ಮುಂಬೈ: ವಾರದ ಆರಂಭದ ದಿನವಾದ ಇಂದು ಷೇರು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಏರಿಕೆ ಕಂಡು ಬಂದಿದೆ. ನಿಫ್ಟಿ ಬೆಳಗಿನ ವ್ಯವಹಾರವನ್ನು 59.20ಪಾಯಿಂಟ್ಗಳ ಏರಿಕೆಯೊಂದಿಗೆ ಆರಂಭಿಸಿತು. 25,023 ಅಂಶಗಳೊಂದಿಗೆ ವಹಿವಾಟು ಆರಂಭಿಸಿದರೆ, ಬಿಎಸ್ಸಿ ಸೆನ್ಸೆಕ್ಸ್ ಶೇ 0.24 ಏರಿಕೆಯೊಂದಿಗೆ ಅಂದರೆ 81,576.93 ಅಂಕಗಳೊಂದಿಗೆ ವಹಿವಾಟು ಪ್ರಾರಂಭಿಸಿತು.
ಚೀನಾದ ಉತ್ತೇಜಕ ಮತ್ತು ಭೌಗೋಳಿಕ ರಾಜಕೀಯ ಅಪಾಯಗಳ ಕಡಿಮೆ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆ ಚೇತರಿಕೆ ಕಾಣುವ ಸಾಧ್ಯತೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮಾರುಕಟ್ಟೆಗಳನ್ನು ಜಾಗತಿಕವಾಗಿ ಅಸ್ಥಿರಗೊಳಿಸುತ್ತಿರುವುದರಿಂದ ಇದರ ಪರಿಣಾಮ ತಕ್ಷಣಕ್ಕೆ ಆಗುವ ಸಾಧ್ಯತೆಗಳಿಲ್ಲ.
ಚೀನಾದ ಉತ್ತೇಜಕಗಳು ಸದ್ಯಕ್ಕೆ ಭಾರತದ ಮಾರುಕಟ್ಟೆ ಮೇಲೆ ಪ್ರಯೋನವನ್ನೇನು ಉಂಟು ಮಾಡುವುದಿಲ್ಲ. ಭಾರತೀಯ ಮಾರುಕಟ್ಟೆ ಈ ವಾರ ಆದಾಯಗಳಿಂದ ಚಾಲಿತವಾಗಲಿದೆ. ಭೌಗೋಳಿಕ ಅಪಾಯಗಳು ಕೊಂಚ ಮಟ್ಟಿಗೆ ಕಡಿಮೆಯಾಗಲಿದೆ. ಅಕ್ಟೋಬರ್ನಲ್ಲಿ ಅಮೆರಿಕದ ಚುನಾವಣೆ ಹಿನ್ನೆಲೆಯಲ್ಲಿ ಐತಿಹಾಸಿಕ ಪ್ರದರ್ಶನ ತೊರುವ ಸಾಧ್ಯತೆಗಳಿವೆ. ಅಧ್ಯಕ್ಷೀಯ ಚುನಾವಣೆಗಳು ಚಂಚಲತೆ ಕಂಡರೂ ನವೆಂಬರ್ 5ರ ಬಳಿಕ ಇದಕ್ಕೆ ಪರಿಹಾರ ಸಿಗಲಿದೆ ಎಂದು ಮಾರುಕಟ್ಟೆ ತಜ್ಞ ಅಜಯ್ ಬಗ್ಗ ತಿಳಿಸಿದ್ದಾರೆ.
ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಎಲ್ಲ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿದ್ದು, ನಿಫ್ಟಿ ಮೀಡಿಯಾ ಹೆಚ್ಚಿನ ಏರಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಶೇ 0.55ರಷ್ಟು ಗಳಿಕೆ ಕಂಡಿದೆ. ಹಲವು ಕಂಪನಿಗಳ ತ್ರೈಮಾಸಿಕ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಎಚ್ಸಿಎಲ್ ಟೆಕ್ನಾಲಜೀಸ್, ಏಂಜೆಲ್ ಒನ್ ಮತ್ತು ಅಲೋಕ್ ಇಂಡಸ್ಟ್ರೀಸ್ ಇದರಲ್ಲಿ ಪ್ರಮುಖವಾಗಿವೆ.
ನಿಫ್ಟಿ ನಿರಂತರವಾಗಿ 24,800 ರಿಂದ 25200 ರೇಂಜ್ನಲ್ಲಿ ವ್ಯವಹಾರ ನಡೆಸಬಹುದು. ಆದಾಗ್ಯೂ ವಿದೇಶಿ ಹೂಡಿಕೆದಾರರು ಶೇ 36ರವರೆಗೆ ದೀರ್ಘಾವಧಿಯಲ್ಲಿ ಮುಂದುವರೆಯುವ ಸಾಧ್ಯತೆಗಳಿದ್ದು, ನಿವ್ವಳ ಸಣ್ಣ ಏರಿಕೆ ಸೂಚಿಸಿದೆ. ಇದು ಪ್ರತಿರೋಧ ಸೂಚ್ಯಂಕಗಳಲ್ಲಿ ಮಾರಾಟದ ಒತ್ತಡ ಕಾಣಬಹುದಾಗಿದೆ. ನಿಫ್ಟಿ ಶಾರ್ಟ್ ಪೀರೇಡ್ನಲ್ಲಿ 25,300 ಪ್ಲಸ್ ಮಟ್ಟವನ್ನು ದಾಟುವ ಸಾಧ್ಯಗಳಿವೆ. ಆದಾಗ್ಯೂ, ಇದರ ಬೆಂಬಲವೂ 24800/24750ರ ರೇಂಜ್ ಮುರಿದು ಮುಂದೆ ಸಾಗಬೇಕಿದೆ ಎಂದು ಜೆಎಂ ಫೈನಾನ್ಷಿಯಲ್ ಸರ್ವಿಸ್ನ ಸಂಶೋಧಕ ವಿಶ್ಲೇಷಕರ ಸೋನಿ ಪಾಟ್ನಾಯಕ್ ತಿಳಿಸಿದ್ದಾರೆ.
ಇನ್ನು ಇತರ ಏಷ್ಯನ್ ಮಾರುಕಟ್ಟೆಗಳಲ್ಲಿ ಹಾಂಕಾಂಗ್ ಸೆಂಗ್ ಸೂಚ್ಯಂಕವೂ ಶೇ 1.21ರಷ್ಟು ಇಳಿಕೆ ಕಂಡಿದೆ. ತೈವಾನ್ನ ಮಾರುಕಟ್ಟೆ ಕೂಡ ಅಲ್ಪ ಮಟ್ಟದ ಇಳಿಕೆ ಕಂಡಿದೆ. ದಕ್ಷಿಣ ಕೋರಿಯಾದ ಕೆಒಎಸ್ಪಿಐ ಸೂಚ್ಯಂಕವೂ ಶೇ 1ರಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ?: SIPಯ ಈ ತಂತ್ರ ಅನುಸರಿಸಿ - ಲಾಭ ಗ್ಯಾರಂಟಿ!