ETV Bharat / business

ಹಳ್ಳಿಯ ಯುವಕನ ಪರಿಶ್ರಮಕ್ಕೆ ಒಲಿದ ಉನ್ನತ ಹುದ್ದೆ: ಫೇಸ್‌ಬುಕ್‌ನಲ್ಲಿ ಉದ್ಯೋಗ, ವಾರ್ಷಿಕ ₹2 ಕೋಟಿ ವೇತನದ ಪ್ಯಾಕೇಜ್! - himachali boy got job in facebook

ಕಾಂಗ್ರಾದ ಅರ್ಚಿತ್ ಗುಲೇರಿಯಾ ಅವರಿಗೆ ಫೇಸ್‌ಬುಕ್‌ನಲ್ಲಿ ಇಂಜಿನಿಯರ್ ಹುದ್ದೆಯ ಆಫರ್ ಬಂದಿದೆ. ಅರ್ಚಿತ್ 2018 ರಲ್ಲಿ ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯದ ಅತ್ಯಲ್ಪ ಸೌಲಭ್ಯಗಳಿರುವ ಒಂದು ಚಿಕ್ಕ ಗ್ರಾಮವೊಂದರ ಯುವಕನಿಗೆ ಫೇಸ್ ಬುಕ್ ಕಂಪನಿಯಲ್ಲಿ ಕೆಲಸ ಸಿಕ್ಕಿರುವುದು ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ. ಈಟಿವಿ ಭಾರತ್ ಜೊತೆಗಿನ ವಿಶೇಷ ಸಂವಾದದಲ್ಲಿ ಅರ್ಚಿತ್ ಹೇಳಿದ್ದೇನು?

author img

By ETV Bharat Karnataka Team

Published : Jun 25, 2024, 8:56 AM IST

FACEBOOK JOB  ARCHIT GULERIA  HIMACHALI BOY GOT JOB IN FACEBOOK  FACEBOOK
ಅರ್ಚಿತ್ (ETV Bharat)

ಧರ್ಮಶಾಲಾ (ಹಿಮಾಚಲ ಪ್ರದೇಶ): ತ್ಯಲ್ಪ ಸೌಲಭ್ಯಗಳಿರುವ ಒಂದು ಚಿಕ್ಕ ಗ್ರಾಮವೊಂದರ ಯುವಕನೊಬ್ಬರು ಉನ್ನತ ಸಾಧನೆ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪುಟ್ಟ ಗ್ರಾಮವೊಂದರ ಯುವಕನೊಬ್ಬ ತನ್ನ ಪರಿಶ್ರಮದ ಮೂಲಕ ಮಹತ್ವದ ಸಾಧನೆ ಮಾಡಿದ್ದಾನೆ. ಕಾಂಗ್ರಾ ಜಿಲ್ಲೆಯ ಭೇದು ಮಹಾದೇವ್ ಡೆವಲಪ್‌ಮೆಂಟ್ ಬ್ಲಾಕ್‌ನ ಗ್ರಾಮ ಪಂಚಾಯತ್ ಸಾಂಬಾದ ಯುವಕ ಅರ್ಚಿತ್ ಗುಲೇರಿಯಾ ಅವರಿಗೆ ಫೇಸ್‌ಬುಕ್‌ನಲ್ಲಿ ಇಂಜಿನಿಯರ್ ಹುದ್ದೆಯನ್ನು ನೀಡಲಾಗಿದೆ. ಇದಕ್ಕಾಗಿ ಅರ್ಚಿತ್ ಗುಲೇರಿಯಾ ವಾರ್ಷಿಕ 2 ಕೋಟಿ ರೂ. ವೇತನ ಲಭಿಸಲಿದೆ.

27 ವರ್ಷದ ಅರ್ಚಿತ್ ಜುಲೈ 2024ರ ಎರಡನೇ ವಾರದಿಂದ ಇಂಗ್ಲೆಂಡ್‌ನ ಲಂಡನ್​ಗೆ ತೆರಳಲಿದ್ದಾರೆ. ಅರ್ಚಿತ್ ತಂದೆ ಅನಿಲ್ ಗುಲೇರಿಯಾ ಬಿಎಸ್‌ಎಫ್‌ನಿಂದ ನಿವೃತ್ತರಾಗಿದ್ದು, ತಾಯಿ ರಂಜನಾ ಗುಲೇರಿಯಾ ಗೃಹಿಣಿಯಾಗಿದ್ದಾರೆ. ಇದಕ್ಕೂ ಮೊದಲು, ಅರ್ಚಿತ್ ಗುರುಗ್ರಾಮ್‌ನ ಅಮೆಜಾನ್‌ನಲ್ಲಿ ಎರಡು ವರ್ಷಗಳ ಕಾಲ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.ಅರ್ಚಿತ್‌ಗೆ ಇಲ್ಲಿ ವೇತನ ವಾರ್ಷಿಕ ಪ್ಯಾಕೇಜ್​ 65 ಲಕ್ಷ ರೂ. ಇತ್ತು. ಅವರಿಗೆ ಇಂಜಿನಿಯರಿಂಗ್‌ನಲ್ಲಿ ಆರು ವರ್ಷಗಳ ಅನುಭವವಿದೆ. 2014 ರಲ್ಲಿ ಠಾಕುರ್ದ್ವಾರ ತಹಸಿಲ್‌ನ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಅರ್ಚಿತ್ ಗುಲೇರಿಯಾ ಅವರು ತನ್ನ 12 ನೇ ತರಗತಿಯನ್ನು ಪೂರ್ಣಗೊಳಿಸಿದರು.

ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅರ್ಚಿತ್ 2018 ರಲ್ಲಿ ಚಂಡೀಗಢದ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನೊಂದಿಗೆ ಬಿ.ಟೆಕ್ ಪದವಿಯನ್ನು ಪಡೆದರು. ಪ್ರತಿಭಾನ್ವಿತ ಅರ್ಚಿತ್​ಗೆ ಫೇಸ್ ಬುಕ್ ಕಂಪನಿಯಲ್ಲಿ ಕೆಲಸ ಸಿಕ್ಕಿರುವುದು ಇಡೀ ದೇಶಕ್ಕೆ ಹೆಮ್ಮೆಯ ಸಂಗತಿ. ಅತ್ಯಲ್ಪ ಸೌಲಭ್ಯಗಳಿರುವ ಒಂದು ಚಿಕ್ಕ ಗ್ರಾಮದ ಯುವಕ ಉತ್ತಮ ಸಾಧನೆ ಮಾಡಿದ್ದಾರೆ. ಅರ್ಚಿತ್ ಗುಲೇರಿಯಾ ಅವರು ಕಠಿಣ ಪರಿಶ್ರಮದಿಂದ ಅಂತಹ ದೊಡ್ಡ ಸ್ಥಾನವನ್ನು ಗಳಿಸಿದ್ದಾರೆ.

ಈಟಿವಿ ಭಾರತ ಜೊತೆಗಿನ ವಿಶೇಷ ಸಂವಾದದಲ್ಲಿ ಅರ್ಚಿತ್ ಅವರು, ''ಯುವಕರಿಗೆ ಯಾವುದೇ ಕೆಲಸ ಕಷ್ಟವಲ್ಲ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯಗುತ್ತದೆ'' ಎಂದು ಸಲಹೆ ನೀಡಿದರು. ''ತನ್ನ ತಾಯಿ ಕೂಡ ಈ ಹಿಂದೆ ಶಿಕ್ಷಕಿಯಾಗಿದ್ದರು. ಆದರೆ, ತನ್ನ ಮಕ್ಕಳ ಸಲುವಾಗಿ ತನ್ನ ಕೆಲಸವನ್ನು ತೊರೆದ್ದರು ಎಂದು ಅರ್ಚಿತ್ ಹೇಳಿದರು. ಅರ್ಚಿತ್‌ನ ಸಹೋದರಿ ರೂಪಾಲಿ ಗುಲೇರಿಯಾ ಕೂಡ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಬ್ರಿಟಿಷ್ ಬ್ಯಾಂಕ್ ಎಚ್‌ಎಸ್‌ಬಿಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಿರ್ಗತಿಕ ಕುಟುಂಬಕ್ಕೆ ಕ್ರೌಡ್ ಫಂಡಿಂಗ್‌ ಮೂಲಕ ಮನೆ ನಿರ್ಮಿಸಿಕೊಟ್ಟ ಪಂಚಾಯತ್​ ಸದಸ್ಯ - Panchayath Member Humanity

ETV Bharat Logo

Copyright © 2024 Ushodaya Enterprises Pvt. Ltd., All Rights Reserved.