ETV Bharat / business

ತಮಿಳುನಾಡಿನಲ್ಲಿ ಟಾಟಾ ಮೋಟರ್ಸ್​ 9 ಸಾವಿರ ಕೋಟಿ ರೂ. ಹೂಡಿಕೆ: 5000 ಉದ್ಯೋಗ ಸೃಷ್ಟಿ ಸಾಧ್ಯತೆ

ಟಾಟಾ ಮೋಟರ್ಸ್​ ಗ್ರೂಪ್ ತಮಿಳುನಾಡಿನಲ್ಲಿ 9 ಸಾವಿರ ಕೋಟಿ ವೆಚ್ಚದ ವಾಹನ ತಯಾರಿಕಾ ಘಟಕ ಸ್ಥಾಪಿಸಲು ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Tata Motors Group to invest Rs 9,000 crore in TN

author img

By ETV Bharat Karnataka Team

Published : Mar 14, 2024, 1:03 PM IST

ಚೆನ್ನೈ: ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳನ್ನು ತಯಾರಿಸುವ ಟಾಟಾ ಮೋಟರ್ಸ್ ಗ್ರೂಪ್ ತಮಿಳುನಾಡಿನಲ್ಲಿ ಸುಮಾರು 9,000 ಕೋಟಿ ರೂ.ಗಳ ವೆಚ್ಚದಲ್ಲಿ ವಾಹನ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ಬುಧವಾರ ಪ್ರಕಟಿಸಲಾಗಿದೆ.

ಟಾಟಾ ಮೋಟಾರ್ಸ್ ಗ್ರೂಪ್ ಬುಧವಾರ ತಮಿಳುನಾಡು ಸರ್ಕಾರದೊಂದಿಗೆ ಘಟಕ ಸ್ಥಾಪನೆಯ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ, 5 ವರ್ಷಗಳ ಅವಧಿಯಲ್ಲಿ ಸುಮಾರು 9,000 ಕೋಟಿ ರೂ.ಗಳ ಹೂಡಿಕೆ ಮಾಡಲಾಗುತ್ತದೆ ಮತ್ತು ಇದರಿಂದ ನೇರ ಮತ್ತು ಪರೋಕ್ಷವಾಗಿ ಸುಮಾರು 5,000 ಉದ್ಯೋಗಗಳು ಸೃಷ್ಟಿಯಾಗಲಿವೆ.

ಈ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದ ನಂತರ, ಹೂಡಿಕೆ ಉತ್ತೇಜನ ಮತ್ತು ಸೌಲಭ್ಯಕ್ಕಾಗಿ ತಮಿಳುನಾಡಿನ ನೋಡಲ್ ಏಜೆನ್ಸಿಯಾದ ಗೈಡೆನ್ಸ್ ಮತ್ತು ಟಾಟಾ ಮೋಟಾರ್ಸ್ ಗ್ರೂಪ್ ತಂಡಗಳು ಈ ಒಪ್ಪಂದವನ್ನು ಮುಂದೆ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡಲಿವೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಉಪಸ್ಥಿತಿಯಲ್ಲಿ ಗೈಡೆನ್ಸ್​ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿ. ವಿಷ್ಣು ಮತ್ತು ಟಾಟಾ ಮೋಟಾರ್ಸ್ ಗ್ರೂಪ್ ಸಿಎಫ್ಒ ಪಿ.ಬಿ. ಬಾಲಾಜಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

"ಇದೇ ಮೊದಲ ಬಾರಿಗೆ ತಮಿಳುನಾಡು ಕೇವಲ 2 ತಿಂಗಳ ಅವಧಿಯಲ್ಲಿ ಎರಡು ದೊಡ್ಡ ಆಟೋಮೊಬೈಲ್ ಉತ್ಪಾದನಾ ಹೂಡಿಕೆಗಳನ್ನು ಪಡೆದುಕೊಂಡಿದೆ" ಎಂದು ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ. ರಾಜಾ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. "ನಾವು ಕೇವಲ ಕಾರ್ಖಾನೆಗಳನ್ನು ನಿರ್ಮಿಸುತ್ತಿಲ್ಲ; ನಾವು ಕನಸುಗಳನ್ನು ನನಸಾಗಿಸುತ್ತಿದ್ದೇವೆ ಮತ್ತು ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯದತ್ತ ವೇಗವಾಗಿ ಸಾಗುತ್ತಿದ್ದೇವೆ!" ಎಂದು ಅವರು ಎಕ್ಸ್​ನಲ್ಲಿ ಬರೆದಿದ್ದಾರೆ.

ಕಳೆದ ತಿಂಗಳು, ವಿಯೆಟ್ನಾಂನ ವಿನ್ ಫಾಸ್ಟ್ ಗ್ರೂಪ್​ನ ಭಾರತೀಯ ಅಂಗವಾದ ವಿನ್ ಫಾಸ್ಟ್ ಆಟೋ ಇಂಡಿಯಾ ಲಿಮಿಟೆಡ್ ಟ್ಯುಟಿಕೋರಿನ್​​ನಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ಕಾರ್ಖಾನೆಗೆ ಅಡಿಪಾಯ ಹಾಕಿತ್ತು. ಕಂಪನಿಯು ತಮಿಳುನಾಡಿನಲ್ಲಿ ಮೊದಲ ಹಂತದಲ್ಲಿ 4,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.

ಜಾಗತಿಕ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಕಾರುಗಳು, ಟ್ರಕ್ ಗಳು, ಬಸ್ಸುಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯು ಭಾರತ, ಯುಕೆ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ.

2024 ರ ಮೂರನೇ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್​ 7,025.11 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು 2023 ರ ಮೂರನೇ ತ್ರೈಮಾಸಿಕದಲ್ಲಿ ಇದ್ದ 2,957.71 ಕೋಟಿ ರೂ.ಗಿಂತ ಹೆಚ್ಚಾಗಿದೆ. ಕಾರ್ಯಾಚರಣೆಗಳಿಂದ ಬರುವ ಆದಾಯವು 2023 ರ ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 25.07 ರಷ್ಟು ಏರಿಕೆಯಾಗಿ 1,09,799.22 ಕೋಟಿ ರೂ.ಗೆ ತಲುಪಿದೆ.

ಇದನ್ನೂ ಓದಿ : 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಅತ್ಯಧಿಕ ಆನ್​ಲೈನ್ ಬಸ್​ ಟಿಕೆಟ್ ಬುಕ್ಕಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.