ಹೈದರಾಬಾದ್: ರಾಮೋಜಿ ಸಮೂಹ ಸಂಸ್ಥೆಗಳ ಕಂಪನಿಗಳಲ್ಲಿ ಒಂದಾದ ಮಾರ್ಗದರ್ಶಿ ಚಿಟ್‌ಫಂಡ್ ಪ್ರೈವೇಟ್ ಲಿಮಿಟೆಡ್ ತನ್ನ ಮತ್ತೆರಡು ಶಾಖೆಗಳನ್ನು ಕರ್ನಾಟಕ, ತಮಿಳುನಾಡಿನಲ್ಲಿ ಕಾರ್ಯಾರಂಭಿಸಲಿದೆ. 119ನೇ ಶಾಖೆ ಕರ್ನಾಟಕದ ಬೆಂಗಳೂರಿನ ಕೆಂಗೇರಿ, 120ನೇ ಶಾಖೆ ತಮಿಳುನಾಡಿನ ಹೊಸೂರಿನಲ್ಲಿ ಇಂದು (ಡಿಸೆಂಬರ್ 11) ಉದ್ಘಾಟನೆಯಾಗಲಿವೆ.
ಅತ್ಯಂತ ವಿಶ್ವಾಸಾರ್ಹ ಮತ್ತು ಗ್ರಾಹಕರ ಸ್ನೇಹಿಯಾಗಿರುವ ಮಾರ್ಗದರ್ಶಿ ಚಿಟ್‌ಫಂಡ್ ಸಂಸ್ಥೆಯು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತನ್ನ ಜಾಲ ಹೊಂದಿದೆ. ತನ್ನ ಹೂಡಿಕೆದಾರರು, ಗ್ರಾಹಕರ ಸಬಲೀಕರಣಕ್ಕೆ ಸಂಸ್ಥೆಯು ಕಠಿಬದ್ಧವಾಗಿದೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸುವ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಗದರ್ಶಿ ಚಿಟ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್, "ಸಂಸ್ಥೆಯು ಮತ್ತೆರಡು ಶಾಖೆಗಳನ್ನು ವಿಸ್ತರಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಗ್ರಾಹಕರ ಗುರಿಗಳನ್ನು ಸಾಕಾರ ಮಾಡಲು ಮಾರ್ಗದರ್ಶಿಯು ಬದ್ಧವಾಗಿದೆ. ಗ್ರಾಹಕರು ನಿರೀಕ್ಷಿಸಿದ ಮಟ್ಟದಲ್ಲಿ ಸೇವೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದ್ದಾರೆ.
"ಸಂಸ್ಥೆಯು 1962ರಲ್ಲಿ ಪ್ರಾರಂಭವಾದಾಗಿನಿಂದಲೂ ನಂಬಿಕೆ ಮತ್ತು ವಿಶ್ವಾಸಾರ್ಹತೆ ಕಾಪಾಡಿಕೊಂಡು ಬಂದಿದೆ. 60 ಲಕ್ಷ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. 9,396 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಕಂಪನಿಯು ಮೌಲ್ಯಗಳ ಆಧಾರದ ಮೇಲೆ, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ, ಗ್ರಾಹಕರ ಹಣಕ್ಕೆ ಭದ್ರತೆ ನೀಡುತ್ತದೆ" ಎಂದು ಶೈಲಜಾ ಸ್ಪಷ್ಟಪಡಿಸಿದರು.
"ಆರು ದಶಕಗಳಿಗೂ ಹೆಚ್ಚು ಕಾಲ, ಮಾರ್ಗದರ್ಶಿಯು ಸಾವಿರಾರು ಕುಟುಂಬಗಳ ಆರ್ಥಿಕ ವ್ಯವಹಾರಕ್ಕೆ ಧನಸಹಾಯ, ಶಿಕ್ಷಣ, ವಿವಾಹ, ಮನೆ ಖರೀದಿ, ಉದ್ಯಮ ಆರಂಭಕ್ಕೆ ಬೆಂಗಾವಲಾಗಿ ನಿಂತಿದೆ. ಕೆಂಗೇರಿ ಮತ್ತು ಹೊಸೂರಿನಲ್ಲಿ ಆರಂಭವಾಗಲಿರುವ ಹೊಸ ಶಾಖೆಗಳು ಈ ಭಾಗದ ಜನರ ಜೀವನವನ್ನು ಸಶಕ್ತಗೊಳಿಸುವ ಪಯಣದಲ್ಲಿ ಮತ್ತೊಂದು ಹೆಜ್ಜೆಯಾಗಲಿದೆ" ಎಂದು ಹೇಳಿದ್ದಾರೆ.
ಬದುಕಿನ ಪ್ರಮುಖ ಘಟನಾವಳಿಗಳ ಸಂದರ್ಭಗಳಲ್ಲಿ ಕುಟುಂಬಗಳಿಗೆ ಸಹಾಯ ಮಾಡುವುದರಿಂದ ಹಿಡಿದು, ಕಾರ್ಯನಿರತ ಬಂಡವಾಳದೊಂದಿಗೆ ಉದ್ಯಮಿಗಳಿಗೆ ಬೆಂಬಲ ನೀಡುವವರೆಗೆ ಮಾರ್ಗದರ್ಶಿ ಸಂಸ್ಥೆಯು ತನ್ನ ಚಂದಾದಾರರ ಅಗತ್ಯಗಳಿಗೆ ಅನುಗುಣವಾಗಿ ಆರ್ಥಿಕ ಪರಿಹಾರಗಳನ್ನು ನಿರಂತರವಾಗಿ ತಲುಪಿಸಿದೆ. ಹೊಸೂರು ಮತ್ತು ಕೆಂಗೇರಿ ಶಾಖೆಗಳು ಈ ಶ್ರೇಷ್ಠ ಸಂಪ್ರದಾಯವನ್ನು ಮುಂದುವರಿಸಲಿವೆ. ಚಂದಾದಾರರಿಗೆ ಅವರ ಆರ್ಥಿಕ ಗುರಿ, ಆಕಾಂಕ್ಷೆಗಳನ್ನು ಸಾಧಿಸಲು ಸಂಸ್ಥೆ ನೆರವಾಗುತ್ತದೆ.
ಮಾರ್ಗದರ್ಶಿ ಚಿಟ್‌ಫಂಡ್ ಸಂಸ್ಥೆಯಲ್ಲಿ 4,100 ಮಂದಿ ಉದ್ಯೋಗಿಗಳಿದ್ದು, 18 ಸಾವಿರ ಏಜೆಂಟ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಂಸ್ಥೆ ಅನೇಕರಿಗೆ ಜೀವನೋಪಾಯದ ಮೂಲಾಧಾರವಾಗಿದೆ.
ಮಾರ್ಗದರ್ಶಿ ಚಿಟ್‌ಫಂಡ್ ಕುರಿತ ಪ್ರಮುಖ ಸಂಗತಿಗಳು:
ಸ್ಥಾಪನೆ - 1962
ಚಂದಾದಾರರು - ಈವರೆಗೆ 60 ಲಕ್ಷಕ್ಕೂ ಹೆಚ್ಚು ಚಂದಾದಾರರು
ಸಂಚಿತ ಹರಾಜು ವಹಿವಾಟು (Cumulative Auction Turnover) - 9,396 ಕೋಟಿ ರೂಪಾಯಿ
ಶಾಖೆಗಳು - ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ 120 ಶಾಖೆಗಳು.
ಇದನ್ನೂ ಓದಿ: 3 ನೂತನ ಮಾರ್ಗದರ್ಶಿ ಚಿಟ್ ಫಂಡ್ ಶಾಖೆಗಳನ್ನು ಉದ್ಘಾಟಿಸಿದ ಎಂಡಿ ಶೈಲಜಾ ಕಿರಣ್