ನವದೆಹಲಿ: ಭವಿಷ್ಯದಲ್ಲಿ ಜಾಗತಿಕ ಪ್ರವಾಸೋದ್ಯಮದ ಬೆಳವಣಿಗೆಯ ಪ್ರಮುಖ ಮೂಲವಾಗಿ ಭಾರತೀಯ ಪ್ರಯಾಣಿಕರು ಹೊರಹೊಮ್ಮಲಿದ್ದಾರೆ. ದೇಶದಲ್ಲಿ ಮಧ್ಯಮ ವರ್ಗದ ವೇಗದ ಬೆಳವಣಿಗೆ ಮತ್ತು ವಾಯು ಸಂಪರ್ಕ ಅಭಿವೃದ್ಧಿ ಇದಕ್ಕೆ ಪ್ರಮುಖ ಕಾರಣ ಎಂದು ಹೊಸ ವರದಿ ತಿಳಿಸಿದೆ.
ಆರ್ಗನೇಸೆಷನ್ ಫಾರ್ ಎಕನಾಮಿಕ್ ಕೊಆಪರೇಷನ್ ಆ್ಯಂಡ್ ಡೆವೆಲಪ್‌ಮೆಂಟ್ ಈ ವರದಿ ತಯಾರಿಸಿದೆ.
ಚೀನಾದ ವಿದೇಶಿ ಪ್ರವಾಸಿಕರ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, ದೇಶೀಯ ಪ್ರವಾಸೋದ್ಯಮವೂ ವಿಸ್ತರಿಸುತ್ತಿದೆ. ಆದರೆ, ಚೀನಾಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕುಸಿತಗೊಂಡಿದ್ದು, ಆರ್ಥಿಕ ಚೇತರಿಕೆಗೆ ಅಡ್ಡಿಪಡಿಸುತ್ತಿದೆ.
ಬ್ರೆಜಿಲ್ ಜಿ20 ಅಧ್ಯಕ್ಷತೆ ಮತ್ತು ಇಟಲಿಯ ಜಿ7 ಅಧ್ಯಕ್ಷತೆಯಲ್ಲಿಯೂ ಕೂಡ ಪ್ರವಾಸೋದ್ಯಮದಲ್ಲಿ ಮಾನವ ಬಂಡವಾಳ ಮತ್ತು ಕೌಶಲ್ಯ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದರ ಕುರಿತು ಗಮನಹರಿಸಲಾಗಿದೆ. ಇದು ಭಾರತ ಮತ್ತು ಇಂಡೋನೇಷ್ಯಾದ ಜಿ20 ಅಧ್ಯಕ್ಷತೆಯ ಫಲಿತಾಂಶವನ್ನು ಆಧರಿಸಿದೆ ಎಂದು ಒಇಸಿಡಿ ತಿಳಿಸಿದೆ.
ಜಾಗತಿಕ ಪ್ರವಾಸೋದ್ಯಮ ಕೋವಿಡ್ ಸಮಯದಲ್ಲಿ (2020-21ರಲ್ಲಿ) ಕುಸಿದಿತ್ತು. ಸಾಂಕ್ರಾಮಿಕತೆಯಿಂದ ಜಗತ್ತು ಚೇತರಿಸಿಕೊಂಡ ಬಳಿಕ ಆರು ದಶಕಗಳ ಪ್ರವಾಸೋದ್ಯಮದಲ್ಲಿದ್ದ ಸುಸ್ಥಿರ ಬೆಳವಣಿಗೆ ಮತ್ತು ಆರ್ಥಿಕ ಬೆಳವಣಿಗೆ ಮತ್ತೆ ಮರುಕಳಿಸಿದೆ.
ಆದಾಗ್ಯೂ, ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯೂ ಪ್ರವಾಸೋದ್ಯಮ ಜನಜೀವನ ನಿರ್ವಹಣೆ ವೆಚ್ಚದ ಮೇಲೆ ಒತ್ತಡ ಹೆಚ್ಚಿಸಿದೆ. ಪರಿಸರ ಸಂಬಂಧಿತ ಘಟನೆಗಳೂ ಕೂಡ ಹೊಸ ಸವಾಲು ತಂದಿದೆ. ಈ ನಿಟ್ಟಿನಲ್ಲಿ ಸ್ಥಿತಿಸ್ಥಾಪಕತ್ವ, ಸಮರ್ಥನೀಯ ಪ್ರಯತ್ನಗಳ ಅಗತ್ಯವಿದೆ.
ಪ್ರವಾಸೋದ್ಯಮ ನೇರವಾಗಿ ಜಿಡಿಪಿಗೆ ಕೊಡುಗೆ ನೀಡುತ್ತದೆ. 2019ರ ದತ್ತಾಂಶದ ಪ್ರಕಾರ 2022ರಲ್ಲಿ ಶೇ 3.9ರಷ್ಟು ಪ್ರವಾಸೋದ್ಯಮ ಚೇತರಿಸಿಕೊಂಡಿದೆ. ಅಲ್ಲದೇ, ಅಲ್ಲಿಂದ ನಿರಂತರ ಚೇತರಿಕೆ ಕಾಣುತ್ತಿದೆ.
2024ರ ವರ್ಷಾಂತ್ಯದ ವೇಳೆಗೆ ಜಾಗತಿಕ ಪ್ರವಾಸೋದ್ಯಮ ಸಂಪೂರ್ಣ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಉದ್ಯಮಿಗಳು ಮತ್ತು ಟ್ರಾವೆಲರ್ಗಳು ಈ ಬಗ್ಗೆ ಸಕರಾತ್ಮಕವಾಗಿದ್ದಾರೆ. ಏಷ್ಯಾ ಫೆಸಿಫಿಕ್ನಲ್ಲಿ ಇದರ ಬೆಳವಣಿಗೆ ಹೆಚ್ಚೆಂದು ನಿರೀಕ್ಷಿಸಲಾಗಿದೆ. ಬೇಡಿಕೆ ಮತ್ತು ಪೂರೈಕೆಯ ಅಸಮತೋಲನ ಕಡಿಮೆಯಾಗುವ ಮೂಲಕ ಇದೀಗ ಪೂರ್ವ ಸಾಂಕ್ರಾಮಿಕತೆಯ ಪ್ರವಾಸೋದ್ಯದ ಬೆಳವಣಿಗೆ ಹಿಂದಿರುಗುತ್ತಿದೆ ಎಂದು ವರದಿ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಶೀಘ್ರ ಪ್ರವಾಸೋದ್ಯಮ ನೀತಿ ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್