ETV Bharat / business

7 ಟ್ರಿಲಿಯನ್​ ಡಾಲರ್​ಗೆ ಬೆಳೆಯಲಿದೆ ಭಾರತದ ಆರ್ಥಿಕತೆ: ಹಣಕಾಸು ಆಯೋಗದ ಅಧ್ಯಕ್ಷ ಪನಗರಿಯಾ - INDIAN ECONOMY

ಭಾರತದ ಆರ್ಥಿಕತೆ 7 ಟ್ರಿಲಿಯನ್ ಡಾಲರ್​ಗೆ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಅರವಿಂದ ಪನಗರಿಯಾ ಹೇಳಿದ್ದಾರೆ.

ಅರವಿಂದ ಪನಗರಿಯಾ
16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗರಿಯಾ (ANI)
author img

By ANI

Published : Dec 12, 2024, 3:20 PM IST

ನವದೆಹಲಿ: ತುಂಬಾ ಮಧ್ಯಮ ಬೆಳವಣಿಗೆಯ ಅಂದಾಜಿನ ನಡುವೆಯೂ ಭಾರತದ ಆರ್ಥಿಕತೆ 2030ರ ವೇಳೆಗೆ 7 ಟ್ರಿಲಿಯನ್ ಡಾಲರ್ ದಾಟುವ ಹಾದಿಯಲ್ಲಿದೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗರಿಯಾ ಹೇಳಿದರು.

ಟೈಮ್ಸ್ ನೆಟ್‌ವರ್ಕ್ ಗುರುವಾರ ಆಯೋಜಿಸಿದ್ದ ಇಂಡಿಯಾ ಎಕನಾಮಿಕ್ ಕಾನ್ ಕ್ಲೇವ್​ನಲ್ಲಿ ಮಾತನಾಡಿದ ಪನಗಾರಿಯಾ, "ಅತ್ಯುತ್ತಮ ಬೆಳವಣಿಗೆ ಮತ್ತು ಮತ್ತಷ್ಟು ಸುಧಾರಣೆಗಳೊಂದಿಗೆ ಆರ್ಥಿಕತೆಯು 9 ಟ್ರಿಲಿಯನ್ ಡಾಲರ್ ತಲುಪಬಹುದು" ಎಂದರು.

"ತೀರಾ ಕಡಿಮೆ ಎಂದರೂ ಭಾರತದ ಆರ್ಥಿಕತೆಯು 7 ಟ್ರಿಲಿಯನ್ ಯುಎಸ್ ಡಾಲರ್ ಆಗಲಿದೆ. ಗರಿಷ್ಠ ಎಂದರೆ 9 ಟ್ರಿಲಿಯನ್ ಯುಎಸ್ ಡಾಲರ್​ಗೆ ಬೆಳೆಯಬಹುದು. ಇದು ಸಾಧ್ಯ. ಸಾಕಷ್ಟು ವಿಷಯಗಳು ಸರಿಯಾಗಿ ನಡೆಯುತ್ತಿವೆ. ನಾವು ಇನ್ನೂ ಕೆಲ ಬಾಕಿ ಇರುವ ಸುಧಾರಣೆಗಳನ್ನು ಜಾರಿಗೆ ತಂದರೆ, ಈ ಬೆಳವಣಿಗೆಯನ್ನು ವೇಗಗೊಳಿಸಬಹುದು" ಎಂದು ಪನಗರಿಯಾ ಈ ಸಂದರ್ಭದಲ್ಲಿ ತಿಳಿಸಿದರು.

ಹೆಚ್ಚಿನ ಬೆಳವಣಿಗೆಯ ದರವನ್ನು ಸಾಧಿಸುವಲ್ಲಿ ಸುಧಾರಣೆಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು.

"ಖಂಡಿತವಾಗಿಯೂ ನಾವು ಇನ್ನೂ ಕೆಲ ಸುಧಾರಣೆಗಳನ್ನು ಕೈಗೊಂಡರೆ, ಪ್ರಸ್ತುತ ಡಾಲರ್ ಲೆಕ್ಕದಲ್ಲಿ ಶೇಕಡಾ 10ರಷ್ಟು ಬೆಳವಣಿಗೆಯನ್ನು ಒಂದೆರಡು ಶೇಕಡಾ ಪಾಯಿಂಟ್ ಗಳ ಹೆಚ್ಚು ಕಡಿಮೆ ಲೆಕ್ಕದಲ್ಲಿ ತಲುಪಬಹುದು. ಶೇಕಡಾ 11-12ಕ್ಕೂ ತಲುಪಬಹುದು. ಇದು 2030 ದಶಕದ ಆರಂಭದಲ್ಲಿ ಆರ್ಥಿಕತೆಯನ್ನು 9 ರಿಂದ 10 ಟ್ರಿಲಿಯನ್ ಡಾಲರ್​ಗೆ ಕೊಂಡೊಯ್ಯಲಿದೆ" ಎಂದು ಅವರು ನುಡಿದರು.

"ನಗರಗಳಲ್ಲಿ ಭೂಮಿಯ ದರ ಹೆಚ್ಚಾಗುತ್ತಿರುವ ರಚನಾತ್ಮಕ ಸವಾಲುಗಳನ್ನು ಎದುರಿಸುವ ಅಗತ್ಯವನ್ನು ಪನಗರಿಯಾ ಒತ್ತಿ ಹೇಳಿದರು. ಕೈಗೆಟುಕುವ ದರದ ವಾಣಿಜ್ಯ ಬಾಡಿಗೆ ಕಟ್ಟಡಗಳ ನಿರ್ಮಾಣಕ್ಕೆ ದುಬಾರಿ ರಿಯಲ್ ಎಸ್ಟೇಟ್ ತಡೆಗೋಡೆ" ಎಂದು ಅವರು ಗಮನ ಸೆಳೆದರು.

"ಭಾರತ ನಗರಗಳಲ್ಲಿ ಭೂಮಿಯ ದರ ಅತ್ಯಂತ ದುಬಾರಿಯಾಗಿದೆ. ಪ್ರಮುಖ ನಗರಗಳಲ್ಲಿ ಬಾಡಿಗೆ ದರಗಳು ಶೇಕಡಾ 2-3 ರಷ್ಟಿದ್ದರೆ, ಬಡ್ಡಿದರಗಳು ಶೇಕಡಾ 8 ರಷ್ಟಿದೆ. ಇದು ಸುಸ್ಥಿರ ವಾಣಿಜ್ಯ ಬಾಡಿಗೆ ಕಟ್ಟಡಗಳನ್ನು ಹೊಂದಲು ಅಸಾಧ್ಯವಾಗಿಸುತ್ತದೆ ಎಂದು ಅವರು ಹೇಳಿದರು. ಆರ್ಥಿಕ ಬೆಳವಣಿಗೆಯ ಜೊತೆಗೆ, ಪನಗಾರಿಯಾ ಹೂಡಿಕೆ ತಂತ್ರಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಚಿನ್ನ, ರಿಯಲ್ ಎಸ್ಟೇಟ್ ಮತ್ತು ಈಕ್ವಿಟಿಗಳನ್ನು ಆದ್ಯತೆಯ ದೀರ್ಘಕಾಲೀನ ಹೂಡಿಕೆಯಾಗಿ ಶಿಫಾರಸು ಮಾಡಿದರು. ನೀವು ಹೂಡಿಕೆ ಮಾಡಲು ಬಯಸಿದರೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿ" ಎಂದು ಅವರು ಹೇಳಿದರು.

ಇದನ್ನೂ ಓದಿ: ಬೆಲೆ ನಿಯಂತ್ರಣ ಕ್ರಮ: ಗೋಧಿ ದಾಸ್ತಾನಿಗೆ ಮಿತಿ ಹೇರಿದ ಕೇಂದ್ರ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.