ನವದೆಹಲಿ: ಕೇಂದ್ರ ಬಜೆಟ್ನಲ್ಲಿ ಈ ಬಾರಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲ ಯೋಜನೆಗಳನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಹೊಸದಾಗಿ ಉದ್ಯೋಗ ಸೇರುವ 30 ಲಕ್ಷ ಯುವಕರಿಗೆ ಒಂದು ತಿಂಗಳ ಭವಿಷ್ಯ ನಿಧಿ (ಪಿಎಫ್) ನೆರವು ಘೋಷಿಸಿದ್ದಾರೆ.
ಅಲ್ಲದೆ ಮೂರು ಉದ್ಯೋಗಾಧಾರಿತ ಯೋಜನೆಗಳು ಮೋದಿ 3.O ಸರ್ಕಾರದಲ್ಲಿ ಇಂದು ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿದ್ಯಾರ್ಥಿಗಳು ಮತ್ತು ಉದ್ಯೋಗಾಂಕ್ಷಿಗಳಿಗೂ ಬಂಪರ್ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.
The prime focus of Union Budget 2024-25, presented by Smt @nsitharaman, is to promote employment and skilling, provide support to MSMEs, and empower the middle class.
— Nirmala Sitharaman Office (@nsitharamanoffc) July 23, 2024
The Budget, among other things:
- Outlines far-reaching policies and futuristic vision for ‘Amrit Kaal’;
-… pic.twitter.com/tKMbl0DfN7
ಇ ವೋಚರ್ಸ್ ಅಡಿ ವಿದ್ಯಾರ್ಥಿಗಳ ಉನ್ನತ ಶೈಕ್ಷಣಿಕ ಅನುಕೂಲಕ್ಕೆ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡಲಾಗುವುದು. ಇದು ವಾರ್ಷಿಕ ಶೇ. 3 ಬಡ್ಡಿ ದರ ಇರಲಿದ್ದು, ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಲಿದೆ. ಇನ್ನಿತರ ಸೌಲಭ್ಯಗಳ ಸಂಕ್ಷಿಪ್ತ ಮಾಹಿತಿ ಈ ಕಳಗಿನಂತಿದೆ..
The prime focus of Union Budget 2024-25, presented by Smt @nsitharaman, is to promote employment and skilling, provide support to MSMEs, and empower the middle class.
— Nirmala Sitharaman Office (@nsitharamanoffc) July 23, 2024
The Budget, among other things:
- Outlines far-reaching policies and futuristic vision for ‘Amrit Kaal’;
-… pic.twitter.com/tKMbl0DfN7
- 1.48 ಲಕ್ಷ ಕೋಟಿ ರೂ. ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಮೀಸಲು
- ಕೇಂದ್ರದಿಂದ ನೂತನ ಕೌಶಲ್ಯಾಭಿವೃದ್ಧಿ ಯೋಜನೆ ಘೋಷಣೆ
- ಮುಂದಿನ ಐದು ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ
- ಉದ್ಯಮಗಳೊಂದಿಗೆ ಕೈಜೋಡಿಸಿ ವೃತ್ತಿನಿರತ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯ
- ಮಾದರಿ ಕೌಶಲ್ಯ ಸಾಲ ಯೋಜನೆ - ಪ್ರತಿ ವರ್ಷ 25 ಸಾವಿರ ವಿದ್ಯಾರ್ಥಿಗಳಿಗೆ ನೆರವು - ಸರ್ಕಾರದ ನಿಧಿಯಿಂದ ₹7.5 ಲಕ್ಷದವರೆಗೆ ಸಾಲ ಸೌಲಭ್ಯ
- 1 ಕೋಟಿ ಯುವಕರಿಗೆ 500 ಉನ್ನತ ಖಾಸಗಿ ಕಂಪನಿಗಳಲ್ಲಿ ಇಂಟರನ್ಶಿಪ್ ಸೌಲಭ್ಯಕ್ಕೆ ಕ್ರಮ ಜೊತೆಗೆ ಪ್ರತಿ ತಿಂಗಳು 5 ಸಾವಿರ ರೂ. ಭತ್ಯೆ
- ಮುದ್ರಾ ಯೋಜನೆಯಡಿ ಈವರೆಗೆ ನೀಡಲಾಗುತ್ತಿದ್ದ 10 ಲಕ್ಷ ರೂ. ಸಾಲ ಸೌಲಭ್ಯ 20 ಲಕ್ಷ ರೂಪಾಯಿಗೆ ಏರಿಕೆ.
ಮುಂದಿನ ಐದು ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ ಕಲ್ಪಿಸಲು ರೂ. 2 ಲಕ್ಷ ಕೋಟಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಶಿಕ್ಷಣ, ಉದ್ಯೋಗ, ಕೌಶಲ್ಯ ತರಬೇತಿಗಾಗಿ ರೂ. 1.48 ಲಕ್ಷ ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ ತಮ್ಮ ಸರ್ಕಾರ ಒತ್ತು ನೀಡಲಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಯ ಮೂಲಕ 20 ಲಕ್ಷ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದರು.
ಮಾಸಿಕ ಸಂಬಳ ಬೋನಸ್; ಎಲ್ಲಾ ಕ್ಷೇತ್ರಗಳಲ್ಲಿ ಪ್ರಥಮ ಬಾರಿಗೆ ಉದ್ಯೋಗ ಪಡೆದವರಿಗೆ ಒಂದು ತಿಂಗಳ ವೇತನವನ್ನು 3 ಕಂತುಗಳಲ್ಲಿ ನೀಡಲಾಗುವುದು ಎಂದು ಘೋಷಿಸಲಾಗಿದೆ. ನೇರ ನಗದು ವರ್ಗಾವಣೆ ಮೂಲಕ ಗರಿಷ್ಠ ರೂ.15 ಸಾವಿರ ಪಾವತಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಅದೂ ತಿಂಗಳಿಗೆ ರೂ. ಒಂದು ಲಕ್ಷಕ್ಕಿಂತ ಕಡಿಮೆ ಸಂಬಳ ಇರುವವರಿಗೆ ಮಾತ್ರ ಈ ಯೋಜನೆ ಅನ್ವಯಿಸಲಿದೆ ಎಂದರು. ಇದರಿಂದ 21 ಲಕ್ಷ ಯುವಕರಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಇದು ಮೊದಲ ಬಾರಿಗೆ ಕೆಲಸ ಮಾಡುವ ನೌಕರರನ್ನು ಲಿಂಕ್ ಮಾಡಿ ವಿಶೇಷ ಯೋಜನೆಯ ಮೂಲಕ ಪ್ರೋತ್ಸಾಹವನ್ನು ನೀಡುತ್ತದೆ ಎಂದು ಉಲ್ಲೇಖಿಸಲಾಗಿದೆ. ಉದ್ಯೋಗದ ಮೊದಲ ನಾಲ್ಕು ವರ್ಷಗಳಲ್ಲಿ, ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಇಪಿಎಫ್ ಚಂದಾದಾರಿಕೆಯ ಮೂಲಕ ನೇರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು. ಈ ಯೋಜನೆಯಿಂದ 30 ಲಕ್ಷ ಯುವಕರು ಪ್ರಯೋಜನ ಪಡೆಯಲಿದ್ದಾರೆ ಎಂದು ಸಚಿವೆ ನಿರ್ಮಲಾ ವಿವರಿಸಿದರು.
ನಿರುದ್ಯೋಗಿಗಳಿಗೆ ಮೂರು ಯೋಜನೆಗಳು; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಮೂರು ಉದ್ಯೋಗ ಸಂಬಂಧಿತ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ರೂ. 7.5 ಲಕ್ಷ ಸಾಲ ಸೌಲಭ್ಯ ನೀಡಲು ಕೌಶಲ್ಯ ಸಾಲ ಯೋಜನೆಯನ್ನು ಪರಿಷ್ಕರಿಸಲಾಗುವುದು ಎಂದರು. ಈ ಯೋಜನೆಯ ಮೂಲಕ ವಾರ್ಷಿಕ 25,000 ಯುವಕರು ಪ್ರಯೋಜನ ಪಡೆಯಲಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ - Union Budget 2024