ETV Bharat / business

8 ತಿಂಗಳ ಕನಿಷ್ಠ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ: ಭಾರತಕ್ಕೆ ಲಾಭ - Global Oil Prices Decline

author img

By ETV Bharat Karnataka Team

Published : Aug 5, 2024, 7:36 PM IST

ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು 8 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿವೆ.

ಪ್ರಾತಿನಿಧಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು 8 ತಿಂಗಳ ಕನಿಷ್ಠ ಮಟ್ಟವಾದ ಬ್ಯಾರೆಲ್​ಗೆ 75.8 ಡಾಲರ್​ಗೆ ಇಳಿದಿರುವುದು ಭಾರತದ ಪಾಲಿಗೆ ವರದಾನವಾಗಿದೆ. ಅಮೆರಿಕ ಮತ್ತು ಚೀನಾದ ಆರ್ಥಿಕತೆಗಳಲ್ಲಿ ಹಿಂಜರಿತ ಉಂಟಾಗುವ ಆತಂಕದಲ್ಲಿ ಶುಕ್ರವಾರದಿಂದ ಈವರೆಗೂ ಕಚ್ಚಾ ತೈಲ ಬೆಲೆಗಳು 4 ಡಾಲರ್​ಗಿಂತಲೂ ಹೆಚ್ಚು ಇಳಿಕೆಯಾಗಿವೆ. ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರನಾಗಿರುವ ಭಾರತವು ಇದರಿಂದ ಲಾಭ ಪಡೆಯಲಿದೆ.

ನಿಧಾನಗತಿಯ ಆರ್ಥಿಕತೆಯ ಮಧ್ಯೆ ಯುಎಸ್ ಉದ್ಯೋಗ ದತ್ತಾಂಶವು ನಿರುದ್ಯೋಗ ದರದಲ್ಲಿ ಹೆಚ್ಚಳ ಮತ್ತು ಚೀನಾದ ಇಂಧನ ಬಳಕೆಯು ತೀವ್ರ ಕಡಿಮೆಯಾಗಿರುವುದನ್ನು ತೋರಿಸಿರುವುದು, ಬೇಡಿಕೆ ಕುಸಿತವಾಗುವ ಸಾಧ್ಯತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ತೈಲ ಬೆಲೆಗಳು ಇಳಿಕೆಯಾಗುತ್ತಿವೆ.

ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಸೋಮವಾರ ಬ್ಯಾರೆಲ್​ಗೆ 1.04 ಡಾಲರ್​ಗಿಂತ ಹೆಚ್ಚು ಕುಸಿದು 75.8 ಡಾಲರ್​ಗೆ ತಲುಪಿದೆ. ಹಾಗೆಯೇ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕಚ್ಚಾ ತೈಲ ಬೆಲೆಯು ಬ್ಯಾರೆಲ್​ಗೆ 72.43 ಡಾಲರ್​ಗೆ ಇಳಿಕೆಯಾಗಿದೆ.

ತೈಲ ಬೆಲೆಗಳ ಕುಸಿತವು ಭಾರತೀಯ ಆರ್ಥಿಕತೆಗೆ ಉತ್ತಮವಾಗಿದೆ. ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಸುಮಾರು ಶೇ 85ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ ತೈಲ ಬೆಲೆಗಳು ಕಡಿಮೆಯಾದಾಗ ದೇಶದ ಆಮದು ವೆಚ್ಚಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಇದು ಚಾಲ್ತಿ ಖಾತೆ ಕೊರತೆಯನ್ನು (ಸಿಎಡಿ) ಕಡಿಮೆ ಮಾಡಲು ಮತ್ತು ರೂಪಾಯಿ ಬಲವರ್ಧನೆಗೆ ಸಹಕಾರಿಯಾಗುತ್ತದೆ.

ಬಾಹ್ಯ ಸಮತೋಲನವನ್ನು ಬಲಪಡಿಸುವುದರ ಜೊತೆಗೆ ತೈಲ ಬೆಲೆಗಳ ಕುಸಿತದಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್​ಪಿಜಿ ಬೆಲೆಗಳು ಕಡಿಮೆಯಾಗಬಹುದು ಮತ್ತು ಈ ಮೂಲಕ ಹಣದುಬ್ಬರ ಕಡಿಮೆಯಾಗಬಹುದು.

ಉಕ್ರೇನ್​ನೊಂದಿಗಿನ ಯುದ್ಧದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಒತ್ತಡಗಳ ಹೊರತಾಗಿಯೂ ರಷ್ಯಾದ ಕಚ್ಚಾತೈಲವನ್ನು ತೈಲ ಕಂಪನಿಗಳು ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶ ನೀಡುವ ಮೂಲಕ ದೇಶದ ತೈಲ ಆಮದು ಬಿಲ್ ಕಡಿಮೆ ಮಾಡಲು ಸರ್ಕಾರ ಸಹಾಯ ಮಾಡಿದೆ. ಯುಎಸ್ ಮತ್ತು ಯುರೋಪ್ ರಷ್ಯಾ ವಿರುದ್ಧ ವಿಧಿಸಿದ ನಿರ್ಬಂಧಗಳ ಹೊರತಾಗಿಯೂ ನರೇಂದ್ರ ಮೋದಿ ಸರ್ಕಾರವು ರಷ್ಯಾದೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳಲು ದೃಢವಾಗಿ ನಿಂತಿದೆ.

ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಇರಾಕ್ ಮತ್ತು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ರಷ್ಯಾ ಭಾರತಕ್ಕೆ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿ ಹೊರಹೊಮ್ಮಿದೆ. ವಾಸ್ತವವಾಗಿ ಭಾರತವು ರಷ್ಯಾದಿಂದ ಸಮುದ್ರಮಾರ್ಗದ ಮೂಲಕ ಅತ್ಯಧಿಕ ತೈಲ ಖರೀದಿಸುವ ದೇಶವಾಗಿದೆ. ಇದು ಭಾರತದ ಒಟ್ಟು ತೈಲ ಆಮದಿನ ಶೇಕಡಾ 38ರಷ್ಟಿದೆ. ಐಸಿಆರ್​ಎ ವರದಿಯ ಪ್ರಕಾರ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಬೆಲೆ 2023 ಮತ್ತು 2024ರ ಹಣಕಾಸು ವರ್ಷದ 11 ತಿಂಗಳಲ್ಲಿ ಗಲ್ಫ್ ದೇಶಗಳ ತೈಲ ಬೆಲೆಗಳಿಗಿಂತ ಕ್ರಮವಾಗಿ ಶೇಕಡಾ 16.4 ಮತ್ತು ಶೇಕಡಾ 15.6ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ: ಆಗಸ್ಟ್ 6 ರಿಂದ ಆರ್​ಬಿಐ ಎಂಪಿಸಿ ಸಭೆ: ಬಡ್ಡಿದರ ಶೇ 6.5ರಲ್ಲಿಯೇ ಮುಂದುವರಿಕೆ ಸಾಧ್ಯತೆ - RBI Interest Rate

ETV Bharat Logo

Copyright © 2024 Ushodaya Enterprises Pvt. Ltd., All Rights Reserved.