ETV Bharat / business

ನೆಮ್ಮದಿಯ ಜೀವನಕ್ಕೆ ಯೋಚಿಸುತ್ತಿದ್ದೀರಾ?; ಎಲ್ಲಿ, ಏಕೆ ಮತ್ತು ಹೇಗೆ ಹೂಡಿಕೆ ಮಾಡಬೇಕು ಎಂಬ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ! - Life Stage Investment Strategy - LIFE STAGE INVESTMENT STRATEGY

ಜೀವನದಲ್ಲಿ ಸಂಪತ್ತನ್ನು ಸಂಗ್ರಹಿಸುವ ಗುರಿಯನ್ನು ನೀವು ಹೊಂದಿದ್ದರೆ, ದೀರ್ಘಕಾಲಿಕ ಹೂಡಿಕೆ ಮಾಡುವುದು ಸೂಕ್ತ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

invest
ಹೂಡಿಕೆ (ETV Bharat)
author img

By ETV Bharat Karnataka Team

Published : May 22, 2024, 4:40 PM IST

ಹೈದರಾಬಾದ್​ : ಅನೇಕರು ಆರ್ಥಿಕ ಭದ್ರತೆ ಮತ್ತು ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಾರೆ. ಆದರೆ ಹೂಡಿಕೆದಾರರು ಯಾವ ವಯಸ್ಸಿನಲ್ಲಿ, ಎಲ್ಲಿ, ಯಾವಾಗ ಮತ್ತು ಹೇಗೆ ಹೂಡಿಕೆ ಮಾಡಬೇಕು? ಯಾವುದರಲ್ಲಿ ಹೂಡಿಕೆ ಮಾಡಿದರೆ ಉತ್ತಮ? ಹೂಡಿಕೆ ಮಾಡುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಎಂಬುದರ ಬಗ್ಗೆ ಯೋಚಿಸುತ್ತಾರೆ.

ವೃದ್ಧಾಪ್ಯದಲ್ಲಿ ಆದಾಯ ಕಡಿಮೆ. ಅದಕ್ಕಾಗಿಯೇ ಅನೇಕರು ಹೂಡಿಕೆ ಮಾಡಲು ಹೆದರುತ್ತಾರೆ. ಜೀವನದಲ್ಲಿ ಸಂಪತ್ತನ್ನು ಸಂಗ್ರಹಿಸಬೇಕಾದರೆ ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಪ್ರಾರಂಭಿಸಬೇಕು. ಆಗ ಮಾತ್ರ ಅವರು ಸಣ್ಣ ಅಪಾಯಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀವು ದೀರ್ಘಕಾಲ ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ, ಉತ್ತಮ ಕಾರ್ಪಸ್ (ನಿಧಿ) ರಚಿಸಲು ಸಾಧ್ಯವಾಗುತ್ತದೆ. ಮಧ್ಯ ವಯಸ್ಕ ಜನರು ಮುಖ್ಯವಾಗಿ ರಿಯಲ್ ಎಸ್ಟೇಟ್ ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಇದು ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ನಿವೃತ್ತಿ ವಯಸ್ಸನ್ನು ಸಮೀಪಿಸುತ್ತಿರುವವರು ಅಪಾಯ ಮುಕ್ತ ಮತ್ತು ಸ್ಥಿರ ಆದಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಬಾಳು ಬಂಗಾರವಾಗಿಸಿಕೊಳ್ಳಬಹುದು. ಆಗ ಉಳಿದ ಜೀವನ ಆರ್ಥಿಕವಾಗಿ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು.

20 ರಿಂದ 30 ವರ್ಷ ವಯಸ್ಸಿನವರು ಯಾವುದರಲ್ಲಿ ಹೂಡಿಕೆ ಮಾಡಬೇಕು?: 20-30 ವರ್ಷ ವಯಸ್ಸಿನಲ್ಲಿ ಯುವಕ- ಯುವತಿಯರು ತಮ್ಮ ಉದ್ಯೋಗ ಜೀವನ ಪ್ರಾರಂಭಿಸುತ್ತಾರೆ. ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿದ್ದಾರೆ. ಆದಾಯ ಕಡಿಮೆ. ಆದರೆ ಯುವಜನತೆ, ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಪ್ರಾರಂಭಿಸುವುದು ಭವಿಷ್ಯದಲ್ಲಿ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ದೀರ್ಘಾವಧಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ಆರ್ಥಿಕ ತಜ್ಞರು. ಮ್ಯೂಚುವಲ್ ಫಂಡ್‌ಗಳು, ಇಟಿಎಫ್‌ಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ. ಆಗ ಮಾತ್ರ ನೀವು ಅಪಾಯವನ್ನು ಸಹಿಸಿಕೊಳ್ಳಬಹುದು. ದೀರ್ಘಾವಧಿಯಲ್ಲಿ ಉತ್ತಮ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಏನಿದು 50:30: 20 ರ ನಿಯಮ?: ಯುವಕರು 50: 30: 20 ನಿಯಮವನ್ನು ಅನುಸರಿಸುವುದು ಸೂಕ್ತ. ಈ ನಿಯಮ ಅನುಸರಣೆ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ. ಇವರ ಪ್ರಕಾರ, ನಿಮ್ಮ ಆದಾಯದ 50 ಪ್ರತಿಶತವನ್ನು ಅಗತ್ಯಗಳಿಗೆ, 30 ಪ್ರತಿಶತವನ್ನು ನಿಮ್ಮ ಆಸೆಗಳನ್ನು ಪೂರೈಸಲು ಮತ್ತು ಉಳಿದ 20 ಪ್ರತಿಶತವನ್ನು ಉಳಿತಾಯ ಮತ್ತು ಹೂಡಿಕೆಗಳಿಗೆ ಮೀಸಲಿಡಬೇಕು. ಈ ತಂತ್ರ ಅನುಸರಿಸಿದರೆ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಆರ್ಥಿಕವಾಗಿ ಸದೃಢರಾಗಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.

40-50 ವರ್ಷ ವಯಸ್ಸಿನವರು ಹೂಡಿಕೆ ಮಾಡುವುದು ಏಕೆ ಉತ್ತಮ? : ಮಧ್ಯಮ ವಯಸ್ಸಿನ ಜನರು ಸ್ಥಿರ ಆದಾಯದ ಹೂಡಿಕೆಗಳತ್ತ ಗಮನ ಹರಿಸಬೇಕು. ಅದರಲ್ಲೂ 40 ರಿಂದ 50 ವರ್ಷದೊಳಗಿನವರು ಆದಷ್ಟು ಸಾಲದಿಂದ ದೂರವಿರಬೇಕು. ಉಳಿತಾಯದ ಕಡೆ ಹೆಚ್ಚು ಗಮನ ಹರಿಸಿ. ತಮ್ಮ ಆದಾಯದ ಶೇ.35 - 50ರಷ್ಟು ಉಳಿತಾಯ ಮಾಡುವುದು ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಉತ್ತಮವಾಗಿ ಸ್ಥಾಪಿತವಾಗಿರುವ ಮತ್ತು ಹೆಚ್ಚಿನ ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿರುವ ದೊಡ್ಡ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ. ಮ್ಯೂಚುವಲ್ ಫಂಡ್‌ಗಳು ಮತ್ತು ಡೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ, ಅಪಾಯವು ಸ್ವಲ್ಪಮಟ್ಟಿಗೆ ಸಮತೋಲನಗೊಳ್ಳುತ್ತದೆ ಎಂದಿದ್ದಾರೆ.

ನಿವೃತ್ತಿಯ ನಂತರದ ಹೂಡಿಕೆಗಳು : ಅನೇಕ ಜನರು ನಿವೃತ್ತಿಯ ನಂತರ ಶಾಂತಿಯುತ ಜೀವನವನ್ನು ಆನಂದಿಸಲು ಬಯಸುತ್ತಾರೆ. ಆದಾಗ್ಯೂ, ಮೂಲ ಅಗತ್ಯತೆಗಳು ಮತ್ತು ವೆಚ್ಚಗಳಿಗೆ ಆದಾಯದ ಅಗತ್ಯವಿದೆ. ಅದಕ್ಕಾಗಿಯೇ ಕೆಲವರು ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ. ಆದಾಗ್ಯೂ, ನಿವೃತ್ತರು ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ, ಸ್ಥಿರ ಠೇವಣಿಗಳು, ಮ್ಯೂಚುವಲ್ ಫಂಡ್‌ಗಳು, ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ. ಅಂತಹ ವಿಷಯಗಳಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿಯ ನಂತರ ನಿಮ್ಮ ಆರ್ಥಿಕ ಜೀವನ ಸುಧಾರಿಸುತ್ತದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಇದನ್ನೂ ಓದಿ : ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ?; ಹಾಗಾದರೆ ಈ ತಪ್ಪುಗಳನ್ನು ಮಾತ್ರ ಮಾಡಲೇಬೇಡಿ - Mutual Fund Investment Mistakes

ETV Bharat Logo

Copyright © 2025 Ushodaya Enterprises Pvt. Ltd., All Rights Reserved.