ETV Bharat / business

ಸ್ಟಾರ್ಟ್​ಅಪ್​ಗಳಲ್ಲಿ ಉದ್ಯೋಗ ನೇಮಕಾತಿ ಶೇ 9ರಷ್ಟು ಹೆಚ್ಚಳ: ಫ್ರೆಶರ್ಸ್‌ಗೆ ಆದ್ಯತೆ - Startup Hiring - STARTUP HIRING

ಭಾರತೀಯ ಸ್ಟಾರ್ಟ್​ಅಪ್​ ಕಂಪನಿಗಳಲ್ಲಿನ ಉದ್ಯೋಗ ನೇಮಕಾತಿ ಪ್ರಮಾಣ ಹೆಚ್ಚಾಗಿದೆ.

ಭಾರತದ ಸ್ಟಾರ್ಟ್​ಅಪ್​ಗಳಲ್ಲಿ ಉದ್ಯೋಗ ನೇಮಕಾತಿ
ಭಾರತದ ಸ್ಟಾರ್ಟ್​ಅಪ್​ಗಳಲ್ಲಿ ಉದ್ಯೋಗ ನೇಮಕಾತಿ (IANS)
author img

By ETV Bharat Karnataka Team

Published : May 9, 2024, 1:58 PM IST

ಬೆಂಗಳೂರು: ಭಾರತದಲ್ಲಿನ ಸ್ಟಾರ್ಟ್​ಅಪ್​ಗಳ ಸಂಖ್ಯೆ ಏಪ್ರಿಲ್​ನಲ್ಲಿ ಶೇ 37ರಷ್ಟು ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಶೇ 14ರಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಟ್ಯಾಲೆಂಟ್ ಪ್ಲಾಟ್ ಫಾರ್ಮ್ ಫೌಂಡಿಟ್ (ಈ ಹಿಂದೆ ಮಾನ್ ಸ್ಟರ್ ಎಪಿಎಸಿ ಮತ್ತು ಎಂಇ) ವರದಿಯ ಪ್ರಕಾರ, ಎಲ್ಲಾ ಸ್ಟಾರ್ಟ್ಅಪ್​ಗಳಲ್ಲಿ ಲಭ್ಯವಿರುವ ಉದ್ಯೋಗಗಳ ಪೈಕಿ ಸುಮಾರು ಶೇ 53ರಷ್ಟು ಹುದ್ದೆಗಳು ಫ್ರೆಶರ್ಸ್​ಗಳಿಗೆ ಲಭ್ಯವಾಗಲಿವೆ. ಸ್ಟಾರ್ಟ್​​ಅಪ್​ ಉದ್ಯಮದ ಒಟ್ಟಾರೆ ನೇಮಕಾತಿ ಪ್ರಮಾಣವು ಮಾಸಿಕವಾಗಿ ಶೇ 9ರಷ್ಟು ಮತ್ತು ವಾರ್ಷಿಕವಾಗಿ ಶೇ 9ರಷ್ಟು ಹೆಚ್ಚಳವಾಗಿದೆ.

"ಉತ್ಪಾದನಾ ವಲಯದ ಸ್ಟಾರ್ಟ್​ಅಪ್​ಗಳಲ್ಲಿನ ನೇಮಕಾತಿಯು ವರ್ಷದಿಂದ ವರ್ಷಕ್ಕೆ ಶೇ 31ರಷ್ಟು ಗಮನಾರ್ಹ ಏರಿಕೆ ಕಂಡಿದೆ" ಎಂದು ಫೌಂಡಿಟ್ ಸಿಇಒ ಶೇಖರ್ ಗರಿಸಾ ಹೇಳಿದ್ದಾರೆ.

ಐಟಿ (ಮಾಹಿತಿ ತಂತ್ರಜ್ಞಾನ) ಸೇವಾ ವಲಯದ ಸ್ಟಾರ್ಟ್ಅಪ್​ಗಳಲ್ಲಿ ಏಪ್ರಿಲ್ 2023 ಮತ್ತು ಈ ವರ್ಷದ ಏಪ್ರಿಲ್ ನಡುವೆ ಉದ್ಯೋಗ ನೇಮಕಾತಿಗಳಲ್ಲಿ ಶೇಕಡಾ 20ರಿಂದ 23ರಷ್ಟು ಸ್ಥಿರವಾದ ಹೆಚ್ಚಳ ಕಂಡು ಬಂದಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಂಟರ್ ನೆಟ್, ಬಿಎಫ್ಎಸ್ಐ/ಫಿನ್‌ಟೆಕ್ ಮತ್ತು ಮಾಧ್ಯಮ ಮತ್ತು ಮನರಂಜನಾ ಉದ್ಯಮಗಳಿಗೆ ಸಂಬಂಧಿಸಿದ ಸ್ಟಾರ್ಟ್​ಅಪ್​ಗಳಲ್ಲಿ ಉದ್ಯೋಗ ನೇಮಕಾತಿಗಳು ಹಿಂದಿನ ಸಮಯಕ್ಕೆ ಹೋಲಿಸಿದರೆ ಅಲ್ಪ ಕುಸಿತವಾಗಿದೆ.

ಏತನ್ಮಧ್ಯೆ ಶಿಕ್ಷಣ/ಇ-ಲರ್ನಿಂಗ್/ಎಜುಟೆಕ್ ಉದ್ಯಮಗಳಲ್ಲಿನ ಸ್ಟಾರ್ಟ್ಅಪ್​ಗಳಲ್ಲಿನ ಉದ್ಯೋಗ ನೇಮಕಾತಿಗಳು ಏಪ್ರಿಲ್​ನಲ್ಲಿ ಸ್ಥಿರವಾಗಿ ಬೆಳವಣಿಗೆಯಾಗಿವೆ. ಇದು ಉದ್ಯಮದೊಳಗೆ ಸ್ಥಿರತೆಯ ಅವಧಿಯನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು, ದೆಹಲಿ-ಎನ್​ಸಿಆರ್ ಮತ್ತು ಮುಂಬೈ ನಗರಗಳು ದೇಶದಲ್ಲಿಯೇ ಅತಿ ಹೆಚ್ಚು ಸ್ಟಾರ್ಟ್​ಅಪ್​ ಉದ್ಯಮಗಳನ್ನು ಹೊಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ಸ್ಟಾರ್ಟ್ಅಪ್ ಉದ್ಯಮ ವಲಯವು ಈ ಮೆಟ್ರೋ ನಗರಗಳನ್ನು ಮೀರಿ ಇತರ ನಗರಗಳಿಗೂ ವಿಸ್ತರಿಸುತ್ತಿದೆ ಮತ್ತು ಮೆಟ್ರೋ ಅಲ್ಲದ ನಗರಗಳು ಕೂಡ ಉದ್ಯಮಶೀಲ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ ಎಂದು ವರದಿ ಹೇಳಿದೆ.

ಉದ್ಯೋಗ ನೇಮಕಾತಿಗಳಲ್ಲಿ ವಾರ್ಷಿಕ ಶೇಕಡಾ 24ರಷ್ಟು ಹೆಚ್ಚಳದೊಂದಿಗೆ ಜೈಪುರವು ಬೆಳವಣಿಗೆಯ ಮಾಪನಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನಂತರದ ಸ್ಥಾನದಲ್ಲಿದೆ. 1.25 ಲಕ್ಷ ಸ್ಟಾರ್ಟ್ಅಪ್​​ಗಳು ಭಾರತದಲ್ಲಿದ್ದು ಇವು ಸುಮಾರು 12 ಲಕ್ಷ ಜನರಿಗೆ ಉದ್ಯೋಗ ನೀಡಿವೆ. ಈ ಮೂಲಕ ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ: ಯಶಸ್ವಿಯಾಗಿ ಕಕ್ಷೆ ಪ್ರವೇಶಿಸಿದ ಚೀನಾದ ಚಾಂಗ್'ಇ-6 ಚಂದ್ರಯಾನ ನೌಕೆ - China Lunar Probe

ETV Bharat Logo

Copyright © 2024 Ushodaya Enterprises Pvt. Ltd., All Rights Reserved.