ETV Bharat / business

ಭಾರತೀಯ ಮಹಿಳೆಯರಿಗೆ ಸಿಗುವ ವೇತನ ಕಡಿಮೆ: ವರದಿ

author img

By ETV Bharat Karnataka Team

Published : Mar 6, 2024, 1:26 PM IST

ಈ ಸಮೀಕ್ಷಾ ವರದಿ ಲಿಂಗ ವೇತನದ ಅಸಮಾನತೆಯ ಕುರಿತು ಬೆಳಕು ಚೆಲ್ಲಿದೆ.

Indian women are leading the charge for pay equity

ಬೆಂಗಳೂರು: ಉದ್ಯೋಗ ವೇತನ ವಿಚಾರದಲ್ಲಿ ಭಾರತೀಯ ಮಹಿಳೆಯರು ಆತ್ಮವಿಶ್ವಾಸದಿಂದ ಹೆಚ್ಚಿನ ಸಂಬಳ ಕೇಳುತ್ತಾರೆ. ಆದರೆ, ನಿರೀಕ್ಷೆಗಿಂತ ಕಡಿಮೆ ವೇತನ ಅವರಿಗೆ ಸಿಗುತ್ತಿದೆ ಎಂದು ವರದಿ ತಿಳಿಸಿದೆ. ಈ ಸಮೀಕ್ಷಾ ವರದಿ ಲಿಂಗ ವೇತನದ ಅಸಮಾನತೆಯ ಕುರಿತು ಬೆಳಕು ಚೆಲ್ಲಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ ಇಂಡಿಡ್ ಸಂಸ್ಥೆ​ ಈ ಕುರಿತು ಜಾಗತಿಕ ವರದಿ ನೀಡಿದೆ. ಅಧ್ಯಯನಕ್ಕಾಗಿ 11 ದೇಶದ 14,677 ಪೂರ್ಣಕಾಲಿಕ ಅಥವಾ ಅರೆಕಾಲಿಕ ಮಹಿಳಾ ಉದ್ಯೋಗಿಗಳನ್ನು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ 1,193 ಭಾರತೀಯರ ಮಹಿಳೆಯರೂ ಇದ್ದಾರೆ.

ಜಾಗತಿಕ ಉದ್ಯೋಗಿಗಳಲ್ಲಿ ಮಹಿಳೆಯರ ಅನುಭವಗಳು ಮತ್ತು ದೃಷ್ಟಿಕೋನಗಳ ಕುರಿತ ಅನುಭವವನ್ನು ವರದಿ ವಿವರಿಸಿದೆ. ಪ್ರಗತಿ ಹೊರತಾಗಿ ಶೇ.50ರಷ್ಟು ಮಹಿಳೆಯರು ಜಾಗತಿಕವಾಗಿ ತಾವು ಕೋರಿದ ವೇತನ ಹೆಚ್ಚಳಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಭಾರತದಲ್ಲಿ ಶೇ.56ರಷ್ಟು ಮಹಿಳೆಯರು ವೇತನ ಹೆಚ್ಚಳ ಕೇಳಿದರೂ ಅವರಿಗೆ ನಿರೀಕ್ಷಿತ ಪ್ರಮಾಣದ ವೇತನ ದೊರೆಯುತ್ತಿಲ್ಲ. ದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಸಮಾನ ಪರಿಹಾರವನ್ನು ಪಡೆಯಲು ನಿರಂತರ ಸವಾಲುಗಳನ್ನು ಅವರು ಎದುರಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಜಾಗತಿಕ ಸರಾಸರಿಯಲ್ಲಿ ಶೇ.30ರಷ್ಟು, ಭಾರತ ಮಹಿಳೆಯರು ಶೇ. 53ರಷ್ಟು ಮಂದಿ ವೇತನ ಹೆಚ್ಚಳ ಕೇಳುವ ವಿಶ್ವಾಸ ಹೊಂದಿದ್ದಾರೆ. ಇತರೆ ದೇಶಗಳ ಅಧಿಕ ಪ್ರಮಾಣಗಳಿಗೆ ಹೋಲಿಕೆ ಮಾಡಿದಾಗ ಶೇ.65ರಷ್ಟು ಭಾರತೀಯ ಮಹಿಳೆಯರು ಹೆಚ್ಚಳ ಕೇಳುತ್ತಾರೆ.

ಹತ್ತರಲ್ಲಿ ಒಂಭತ್ತು ಮಹಿಳೆಯರು ಅಂದರೆ ಶೇ.90ರಷ್ಟು ಮಹಿಳೆಯರು ವೇತನ ಎಂಬುದು ಅತ್ಯಂತ ಪ್ರಮುಖ ಎಂದು ಗುರುತಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಅಂದರೆ 11 ದೇಶಗಳ ಸಮೀಕ್ಷೆಯಲ್ಲಿ ಶೇ.82ರಷ್ಟು ಮಹಿಳೆಯರು ಕೂಡ ಇದನ್ನು ಒಪ್ಪಿದ್ದಾರೆ.

ಎಲ್ಲಾ ಮಹಿಳೆಯರು ಚರ್ಚಿಸಲು, ಅಭಿವೃದ್ಧಿ ಹೊಂದಲು ಮತ್ತು ಸಮತೋಲನವನ್ನು ಸಾಧಿಸಲು ಅಧಿಕಾರವನ್ನು ಅನುಭವಿಸುವ ವಾತಾವರಣವನ್ನು ಸೃಷ್ಟಿಸುವುದು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಹೊಸ ಮತ್ತು ಸಾಂಸ್ಥಿಕ ಯಶಸ್ಸು ಸಾಧಿಸುವಲ್ಲಿ ಪ್ರಮುಖವಾಗಿದೆ. ಇದರಲ್ಲಿ ಭಾರತೀಯ ಮಹಿಳೆಯರ ವಿಶ್ವಾಸವೂ ಗಮನಾರ್ಹವಾಗಿದ್ದು, ಇದೇ ರೀತಿಯ ವಾತಾವರಣವನ್ನು ಜಗತ್ತಿನಾದ್ಯಂತ ಬೆಳೆಸುವ ಸಮಯ ಬಂದಿದೆ ಎಂದು ಇಂಡಿಡ್​​ ಇಂಡಿಯಾದ ಮಾರ್ಕೆಟಿಂಗ್​ ನಿರ್ದೇಶಕರಾದ ನಿಶಿತಾ ಲಲ್ವಾನಿ ಹೇಳಿದ್ದಾರೆ.

ಮನೆ ಕೆಲಸ ಅಥವಾ ಮನೆಹೊರಗಿನ ಕೆಲಸವನ್ನು ಮಹಿಳೆಯರು ವಿಶ್ವಾಸದಿಂದ ಎದುರಿಸುತ್ತಿದ್ದಾರೆ. ಜಾಗತಿಕವಾಗಿ ರಾಷ್ಟ್ರ ಮಟ್ಟದಲ್ಲಿ ಮಹಿಳೆಯರು ಲಿಂಗ ಸಮಾನತೆ ಅಂತರ ಹೊಂದಿದ್ದಾರೆ ಎಂದು ಅಧ್ಯಯನ ತೋರಿಸಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಂಶಗಳಿಂದಾಗಿ ಭಾರತೀಯ ಮಹಿಳೆಯರು ತಮ್ಮ ಸಾಂಸ್ಥಿಕ ಮತ್ತು ವಲಯದ ಕ್ಷೇತ್ರಗಳಲ್ಲಿ ಹೆಚ್ಚಿನ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. (ಐಎಎನ್​ಎಸ್​​)

ಇದನ್ನೂ ಓದಿ: ಪುರುಷ - ಮಹಿಳೆಯರ ಉದ್ಯೋಗ ಅಸಮಾನತೆಗೆ ಲಿಂಗ ತಾರತಮ್ಯವೇ ಕಾರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.