ಹೈದರಾಬಾದ್: ದೇಶದಲ್ಲಿ ಚಿನ್ನದ ಬೆಲೆ ನಿನ್ನೆ ಭಾರಿ ಇಳಿಕೆ ಕಂಡಿತ್ತು. ಆದರೆ ಇಂದು ಮತ್ತೆ 760 ರೂಪಾಯಿ ಏರಿಕೆ ಕಂಡಿದೆ. ಆದರೆ ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕೆ ಜಿ ಬೆಳ್ಳಿಗೆ ಸುಮಾರು 1150 ರೂಪಾಯಿ ಇಳಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 760 ರೂ. ಏರಿಕೆ ಆಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ರೂ.72,270 ಆಗಿದೆ. ಬೆಳ್ಳಿ ಬೆಲೆ ಕೆಜಿಗೆ 400 ರೂ. ಏರಿಕೆಯಾಗಿ 82,250 ರೂ.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ 1150 ರೂಪಾಯಿ ಕಡಿಮೆ ಆಗಿದೆ.
- ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 72,270 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 82,250 ರೂ. ಇದೆ.
- ಬೆಂಗಳೂರಲ್ಲಿ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 66,250 ರೂಗೆ ಏರಿಕೆ ಆಗಿದೆ. ನಿನ್ನೆ 65,550 ರೂ. ದರ ಇತ್ತು
- ಮೈಸೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 72,270 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 82,250 ರೂ. ಇದೆ.
- ಬೆಳಗಾವಿಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 72,270 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 82,250 ರೂ. ಇದೆ.
- ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 82,480 ರೂ. ಇದೆ.
- ವಿಜಯವಾಡದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 82,480 ರೂ. ಇದೆ.
- ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 82,480 ರೂ. ಇದೆ.
- ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 82,480 ರೂ. ಇದೆ.
ಗಮನಿಸಿ: ಈ ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತಿರುತ್ತವೆ.
ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಸ್ಥಿರವಾಗಿವೆ. ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,319 ಡಾಲರ್. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 26.55 ಡಾಲರ್ ಆಗಿದೆ.
ಕ್ರಿಪ್ಟೋಕರೆನ್ಸಿ ದರಗಳು ಹೇಗಿವೆ?: ಕ್ರಿಪ್ಟೋ ಕರೆನ್ಸಿ ವಹಿವಾಟು ಭಾರಿ ಲಾಭದೊಂದಿಗೆ ಮುಂದುವರಿದಿದೆ.
ಕ್ರಿಪ್ಟೋ ಕರೆನ್ಸಿಯ ಪ್ರಸ್ತುತ ಬೆಲೆಗಳು:
- ಬಿಟ್ ಕಾಯಿನ್- 55,38,000 ರೂ.
- ಎಥೆರಿಯಂ- 2,57,968 ರೂ.
- ಟೆಥರ್- 81.1 ರೂ.
- ಬಿನಾನ್ಸ್ ನಾಣ್ಯ- 49,200 ರೂ.
- ಸೊಲೊನಾ- 12,027 ರೂ.
ಪೆಟ್ರೋಲ್, ಡೀಸೆಲ್ ಬೆಲೆ!: ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.84 ರೂ. ಮತ್ತು ಡೀಸೆಲ್ ಬೆಲೆ 96.16 ರೂ. ಇದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಹಾಗೂ ಡೀಸೆಲ್ ಬೆಲೆ 95.63 ರೂ. ಇದೆ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಮತ್ತು ಡೀಸೆಲ್ ಬೆಲೆ 96.16 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಇದೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಇಳಿಕೆ: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಸರಿಯಾಗಿ ಒಂದು ವಾರ ಇರುವಾಗಲೇ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ಇಳಿಕೆ ಮಾಡಿವೆ. ಈ ನಿರ್ಧಾರದಿಂದ ಜನರಿಗೆ ಕೊಂಚ ನೆಮ್ಮದಿ ಲಭಿಸಿದೆ.
ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 19 ರೂಪಾಯಿ ಇಳಿಕೆಯಾಗಿದೆ. ಮೇ 1 (ಇಂದಿನಿಂದ) ವಾಣಿಜ್ಯ ಸಿಲಿಂಡರ್ ಬೆಲೆಯನ್ನು 19 ರೂ. ಕಡಿತಗೊಳಿಸುತ್ತಿರುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ. ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ?: ಮೇ 1 ರಿಂದ ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,764.50 ರೂ.ಗಳಷ್ಟಿತ್ತು. ಆದರೆ, ಇತ್ತೀಚಿನ 19 ರೂ. ಕಡಿತವು 1,745.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,879 ರೂ. ಆಗಿದ್ದರೆ, ಇತ್ತೀಚಿನ ಇಳಿಕೆಯೊಂದಿಗೆ 1859 ರೂ.ಗೆ ಇಳಿದಿದೆ. ಹೈದರಾಬಾದ್‌ನಲ್ಲಿ 19 ಕೆಜಿಯ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2013.50 ರೂ. ಇದ್ದ ದರ, ಇದೀಗ 1994.50 ರೂ.ಗೆ ಇಳಿಕೆ ಕಂಡಿದೆ.
ಇದನ್ನು ಓದಿ: ಜಿಎಸ್‌ಟಿಯಲ್ಲಿ ಹೊಸ ದಾಖಲೆ! ಏಪ್ರಿಲ್ನಲ್ಲಿ ₹2.10 ಲಕ್ಷ ಕೋಟಿ ಆದಾಯ, ಕರ್ನಾಟಕದ ಪಾಲೆಷ್ಟು ಗೊತ್ತಾ? - GST Collection