ETV Bharat / business

2023ರಲ್ಲಿ 83 ಸಾವಿರ ಪೇಟೆಂಟ್​ ಅರ್ಜಿ ಸಲ್ಲಿಸಿದ ಭಾರತೀಯ ಸ್ಟಾರ್ಟಪ್​ಗಳು - Indian Startups

author img

By ETV Bharat Karnataka Team

Published : Apr 26, 2024, 6:01 PM IST

ಭಾರತೀಯ ಸ್ಟಾರ್ಟಪ್​ಗಳು 2023ರಲ್ಲಿ 83 ಸಾವಿರ ಪೇಟೆಂಟ್ ಅರ್ಜಿ ಸಲ್ಲಿಸಿವೆ.

Indian startups file 83,000 patents in FY23; AI, neurotechnology lead

ನವದೆಹಲಿ: ಹಣಕಾಸು ವರ್ಷ 2023ರಲ್ಲಿ ಡೀಪ್ ಟೆಕ್ ತಂತ್ರಜ್ಞಾನದ ಸ್ಟಾರ್ಟಪ್​ಗಳು ಭಾರತದಲ್ಲಿ 80 ಸಾವಿರ ಪೇಟೆಂಟ್ ಅರ್ಜಿ ದಾಖಲಿಸಿವೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 24.6ರಷ್ಟು ಹೆಚ್ಚಳವಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ನ್ಯೂರೊ ಟೆಕ್ನಾಲಜಿ ಕ್ಷೇತ್ರದ ಸ್ಟಾರ್ಟಪ್​ಗಳು ಹೆಚ್ಚಿನ ಪೇಟೆಂಟ್​ ಅರ್ಜಿ ಸಲ್ಲಿಸಿವೆ ಎಂದು ನಾಸ್ಕಾಮ್ ವರದಿ ಶುಕ್ರವಾರ ತೋರಿಸಿದೆ. 2019-2023ರ ನಡುವೆ ನೀಡಲಾದ ಪೇಟೆಂಟ್​ಗಳ ಸಂಖ್ಯೆ 2 ಪಟ್ಟು ಹೆಚ್ಚಾಗಿದೆ.

ಮಾರ್ಚ್ 15, 2023 ಮತ್ತು ಈ ವರ್ಷದ ಮಾರ್ಚ್ 14 ರ ನಡುವೆ 1,00,000 ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ನೀಡಲಾಗಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

"ಕಳೆದ ಕೆಲ ವರ್ಷಗಳಲ್ಲಿ ವಿಶೇಷವಾಗಿ ಎಐನಂತಹ ಕ್ಷೇತ್ರಗಳಲ್ಲಿ ಪೇಟೆಂಟ್ ಫೈಲಿಂಗ್​​ಗಳಲ್ಲಿನ ಹೆಚ್ಚಳವು ಭಾರತದ ಬೆಳೆಯುತ್ತಿರುವ ನಾವೀನ್ಯತೆಯ ಸ್ಪಷ್ಟ ಸೂಚನೆಯಾಗಿದೆ." ಎಂದು ನಾಸ್ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್ ಹೇಳಿದರು. "ದೇಶೀಯ ಪೇಟೆಂಟ್ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಮುಖ ಮಧ್ಯಸ್ಥಗಾರರ ನಡುವಿನ ಸಹಯೋಗ ಅತ್ಯಗತ್ಯ" ಎಂದು ಅವರು ತಿಳಿಸಿದರು.

ಕಳೆದ ದಶಕದಲ್ಲಿ ಭಾರತೀಯ ನಿವಾಸಿಗಳು (ಭಾರತ ಮೂಲದ ಪ್ರಾಥಮಿಕ ತೆರಿಗೆದಾರರು) ಸಲ್ಲಿಸಿದ ಪೇಟೆಂಟ್ ಅರ್ಜಿಗಳ ಪ್ರಮಾಣವು ದ್ವಿಗುಣಗೊಂಡಿದೆ. ಇದು 2019 ರ ಆರ್ಥಿಕ ವರ್ಷದಲ್ಲಿ ಆಗಿದ್ದ ಒಟ್ಟು ಫೈಲಿಂಗ್​ಗಳ ಶೇಕಡಾ 33.6 ರಿಂದ 2023 ರ ಆರ್ಥಿಕ ವರ್ಷದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ.

"2008 ರಿಂದ ಪ್ರಮುಖ ಭಾರತೀಯ ಡೀಪ್-ಟೆಕ್ ಸ್ಟಾರ್ಟ್ಅಪ್​ಗಳು 900 ಕ್ಕೂ ಹೆಚ್ಚು ಪೇಟೆಂಟ್​ ಅರ್ಜಿಗಳನ್ನು ಸಲ್ಲಿಸಿರುವುದು ಮತ್ತು ಇತರ ದೇಶಗಳು ಭಾರತದಲ್ಲಿ 32,000 ಪೇಟೆಂಟ್ ಸಹಕಾರ ಒಪ್ಪಂದ (ಪಿಸಿಟಿ) ಅರ್ಜಿಗಳನ್ನು ಸಲ್ಲಿಸಿರುವುದು ಈ ಹೆಚ್ಚುತ್ತಿರುವ ಪ್ರವೃತ್ತಿಗೆ ಸಾಕ್ಷಿಯಾಗಿದೆ" ಎಂದು ವರದಿ ಹೇಳಿದೆ.

ವೈದ್ಯಕೀಯ ಇಮೇಜಿಂಗ್, ರೋಗನಿರ್ಣಯ, ರಿಪೋರ್ಟ್​ ತಯಾರಿಕೆ ಮತ್ತು ರೋಗ ಪರೀಕ್ಷೆ ವಲಯಗಳಲ್ಲಿ ಅತ್ಯಧಿಕ ಪೇಟೆಂಟ್​ ಅರ್ಜಿಗಳು ಸಲ್ಲಿಕೆಯಾಗಿವೆ. ಆಟೋಮೇಷನ್, ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ರಿಟೇಲ್ / ಇಕಾಮರ್ಸ್ ನಂತರದ ಸ್ಥಾನಗಳಲ್ಲಿವೆ. ಇಮೇಜ್ ಪ್ರೊಸೆಸಿಂಗ್, ಎನ್ಎಲ್​ಪಿ ಮತ್ತು ಪ್ರೆಡಿಕ್ಟಿವ್ ಮಾಡೆಲಿಂಗ್ ಮುಂತಾದ ಎಐ ತಂತ್ರಜ್ಞಾನ ವಲಯದಿಂದಲೂ ಅಧಿಕ ಪೇಟೆಂಟ್ ಅರ್ಜಿಗಳು ಸಲ್ಲಿಕೆಯಾಗಿವೆ.

ಇದನ್ನೂ ಓದಿ : ಲಡಾಖ್​ನಲ್ಲಿ ಒಂದೇ ಒಂದು ಕುಟುಂಬದ ಮತದಾನಕ್ಕಾಗಿ ಮತಗಟ್ಟೆ ಸ್ಥಾಪನೆ - Polling Booth For One Family

ETV Bharat Logo

Copyright © 2024 Ushodaya Enterprises Pvt. Ltd., All Rights Reserved.