ETV Bharat / business

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 33.9 ಲಕ್ಷ ಪಿಸಿ ಮಾರಾಟ: ಮುಂಚೂಣಿಯಲ್ಲಿ ಎಚ್​ಪಿ - Indian PC Market - INDIAN PC MARKET

ಭಾರತದಲ್ಲಿ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 3.39 ದಶಲಕ್ಷ (33.9 ಲಕ್ಷ) ಪಿಸಿಗಳು ಮಾರಾಟವಾಗಿವೆ.

ಲ್ಯಾಪ್​ಟಾಪ್​ (ಸಾಂದರ್ಭಿಕ ಚಿತ್ರ)
ಲ್ಯಾಪ್​ಟಾಪ್​ (ಸಾಂದರ್ಭಿಕ ಚಿತ್ರ) (IANS)
author img

By ETV Bharat Karnataka Team

Published : Aug 19, 2024, 3:59 PM IST

ನವದೆಹಲಿ : ಭಾರತದಲ್ಲಿ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 3.39 ದಶಲಕ್ಷ (33.9 ಲಕ್ಷ) ಪಿಸಿಗಳು ಮಾರಾಟವಾಗಿವೆ ಮತ್ತು ವರ್ಷದಿಂದ ವರ್ಷಕ್ಕೆ ಪಿಸಿ ಮಾರಾಟ ಶೇ 7.1ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಇಂಟರ್ ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಅಂಕಿಅಂಶಗಳ ಪ್ರಕಾರ, ಡೆಸ್ಕ್ ಟಾಪ್, ನೋಟ್ ಬುಕ್ ಮತ್ತು ವರ್ಕ್ ಸ್ಟೇಷನ್ ಈ ಮೂರು ರೀತಿಯ ಪಿಸಿಗಳ ಮಾರಾಟ ಕ್ರಮವಾಗಿ ಶೇಕಡಾ 5.9, ಶೇಕಡಾ 7.4 ಮತ್ತು ಶೇಕಡಾ 12.4 ರಷ್ಟು ಬೆಳೆದಿದೆ.

ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ಮಾರುಕಟ್ಟೆಗಳಲ್ಲಿ ಪಿಸಿಗಳ ಮಾರಾಟ ಉತ್ತಮವಾಗಿದ್ದು, ಗ್ರಾಹಕ ಪಿಸಿಗಳ ಮಾರಾಟ ಶೇಕಡಾ 11.2 ರಷ್ಟು ಹೆಚ್ಚಾಗಿದೆ. ಗ್ರಾಹಕ ಪಿಸಿಗಳ ವಿಭಾಗದಲ್ಲಿ ಇದು ಸತತ ನಾಲ್ಕನೇ ತ್ರೈಮಾಸಿಕ ಬೆಳವಣಿಗೆಯಾಗಿದೆ.

ವಾಣಿಜ್ಯ ಮತ್ತು ಗ್ರಾಹಕ ಪಿಸಿ ಮಾರಾಟದಲ್ಲಿ ಎಚ್​ಪಿ ಕ್ರಮವಾಗಿ ಶೇ 33.5 ಮತ್ತು ಶೇ 29.7 ರಷ್ಟು ಪಾಲಿನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗ್ರಾಹಕ ನೋಟ್ ಬುಕ್​ಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಕೆಲವು ದೊಡ್ಡ ಆರ್ಡರ್​ಗಳ ಈಡೇರಿಕೆಯಿಂದಾಗಿ ಕಂಪನಿಯು ನೋಟ್ ಬುಕ್ ಪಿಸಿ ಮಾರಾಟದಲ್ಲಿ ಶೇಕಡಾ 34.4 ರಷ್ಟು ಪಾಲನ್ನು ಹೊಂದಿದೆ.

ಗ್ರಾಹಕ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಹೆಚ್ಚಿನ ಪಿಸಿಗಳನ್ನು ರಫ್ತು ಮಾಡುವ ಮೂಲಕ ಲೆನೊವೊ ಎರಡನೇ ಸ್ಥಾನದಲ್ಲಿದೆ. ಕಂಪನಿಯು ಎಸ್ಎಂಬಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಶೇಕಡಾ 16.5 ರಷ್ಟು ಬೆಳೆದಿದೆ.

ಪಿಸಿಗಳ ಮಾರಾಟದಲ್ಲಿ ಡೆಲ್ ಟೆಕ್ನಾಲಜೀಸ್ ಮೂರನೇ ಸ್ಥಾನದಲ್ಲಿದೆ. ಸರ್ಕಾರ ಮತ್ತು ಉದ್ಯಮದ ಆರ್ಡರ್​ ವಿಷಯದಲ್ಲಿ ನಿರಂತರ ಬೆಲೆ ಒತ್ತಡದಿಂದಾಗಿ ಕಂಪನಿಯ ಡೆಸ್ಕ್​ಟಾಪ್ ಮಾರಾಟ ಶೇಕಡಾ 15.9 ರಷ್ಟು ಕುಸಿದಿದೆ. ಆದಾಗ್ಯೂ ಇದು ಗ್ರಾಹಕ ಪಿಸಿ ಮಾರಾಟದಲ್ಲಿ ಶೇಕಡಾ 6.4 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಶೇಕಡಾ 38.3ರಷ್ಟು ಮಾರಾಟ ಬೆಳವಣಿಗೆಯೊಂದಿದೆ ಏಸರ್ ಗ್ರೂಪ್ ನಾಲ್ಕನೇ ಸ್ಥಾನದಲ್ಲಿದೆ. ಇದು ಡೆಸ್ಕ್ ಟಾಪ್ ವಿಭಾಗದಲ್ಲಿ ಶೇಕಡಾ 27.6 ರಷ್ಟು ಪಾಲನ್ನು ಹೊಂದಿದೆ. ಆಸೂಸ್ ಶೇಕಡಾ 5.4 ರಷ್ಟು ಬೆಳವಣಿಗೆಯೊಂದಿಗೆ ಐದನೇ ಸ್ಥಾನದಲ್ಲಿದೆ. ಆಸೂಸ್ ವಾಣಿಜ್ಯ ವಿಭಾಗದಲ್ಲಿ ಗಮನಾರ್ಹ ಶೇಕಡಾ 131.7 ರಷ್ಟು ಬೆಳವಣಿಗೆಯನ್ನು ಕಂಡಿದೆ.

ವರದಿಯ ಪ್ರಕಾರ, ಇ-ಟೈಲ್ ಚಾನೆಲ್ ತ್ರೈಮಾಸಿಕದಲ್ಲಿ ಶೇಕಡಾ 22.4 ರಷ್ಟು ಬೆಳೆದಿದೆ. ಎಸ್ಎಂಬಿ ಮತ್ತು ದೊಡ್ಡ ಉದ್ಯಮಗಳ ವಿಭಾಗಗಳಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ವಾಣಿಜ್ಯ ವಿಭಾಗವು ಶೇಕಡಾ 3.5 ರಷ್ಟು ಬೆಳೆದಿದೆ. ಇದು ಕ್ರಮವಾಗಿ ಶೇಕಡಾ 12.4 ಮತ್ತು ಶೇಕಡಾ 33.1 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : ದಶಕದಲ್ಲಿ 5ರಿಂದ 21ಕ್ಕೇರಿದ ಮೆಟ್ರೊ ರೈಲು ನಗರಗಳ ಸಂಖ್ಯೆ: 700 ಕಿ.ಮೀ ಹೊಸ ಮಾರ್ಗ ನಿರ್ಮಾಣ - Metro Rail

ETV Bharat Logo

Copyright © 2025 Ushodaya Enterprises Pvt. Ltd., All Rights Reserved.