ETV Bharat / business

ಸಾರ್ವಜನಿಕರೇ ಇತ್ತ ಗಮನಿಸಿ! ಬಂತು ಡೆಡ್‌ಲೈನ್‌: ಮಾರ್ಚ್ 31ರೊಳಗೆ ಇವುಗಳನ್ನು ಪೂರ್ಣಗೊಳಿಸಿ - Financial Deadline

author img

By ETV Bharat Karnataka Team

Published : Mar 29, 2024, 1:14 PM IST

Financial Deadlines: 2023-24ರ ಆರ್ಥಿಕ ವರ್ಷ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಆದ್ದರಿಂದ FASTAG ಅಪ್​ಡೇಟ್​ ಮತ್ತು ಮಾರ್ಚ್ 31ರ ಮೊದಲು ಟ್ಯಾಕ್ಸ್​ ಸೇವಿಂಗ್​ ಇನ್ವೆಸ್ಟ್​ಮೆಂಟ್ಸ್​ ಮಾಡುವುದು ಒಳಿತು. ಈ ಕುರಿತು ಉಪಯುಕ್ತ ಮಾಹಿತಿ ಇಲ್ಲಿದೆ.

FINANCIAL DEADLINES IN MARCH 2024  ITR FILING  TAX SAVING INVESTMENTS  FASTAG UPDATE
ಮಾರ್ಚ್ 31 ರೊಳಗೆ ಇವುಗಳು ಪೂರ್ಣಗೊಳ್ಳಲೇಬೇಕು!

ಇನ್ನೊಂದೆರಡು ದಿನಗಳಲ್ಲಿ 2023-24ರ ಆರ್ಥಿಕ ವರ್ಷ ಕೊನೆಗೊಳ್ಳುತ್ತದೆ. ಆದ್ದರಿಂದ ಆದಾಯ ತೆರಿಗೆಗೆ ಸಂಬಂಧಿಸಿದ ಕೆಲಸಗಳು, FASTAG ಅಪ್​ಡೇಟ್​ ಮತ್ತು ಟ್ಯಾಕ್ಸ್​ ಸೇವಿಂಗ್​ ಇನ್ವೆಸ್ಟ್​ಮೆಂಟ್ಸ್ ಸೇರಿದಂತೆ ಕೆಲವು ಹಣಕಾಸು ವ್ಯವಹಾರಗಳನ್ನು ಮಾರ್ಚ್ 31ರ ಮೊದಲೇ ಮಾಡುವುದು ಒಳ್ಳೆಯದು.

1. FASTAG ಅಪ್‌ಡೇಟ್: FASTAG ಬಳಕೆದಾರರು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ FASTAG ಅಪ್‌ಡೇಟ್‌ಗಾಗಿ ಗಡುವನ್ನು 31 ಮಾರ್ಚ್ 2024ರವರೆಗೆ ವಿಸ್ತರಿಸಿದೆ. ಆದ್ದರಿಂದ FASTag ಬಳಕೆದಾರರು ಈ ಗಡುವಿನೊಳಗೆ KYC ಪೂರ್ಣಗೊಳಿಸಬೇಕು.

2. ಟ್ಯಾಕ್ಸ್​ ಸೇವಿಂಗ್​ ಇನ್ವೆಸ್ಟ್​ಮೆಂಟ್ಸ್: ಟ್ಯಾಕ್ಸ್​ ಸೇವಿಂಗ್​ ಇನ್ವೆಸ್ಟ್​ಮೆಂಟ್ಸ್ ಮಾಡುವುದಕ್ಕೆ ಮಾರ್ಚ್ 31ರವರೆಗೆ ಗಡುವಿದೆ. ಈ ದಿನಾಂಕದ ಮೊದಲು ಹೂಡಿಕೆ ಮಾಡಿದರೆ, ತೆರಿಗೆ ಉಳಿಸಲು ಅವಕಾಶವಿದೆ. ವಿಶೇಷವಾಗಿ, ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್ 31ರೊಳಗೆ ಕನಿಷ್ಠ ಮೊತ್ತವನ್ನು ಈ ಯೋಜನೆಗಳಲ್ಲಿ ಠೇವಣಿ ಮಾಡಬೇಕು. ಇಲ್ಲದಿದ್ದರೆ ಅವರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ನಂತರ, ಖಾತೆಗಳನ್ನು ಮರುಸ್ಥಾಪಿಸಬೇಕಾದರೆ, ದಂಡ ಪಾವತಿಸಬೇಕು. ಇದಲ್ಲದೆ, ಅನೇಕ ಪ್ರಯೋಜನಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ.

  • ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಪ್ರತೀ ವರ್ಷ ಕನಿಷ್ಠ ರೂ.500ರಿಂದ ಗರಿಷ್ಠ ರೂ.1.50 ಲಕ್ಷದವರೆಗೆ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡಬಹುದು. ಗಡುವಿನೊಳಗೆ ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ, ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಮತ್ತೆ ಖಾತೆ ಮರುಸ್ಥಾಪಿಸಲು ರೂ.50 ದಂಡ ಕಟ್ಟಬೇಕಾಗುತ್ತದೆ. ಸಾಮಾನ್ಯವಾಗಿ, ಪಿಪಿಎಫ್ ಖಾತೆಯನ್ನು ತೆರೆದ ಮೂರನೇ ವರ್ಷದಿಂದ ಸಾಲ ತೆಗೆದುಕೊಳ್ಳಬಹುದು. ಆರನೇ ವರ್ಷದಿಂದ ನಗದು ಹಿಂಪಡೆಯಬಹುದು. ಖಾತೆಯನ್ನು ಸ್ಥಗಿತಗೊಳಿಸಿದರೆ, ಈ ಸಾಲ ಮತ್ತು ಹಿಂಪಡೆಯುವ ಸೌಲಭ್ಯಗಳು ಕಳೆದುಹೋಗುತ್ತವೆ. ಫ್ರೀಜ್ ಆಗಿರುವ ಪಿಪಿಎಫ್ ಖಾತೆಯ ಮರುಪಡೆಯುವಿಕೆ ವೇಳೆ ರೂ.50 ದಂಡವನ್ನು ಪಾವತಿಸಬೇಕಾಗುತ್ತದೆ. ಅಂದರೆ ನೀವು ವರ್ಷಕ್ಕೆ 550 ರೂ. ಪಾವತಿಸಬೇಕಾಗುತ್ತದೆ.
  • ಸುಕನ್ಯಾ ಸಮೃದ್ಧಿ ಯೋಜನೆ: ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರವು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ತಂದಿರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ ರೂ.250ರಿಂದ ಗರಿಷ್ಠ ರೂ.1.5 ಲಕ್ಷದವರೆಗೆ ಠೇವಣಿ ಇಡಬಹುದು. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ, ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಮತ್ತೆ ರೂ.50 ದಂಡ ಪಾವತಿಸಿ ಖಾತೆಯನ್ನು ಮರುಸ್ಥಾಪಿಸಬೇಕು. ಅಂದರೆ ಕನಿಷ್ಠ ಠೇವಣಿ ಮೊತ್ತ + ರೂ.50 ದಂಡವನ್ನು ಒಟ್ಟಿಗೆ ಪಾವತಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಖಾತೆಯನ್ನು ಅಪ್​ಡೇಟ್​ ಮಾಡದಿದ್ದಲ್ಲಿ ಮೆಚ್ಯೂರಿಟಿಯ ನಂತರವೇ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಹಿಂಪಡೆಯಬಹುದು. SSY ಖಾತೆಯನ್ನು ತೆರೆದ 21 ವರ್ಷಗಳ ನಂತರ ಅಥವಾ ಹುಡುಗಿ 18 ವರ್ಷಗಳನ್ನು ತಲುಪಿದ ನಂತರ ಖಾತೆಯು ಪಕ್ವವಾಗುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಕಾರು ಹುಡುಕುತ್ತಿದ್ದೀರಾ?: ಹಾಗಾದರೆ ಇವೇ ನೋಡಿ ಭಾರತದ ಟಾಪ್​ 10 ಕಾರುಗಳು - Cheapest Cars In India

  • ಅಮೃತ ಕಲಶ ಯೋಜನೆ: ನಮ್ಮ ದೇಶದ ಅತೀದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ತನ್ನ ಗ್ರಾಹಕರಿಗಾಗಿ 'ಅಮೃತ ಕಲಶ' ಯೋಜನೆಯನ್ನು ಪರಿಚಯಿಸಿದೆ. ಆದರೆ ಈ ಯೋಜನೆಗೆ ಸೇರಲು ಕೊನೆಯ ದಿನಾಂಕ ಮಾರ್ಚ್ 31, 2024. SBI ಫೆಬ್ರವರಿ 15, 2023 ರಂದು ಅಮೃತ್ ಕಲಶ ಯೋಜನೆಯನ್ನು ಪರಿಚಯಿಸಿತು. ಇದೊಂದು ವಿಶಿಷ್ಟವಾದ ನಿಶ್ಚಿತ ಠೇವಣಿ ಯೋಜನೆಯಾಗಿದೆ. ಇದರ ಅವಧಿ ಕೇವಲ 400 ದಿನಗಳು. ಎಸ್‌ಬಿಐ ಈ ಯೋಜನೆಯ ಮೂಲಕ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿದೆ. ಇದು ಸಾಮಾನ್ಯ ನಾಗರಿಕರಿಗೆ ಶೇಕಡಾ 7.10 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.60 ವರೆಗೆ ಬಡ್ಡಿ ನೀಡುತ್ತದೆ. ಅಂದರೆ ಈ ಅಮೃತ್ ಕಲಶ ಯೋಜನೆಯ ಮೂಲಕ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ ಸಿಗಲಿದೆ. ಫೆಬ್ರವರಿಯಲ್ಲಿ ಪ್ರಾರಂಭವಾದ ಈ ಯೋಜನೆಯನ್ನು ಮಾರ್ಚ್ 31, 2023 ರವರೆಗೆ ಲಭ್ಯವಾಗುವಂತೆ ಮಾಡಲು ನಿರ್ಧರಿಸಲಾಗಿದೆ. ಆದರೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆಯಿಂದಾಗಿ, ಈ ಯೋಜನೆಯ ಗಡುವನ್ನು ಎರಡು ಬಾರಿ ವಿಸ್ತರಿಸಲಾಯಿತು. ಈ ಯೋಜನೆಯಲ್ಲಿ ಗರಿಷ್ಠ 2 ಕೋಟಿವರೆಗೂ ಠೇವಣಿ ಇಡಬಹುದು. ಅನಿವಾಸಿ ಭಾರತೀಯರೂ ಈ ಯೋಜನೆಗೆ ಸೇರಲು ಅರ್ಹರು. ಈ ಯೋಜನೆಯಲ್ಲಿ ದಾಖಲಾದವರು ಮಾಸಿಕ, ಆರು-ಮಾಸಿಕ ಅಥವಾ ಅರೆ-ವಾರ್ಷಿಕ ಬಡ್ಡಿ ಪಾವತಿ ಅವಧಿಗಳನ್ನು ಆಯ್ಕೆ ಮಾಡಬಹುದು. ಇದರ ಆಧಾರದ ಮೇಲೆ ನಿಮ್ಮ ಖಾತೆಗೆ ನಗದು ಜಮೆಯಾಗುತ್ತದೆ. ಆದರೆ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಈ ಯೋಜನೆಯಡಿಯಲ್ಲಿ ಪಡೆದ ಆದಾಯದ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಈ ಅಮೃತ ಕಲಶ ಯೋಜನೆಯಲ್ಲಿ ಸಾಲ ಸೌಲಭ್ಯದ ಜೊತೆಗೆ ಮುಂಗಡವಾಗಿ ಹಣ ಹಿಂಪಡೆಯಲು ಅವಕಾಶವಿದೆ.
  • ಎಲೆಕ್ಟ್ರಿಕ್ ವಾಹನ ಸಾಲ ಮತ್ತು ಬಡ್ಡಿ: ಎಲೆಕ್ಟ್ರಿಕ್ ವಾಹನವನ್ನು ಸಾಲದಲ್ಲಿ ಖರೀದಿಸುವವರೂ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಏಪ್ರಿಲ್ 1, 2019 ಮತ್ತು ಮಾರ್ಚ್ 31, 2023 ರ ನಡುವೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದವರು ಐಟಿ ಕಾಯಿದೆಯ ಸೆಕ್ಷನ್ 80EEB ಅಡಿಯಲ್ಲಿ ತೆರಿಗೆ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಗರಿಷ್ಠ ರೂ.1.50 ಲಕ್ಷದವರೆಗಿನ ಸಾಲದ ಬಡ್ಡಿ ಪಾವತಿಗಳ ಮೇಲೆ ತೆರಿಗೆ ಪ್ರಯೋಜನ ಲಭ್ಯವಿದೆ. ಈ ಬಡ್ಡಿಯನ್ನು ತೆರಿಗೆದಾರರು ಕ್ಲೈಮ್ ಮಾಡಬಹುದು. ವೈಯಕ್ತಿಕ ಅಥವಾ ವ್ಯಾಪಾರ ಬಳಕೆಗಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದ ಎಲ್ಲರೂ ಈ ಪ್ರಯೋಜನವನ್ನು ಪಡೆಯಬಹುದು.
  • ಪ್ರಧಾನ ಮಂತ್ರಿ ವಯ ವಂದನ ಯೋಜನೆ: ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಯೋಜನೆಯ ನೋಂದಣಿ ಮಾರ್ಚ್ 31 ರವರೆಗೆ ತೆರೆದಿರುತ್ತದೆ. ಹಿರಿಯ ನಾಗರಿಕರು ಒಮ್ಮೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅವರು ಸ್ಥಿರ ಆದಾಯವನ್ನು ಪಡೆಯುತ್ತಾರೆ. 60 ವರ್ಷ ಮತ್ತು ಮೇಲ್ಪಟ್ಟ ಜನರು ಈ ಯೋಜನೆಗೆ ಅರ್ಹರು. ಪ್ರಸ್ತುತ, ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ 7.4 ಪ್ರತಿಶತ ವಾರ್ಷಿಕ ಬಡ್ಡಿಯನ್ನು ಪಾವತಿಸಲಾಗುತ್ತದೆ. PMVVY ಯೋಜನೆಯು 10 ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದೆ.

3. ಇನ್ನೂ ಎರಡು ದಿನ ಅವಕಾಶ!: ಮ್ಯೂಚುಯಲ್ ಫಂಡ್‌ಗಳಲ್ಲಿನ ಹೂಡಿಕೆದಾರರು ಮಾರ್ಚ್ 31ರೊಳಗೆ ಮರು-ಕೆವೈಸಿ ಪೂರ್ಣಗೊಳಿಸಬೇಕು.

  • ಬ್ಯಾಂಕ್ ಖಾತೆಗಳನ್ನು ಹೊಂದಿರುವವರು (ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ) ಮಾರ್ಚ್ 31ರೊಳಗೆ KYC ಅನ್ನು ನವೀಕರಿಸಬೇಕಾಗುತ್ತದೆ.
  • ಹಲವು ಬ್ಯಾಂಕ್‌ಗಳು ಸ್ವಂತ ಮನೆ ಖರೀದಿಸಲು ಬಯಸುವವರಿಗೆ ವಿಶೇಷ ರಿಯಾಯಿತಿಯೊಂದಿಗೆ ಮಾರ್ಚ್ 31ರವರೆಗೆ ಸಾಲವನ್ನು ನೀಡುತ್ತಿವೆ. ಆದ್ದರಿಂದ ಈ ಅವಕಾಶವನ್ನು ಬಳಸುವುದು ಉತ್ತಮ.

ಇದನ್ನೂ ಓದಿ: ಏಪ್ರಿಲ್ 1ರಿಂದ ಜಾರಿಗೆ ಬರುವ ಹೊಸ ತೆರಿಗೆ ನಿಯಮಗಳು ಯಾವುವು? - New Income Tax Rules

ETV Bharat Logo

Copyright © 2024 Ushodaya Enterprises Pvt. Ltd., All Rights Reserved.