ETV Bharat / business

ಆದಾಯ ತೆರಿಗೆ ದಿನ: ರಾಷ್ಟ್ರ ನಿರ್ಮಾಣಕ್ಕೆ ಸಕಾಲಿಕ ತೆರಿಗೆ ಪಾವತಿ ಅವಶ್ಯಕ.. ಇಲ್ಲಿದೆ ತೆರಿಗೆಯ ಒಳ - ಹೊರಗಿನ ಸಂಪೂರ್ಣ ಮಾಹಿತಿ! - Income Tax Day

author img

By ETV Bharat Karnataka Team

Published : Jul 24, 2024, 2:57 PM IST

Updated : Jul 24, 2024, 3:39 PM IST

ರಾಷ್ಟ್ರಕ್ಕೆ ಆದಾಯ ತೆರಿಗೆಯ ಪ್ರಾಮುಖ್ಯತೆ ಎತ್ತಿ ಹಿಡಿಯಲು ರಾಷ್ಟ್ರೀಯ ಆದಾಯ ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಸಕಾಲಿಕ ತೆರಿಗೆ ಪಾವತಿಸಿದರೆ ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯವಾದ ಪ್ರಮುಖ ಕರ್ತವ್ಯವಾಗಿದೆ ಎಂಬುದನ್ನು ನಾಗರಿಕರಿಗೆ ತಿಳಿಸಲಾಗುತ್ತದೆ.

INCOME TAX ACT  CENTRAL BOARD OF DIRECT TAXES  NIRMALA SITHARAMAN  INFRASTRUCTURE
ಆದಾಯ ತೆರಿಗೆ ದಿನ: ರಾಷ್ಟ್ರ ನಿರ್ಮಾಣಕ್ಕೆ ಸಕಾಲಿಕ ತೆರಿಗೆ ಪಾವತಿ ಅವಶ್ಯ (ETV Bharat)

Income Tax Day July 24: ದೇಶದಲ್ಲಿ ಆದಾಯ ತೆರಿಗೆಯ ಮಹತ್ವವನ್ನು ಸಾರಲು ಪ್ರತಿವರ್ಷ ಜುಲೈ 24 ರಂದು ಆದಾಯ ತೆರಿಗೆ ದಿನವನ್ನು (Income Tax) ಆಚರಿಸಲಾಗುತ್ತದೆ. 1860 ಜುಲೈ 24 ರಂದು, ಸರ್ ಜೇಮ್ಸ್ ವಿಲ್ಸನ್ ಭಾರತದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಯ ಪರಿಕಲ್ಪನೆ ಪರಿಚಯಿಸಿದರು.

ಬ್ರಿಟಿಷ್ ಆಳ್ವಿಕೆಯಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ (1857) ನಷ್ಟವನ್ನು ಸರಿದೂಗಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಯಿತು. ಭಾರತದಲ್ಲಿ ಆದಾಯ ತೆರಿಗೆಯ 150 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆ ಜುಲೈ 2010 ರಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ದಿನ ಅಥವಾ ಆಯ್ಕರ್ ದಿವಸ್ ಆಚರಿಸಲಾಯಿತು. ಆದಾಯ ತೆರಿಗೆ ಕಾಯಿದೆ 1922 ಅನ್ನು ಭಾರತದಲ್ಲಿ ನೇರ ತೆರಿಗೆ ಆಡಳಿತದ ಚೌಕಟ್ಟಿನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಇಲಾಖೆ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ಮೇಲ್ವಿಚಾರಣೆ ಮಾಡಲು 1924ರಲ್ಲಿ, ಕೇಂದ್ರ ಕಂದಾಯ ಮಂಡಳಿ ಎಂಬ ಶಾಸನಬದ್ಧ ಸಂಸ್ಥೆಯನ್ನು ಸ್ಥಾಪಿಸಲಾಯಿತು. ನಂತರ, ಕಾಯಿದೆಯನ್ನು 1939 ರಲ್ಲಿ ತಿದ್ದುಪಡಿ ಮಾಡಲಾಯಿತು. ಮತ್ತು ಎರಡು ಪ್ರಮುಖ ರಚನಾತ್ಮಕ ಮಾರ್ಪಾಡುಗಳನ್ನು ಮಾಡಲಾಯಿತು. ಮೇಲ್ಮನವಿ ಕಾರ್ಯಗಳನ್ನು ಆಡಳಿತಾತ್ಮಕ ಕಾರ್ಯಗಳಿಂದ ಪ್ರತ್ಯೇಕಿಸಲಾಯಿತು ಮತ್ತು ಮುಂಬೈನಲ್ಲಿ ಕೇಂದ್ರದ ಉಸ್ತುವಾರಿಯನ್ನು ಪರಿಚಯಿಸಲಾಯಿತು. 1963 ರಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ರೆವಿನ್ಯೂ ಆಕ್ಟ್, 1963ರ ಅಡಿ ನೇರ ತೆರಿಗೆಗಳಿಗಾಗಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಎಂಬ ವರ್ಗೀಕೃತ ಮಂಡಳಿಯನ್ನು ಪರಿಚಯಿಸಲಾಯಿತು.

ಆದಾಯ ತೆರಿಗೆ ಎಂದರೇನು?: ಆದಾಯ ತೆರಿಗೆ ಎಂದರೆ ಸರ್ಕಾರವು ತನ್ನ ನಾಗರಿಕರ ಆದಾಯದ ಮೇಲೆ ವಿಧಿಸುವ ನೇರ ತೆರಿಗೆಯಾಗಿದೆ. ಆದಾಯ ತೆರಿಗೆ ಕಾಯಿದೆ 1961, ಕೇಂದ್ರ ಸರ್ಕಾರವು ಈ ತೆರಿಗೆ ಸಂಗ್ರಹದ ಕುರಿತು ವಿವರಿಸುತ್ತದೆ. ಸರ್ಕಾರವು ತನ್ನ ಕೇಂದ್ರ ಬಜೆಟ್‌ನಲ್ಲಿ ಪ್ರತಿ ವರ್ಷ ಆದಾಯ ಸ್ಲ್ಯಾಬ್‌ಗಳು ಮತ್ತು ತೆರಿಗೆ ದರಗಳನ್ನು ಬದಲಾಯಿಸಬಹುದು. ಆದಾಯ ಎಂದರೆ ಸಂಬಳದ ರೂಪದಲ್ಲಿ ಗಳಿಸಿದ ಹಣ ಮಾತ್ರವಲ್ಲ. ಇದು ಮನೆ ಆಸ್ತಿಯಿಂದ ಆದಾಯ, ವ್ಯಾಪಾರದಿಂದ ಲಾಭ, ವೃತ್ತಿಯಿಂದ ಲಾಭಗಳು (ಉದಾಹರಣೆಗೆ ಬೋನಸ್), ಬಂಡವಾಳ ಲಾಭದ ಆದಾಯ ಮತ್ತು ಇತರ ಮೂಲಗಳಿಂದ ಬರುವ ಆದಾಯವನ್ನು ಸಹ ಒಳಗೊಂಡಿದೆ. ವಿಧಿಸಬೇಕಾದ ತೆರಿಗೆಯನ್ನು ಲೆಕ್ಕಹಾಕುವ ಮೊದಲು ವ್ಯಕ್ತಿಯ ಆದಾಯದಿಂದ ವಿವಿಧ ಕಡಿತಗಳನ್ನು ಮಾಡುವಂತಹ ಕೆಲವು ವಿನಾಯಿತಿಗಳನ್ನು ಸರ್ಕಾರವು ಆಗಾಗ್ಗೆ ಒದಗಿಸುತ್ತದೆ.

ಆದಾಯ ತೆರಿಗೆ ಸ್ಲ್ಯಾಬ್ ದರಗಳು ಯಾವುವು?: ಭಾರತದಲ್ಲಿ ಆದಾಯವು ನಿಗದಿತ ಆದಾಯ ತೆರಿಗೆ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಇದು ತೆರಿಗೆ ಮೌಲ್ಯಮಾಪಕರ ನಿವ್ವಳ ವಾರ್ಷಿಕ ಆದಾಯದ ಆಧಾರದ ಮೇಲೆ ಬದಲಾಗುತ್ತದೆ. ಆದಾಯದ ತೆರಿಗೆಯ ಸ್ಲ್ಯಾಬ್ ದರಗಳು ಆಗಾಗ ಪ್ರಗತಿಶೀಲವಾಗಿರುತ್ತವೆ. ಅಂದರೆ, ವ್ಯಕ್ತಿಯ ನಿವ್ವಳ ವಾರ್ಷಿಕ ಆದಾಯದೊಂದಿಗೆ ಸ್ಲ್ಯಾಬ್ ದರವು ಹೆಚ್ಚಾಗುತ್ತದೆ. ಆದಾಯದ ಮೇಲಿನ ತೆರಿಗೆಯ ಸ್ಲ್ಯಾಬ್ ದರಗಳನ್ನು ನಿಯತಕಾಲಿಕವಾಗಿ ಬದಲಾಯಿಸಬೇಕಾಗುತ್ತದೆ ಮತ್ತು ಕೇಂದ್ರ ಬಜೆಟ್ ಘೋಷಣೆ ಭಾಗವಾಗಿ ಘೋಷಿಸಲಾಗುತ್ತದೆ.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಒಟ್ಟು ಆದಾಯ 2,50,000 ರೂ.ಗಿಂತ ಹೆಚ್ಚಿದ್ದರೆ(ಹಳೆ ತೆರಿಗೆ ಪದ್ಧತಿ), ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿದೆ. ಈ ಮಿತಿ ಹಿರಿಯ ನಾಗರಿಕರಿಗೆ 3,00,000 ರೂ. ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ 5,00,000 ರೂ. ಇದೆ.

ಭಾರತದಲ್ಲಿ ಪಾವತಿಸುವ ಮತ್ತು ಸಂಗ್ರಹಿಸುವ ಕೆಲವು ಸಾಮಾನ್ಯ ತೆರಿಗೆಗಳೆಂದರೆ - ಆದಾಯ ತೆರಿಗೆ, ಜಿಎಸ್‌ಟಿ, ರಸ್ತೆ ತೆರಿಗೆ, ಆಸ್ತಿ ತೆರಿಗೆ, ವೃತ್ತಿಪರ ತೆರಿಗೆ, ಕಾರ್ಪೊರೇಟ್ ತೆರಿಗೆ, ಕಸ್ಟಮ್ಸ್ ಸುಂಕ, ಅಬಕಾರಿ ಸುಂಕ, ಮನರಂಜನಾ ತೆರಿಗೆ, ಸ್ವಚ್ಛ ಭಾರತ್ ಸೆಸ್, ಕೃಷಿ ಕಲ್ಯಾಣ ಸೆಸ್ ಸೇರಿದಂತೆ ಇತರ. ಸರ್ಕಾರವು ಸಂಗ್ರಹಿಸಿದ ತೆರಿಗೆ ಮೊತ್ತವನ್ನು ಬಳಸುತ್ತದೆ ಮತ್ತು ಉತ್ತಮ ಜೀವನ ನಡೆಸಲು ತನ್ನ ನಾಗರಿಕರಿಗೆ ಎಲ್ಲ ಮೂಲಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.

ಬಜೆಟ್​ 2024ರ ಪರಿಷ್ಕೃತ ಆದಾಯ ತೆರಿಗೆ ದರಗಳು

(ಹೊಸ ಇನ್​ಕಮ್​​ ಟ್ಯಾಕ್ಸ್​​​ ಸ್ಲ್ಯಾಬ್​)

ತೆರಿಗೆ ಪ್ರಯೋಜನಗಳು:

  • ತೆರಿಗೆ ಪಾವತಿಸುವುದರಿಂದ ಅನೇಕ ಪ್ರಯೋಜನಗಳಿವೆ. ರಸ್ತೆಗಳಂತಹ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಸಹಾಯವಾಗುತ್ತದೆ. ಮತ್ತು ಕಾನೂನಿನ ನಿಯಮ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ಸಂಸ್ಥೆಗಳನ್ನು ರಚಿಸಲು ಅಥವಾ ನಿರ್ವಹಿಸಲು ಸಹಕಾರಿಗುತ್ತದೆ.
  • ರಸ್ತೆಗಳು, ಶಾಲಾ ಕಟ್ಟಡಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುವುದು ಸೇರಿದಂತೆ ಸಾರ್ವಜನಿಕ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು, ಉದ್ಯಾನಗಳು ಮತ್ತು ಆಟದ ಮೈದಾನಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳು ಸೇರಿದಂತೆ ಸ್ಥಳೀಯ ಸರ್ಕಾರಿ ಸೇವೆಗಳಿಗೆ ಧನಸಹಾಯಕ್ಕಾಗಿ ತೆರಿಗೆ ಹಣ ಅಗತ್ಯವಾಗಿದೆ. ತೆರಿಗೆಯು ಸರ್ಕಾರಕ್ಕೆ ಇರುವ ಆದಾಯವಾಗಿದೆ.
  • ತೆರಿಗೆ ಪಾವತಿಯಿಂದ ಸಾರ್ವಜನಿಕ ಮೂಲಸೌಕರ್ಯ ಮತ್ತು ಸೇವೆಗಳಿಗೆ ನಿಧಿ ಒದಗಿಸಲು ಸಹಾಯವಾಗುತ್ತದೆ. ಉದಾಹರಣೆಗೆ, ಭಾರತದಲ್ಲಿ, ಇತರ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸೇವೆಗಳ ಮೇಲೆ ದೇಶವು ತನ್ನ ಜಿಡಿಪಿಯ ಅತ್ಯಧಿಕ ಪ್ರಮಾಣವನ್ನು ಖರ್ಚು ಮಾಡುತ್ತದೆ.
  • ಸಾಮಾಜಿಕ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೂ ತೆರಿಗೆ ಹಣ ಬಳಸಲಾಗುತ್ತದೆ. ಉದಾಹರಣೆಗೆ, ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಳಗೊಂಡಂತೆ ವಿವಿಧ ಸಾಮಾಜಿಕ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ GDPಯ ಸುಮಾರು ಶೇ 6% ರಷ್ಟು ಆದಾಯದ ಗಣನೀಯ ಮೊತ್ತವನ್ನು ಖರ್ಚು ಮಾಡಲಾಗುತ್ತದೆ.
  • ತೆರಿಗೆ ನಿಧಿ ಶಿಕ್ಷಣಕ್ಕೆ ಬಳಕೆ ಮಾಡಲಾಗುತ್ತದೆ. ಉದಾಹರಣೆಗೆ, ಅನಕ್ಷರತೆಯೇ ಪ್ರಮುಖ ಸಮಸ್ಯೆಯಾಗಿರುವ ಭಾರತದಲ್ಲಿ, ಗುಣಮಟ್ಟದ ಶಿಕ್ಷಣ ನೀಡಲು ಸರಕಾರಕ್ಕೆ ಸಾಕಷ್ಟು ಹಣದ ಅಗತ್ಯವಿದೆ. ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ತಳಮಟ್ಟದವರೆಗೆ ಎಂದರೆ, ಶಾಲಾ ಮೂಲಸೌಕರ್ಯ, ಶಿಕ್ಷಕರ ವೇತನಗಳು ಮತ್ತು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಳ ಮೇಲಿನ ಖರ್ಚು ಸೇರಿದಂತೆ ಶಿಕ್ಷಣದ ಮೇಲಿನ ಸಾರ್ವಜನಿಕ ಮತ್ತು ಖಾಸಗಿ ವೆಚ್ಚಗಳನ್ನು ಒಳಗೊಂಡಿದೆ.
  • ತೆರಿಗೆ ನಿಧಿಯಿಂದ ದೇಶದ ಅನುಕೂಲವಾಗುತ್ತದೆ. ದೇಶದ ರಕ್ಷಣೆಗೆ ಉಪಕರಣಗಳು ಮತ್ತು ಸಿಬ್ಬಂದಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ, ರಕ್ಷಣಾ ಆಮದು, ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರ ಮತ್ತು ಅಂತಾರಾಷ್ಟ್ರೀಯ ಶಾಂತಿಪಾಲನಾ ಕಾರ್ಯಾಚರಣೆಗಳ ಮೇಲಿನ ಖರ್ಚುಗಳನ್ನು ಮಾಡಲಾಗುತ್ತದೆ.
  • ತೆರಿಗೆ ಹಣದಿಂದ ಸರ್ಕಾರಿ ನೌಕರರ ಸಂಬಳ ಮತ್ತು ಪಿಂಚಣಿಗಳನ್ನು ನೀಡಲು ಸಹಕಾರಿಯಾಗುತ್ತದೆ. ಇದು ಕೇಂದ್ರ ಸರ್ಕಾರಿ ನೌಕರರು, ರಾಜ್ಯ ಸರ್ಕಾರಿ ನೌಕರರು ಮತ್ತು ಸ್ಥಳೀಯ ಸರ್ಕಾರಿ ನೌಕರರಂತಹ ಸಾರ್ವಜನಿಕ ವಲಯದ ನೌಕರರ ವೇತನ ಮತ್ತು ಪಿಂಚಣಿಗಳಿಗೆ ವೆಚ್ಚ ಮಾಡಲಾಗುತ್ತದೆ.
  • ಸರ್ಕಾರದ ಸಾಲದ ಮೇಲಿನ ಅಸಲು ಮತ್ತು ಬಡ್ಡಿಯನ್ನು ತೆರಿಗೆ ಹಣದ ಮೂಲಕ ಪಾವತಿಸಲಾಗುತ್ತದೆ. ಭಾರತ ಸರ್ಕಾರವು ದೊಡ್ಡ ಬಾಹ್ಯ ಸಾಲವನ್ನು ಹೊಂದಿದೆ ಮತ್ತು ಅದರ ಬಾಕಿ ಸಾಲದ ಗಣನೀಯ ಭಾಗವನ್ನು ವಿದೇಶಿ ಕರೆನ್ಸಿಯಲ್ಲಿ ಇದೆ.
  • ರೈಲು ಮತ್ತು ರಸ್ತೆ ಸಾರಿಗೆ ಸೇರಿದಂತೆ ಸರ್ಕಾರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ತೆರಿಗೆ ಹಣವನ್ನು ಬಳಕೆ ಮಾಡಲಾಗುತ್ತದೆ. ವಿಮಾನಗಳು, ಹಡಗುಗಳು, ಬಸ್​​ಗಳು, ರೈಲುಗಳು, ಕೋಚ್‌ಗಳು ನಿರ್ಮಾಣಕ್ಕೆ ಹಾಗೂ ರಸ್ತೆ, ಹೆದ್ದಾರಿ ನಿರ್ಮಾಣಕ್ಕಾಗಿ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗಾಗಿ ಇತರ ವಾಹನಗಳು ಸೇರಿದಂತೆ ವಿವಿಧ ರೀತಿಯ ವಾಹನಗಳ ಖರೀದಿಗೆ ಖರ್ಚು ಮಾಡಲಾಗುತ್ತದೆ.
  • ಪೊಲೀಸ್, ಅರೆಸೈನಿಕ ಪಡೆಗಳು, ವಾಯು ಮತ್ತು ಸಮುದ್ರ, ಗಡಿ ಗಸ್ತು, ಕಸ್ಟಮ್ಸ್ ಮತ್ತು ಅಬಕಾರಿ ಮತ್ತು ಗುಪ್ತಚರ ಸಂಸ್ಥೆಗಳು ಸೇರಿದಂತೆ ಸರ್ಕಾರದ ಕಾನೂನು ಜಾರಿ ಸಂಸ್ಥೆಗಳಿಗೆ ತೆರಿಗೆ ನಿಧಿಯನ್ನು ಬಳಸಲಾಗುತ್ತದೆ. ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಒದಗಿಸುವ ಸಿಬ್ಬಂದಿ, ಉಪಕರಣಗಳು, ತರಬೇತಿ ಮತ್ತು ಮೂಲಸೌಕರ್ಯಗಳ ಮೇಲಿನ ವೆಚ್ಚ ಮಾಡಲಾಗುತ್ತದೆ.
  • ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (NREGA) ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ನಂತಹ ನಿರುದ್ಯೋಗಿ ಅಥವಾ ಕಡಿಮೆ ಆದಾಯ ಹೊಂದಿರುವ ಜನರಿಗೆ ಸಹಾಯ ಮಾಡಲು ಮೂಲ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ತೆರಿಗೆ ನಿಧಿ ಉಪಯೋಗಿಸಲಾಗುತ್ತದೆ.
  • ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಮೂಲಸೌಕರ್ಯಕ್ಕೆ ಸಹ ತೆರಿಗೆ ಹಣ ಬಳಕೆ ಮಾಡಲಾಗುತ್ತದೆ. ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿ, ಆಸ್ಪತ್ರೆ ಮೂಲಸೌಕರ್ಯ, ಆರೋಗ್ಯ ವಿಮೆ ಮತ್ತು ಇತರ ಆರೋಗ್ಯ ಸೇವೆಗಳ ಮೇಲಿನ ವೆಚ್ಚಗಳನ್ನು ಒಳಗೊಂಡಿದೆ.

ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸಂಸ್ಥೆ ಮತ್ತು ವ್ಯಕ್ತಿಗಳು:

  • ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL)
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (HDFC ಬ್ಯಾಂಕ್)
  • ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)
  • ಐಸಿಐಸಿಐ ಬ್ಯಾಂಕ್
  • ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)
  • ಟಾಟಾ ಸ್ಟೀಲ್
  • ಕೋಲ್ ಇಂಡಿಯಾ ಲಿಮಿಟೆಡ್ (CIL)
  • ಇನ್ಫೋಸಿಸ್
  • ಆಕ್ಸಿಸ್ ಬ್ಯಾಂಕ್
  • ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ 2023 ರಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿಸಿದ್ದಾರೆ.
  • ನಟ ಅಕ್ಷಯ್ ಕುಮಾರ್ 2022 ಮತ್ತು 2021ರಲ್ಲಿ ಗರಿಷ್ಠ ತೆರಿಗೆ ಪಾತಿಸಿದ್ದಾರೆ.
  • ಕಂಪನಿಗಳ ಪೈಕಿ ಟಿಸಿಎಸ್ ಅತಿ ಹೆಚ್ಚು ತೆರಿಗೆ ಪಾವತಿಸಿತ್ತು.
  • ಅತಿ ಹೆಚ್ಚು ತೆರಿಗೆ ಪಾವತಿಸುವ ಮಹಾರಾಷ್ಟ್ರ ರಾಜ್ಯ ಅಗ್ರಸ್ಥಾನದಲ್ಲಿದೆ.
  • ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ

ಇದನ್ನೂ ಓದಿ: ₹50 ಲಕ್ಷಕ್ಕಿಂತ ಹೆಚ್ಚಿನ ಆಸ್ತಿ ಮಾರಾಟದ ಮೇಲೆ ಶೇ 1 ಟಿಡಿಎಸ್: ಕೇಂದ್ರ ಬಜೆಟ್‌ನಲ್ಲಿ ಘೋಷಣೆ - Property TDS

Last Updated : Jul 24, 2024, 3:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.