ETV Bharat / business

ಫಿನ್​ಟೆಕ್​ ಎನ್​ಬಿಎಫ್​ಸಿಗಳಿಂದ 98 ಸಾವಿರ ಕೋಟಿ ಮೊತ್ತದ 9 ಕೋಟಿ ಸಾಲ ಬಟವಾಡೆ: ವರದಿ - Indian Fintech NBFC - INDIAN FINTECH NBFC

2024 ರಲ್ಲಿ ಫಿನ್​ಟೆಕ್​ ಎನ್​ಬಿಎಫ್​ಸಿಗಳು 9 ಕೋಟಿ ಸಾಲ ಬಟವಾಡೆ ಮಾಡಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jul 29, 2024, 2:30 PM IST

ನವದೆಹಲಿ : 2024ರ ಹಣಕಾಸು ವರ್ಷದಲ್ಲಿ ಫಿನ್ ಟೆಕ್ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್​ಬಿಎಫ್​ಸಿ) 98,111 ಕೋಟಿ ರೂ. ಮೌಲ್ಯದ ಸುಮಾರು 9 ಕೋಟಿ ಸಾಲಗಳನ್ನು ಮಂಜೂರು ಮಾಡಿವೆ ಮತ್ತು 6 ವರ್ಷಗಳಲ್ಲಿ ಇವುಗಳು ನೀಡಿದ ಸಾಲದ ಪ್ರಮಾಣ ದ್ವಿಗುಣವಾಗಿದೆ ಎಂದು ಸೋಮವಾರ ವರದಿಯೊಂದು ತಿಳಿಸಿದೆ.

ಇದು 2024ರ ಹಣಕಾಸು ವರ್ಷದಲ್ಲಿ, ಒಟ್ಟಾರೆ ವೈಯಕ್ತಿಕ ಸಾಲ ಮಾರುಕಟ್ಟೆಯಲ್ಲಿ ಸಾಲ ಮಂಜೂರಾತಿ ಮೊತ್ತದ ಶೇಕಡಾ 65 ಮತ್ತು ಸಾಲ ಮಂಜೂರಾತಿ ಮೌಲ್ಯದ ಶೇಕಡಾ 11 ರಷ್ಟಿದೆ ಎಂದು ಫಿನ್ ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್ ಮೆಂಟ್ (ಎಫ್ಎಎಸ್ಇ) ತಿಳಿಸಿದೆ. ಹಣಕಾಸು ವರ್ಷ 2019 ರಿಂದ ಹಣಕಾಸು ವರ್ಷ 2024 ರವರೆಗೆ, ಮಂಜೂರಾತಿ ಪ್ರಮಾಣದಲ್ಲಿ ಫಿನ್ ಟೆಕ್ ಸಾಲಗಳ ಪಾಲು ಶೇಕಡಾ 30 ರಿಂದ 65 ಕ್ಕೆ ಮತ್ತು ಮಂಜೂರಾತಿ ಮೌಲ್ಯದಲ್ಲಿ ಶೇಕಡಾ 4 ರಿಂದ 11 ಕ್ಕೆ ಏರಿಕೆಯಾಗಿದೆ.

"ಸಾರ್ವಜನಿಕ ನೀತಿ, ಮೂಲಸೌಕರ್ಯ ಮತ್ತು ನಿಯಮಗಳ ಅನುಕೂಲತೆಗಳಿಂದ ವಿಸ್ತರಿಸುತ್ತಿರುವ ಡಿಜಿಟಲ್ ಆರ್ಥಿಕತೆಯು ಉತ್ತಮ ಮಾರುಕಟ್ಟೆಯನ್ನು ಸೃಷ್ಟಿಸುತ್ತಿವೆ"ಎಂದು ಎಫ್​​ಎಎಸ್​ಇ ಸಿಇಒ ಸುಗಂಧ್ ಸಕ್ಸೇನಾ ಹೇಳಿದರು.

ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿನ ಹಿನ್ನಡೆಯ ಹೊರತಾಗಿಯೂ, ಉದ್ಯಮವು ಏಪ್ರಿಲ್ 2018 ರಿಂದ 2.7 ಲಕ್ಷ ಕೋಟಿ ರೂ. ಮೌಲ್ಯದ 24 ಕೋಟಿ ಸಾಲಗಳನ್ನು ವಿತರಿಸಿದೆ. ಬಾಕಿ ಇರುವ ಫಿನ್​ಟೆಕ್​ ವೈಯಕ್ತಿಕ ಸಾಲದ ಪ್ರಮಾಣ 4.84 ಕೋಟಿ ಆಗಿದ್ದು, ಇದರ ಒಟ್ಟು ಮೌಲ್ಯ 70,049 ಕೋಟಿ ರೂ. (ಮಾರ್ಚ್ 2024 ರ ಹೊತ್ತಿಗೆ) ಆಗಿದೆ. ಇದು ಒಟ್ಟಾರೆ ವೈಯಕ್ತಿಕ ಸಾಲ ಬಾಕಿಯಲ್ಲಿ ಫಿನ್ ಟೆಕ್ ಎನ್​ಬಿಎಫ್​ಸಿಯ ಪಾಲನ್ನು ಶೇಕಡಾ 5 ರಷ್ಟು ಮತ್ತು ಸಕ್ರಿಯ ಸಾಲದ ಪ್ರಮಾಣದಲ್ಲಿ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ ಎಂದು ಎಫ್​ಎಎಸ್​ಇ ಡೇಟಾ ತಿಳಿಸಿದೆ.

ಡಿಜಿಟಲ್ ಪ್ರಕ್ರಿಯೆಯ ಕಾರಣದಿಂದ ಭೌಗೋಳಿಕ ಅಡೆತಡೆಗಳನ್ನು ದಾಟಿ ಸಾಲಗಳನ್ನು ನೀಡಲು ಸಾಧ್ಯವಾಗುತ್ತಿದೆ. 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 717 ಜಿಲ್ಲೆಗಳಲ್ಲಿನ ಗ್ರಾಹಕರಿಗೆ ಫಿನ್​ಟೆಕ್​ ಎನ್​ಬಿಎಫ್​ಸಿಗಳು ಸಾಲ ವಿತರಣೆ ಮಾಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಮಂಜೂರಾತಿ ಮೌಲ್ಯದ ಮೂರನೇ ಎರಡರಷ್ಟು ಸಾಲಗಳನ್ನು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಾಲಗಾರರು ಪಡೆದುಕೊಂಡಿದ್ದಾರೆ.

ಫಿನ್ ಟೆಕ್ ಪ್ರಾಥಮಿಕವಾಗಿ 3 ರಿಂದ 12 ಲಕ್ಷ ರೂ.ಗಳ ವಾರ್ಷಿಕ ಕುಟುಂಬ ಆದಾಯ ಹೊಂದಿರುವ ವಿಶಾಲವಾದ ಸಾಮೂಹಿಕ ಮಾರುಕಟ್ಟೆಗೆ ಸಾಲ ವಿತರಣೆ ಮಾಡುತ್ತಿದೆ. ಒಟ್ಟಾರೆಯಾಗಿ ಫಿನ್ ಟೆಕ್​ಗಳು ನೀಡುವ ಸರಾಸರಿ ಒಂದು ಸಾಲದ ಗಾತ್ರ ಸುಮಾರು 11,000 ರೂ. ಆಗಿದೆ. ಹಾಗೆಯೇ ಮಂಜೂರಾದ ಅರ್ಧದಷ್ಟು ಸಾಲಗಳು 50,000 ರೂ.ಗಿಂತ ಕಡಿಮೆ ಮೊತ್ತದ್ದಾಗಿವೆ.

ಇದನ್ನೂ ಓದಿ : 23 ತಿಂಗಳಲ್ಲಿ 2 ಲಕ್ಷ ಗ್ರ್ಯಾಂಡ್ ವಿಟಾರಾ ಎಸ್​ಯುವಿ ಮಾರಾಟ - Grand Vitara SUV

ETV Bharat Logo

Copyright © 2025 Ushodaya Enterprises Pvt. Ltd., All Rights Reserved.