ETV Bharat / business

ಏಪ್ರಿಲ್​ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇ 5ರಷ್ಟು ಬೆಳವಣಿಗೆ - Industrial Production Of India

author img

By ETV Bharat Karnataka Team

Published : Jun 12, 2024, 7:53 PM IST

ಭಾರತದ ಕೈಗಾರಿಕಾ ಉತ್ಪಾದನೆಯು ಈ ವರ್ಷದ ಏಪ್ರಿಲ್​​ನಲ್ಲಿ ಶೇಕಡಾ 5ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ.

ಭಾರತದ ಕೈಗಾರಿಕಾ ಉತ್ಪಾದನೆ ಶೇ 5ರಷ್ಟು ಬೆಳವಣಿಗೆ
ಸಂಗ್ರಹ ಚಿತ್ರ (IANS)

ನವದೆಹಲಿ: ಭಾರತದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ)ವು ಈ ವರ್ಷದ ಏಪ್ರಿಲ್​​ನಲ್ಲಿ ಶೇಕಡಾ 5ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ ಎಂದು ಅಂಕಿಅಂಶ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ತಿಳಿಸಿವೆ. 2023ರ ಏಪ್ರಿಲ್​ನಲ್ಲಿ ಐಐಪಿ ಬೆಳವಣಿಗೆ ಶೇಕಡಾ 4.6ರಷ್ಟಿತ್ತು.

ಏಪ್ರಿಲ್ 2024ರಲ್ಲಿ ಗಣಿಗಾರಿಕೆ, ಉತ್ಪಾದನೆ ಮತ್ತು ವಿದ್ಯುತ್ ಕ್ಷೇತ್ರಗಳ ಬೆಳವಣಿಗೆಯ ದರಗಳು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಕ್ರಮವಾಗಿ ಶೇಕಡಾ 6.7, ಶೇಕಡಾ 3.9 ಮತ್ತು ಶೇಕಡಾ 10.2ರಷ್ಟಿವೆ.

ಉತ್ಪಾದನಾ ವಲಯ ನೋಡುವುದಾದರೆ- ಮೂಲ ಲೋಹಗಳ ತಯಾರಿಕೆ (8.1 ಶೇಕಡಾ), ಕೋಕ್ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕೆ (4.9 ಶೇಕಡಾ) ಮತ್ತು ಮೋಟಾರು ವಾಹನಗಳು, ಟ್ರೈಲರ್​ಗಳು ಮತ್ತು ಸೆಮಿ-ಟ್ರೈಲರ್​ಗಳ ತಯಾರಿಕೆ (11.4 ಶೇಕಡಾ) ವಲಯಗಳು ಏಪ್ರಿಲ್ 2024ರಲ್ಲಿ ಐಐಪಿ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿವೆ ಎಂದು ಅಂಕಿ ಅಂಶಗಳು ತೋರಿಸಿವೆ.

ಬಳಕೆ ಆಧಾರಿತ ವರ್ಗೀಕರಣದ ದತ್ತಾಂಶದ ಪ್ರಕಾರ ರೆಫ್ರಿಜರೇಟರ್​ಗಳು, ವಾಷಿಂಗ್ ಮೆಷಿನ್​ಗಳು ಮತ್ತು ಟಿವಿಗಳಂತಹ ಗ್ರಾಹಕ ಬಾಳಿಕೆ ಬರುವ ವಸ್ತುಗಳ ಉತ್ಪಾದನೆಯು ಶೇಕಡಾ 9.8ರಷ್ಟು ಹೆಚ್ಚಾಗಿವೆ. ಇದು ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಈ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಕಾರಾತ್ಮಕ ಸಂಕೇತವಾಗಿದೆ.

ನಿರ್ಮಾಣ ಸರಕುಗಳ ಉತ್ಪಾದನೆಯೂ ಶೇಕಡಾ 8ರಷ್ಟು ಏರಿಕೆಯಾಗಿದೆ. ಇದು ಮೂಲಸೌಕರ್ಯ ವಲಯದಲ್ಲಿ ಹೂಡಿಕೆಗಳು ಹೆಚ್ಚಾಗುತ್ತಿರುವುದನ್ನು ಸೂಚಿಸುತ್ತದೆ. ಸರಕುಗಳನ್ನು ಉತ್ಪಾದಿಸುವ ಯಂತ್ರಗಳನ್ನು ಒಳಗೊಂಡಿರುವ ಮತ್ತು ಆರ್ಥಿಕತೆಯಲ್ಲಿನ ನಿಜವಾದ ಹೂಡಿಕೆಯನ್ನು ಪ್ರತಿಬಿಂಬಿಸುವ ಬಂಡವಾಳ ಸರಕುಗಳ ಉತ್ಪಾದನೆಯು ಶೇಕಡಾ 3.1ರಷ್ಟು ಹೆಚ್ಚಾಗಿದೆ.

ವಿದ್ಯುತ್ ಉತ್ಪಾದನೆಯು ಏಪ್ರಿಲ್​ನಲ್ಲಿ ಶೇಕಡಾ 10.2ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಇದು ಶೇಕಡಾ 1.1ಕ್ಕೆ ಸಂಕೋಚನವಾಗಿತ್ತು. ಬಳಕೆ ಆಧಾರಿತ ವರ್ಗೀಕರಣದ ಪ್ರಕಾರ, ಬಂಡವಾಳ ಸರಕುಗಳ ವಿಭಾಗದ ಬೆಳವಣಿಗೆಯು 2024ರ ಏಪ್ರಿಲ್​ನಲ್ಲಿ ಶೇಕಡಾ 3.1ಕ್ಕೆ ಇಳಿದಿದೆ. 2023ರ ಏಪ್ರಿಲ್​ನಲ್ಲಿ ಶೇಕಡಾ 11.4ರಷ್ಟಿದ್ದ ಗ್ರಾಹಕ ನಾನ್-ಡ್ಯೂರೆಬಲ್ ಸರಕುಗಳ ಉತ್ಪಾದನೆಯು ವರದಿಯ ತಿಂಗಳಲ್ಲಿ ಶೇಕಡಾ 2.4ರಷ್ಟು ಕುಗ್ಗಿದೆ. ಪ್ರಾಥಮಿಕ ಸರಕುಗಳ ಉತ್ಪಾದನೆಯು ಈ ವರ್ಷದ ಏಪ್ರಿಲ್​​ನಲ್ಲಿ ಶೇಕಡಾ 7ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 1.9ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ₹23 ಸಾವಿರ ಕೋಟಿ ದಾಟಿದ ಭಾರತದ ಟೈರ್ ರಫ್ತು ಪ್ರಮಾಣ: ಶೇ 12ರಷ್ಟು ಹೆಚ್ಚಳ - Indian Tyre Exports

ETV Bharat Logo

Copyright © 2024 Ushodaya Enterprises Pvt. Ltd., All Rights Reserved.