ETV Bharat / business

ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ; ಏಪ್ರಿಲ್ 1 ರಿಂದ ಹೊಸ ನಿಯಮಗಳು ಜಾರಿ - New Credit Card Rules April 2024 - NEW CREDIT CARD RULES APRIL 2024

ಏಪ್ರಿಲ್ 1, 2024 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮ ಜಾರಿಗೆ ಬರಲಿದೆ. SBI, ICICI, Axis, Yes Bank ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಬಗ್ಗೆ ಗಮನವಹಿಸಬೇಕಾಗಿರುವುದು ಅವಶ್ಯ. ಈ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ರಿವಾರ್ಡ್‌ಗಳು ಮತ್ತು ಏರ್‌ಪೋರ್ಟ್ ಲಾಂಜ್ ಪ್ರವೇಶದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿವೆ. ಈ ಹೊಸ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಹಾಗಾದರೆ ಆ ಬದಲಾವಣೆಗಳು ಯಾವುವು?

New Credit Card Rules April 2024
ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ ; ಏಪ್ರಿಲ್ 1 ರಿಂದ ಹೊಸ ನಿಯಮಗಳು ಜಾರಿ
author img

By ETV Bharat Karnataka Team

Published : Apr 1, 2024, 6:36 AM IST

ಏಪ್ರಿಲ್ 1, 2024 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಅನ್ವಯವಾಗಲಿವೆ. ಈ ಬಗ್ಗೆ ಕ್ರೆಡಿಟ್ ಕಾರ್ಡ್ ಬಳಕೆದಾರರು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಕೆಲವು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು 2024-25ನೇ ಹಣಕಾಸು ವರ್ಷದಲ್ಲಿ ತಮ್ಮ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ ಕೊಂಡಿವೆ. ಈ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್ ಮುಂತಾದ ಪ್ರಮುಖ ಬ್ಯಾಂಕ್‌ಗಳು ಸೇರಿವೆ. ಲಾಂಜ್ ಪ್ರವೇಶ ಮತ್ತು ರಿವಾರ್ಡ್ ಪಾಯಿಂಟ್‌ಗಳ ವಿಷಯದಲ್ಲಿ ಇವು ಪ್ರಮುಖ ಬದಲಾವಣೆಗಳನ್ನು ಮಾಡಿವೆ. ಈ ಎಲ್ಲ ಪ್ರಮುಖ ಬದಲಾವಣೆಗೆಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ನೀತಿಯನ್ನು ಬದಲಾಯಿಸಿದೆ. ಇಲ್ಲಿಯವರೆಗೆ ಬಾಡಿಗೆ ಪಾವತಿಯಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತಿದ್ದ ಎಸ್‌ಬಿಐ, ಏಪ್ರಿಲ್ 1 ರಿಂದ ಅಂತಹ ರಿವಾರ್ಡ್​ಗಳನ್ನು ನಿಲ್ಲಿಸುವುದಾಗಿ ಸ್ಪಷ್ಟಪಡಿಸಿದೆ. ಇದು AURUM, SBI ಕಾರ್ಡ್ ಎಲೈಟ್, ಸಿಂಪ್ಲಿ ಕ್ಲಿಕ್ ಮುಂತಾದ SBI ಕ್ರೆಡಿಟ್ ಕಾರ್ಡ್‌ಗಳ ಬಳಕೆದಾರರಿಗೆ ನಿರಾಸೆಯನ್ನುಂಟು ಮಾಡಿದೆ.

ಐಸಿಐಸಿಐ ಬ್ಯಾಂಕ್ ವಿಮಾನ ನಿಲ್ದಾಣಗಳ ಲಾಂಜ್​​ ಪ್ರವೇಶ ನಿಯಮಗಳನ್ನು ಸಹ ಬದಲಾಯಿಸಿದೆ. ಮುಂಬರುವ ತ್ರೈಮಾಸಿಕದಲ್ಲಿ ಈ ಸೌಲಭ್ಯವನ್ನು ಪಡೆಯಲು ಹಿಂದಿನ ತ್ರೈಮಾಸಿಕದಲ್ಲಿ ಕಾರ್ಡ್ ಮೂಲಕ ಕನಿಷ್ಠ 35,000 ರೂ ಖರ್ಚು ಮಾಡಬೇಕಾಗುತ್ತದೆ. ಇಷ್ಟು ಪ್ರಮಾಣದ ವ್ಯವಹಾರ ಮಾಡಿದ್ದರಷ್ಟೇ ಇದರ ಲಾಭ ಪಡೆದುಕೊಳ್ಳಬಹುದು. ಈ ನಿಯಮಗಳು ಕೋರಲ್ ಕ್ರೆಡಿಟ್ ಕಾರ್ಡ್, ಮೇಕ್ ಮೈ ಟ್ರಿಪ್ ಮತ್ತು ICICI ಬ್ಯಾಂಕ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ರೀತಿಯ ಕಾರ್ಡ್‌ಗಳಿಗೆ ಅನ್ವಯಿಸುತ್ತದೆ. ಈ ಬದಲಾವಣೆಗಳು 2024 ರ ಹೊಸ ಹಣಕಾಸು ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬರುತ್ತವೆ.

ಯೆಸ್ ಬ್ಯಾಂಕ್ ಕೂಡ ಲಾಂಜ್ ಪ್ರವೇಶದ ನಿಯಮಗಳನ್ನು ಬದಲಾಯಿಸಿದೆ. ಏಪ್ರಿಲ್ 1 ರಿಂದ ಯಾವುದೇ ತ್ರೈಮಾಸಿಕದಲ್ಲಿ ಲಾಂಜ್ ಸೌಲಭ್ಯವನ್ನು ಪಡೆಯಲು ಹಿಂದಿನ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಕನಿಷ್ಠ ರೂ.10,000 ಖರ್ಚು ಮಾಡಬೇಕಾಗುತ್ತದೆ.

ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ತನ್ನ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳು, ಲೌಂಜ್ ಪ್ರವೇಶ ಮತ್ತು ವಾರ್ಷಿಕ ಶುಲ್ಕಗಳೊಂದಿಗೆ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ. ವಿಮೆ, ಚಿನ್ನ ಅಥವಾ ಆಭರಣ, ಇಂಧನಕ್ಕೆ ಕ್ರೆಡಿಟ್ ಕಾರ್ಡ್ ಪಾವತಿಯ ಮೇಲೆ ಇನ್ನು ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಗೆ ಪ್ರವೇಶ ಪಡೆಯಲು ಮೂರು ತಿಂಗಳಲ್ಲಿ ಕನಿಷ್ಠ 50,000 ರೂ. ಗಳ ವ್ಯವಹಾರವನ್ನು ಮಾಡಿರಬೇಕಾಗುತ್ತದೆ. ಆ ಕ್ಯಾಲೆಂಡರ್ ವರ್ಷದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಲಾಂಜ್​​​​ ಭೇಟಿಗಳ ಸಂಖ್ಯೆಯನ್ನು ವರ್ಷಕ್ಕೆ 8 ರಿಂದ 4 ಕ್ಕೆ ಕಡಿಮೆ ಮಾಡಿದೆ. ಈ ಹೊಸ ಬದಲಾವಣೆಗಳು ಏಪ್ರಿಲ್ 20 ರಿಂದ ಜಾರಿಗೆ ಬರಲಿವೆ ಎಂದು ಆಕ್ಸಿಸ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನು ಓದಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ: ಕೇಂದ್ರ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.