ನವದೆಹಲಿ: ಭಾರತದಲ್ಲಿನ ಮ್ಯೂಚುವಲ್ ಫಂಡ್ ಯೋಜನೆಗಳು ಸೆಪ್ಟೆಂಬರ್‌ನಲ್ಲಿ ಸರಾಸರಿ ಆಸ್ತಿ ನಿರ್ವಹಣೆಯ ಅಡಿ ಶೇ 2.97 ಬೆಳವಣಿಗೆಯನ್ನು ಕಂಡಿದೆ ಎಂದು ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ ಅಂಕಿ ಅಂಶಗಳು ತಿಳಿಸಿದೆ.
ಮ್ಯೂಚುವಲ್ ಫಂಡ್ ಉದ್ಯಮದ ನಿವ್ವಳ ಆಸ್ತಿ ನಿರ್ವಹಣೆ ಕೂಡ ಶೇ 0.58ರಷ್ಟು ಹೆಚ್ಚಳ ವಾಗಿದೆ. ಆಗಸ್ಟ್ನಲ್ಲಿ 66,70,305.14 ಕೋಟಿ ಇದ್ದ ನಿರ್ವಹಣಾ ಮೌಲ್ಯ ಸೆಪ್ಟೆಂಬರ್‌ನಲ್ಲಿ 67,09,259 ಕೋಟಿಯಷ್ಟಾಗಿದೆ.
ಈ ವಲಯದ ನಿಧಿಗಳು 22,244 ಕೋಟಿಯಷ್ಟು ಹೆಚ್ಚಿನ ಒಳಹರಿವನ್ನು ಹೊಂದಿದೆ. ಒಟ್ಟಾರೆ ಪೋರ್ಟ್ ಪೊಲಿಯೋ ಮೌಲ್ಯಗಳು 21.05 ಕೋಟಿಯಾಗಿದ್ದು, ಇದು ಸರ್ವಕಾಲಿಕ ಗರಿಷ್ಠವಾಗಿದೆ. ಉದ್ಯಮ ತಜ್ಞರ ಪ್ರಕಾರ, ಇದು ದೇಶೀಯ ಹೂಡಿಕೆಗೆ ತುಂಬಾ ಉತ್ತೇಜನಕಾರಿಯಾಗಿದೆ.
ಈ ಬಗ್ಗೆ ಐಟಿಐ ಮ್ಯೂಚುವಲ್ ಫಂಡನ್ ಕಾರ್ಯಕಾರಿ ಸಿಇಒ ಹಿತೇಶ್ ಥಕ್ಕರ್ ಮಾತನಾಡಿ, ಮಾರುಕಟ್ಟೆಯಲ್ಲಿನ ಅಲ್ಪಾವಧಿಯ ಏರಿಳಿತವು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಯ ಪ್ರಯಾಣವಾಗಿದೆ. ಇದೇ ಕಾರಣಕ್ಕೆ ಆರ್ಥಿಕ ಸಂಪತ್ತಿನ ಹಂಚಿಕೆಯೂ ವೇಗವಾಗಿ ಹೆಚ್ಚುತ್ತಿದೆ. ಮ್ಯೂಚುವಲ್ ಪಾಲು ಕ್ರಮೇಣ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ಮ್ಯೂಚುವಲ್ ಫಂಡ್ ಯೋಜನೆಗಳು ಆಸ್ತಿ ನಿರ್ವಹಣೆ ಕೂಡ ಸೆಪ್ಟೆಂಬರ್‌ನಲ್ಲಿ ಸರಾಸರಿ ಶೇ 2.97ರಷ್ಟು ಬೆಳವಣಿಗೆಯನ್ನು ಕಂಡಿವೆ. ಇವು ಪ್ರಾಥಮಿಕವಾಗಿ ಮಾರುಕಟ್ಟೆಯ ಚಲನೆಗೆ ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳಿಗೆ ಒಟ್ಟಾರೆ ನಿವ್ವಳ ಒಳಹರಿವಿನಲ್ಲಿ ಶೇ 10ರಷ್ಟು ಕುಸಿತ ಕಂಡಿದ್ದು, ಇದು 38,239 ಕೋಟಿಯಿಂದ 34,302 ಕೋಟಿಗೆ ಇಳಿಕೆ ಕಂಡಿದೆ ಎಂದು ಶ್ರೀರಾಮ್ ಎಎಂಸಿಯ ದೀಪಕ್ ರಾಮರಾಜು ತಿಳಿಸಿದ್ದಾರೆ.
ಪ್ರಾಥಮಿಕ ದೃಷ್ಟಿಯಲ್ಲಿ ಹೂಡಿಕೆದಾರರು, ಮೌಲ್ಯಮಾಪನ, ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಮಿತ ಗಳಿಕೆ ಬಗ್ಗೆ ಚಿಂತಿತರಾಗಿರುವಂತೆ ತೋರುತ್ತಿದೆ. ಆದಾಗ್ಯೂ, ವ್ಯವಸ್ಥೆಯಲ್ಲಿನ ಲಿಕ್ವಿಟಿಡಿ ನಿಧಾನವಾಗುತ್ತಿದೆ. ಒಳಹರಿವಿನ ಕುಸಿತವನ್ನು ನೋಡುತ್ತಿದ್ದೇವೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ದೀಪಕ್ ರಾಮರಾಜು ಹೇಳಿದ್ದಾರೆ.
ಎಸ್ಐಪಿ ಹರಿವು ನಿರಂತರವಾಗಿ ಭಾರತೀಯ ಬೆಳವಣಿಗೆ ಮುಂದುವರೆಸಿದ್ದು, ಇದು ಮೊದಲ ಬಾರಿಗೆ 24,000 ಕೋಟಿಯಷ್ಟು ಕೊಡುಗೆ ನೀಡಿದೆ.
ಚೀನಾದ ಪ್ರೇರಣೆ, ಫೆಡ್ ನಿರ್ಧಾರ ಮತ್ತು ಆರ್ಬಿಐನ ಎಂಪಿಸಿ ನೀತಿಗಳಂತಹ ಜಾಗತಿಕ ಘಟನೆಗಳು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ನಾವು ಕಾದು ನೋಡಬೇಕಿದೆ.
ಕಳೆದ ಐದು ತಿಂಗಳುಗಳಲ್ಲಿ ಈಕ್ವಿಟಿ ಒಳಹರಿವು 0.34 ಲಕ್ಷ ಕೋಟಿಗಿಂತ ಹೆಚ್ಚಿದೆ. ಇದು ಹೂಡಿಕೆದಾರರ ಆಸಕ್ತಿ ಮೇಲೆ ಅವಲಂಬಿತವಾಗಿದೆ ಎಂದು ಕೇರ್‌ಎಡ್ಜ್ ರೇಟಿಂಗ್ಸ್‌ನ ಸಂಜಯ್ ಅಗರ್‌ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಗ್ರಾಮೀಣ ಕುಟುಂಬಗಳಿಗೆ ವಾಹನ ವಿಮೆಯ ಅರಿವಿದೆಯಾ?: ಪಿಂಚಣಿ ರಕ್ಷಣೆ ವಿಚಾರದ ಬಗ್ಗೆ ಎಷ್ಟು ಗೊತ್ತು?