ಹೈದರಾಬಾದ್: ಈಗಾಗಲೇ 10 ಗ್ರಾಂ ಚಿನ್ನದ ಬೆಲೆ 64,500 ರೂ.ಗೆ ತಲುಪಿದೆ. ಆದರೆ ಈ ವರ್ಷ 70,000 ರೂ.ಗೆ ಏರಬಹುದು ಎಂದು ಡೀಲರ್‌ಗಳು, ಆಭರಣ ವ್ಯಾಪಾರಿಗಳು ಮತ್ತು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್‌ನ ನಿಷ್ಠುರ ನಿಲುವು ಮತ್ತು ಮುಗಿಯದ ಭೌಗೋಳಿಕ ರಾಜಕೀಯ ಒತ್ತಡಗಳು ಮತ್ತು ಊಹಾತ್ಮಕ ಖರೀದಿಯ ಹಿನ್ನೆಲೆಯಲ್ಲಿ ಬಂಗಾರದ ಬೆಲೆ ಮೇಲಕ್ಕೇರುವ ಸಾಧ್ಯತೆಗಳು ಗೋಚರಿಸಿವೆ.
ರಿದ್ದಿಸಿದ್ಧಿ ಬುಲಿಯನ್ಸ್ ಲಿಮಿಟೆಡ್‌ನ (RSBL) ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೊಠಾರಿ ಈ ಕುರಿತು ಮಾತನಾಡಿ, "ಚಿನ್ನ ದೇಶೀಯವಾಗಿ ಸಾರ್ವಕಾಲಿಕ ಹೆಚ್ಚಿನ ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ಕಳೆದೆರಡು ವಹಿವಾಟಿನ ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 70 ಡಾಲರ್‌ಗೆ ಏರಿಕೆಯಾಗಿದೆ. 2,000 ಡಾಲರ್‌ನಿಂದ 2060 ಡಾಲರ್ ಶ್ರೇಣಿ ತಲುಪಿದೆ. ಜನವರಿ ಮತ್ತು ಫೆಬ್ರುವರಿಯಲ್ಲಿ ನ್ಯೂಯಾರ್ಕ್ ಕಮ್ಯುನಿಟಿ ಬ್ಯಾನ್‌ಕಾರ್ಪ್ (NYCB) ಷೇರುಗಳು ಕಳೆದ ವಾರ ಕುಸಿದು, ಅಮೆರಿಕದಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು 2.0 ಊಹಾಪೋಹಗಳಿಗೆ ಕಾರಣವಾಯಿತು" ಎಂದು ತಿಳಿಸಿದ್ದಾರೆ.
ಚಿನ್ನದತ್ತ ಹೂಡಿಕೆದಾರರ ಒಲವು: "ಈ ವಾರ ನಾವು ಫಾಲೋ-ಥ್ರೂ ಖರೀದಿಯನ್ನು ನೋಡುತ್ತಿದ್ದೇವೆ. ಹೂಡಿಕೆದಾರರು (FOMO) ನಿರ್ದಿಷ್ಟ ಅಸ್ತಿತ್ವ ಕಳೆದುಕೊಳ್ಳುವ ಭಯದಿಂದ ಚಿನ್ನದ ಮಾರುಕಟ್ಟೆಗೆ ಜಿಗಿಯುತ್ತಿದ್ದಾರೆ. ಫೆಡರಲ್ ರಿಸರ್ವ್‌ನ ನಿಷ್ಠುರ ನಿಲುವು, ಮುಂದುವರಿದ ಭೌಗೋಳಿಕ ರಾಜಕೀಯ ಒತ್ತಡಗಳು ಮತ್ತು ಬಲವಾದ ಊಹಾತ್ಮಕ ಮತ್ತು ಹೂಡಿಕೆ ಬೇಡಿಕೆಯು ಬೆಲೆ ಹೆಚ್ಚಳಕ್ಕೆ ಪೂರಕವಾದ ಇತರ ಅಂಶಗಳಾಗಿವೆ. ರೂಪಾಯಿ ಮೌಲ್ಯ ಕುಸಿತದಿಂದಾಗಿಯೂ ಚಿನ್ನ ಭಾರತದಲ್ಲಿ ದಾಖಲೆಯ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಈ ಬೆಲೆಗಳು ಅಲ್ಪಾವಧಿಯಲ್ಲಿ 2,150 ಡಾಲರ್‌ವರೆಗೆ (65,500 ರೂ.) ತಮ್ಮ ಓಟದ ವೇಗ ಮುಂದುವರಿಸುವ ನಿರೀಕ್ಷೆಯಿದೆ. 2024ರ ವರ್ಷದಲ್ಲಿ ದೀರ್ಘಾವಧಿಯ ಮಾರುಕಟ್ಟೆ ವಿದ್ಯಮಾನವು ಇನ್ನೂ 2,300 ಡಾಲರ್ (70,000 ರೂ.) ಗುರಿ ತಲುಪುವ ಸಾಧ್ಯತೆಯಿದೆ" ಎಂದು ಕೊಠಾರಿ ವಿವರಿಸಿದರು.
"ಅಮೆರಿಕದ ಫೆಡ್ ದರಗಳ ಜಾಗತಿಕ ಪ್ರಭಾವದಿಂದಾಗಿ ಫೆಬ್ರುವರಿಯಲ್ಲಿ ಹಳದಿ ಲೋಹದ ಕಾರ್ಯಕ್ಷಮತೆಯು ತಿಂಗಳ ಕೊನೆಯ ವಾರದಲ್ಲಿ ಕಂಡುಬಂದ ಏರಿಕೆಯು ನಿರಂತರವಾಗಿ ಮುಂದುವರಿಯುವ ಸಾಧ್ಯತೆಯಿದೆ" ಎಂದು ಕಾಮಾ ಜ್ಯುವೆಲರಿಯ ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಶಾ ಹೇಳಿದ್ದಾರೆ.
"ಚಿನ್ನದ ಬೆಲೆಗಳಲ್ಲಿನ ಕ್ರಮೇಣ ಪ್ರಗತಿಯು ಹೊಸ ದಾಖಲೆ ನಿರ್ಮಿಸುತ್ತಿದೆ. ಬಹುಶಃ ಈ ವರ್ಷದಲ್ಲಿ ಬೆಲೆ 70,000 ರೂ. ಗಡಿ ದಾಟಬಹುದು. ಮುಂದಿನ ದಿನಗಳಲ್ಲಿ ಫೆಡ್ನಿಂದ ದರ ಕಡಿತದ ಕುರಿತು ಚರ್ಚೆಗಳು ದೊಡ್ಡದಾಗಿಯೇ ಸದ್ದು ಮಾಡಲಿವೆ. ಈ ವರ್ಷಾತ್ಯದ ವೇಳೆಗೆ ದರವನ್ನು ಶೇ.4ಕ್ಕೆ ಇಳಿಸುವ ಮೂಲಕ, ಜಾಗತಿಕ ಆರ್ಥಿಕ ಘಟನೆಗಳು ಮತ್ತು ಬಳಕೆಯ ಬೇಡಿಕೆಗಳ ಹಿನ್ನೆಲೆಯಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂಬುದನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಕಾಮ ಜ್ಯುವೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಶಾ ತಿಳಿಸಿದರು.
ಕೊಟಕ್ ಸೆಕ್ಯುರಿಟೀಸ್‌ನ ಕಮಾಡಿಟಿ ರಿಸರ್ಚ್ ಮುಖ್ಯಸ್ಥ ರವೀಂದ್ರ ರಾವ್ ಅಭಿಪ್ರಾಯ ವ್ಯಕ್ತಪಡಿಸಿ, "ಕಾಮೆಕ್ಸ್ ಚಿನ್ನದ ಬೆಲೆಗಳು ಸೋಮವಾರದಂದು ಅತ್ಯಧಿಕ ದೈನಂದಿನ ಮುಕ್ತಾಯ ಕಂಡವು. ಡಿಸೆಂಬರ್ 2023ರಲ್ಲಿ ಟ್ರಾಯ್ ಔನ್ಸ್‌ಗೆ ದಾಖಲೆಯ ಗರಿಷ್ಠ 2,152.3 ಡಾಲರ್ ಸಮೀಪದಲ್ಲಿ ವಹಿವಾಟು ನಡೆಸುತ್ತಿದೆ. ಏಕೆಂದರೆ, ಕಳೆದ ವಾರ ದುರ್ಬಲ ಅಮೆರಿಕ ಆರ್ಥಿಕ ಮಾಹಿತಿಯು ಚಿನ್ನದ ಬೆಲೆ ಹೆಚ್ಚಳಕ್ಕೂ ಪೂರಕವಾಗಿದೆ. ಮುಂದಿನ ತಿಂಗಳುಗಳಲ್ಲಿ ಫೆಡರಲ್ ರಿಸರ್ವ್ ದರಗಳನ್ನು ಕಡಿತಗೊಳಿಸಲು ಪ್ರಾರಂಭಿಸಬಹುದು. ಇತ್ತೀಚೆಗೆ, ಫೆಡ್ ಗವರ್ನರ್ ವಾಲರ್ ಅವರು ಫೆಡ್ನ ಹಿಡುವಳಿಗಳಲ್ಲಿ ಅಲ್ಪಾವಧಿಯ ಖಜಾನೆಗಳ ದೊಡ್ಡ ಪಾಲನ್ನು ಬದಲಾಯಿಸುವ ಒಲವು ತೋರಿದ್ದಾರೆ'' ಎಂದು ಹೇಳಿದರು.
ಇದನ್ನೂ ಓದಿ: IIFL ಫೈನಾನ್ಸ್‌ಗೆ ಚಿನ್ನದ ಸಾಲ ನೀಡದಂತೆ ತಾಕೀತು ಮಾಡಿದ ಆರ್ಬಿಐ!