಮಕಗೊಂಡಿದ್ದಾರೆ. ಲೇಹ್ ಅವರು​ ಪ್ರಸ್ತುತ ದಿ ಇಂಡಿಯನ್​ ಹೋಟೆಲ್ಸ್​​ನ ಉಪಾಧ್ಯಕ್ಷರು. ಮಾಯಾ ಟಾಟಾ ಅವರು ಕಾಪಿಟಲ್ಸ್​ನಲ್ಲಿದ್ದಾರೆ. ನೆವಿಲ್ಲೆ ಸ್ಟಾರ್​ ಬಜಾರ್​ ಮುನ್ನಡೆಸುತ್ತಿದ್ದಾರೆ.

Last Updated : Oct 11, 2024, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.