ETV Bharat / business

ಹಣ ವರ್ಗಾವಣೆ ನಿಯಮ ಉಲ್ಲಂಘನೆ: ಬಿನಾನ್ಸ್​ ಕ್ರಿಪ್ಟೊಗೆ ಭಾರತದಲ್ಲಿ ₹18 ಕೋಟಿ ದಂಡ - Binance Crypto

author img

By ETV Bharat Karnataka Team

Published : Jun 20, 2024, 3:48 PM IST

ಅಕ್ರಮ ಹಣ ವರ್ಗಾವಣೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿನಾನ್ಸ್​ ಕ್ರಿಪ್ಟೊಗೆ 18 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಬಿನಾನ್ಸ್​ ಕ್ರಿಪ್ಟೊ
ಬಿನಾನ್ಸ್​ ಕ್ರಿಪ್ಟೊ (IANS)

ನವದೆಹಲಿ: ಪ್ರಮುಖ ಬ್ಲಾಕ್ ಚೈನ್ ಮತ್ತು ಕ್ರಿಪ್ಟೋಕರೆನ್ಸಿ ಪ್ಲಾಟ್ ಫಾರ್ಮ್ ಬಿನಾನ್ಸ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಲು 18.82 ಕೋಟಿ ರೂ.ಗಳ ದಂಡ ಪಾವತಿಸಬೇಕಿದೆ. ಅಕ್ರಮ ಹಣ ವರ್ಗಾವಣೆ ವಿರೋಧಿ ನಿಯಮಗಳನ್ನು ಉಲ್ಲಂಘಿಸಿ ದೇಶದಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಹಣಕಾಸು ಗುಪ್ತಚರ ಘಟಕ (ಎಫ್ಐಯು) ಕಂಪನಿಗೆ ಈ ದಂಡ ವಿಧಿಸಿದೆ.

"ಬಿನಾನ್ಸ್ ಕಂಪನಿಯು ಸಲ್ಲಿಸಿದ ಲಿಖಿತ ಮತ್ತು ಮೌಖಿಕ ಹೇಳಿಕೆಗಳನ್ನು ಪರಿಗಣಿಸಿದ ನಂತರ, ಎಫ್ಐಯು- ಐಎನ್​ಡಿ ನಿರ್ದೇಶಕರು, ದಾಖಲೆಯಲ್ಲಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ, ಬಿನಾನ್ಸ್​ ವಿರುದ್ಧದ ಆರೋಪಗಳು ಸತ್ಯವಾಗಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ" ಎಂದು ಎಫ್ಐಯು ಅಧಿಸೂಚನೆ ತಿಳಿಸಿದೆ.

ಇದಲ್ಲದೆ, ಮನಿ ಲಾಂಡರಿಂಗ್ ಚಟುವಟಿಕೆಗಳನ್ನು ಮತ್ತು ಭಯೋತ್ಪಾದನೆಗೆ ಹಣಕಾಸು (ಎಎಂಎಲ್​ಸಿಎಫ್​ಟಿ) ಒದಗಿಸುವುದನ್ನು ತಡೆಗಟ್ಟಲು 2005ರ ಪಿಎಂಎಲ್ಎ ನಿರ್ವಹಣಾ ನಿಯಮಗಳು (ಪಿಎಂಎಲ್ಎ ನಿಯಮಗಳು) ಜೊತೆಗೆ 2002ರ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ಅಧ್ಯಾಯ 4 ರಲ್ಲಿ ವಿವರಿಸಲಾದ ಬಾಧ್ಯತೆಗಳನ್ನು ಸೂಕ್ತವಾಗಿ ಅನುಸರಿಸುವಂತೆ ಬಿನಾನ್ಸ್​ಗೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿದೆ." ಎಂದು ಅದು ಹೇಳಿದೆ.

ಬಿನಾನ್ಸ್​ಗೆ ಎಫ್​​ಐಯು ದಂಡ ವಿಧಿಸಿದ್ದು ಏಕೆ?: ಭಾರತದಲ್ಲಿ ಕ್ರಿಪ್ಟೋ ಎಕ್ಸ್ ಚೇಂಜ್​ಗಳಂತಹ ವರ್ಚುವಲ್ ಡಿಜಿಟಲ್ ಆಸ್ತಿಗಳ ಸೇವಾ ಪೂರೈಕೆದಾರರು ಎಫ್ಐಯುನಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ದೇಶದ ಅಕ್ರಮ ಹಣ ವರ್ಗಾವಣೆ ವಿರೋಧಿ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಆದರೆ ಬಿನಾನ್ಸ್​ ಈ ನಿಯಮಗಳನ್ನು ಪಾಲಿಸದ ಕಾರಣದಿಂದ ದಂಡ ವಿಧಿಸಲಾಗಿದೆ. ಏತನ್ಮಧ್ಯೆ ಮೇ ತಿಂಗಳಲ್ಲಿ, ಬಿನಾನ್ಸ್ ಎಫ್ಐಯುನೊಂದಿಗೆ ಆರಂಭಿಕ ನೋಂದಣಿಯನ್ನು ಪೂರ್ಣಗೊಳಿಸಿತು.

ಈ ವರ್ಷದ ಆರಂಭದಲ್ಲಿ, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) 2002ರ ಅಡಿಯಲ್ಲಿ ಸ್ಥಳೀಯ ಮನಿ ಲಾಂಡರಿಂಗ್ ವಿರೋಧಿ ನಿಯಮಗಳನ್ನು ನೋಂದಾಯಿಸದ ಮತ್ತು ಅನುಸರಿಸದ ಕಾರಣ ಎಫ್ಐಯು ಭಾರತದ ಒಂಬತ್ತು ವಿದೇಶಿ ಕ್ರಿಪ್ಟೊ ವಿನಿಮಯ ಕೇಂದ್ರಗಳನ್ನು ನಿರ್ಬಂಧಿಸಿತ್ತು.

ಕೆನಡಾದಲ್ಲೂ ಬಿನಾನ್ಸ್​ಗೆ ದಂಡ: ಬಿನಾನ್ಸ್‌ಗೆ ಭಾರತದಲ್ಲಿ ಮಾತ್ರವಲ್ಲದೆ ಕೆನಡಾದಲ್ಲೂ ದಂಡ ವಿಧಿಸಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ, ಕೆನಡಾದ ಮನಿ ಲಾಂಡರಿಂಗ್ ವಿರೋಧಿ ಸಂಸ್ಥೆ ಮನಿ ಲಾಂಡರಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿನಾನ್ಸ್​ಗೆ 4.38 ಮಿಲಿಯನ್ ಡಾಲರ್ ದಂಡ ವಿಧಿಸಿತ್ತು. ಬಿನಾನ್ಸ್​ನ ಪ್ರತಿಸ್ಪರ್ಧಿ ಕ್ರಿಪ್ಟೊ ಕುಕಾಯಿನ್ ಕೂಡ 34.5 ಲಕ್ಷ ರೂ.ಗಳ ಸಣ್ಣ ಪ್ರಮಾಣದ ದಂಡ ಪಾವತಿಸಿ ದೇಶದಲ್ಲಿ ತನ್ನ ಕಾರ್ಯಾಚರಣೆಗಳನ್ನು ಪುನಾರಂಭಿಸಿದೆ.

ಇದನ್ನೂ ಓದಿ: ಸಮುದ್ರಾಹಾರ ರಫ್ತು ದಾಖಲೆಯ ಹೆಚ್ಚಳ: ಭಾರತದಿಂದ ಅತ್ಯಧಿಕ ಮೀನು ಖರೀದಿಸಿದ ಯುಎಸ್​, ಚೀನಾ - Seafood Exports From India

ETV Bharat Logo

Copyright © 2024 Ushodaya Enterprises Pvt. Ltd., All Rights Reserved.