ದೇಶದಲ್ಲಿ ಪ್ರತಿ ದಿನ ಏರುಗತ್ತಿಯಲ್ಲಿ ಸಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಮಂಗಳವಾರ ಕೊಂಚ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂಪಾಯಿ ತಗ್ಗಿದೆ. ಅದೇ ರೀತಿಯಾಗಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲೂ 1,600 ರೂಪಾಯಿ ಇಳಿಕೆಯಾಗಿದೆ. ಇದರಿಂದ ಆಭರಣಗಳ ಪ್ರಿಯರಿಗೆ ಸ್ವಲ್ಪ ನೆಮ್ಮದಿ ಮೂಡಿಸಿದಂತಾಗಿದೆ.
ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿವೆ. ಕೆಲ ದಿನಗಳಿಂದ ನಿರಂತರವಾಗಿ ಬೆಲೆ ಹೆಚ್ಚುತ್ತಿದೆ. ಆದರೆ, ಇದರ ನಡುವೆ ಬಂಗಾರ ಹಾಗೂ ಬೆಳ್ಳಿ ದರ ಇಳಿಕೆ ಕಂಡಿದೆ. ದುರ್ಬಲ ಜಾಗತಿಕ ಹಾಗೂ ಲಾಭದಾಯಕ ಪ್ರವೃತ್ತಿ ಕಾರಣದಿಂದಾಗಿ ಹಳದಿ ಲೋಹವು ಪ್ರತಿ 10 ಗ್ರಾಂಗೆ 550 ರೂ. ಕಡಿಮೆಯಾಗಿದೆ.
ಸೋಮವಾರ ಪ್ರತಿ 10 ಗ್ರಾಂ ಚಿನ್ನ ಬೆಲೆ 75,200 ರೂ. ಆಗಿತ್ತು. ಆದರೆ, ಮಂಗಳವಾರ 550 ರೂಪಾಯಿ ಇಳಿಕೆಯಾಗಿ 74,650 ರೂಪಾಯಿಗಳಿಗೆ ತಲುಪಿದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ 1,600 ರೂಪಾಯಿ ತಗ್ಗಿ, 94,500 ರೂ.ಗೆ ಮಾರಾಟವಾಗಿದೆ. ಹಿಂದಿನ ದಿನ ಪ್ರತಿ ಕೆಜಿ ಬೆಳ್ಳಿಯ 96,100 ರೂ. ಆಗಿತ್ತು.
ದೆಹಲಿ ಮಾರುಕಟ್ಟೆಗಳಲ್ಲಿ ಸ್ಪಾಟ್ ಚಿನ್ನದ ಬೆಲೆ (24 ಕ್ಯಾರೆಟ್) ಪ್ರತಿ 10 ಗ್ರಾಂಗೆ 74,650 ರೂ.ನಲ್ಲಿ ವಹಿವಾಟು ನಡೆಸುತ್ತಿವೆ. ಹಿಂದಿನ ಮಾರುಕಟ್ಟೆ ಮುಕ್ತಾಯಕ್ಕೆ ಹೋಲಿಸಿದರೆ 550 ರೂ.ನಷ್ಟು ಕಡಿಮೆಯಾಗಿದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಾಟ್ ಚಿನ್ನ ಮತ್ತು ಬೆಳ್ಳಿಯ ದರಗಳು ಕಡಿಮೆಯಾಗಿವೆ.
ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗೆ?: ಕ್ರಿಪ್ಟೋಕರೆನ್ಸಿ ವಹಿವಾಟು ಮಂಗಳವಾರ ಭಾರೀ ಲಾಭದೊಂದಿಗೆ ಮುಂದುವರೆದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯಗಳು ಯಾವುವು?.
ಕ್ರಿಪ್ಟೋ ಕರೆನ್ಸಿ | ಈಗಿನ ಬೆಲೆ |
ಬಿಟ್‌ಕಾಯಿನ್ | 53,00,0001 ರೂ. |
ಎಥೆರಿಯಮ್ | 2,50,101 ರೂ. |
ಟೆಥರ್ | 79.61 ರೂ. |
ಬೈನಾನ್ಸ್ ಕಾಯಿನ್ | 46,900 ರೂ. |
ಸೋಲೋನಾ | 13,900 ರೂ. |
ಷೇರು ಮಾರುಕಟ್ಟೆ: ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರ ನಷ್ಟದೊಂದಿಗೆ ಪ್ರಾರಂಭವಾಗಿದೆ. ಇದಕ್ಕೆ ವಿದೇಶಿ ಹೂಡಿಕೆಗಳು ಏರಿಳಿತ ಮತ್ತು ಏಷ್ಯಾದ ಮಾರುಕಟ್ಟೆಗಳಿಂದ ನಕಾರಾತ್ಮಕ ಸಂಕೇತಗಳು ಬರುತ್ತಿರುವುದು ಕಾರಣವಾಗಿದೆ.
ಪೆಟ್ರೋಲ್ -ಡೀಸೆಲ್ ಬೆಲೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹುಮಟ್ಟಿಗೆ ಸ್ಥಿರವಾಗಿವೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.76 ರೂ. ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 87.66 ರೂ. ಆಗಿದೆ. ಹೈದರಾಬಾದ್ ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಮತ್ತು ಡೀಸೆಲ್ ಬೆಲೆ 95.63 ರೂ. ಆಗಿದೆ.
ಕಚ್ಚಾ ತೈಲ ದರ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶೇ.0.56ರಷ್ಟು ಕಡಿಮೆಯಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 83.24 ಡಾಲರ್ ಆಗಿದೆ.