ನವದೆಹಲಿ: ಭಾರತೀಯ ಸ್ಟಾರ್ಟ್ಅಪ್ಗಳು ಸಾಮಾನ್ಯ ವೇಗದಲ್ಲಿ ನಿಧಿ ಸಂಗ್ರಹಿಸುವುದನ್ನು ಮುಂದುವರಿಸಿದ್ದು, ಕಳೆದ ವಾರ 30 ಸ್ಟಾರ್ಟ್ಅಪ್ಗಳು ದೇಶದಲ್ಲಿ 172.71 ದಶಲಕ್ಷ ಡಾಲರ್ಗೂ ಅಧಿಕ ಮೊತ್ತದ ಬಂಡವಾಳ ನಿಧಿ ಪಡೆದುಕೊಂಡಿವೆ. ಇದರಲ್ಲಿ ಎಂಟು ಬೆಳವಣಿಗೆಯ ಹಂತದ ಡೀಲ್ಗಳು ಮತ್ತು 16 ಆರಂಭಿಕ ಹಂತದ ಡೀಲ್ಗಳು ಸೇರಿವೆ ಎಂದು ಎನ್ ಟ್ರಾಕರ್ ವರದಿ ಮಾಡಿದೆ.
ಆರಂಭಿಕ ಹಂತದ ಕನಿಷ್ಠ ಆರು ಸ್ಟಾರ್ಟ್ಅಪ್ಗಳು ತಾವು ಸಂಗ್ರಹಿಸಿದ ಮೊತ್ತವನ್ನು ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್ 25 ರಿಂದ 30 ರ ವಾರದಲ್ಲಿ ಸುಮಾರು 17 ಆರಂಭಿಕ ಮತ್ತು ಬೆಳವಣಿಗೆಯ ಹಂತದ ಸ್ಟಾರ್ಟ್ಅಪ್ಗಳು ಒಟ್ಟಾಗಿ ಸುಮಾರು 125.73 ಮಿಲಿಯನ್ ಡಾಲರ್ ಸಂಗ್ರಹಿಸಿವೆ. ಬೆಳವಣಿಗೆಯ ಹಂತದ ಡೀಲ್ಗಳಲ್ಲಿ ಎಂಟು ಸ್ಟಾರ್ಟ್ಅಪ್ಗಳು ಕಳೆದ ವಾರ 130.1 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿವೆ.
ಭವಿಶ್ ಅಗರ್ವಾಲ್ ನೇತೃತ್ವದ ಓಲಾ ಎಲೆಕ್ಟ್ರಿಕ್ ಅತಿ ಹೆಚ್ಚು 50 ಮಿಲಿಯನ್ ಡಾಲರ್ ಸಾಲ ನಿಧಿಯನ್ನು ಪಡೆದುಕೊಂಡಿದೆ. ಹೈಪರ್ ಲೋಕಲ್ ಮಾರ್ಕೆಟಿಂಗ್-ಟು-ಕಾಮರ್ಸ್ ಸಾಫ್ಟ್ ವೇರ್ ಪ್ಲಾಟ್ಫಾರ್ಮ್ ಸಿಂಗಲ್ ಇಂಟರ್ಫೇಸ್, ಎನ್ಬಿಎಫ್ಸಿ ಇನ್ಫಿನಿಟಿ ಫಿನ್ ಕಾರ್ಪ್, ಹೌಸಿಂಗ್ ಫೈನಾನ್ಸ್ ಕಂಪನಿ ನಿವಾರಾ ಹೋಮ್ ಫೈನಾನ್ಸ್, ಪೇಮೆಂಟ್ ಗೇಟ್ ವೇ ಮತ್ತು ಪಾಯಿಂಟ್ ಆಫ್ ಸೇಲ್ಸ್ ಪ್ರೊವೈಡರ್ ಇನ್ನೋವಿಟಿ ಮತ್ತು ಡಿಜಿಟಲ್ ಬ್ಯಾಂಕಿಂಗ್ ಮೂಲಸೌಕರ್ಯ ಸಂಸ್ಥೆ ಎಂ 2 ಪಿ ಫಿನ್ಟೆಕ್ ಕ್ರಮವಾಗಿ $ 30 ಮಿಲಿಯನ್, $ 26 ಮಿಲಿಯನ್, $ 10 ಮಿಲಿಯನ್, $ 4.8 ಮಿಲಿಯನ್ ಮತ್ತು $ 4.2 ಮಿಲಿಯನ್ ನಿಧಿ ಪಡೆದುಕೊಂಡಿವೆ.
ಇದಲ್ಲದೆ 16 ಆರಂಭಿಕ ಹಂತದ ಸ್ಟಾರ್ಟ್ಅಪ್ಗಳು ಒಟ್ಟಾಗಿ 42.61 ಮಿಲಿಯನ್ ಡಾಲರ್ ಹಣವನ್ನು ಪಡೆದುಕೊಂಡಿವೆ. ಡಿ 2 ಸಿ ಆರೋಗ್ಯ ಮತ್ತು ವೆಲ್ನೆಸ್ ಬ್ರಾಂಡ್ ಟ್ರಾಯಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬಳಸಿದ ದ್ವಿಚಕ್ರ ವಾಹನಗಳ ಫುಲ್-ಸ್ಟ್ಯಾಕ್ ರಿಟೇಲ್ ವ್ಯಾಪಾರ ಉದ್ಯಮ ಬೀಪ್ಕಾರ್ಟ್, ಎಐ ಪ್ಲಾಟ್ಫಾರ್ಮ್ ಸಿಫ್ಟ್ ಹಬ್, ಡೀಪ್-ಟೆಕ್ ಸ್ಟಾರ್ಟ್ಅಪ್ ಪ್ಲಾನಿಸ್ ಮತ್ತು ಫುಲ್-ಸ್ಟ್ಯಾಕ್ ಮೆಟಲ್ ಸಪ್ಲೈ-ಚೈನ್ ಪ್ಲಾಟ್ ಫಾರ್ಮ್ ಮೆಟಲ್ ಬುಕ್ ನಂತರದ ಸ್ಥಾನಗಳಲ್ಲಿವೆ.
ನಗರವಾರು ನೋಡುವುದಾದರೆ, ಬೆಂಗಳೂರು ಮೂಲದ ಸ್ಟಾರ್ಟ್ಅಪ್ಗಳು 11 ಫಂಡಿಂಗ್ ಡೀಲ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮುಂಬೈ, ದೆಹಲಿ-ಎನ್ಸಿಆರ್, ಚೆನ್ನೈ ಮತ್ತು ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ.
ಇದನ್ನೂ ಓದಿ : ಇವಿ ಉತ್ಪಾದನಾ ಘಟಕ ಸ್ಥಾಪನೆ: ಸ್ಥಳ ಪರಿಶೀಲನೆಗಾಗಿ ಭಾರತಕ್ಕೆ ಆಗಮಿಸಲಿದೆ ಟೆಸ್ಲಾ ತಂಡ - TESLA