ETV Bharat / business

ಐಟಿ ಇಲಾಖೆಯಿಂದ ₹ 6,329 ಕೋಟಿ ರಿಫಂಡ್​ ನಿರೀಕ್ಷೆಯಲ್ಲಿ ಇನ್ಫೋಸಿಸ್​ - Infosys

ಆದಾಯ ತೆರಿಗೆ ಇಲಾಖೆಯಿಂದ 6,329 ಕೋಟಿ ರೂಪಾಯಿಗಳ ಮರುಪಾವತಿಯನ್ನು ಬೆಂಗಳೂರಿನ ಐಟಿ ಕಂಪನಿ ಇನ್ಫೋಸಿಸ್ ಎದುರು ನೋಡುತ್ತಿದೆ.

Infosys
ಇನ್ಫೋಸಿಸ್​
author img

By PTI

Published : Mar 31, 2024, 8:35 PM IST

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ 6,329 ಕೋಟಿ ರೂ.ಗಳ ಮರುಪಾವತಿಯನ್ನು ಇನ್ಫೋಸಿಸ್ ನಿರೀಕ್ಷಿಸುತ್ತಿದೆ. ವಿವಿಧ ಮೌಲ್ಯಮಾಪನ ಆದೇಶಗಳನ್ನು ಉಲ್ಲೇಖಿಸಿ 2,763 ಕೋಟಿ ರೂಪಾಯಿಗಳ ತೆರಿಗೆ ಬಾಧ್ಯತೆಯ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಲಾಗಿದೆ ಎಂದು ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್ ತಿಳಿಸಿದೆ.

ಆದೇಶಗಳ ಪ್ರಕಾರ, ಕಂಪನಿಯು 6,329 ಕೋಟಿ ರೂಪಾಯಿಗಳ (ಬಡ್ಡಿ ಸೇರಿದಂತೆ) ಮರುಪಾವತಿಯನ್ನು ಎದುರು ನೋಡುತ್ತಿದೆ. ಕಂಪನಿಯು 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಮತ್ತು ವರ್ಷದ ಹಣಕಾಸು ಹೇಳಿಕೆಗಳ ಮೇಲೆ ಈ ಆದೇಶಗಳ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಇನ್ಫೋಸಿಸ್ ಬಿಎಸ್‌ಇ ಫೈಲಿಂಗ್‌ನಲ್ಲಿ ಹೇಳಿದೆ.

ಐಟಿ ಸೇವೆಗಳ ಒಪ್ಪಂದಗಳಿಗಾಗಿ ಮಾರುಕಟ್ಟೆಯಲ್ಲಿ ಟಿಸಿಎಸ್ ಮತ್ತು ವಿಪ್ರೋ ಮತ್ತು ಇತರರೊಂದಿಗೆ ಸ್ಪರ್ಧಿಸುತ್ತಿರುವ ಇನ್ಫೋಸಿಸ್, ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಮತ್ತು 2024ನೇ ಆರ್ಥಿಕ ವರ್ಷದ ಏಪ್ರಿಲ್ 18ರಂದು ತನ್ನ ಹಣಕಾಸಿನ ಫಲಿತಾಂಶಗಳನ್ನು ಘೋಷಿಸಲು ನಿರ್ಧರಿಸಿದೆ. 22-23ರ ಮೌಲ್ಯಮಾಪನ ವರ್ಷಕ್ಕೆ ಬಡ್ಡಿ ಸೇರಿದಂತೆ 2,763 ಕೋಟಿ ರೂಪಾಯಿಗಳ ತೆರಿಗೆ ಬೇಡಿಕೆಯೊಂದಿಗೆ ಮತ್ತು 11-12ರ ಮೌಲ್ಯಮಾಪನ ವರ್ಷಕ್ಕೆ 4 ಕೋಟಿ ರೂಪಾಯಿಗಳ ತೆರಿಗೆ ಬೇಡಿಕೆಯೊಂದಿಗೆ ಬಡ್ಡಿಯನ್ನು ಒಳಗೊಂಡ ಆದೇಶವನ್ನು ಸ್ವೀಕರಿಸಿದೆ.

ಅಂಗಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಟ್ಟು 277 ಕೋಟಿ ರೂ.ಮೌಲ್ಯಮಾಪನ ಆದೇಶಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಕ್ರಮವಾಗಿ 21-22 ಮತ್ತು 18-19ರ ವರ್ಷದ ಮೌಲ್ಯಮಾಪನ ಆದೇಶಗಳನ್ನು ಸೇರಿ 145 ಕೋಟಿ ತೆರಿಗೆ ಬೇಡಿಕೆ, ಮೌಲ್ಯಮಾಪನ ವರ್ಷ 22-23ಕ್ಕೆ 127 ಕೋಟಿ ತೆರಿಗೆ ಬೇಡಿಕೆ, 22-23ರ ಮೌಲ್ಯಮಾಪನ ವರ್ಷಕ್ಕೆ 5 ಕೋಟಿಯ ತೆರಿಗೆ ಬೇಡಿಕೆ ಒಳಗೊಂಡಿದೆ. ಇವೆಲ್ಲವೂ ಬಡ್ಡಿಯನ್ನು ಹೊಂದಿರುತ್ತವೆ.

ಕಂಪನಿಯು 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಮತ್ತು ವರ್ಷದ ಹಣಕಾಸು ಹೇಳಿಕೆಗಳ ಮೇಲೆ ಈ ಆದೇಶಗಳ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯಲ್ಲಿದೆ. ಈ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸುವಿಕೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಇನ್ಫೋಸಿಸ್ ಹೇಳಿದೆ.

ಇದಲ್ಲದೆ, ಕಂಪನಿಯ ಅಂಗಸಂಸ್ಥೆಯು ಸೆಕ್ಷನ್ 254ರ ಅಡಿಯಲ್ಲಿ 07-08 ಮತ್ತು 08-09ರ ಮೌಲ್ಯಮಾಪನ ವರ್ಷಗಳು ಮತ್ತು ಸೆಕ್ಷನ್ 154ರ ಅಡಿಯಲ್ಲಿ 16-17ರ ಮೌಲ್ಯಮಾಪನ ವರ್ಷಕ್ಕೆ ಮರುಪಾವತಿ ಆದೇಶಗಳನ್ನು ಸ್ವೀಕರಿಸಿದೆ, ಈ ಆದೇಶಗಳ ಪ್ರಕಾರ ಮರುಪಾವತಿ ಮೊತ್ತವು 14 ಕೋಟಿ ರೂ. ಆಗಿದೆ ಎಂದು ಅದು ಹೇಳಿದೆ. 2024ರ ಮಾರ್ಚ್ 29ರಂತೆ ಮೇಲಿನ ಆದೇಶಗಳು ಪಟ್ಟಿ ನಿಯಮಾವಳಿಗಳ (ತಿದ್ದುಪಡಿದಂತೆ) ನಿಯಮ 30ರ ಅಡಿಯಲ್ಲಿ ಸೂಚಿಸಲಾದ ವಸ್ತು ಮಾನದಂಡಗಳನ್ನು ಸಂಚಿತವಾಗಿ ಮೀರಿದೆ ಮತ್ತು ಅದರ ಪ್ರಕಾರ, ಇದನ್ನು ಬಹಿರಂಗ ಪಡಿಲಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ.

ಇದನ್ನೂ ಓದಿ: ವಿದೇಶ ಪ್ರವಾಸ ಮಾಡುವವರಿಗೆ ಇಲ್ಲಿವೆ ಸಲಹೆಗಳು; ಕೆಲ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಿ - tips for foreign trip

ETV Bharat Logo

Copyright © 2024 Ushodaya Enterprises Pvt. Ltd., All Rights Reserved.