ETV Bharat / business

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಫಾಸ್ಟಾಗ್​ ನಿಷ್ಕ್ರಿಯ ಮಾಡುವುದೇಗೆ? ಇಲ್ಲಿದೆ ಸರಳ ವಿಧಾನ - guidelines for closing Paytm FASTag

ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಫಾಸ್ಟಾಗ್​ ನಿಷ್ಕ್ರಿಯ ಮಾಡುದು ಹೇಗೆ ಎಂಬುದರ ಬಗ್ಗೆ ಸರಳ ವಿಧಾನ ಇಲ್ಲಿದೆ.

guidelines for closing Paytm FASTag
guidelines for closing Paytm FASTag
author img

By ETV Bharat Karnataka Team

Published : Mar 16, 2024, 10:25 AM IST

ನವದೆಹಲಿ: ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ನೀಡಿರುವ ಮಾರ್ಗಸೂಚಿಯಂತೆ ಮಾರ್ಚ್​ 15ರ ಮಧ್ಯರಾತ್ರಿಯಿಂದಲೇ ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ನಿಷೇಧ ಜಾರಿಗೆ ಬಂದಿದೆ. ಇನ್ನು ಪೇಟಿಎಂ ಫಾಸ್ಟಾಗ್​ಗಳು ಕೂಡ ಶುಕ್ರವಾರ ಮಧ್ಯರಾತ್ರಿಯಿಂದಲೇ ಕಾರ್ಯಚಾರಣೆಗೆ ಸ್ಥಗಿತಗೊಂಡಿದೆ. ಈ ಫಾಸ್ಟಾಗ್​ಗಳ ಬಳಸಿ ಇನ್ಮುಂದೆ ಟಾಪ್​ ಅಪ್​ ಮಾಡಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ಈಗಾಗಲೇ ಈ ಫಾಸ್ಟಾಗ್​ನಲ್ಲಿ ಬ್ಯಾಲೆನ್ಸ್​ ಇದ್ದರೆ ಮಾತ್ರ ಅದನ್ನು ಮಾರ್ಚ್​ 15ರ ಬಳಿಕವೂ ಬಳಕೆ ಮಾಡಬಹುದಷ್ಟೇ. ಇನ್ನು ಈ ಪೇಟಿಎಂ ಪೇಟಿಎಂ ಫಾಸ್ಟಾಗ್​​ ಅನ್ನು ಹೇಗೆ ನಿಷ್ಕ್ರಿಯಗೊಳಿಸುವುದು ಅನ್ನೋದರ ಕುರಿತ ಸುಲಭ ಮಾಹಿತಿ ಇಲ್ಲಿದೆ.

ಪೇಟಿಎಂ ಫಾಸ್ಟಾಗ್​​ ಹೊಂದಿರುವವರು ಪೇಟಿಎಂ ಆ್ಯಪ್​​ ಮೂಲಕ ಇದನ್ನು ನಿಷ್ಕ್ರಿಯ ಮಾಡಬಹುದು. ಪೇಟಿಎಂ ಆ್ಯಪ್​ ಅನ್ನು ತೆರೆದು ಅಲ್ಲಿ, ಸರ್ಚ್​ನಲ್ಲಿ ಮ್ಯಾನೇಜ್​​ ಫಾಸ್ಟಾಗ್ ಎಂದು ಟೈಪ್​ ಮಾಡಿ. ಮ್ಯಾನೇಜ್​ ಫಾಸ್ಟಾಗ್​ ಸೆಕ್ಷನ್​​ ಲಿಸ್ಟ್​​ನಲ್ಲಿ ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​​ ಫಾಸ್ಟಾಗ್​​ಗೆ ಜೋಡಣೆಯಾಗಿರುವ ವಾಹನದ ಕುರಿತು ತೋರಿಸುತ್ತದೆ. ಇಲ್ಲಿ ಕ್ಲೋಸ್​ ಫಾಸ್ಟಾಗ್​ ಆಪ್ಷನ್​ ಅನ್ನು ಆಯ್ಕೆ ಮಾಡಿ. ಬಲಭಾಗದ ಮೇಲೆ ಯಾವ ವಾಹನದ ಫಾಸ್ಟಾಗ್​ ಕ್ಲೋಸ್​ ಮಾಡಬೇಕು ಎಂಬುದನ್ನು ತೋರಿಸುತ್ತದೆ. ಅದನ್ನು ಆಯ್ಕೆ ಮಾಡಿ. ಬಳಿಕ ಕನ್ಫರ್ಮೆಷನ್​ ಪ್ರಕ್ರಿಯೆಯ ನಿಮ್ಮ ಮೊಬೈಲ್​ ಸ್ಕ್ರೀನ್​ ಮೇಲೆ ಬರಲಿದೆ. ಇದಾದ 5-7 ದಿನಗಳ ಕಾರ್ಯನಿರತ ಅವಧಿಯಲ್ಲಿ ಫಾಸ್ಟಾಗ್​​ ಬಂದ್​ ಆಗಲಿದೆ.

ಸಂಸ್ಥೆಯ ಪ್ರಕಾರ ಪೇಟಿಎಂ ಪೇಮೆಂಟ್ಸ್​​ ಬ್ಯಾಂಕ್​ ಫಾಸ್ಟಟ್ಯಾಗ್ ನಿರ್ವಹಣೆಗೆ ಇರಿಸಲಾದ ಭದ್ರತಾ ಠೇವಣಿ ಮತ್ತು ಮಿನಿಮಮ್​ ಬ್ಯಾಲೆನ್ಸ್​ ಅನ್ನು ಪೇಟಿಎಂ ಪೇಮೆಂಟ್​​ ಬ್ಯಾಂಕ್​ ವಾಲೆಟ್​​ಗೆ ಮರುಪಾವತಿಸಲಾಗುತ್ತದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಪೇಟಿಎಂನ ಮಾತೃ ಕಂಪನಿಯಾಗಿರುವ ಒನ್​97 ಕಮ್ಯೂನಿಕೇಷಮ್ಸ್​​ ಲಿಮಿಟೆಡ್​​ಗೆ (ಒಸಿಎಲ್​) ಯುಪಿಐ ಮೂಲಕ ಮೂರನೇ ವ್ಯಕ್ತಿ ಅಪ್ಲಿಕೇಶನ್ ಪೂರೈಕೆದಾರರಾಗಿ ಭಾಗವಹಿಸಲು ಅನುಮೋದನೆ ನೀಡಿದೆ.

(ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್ ಈ ನಾಲ್ಕು ಬ್ಯಾಂಕ್​ಗಳು ಒಸಿಎಲ್​ಗೆ ಪೇಮೆಂಟ್​​ ವ್ಯವಸ್ಥೆ ಪೂರೈಕೆ ಬ್ಯಾಂಕ್​ ಆಗಿ ಕಾರ್ಯ ನಿರ್ವಹಿಸಲಿವೆ.

ಈಗಾಗಲೇ ಹೆದ್ದಾರಿ ಸುಗಮ ಸಂಚಾರಕ್ಕೆ ಮಾರ್ಚ್​ 15ಕ್ಕೆ ಮುಂಚೆ ಹೊಸ ಫಾಸ್ಟಾಗ್​ ಅನ್ನು ಪಡೆದುಕೊಳ್ಳುವಂತೆ ಬಳಕೆದಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲಹೆ ನೀಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ಪೇಟಿಎಂ ಫಾಸ್ಟ್​​ಟ್ಯಾಗ್​ ​​ಬಳಕೆದಾರರು ಮಾರ್ಚ್​ 15ರೊಳಗೆ ಬೇರೆ ಬ್ಯಾಂಕ್​ ಆಯ್ಕೆ ಮಾಡಿ: ​ಬಳಕೆದಾರರಿಗೆ NHAI ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.