ETV Bharat / business

ಭಾರತ ವಿದೇಶಗಳಲ್ಲಿ ಬಂಗಾರವನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದೇಕೆ?: ಏನಿದು ಭಾರತದ ಚಿನ್ನದ ನಿಕ್ಷೇಪದ ಕತೆ? - Why does the RBI store its gold - WHY DOES THE RBI STORE ITS GOLD

ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಇಟ್ಟಿದ್ದ 100 ಮೆಟ್ರಿಕ್ ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ. ಈ ಮೂಲಕ ಭಾರತದ ಚಿನ್ನದ ಸಂಗ್ರಹವೀಗ 827 ಟನ್​​ಗಳಿಗೆ ಏರಿಕೆ ಕಂಡಿದೆ. ಇದೆಲ್ಲ ಸರಿ ಭಾರತವು ತನ್ನ ಚಿನ್ನದ ನಿಕ್ಷೇಪವನ್ನು ವಿದೇಶಗಳಲ್ಲಿ ಏಕೆ ಸಂಗ್ರಹಿಸಿಡುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಾರತವು ತನ್ನ ಚಿನ್ನದ ನಿಕ್ಷೇಪಗಳನ್ನು ಸಂಗ್ರಹಿಸುವ ವಿದೇಶಿ ಸಂಗ್ರಹಾಗಾರಗಳು ಯಾವುವು? ಪ್ರಮುಖ ವಿದೇಶಿ ಚಿನ್ನದ ಸಂಗ್ರಹಾಲಯಗಳು ಯಾವುವು ಮತ್ತು ಅವು ಹೇಗೆ ಭದ್ರತೆ ಒದಗಿಸುತ್ತವೆ. ಈ ಬಗ್ಗೆ ETV ಭಾರತ್‌ನ ಅರೂನಿಮ್ ಭುಯಾನ್ ವಿವರಣೆ ನೀಡಿದ್ದು ಹೀಗೆ

ಏನಿದು ಭಾರತದ ಚಿನ್ನದ ನಿಕ್ಷೇಪದ ಕತೆ
ಭಾರತ ವಿದೇಶಗಳಲ್ಲಿ ಬಂಗಾರವನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದೇಕೆ (ETV Bharat)
author img

By Aroonim Bhuyan

Published : Jun 1, 2024, 5:15 PM IST

ನವದೆಹಲಿ: 2023-24ನೇ ಹಣಕಾಸು ವರ್ಷದಲ್ಲಿ ಭಾರತವು ಇಂಗ್ಲೆಂಡ್​( ಯುನೈಟೆಡ್​​​​ ಕಿಂಗ್ಡಮ್​​ನಲ್ಲಿ) ಸಂಗ್ರಹಿಸಿಟ್ಟಿದ್ದ 100 ಮೆಟ್ರಿಕ್ ಟನ್ ಚಿನ್ನದ ನಿಧಿಯನ್ನು ದೇಶೀಯ ಸಂಗ್ರಹಾಲಯಕ್ಕೆ ವರ್ಗಾಯಿಸಿದೆ ಎಂದು ಸುದ್ದಿಯಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ನ ಚಿನ್ನದ ನಿಕ್ಷೇಪಗಳ ಒಂದು ಭಾಗವಾಗಿದೆ. ಕೆಲವೊಂದಷ್ಟು ಬಂಗಾರವನ್ನು ಆರ್​ಬಿಐ ವಿದೇಶಿ ಸಂಗ್ರಹಾಲಯದಲ್ಲಿ ಸಂಗ್ರಹ ಮಾಡಿದೆ.

ಗುರುವಾರ ಬಿಡುಗಡೆಯಾದ FY24 ರ ಆರ್‌ಬಿಐ ವಾರ್ಷಿಕ ವರದಿ ಪ್ರಕಾರ, ಭಾರತದಲ್ಲಿ 308 ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಬಿಡುಗಡೆ ಮಾಡಲಾದ ನೋಟುಗಳಿಗೆ ಸಮಾನವಾಗಿ ಸಂಗ್ರಹ ಮಾಡಿಟ್ಟುಕೊಳ್ಳಲಾಗಿದೆ. 100.28 ಟನ್‌ಗಳು ಸ್ಥಳೀಯವಾಗಿ ಆರ್​ಬಿಐನ ಆಸ್ತಿಯಾಗಿದೆ. ಒಟ್ಟಾರೆ ಚಿನ್ನದ ನಿಕ್ಷೇಪದಲ್ಲಿ 413.79 ಮೆಟ್ರಿಕ್ ಟನ್‌ಗಳನ್ನು ವಿದೇಶಿ ಸಂಗ್ರಹಾಲಯಗಳಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ. ಪಿಟಿಐ ವರದಿ ಮಾಡಿರುವ ಪ್ರಕಾರ, ಸ್ಥಳೀಯವಾಗಿ ಸಂಗ್ರಹಿಸಿದ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದಲ್ಲಿ ಹೆಚ್ಚಿನ ಭದ್ರತಾ ಕಮಾನುಗಳು ಮತ್ತು ಸೌಲಭ್ಯಗಳಲ್ಲಿ ಸಂಗ್ರಹಿಸಲಾಗಿದೆ.

ಹಾಗಾದರೆ, ಚಿನ್ನದ ಮೀಸಲು ಎಂದರೇನು? - ಕೇಂದ್ರೀಯ ಬ್ಯಾಂಕುಗಳು ಅಂತಹ ಮೀಸಲುಗಳನ್ನು ಏಕೆ ಇಟ್ಟುಕೊಳ್ಳಬೇಕು?:

ಚಿನ್ನದ ಮೀಸಲು ಎಂಬುದು ರಾಷ್ಟ್ರೀಯ ಕೇಂದ್ರೀಯ ಬ್ಯಾಂಕ್ ತನ್ನ ಬಳಿ ಭದ್ರತೆಗಾಗಿ ಇಟ್ಟುಕೊಂಡಿರುವ ಚಿನ್ನದ ದಾಸ್ತಾನಾಗಿದೆ. ಇದು ಮುಖ್ಯವಾಗಿ ಠೇವಣಿದಾರರು, ನೋಟು ಹೊಂದಿರುವವರು ಅಥವಾ ವ್ಯಾಪಾರ ವಿನಿಮಯಕ್ಕಾಗಿ ಈ ಚಿನ್ನದ ಸಂಗ್ರಹ ಮಾಡಲಾಗುತ್ತದೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ WGC ಅಂದಾಜಿನ ಪ್ರಕಾರ, ಇದುವರೆಗೆ ಗಣಿಗಾರಿಕೆ ಮಾಡಿದ ಎಲ್ಲಾ ಚಿನ್ನದ ಲೆಕ್ಕ ಹಾಕಿದರೆ 2019ರವರೆಗೆ ಒಟ್ಟು 190,040 ಮೆಟ್ರಿಕ್ ಟನ್‌ಗಳಷ್ಟಿದೆ. ಆದರೆ, ಇತರ ಸ್ವತಂತ್ರ ಅಂದಾಜುಗಳ ಪ್ರಕಾರ ಇದು ಶೇ 20 ಪ್ರತಿಶತದಷ್ಟು ಬದಲಾಗುತ್ತದೆ. ಪ್ರತಿ ಟ್ರಾಯ್ ಔನ್ಸ್‌ಗೆ $1,250 (ಪ್ರತಿ ಗ್ರಾಂಗೆ $40), ಆಗಸ್ಟ್ 16, 2017ರ ಪ್ರಕಾರ ಅಂದಾಜು ಮಾಡಿದ ಪ್ರಕಾರ, ಒಂದು ಮೆಟ್ರಿಕ್ ಟನ್ ಚಿನ್ನವು ಅಂದಾಜು $40.2 ಮಿಲಿಯನ್ ಮೌಲ್ಯವನ್ನು ಹೊಂದಿದೆ. ಇದುವರೆಗೆ ಗಣಿಗಾರಿಕೆ ಮಾಡಿದ ಎಲ್ಲಾ ಚಿನ್ನದ ಒಟ್ಟು ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ. ಆ ಮೌಲ್ಯಮಾಪನದ ಪ್ರಕಾರ WGC 2017 ಅಂದಾಜಿಸಿದಂತೆ $7.5 ಟ್ರಿಲಿಯನ್ ಡಾಲರ್​​​ ಮೀರುತ್ತದೆಯಂತೆ. ( ಇದು ಭಾರತೀಯ ಲೆಕ್ಕದಲ್ಲಿ 62,57,83,12,50,00,000.00 ಅಂದರೆ 6ಕೋಟಿ 25 ಲಕ್ಷದ 78 ಸಾವಿರ ಕೋಟಿ ಮೌಲ್ಯ ಎಂದು ಅಂದಾಜಿಸಲಾಗಿದೆ)

WGC ಪ್ರಕಾರ ಚಿನ್ನವನ್ನು ಖರೀದಿಸುತ್ತಿರುವ ಅಗ್ರ ಐದು ಕೇಂದ್ರೀಯ ಬ್ಯಾಂಕ್‌ಗಳಲ್ಲಿ RBI ಕೂಡಾ ಒಂದು. ಸಿಂಗಾಪುರದ ಮಾನಿಟರಿ ಅಥಾರಿಟಿ, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಮತ್ತು ಟರ್ಕಿಯ ಸೆಂಟ್ರಲ್ ಬ್ಯಾಂಕ್ ನಂತಹ ಹಲವಾರು ಕೇಂದ್ರ ಬ್ಯಾಂಕ್‌ಗಳು ಡಾಲರ್‌ನ ಸವಕಳಿ, ಋಣಾತ್ಮಕ ಬಡ್ಡಿದರಗಳು ಮತ್ತು ತಮ್ಮ ವಿದೇಶಿ ಮೀಸಲನ್ನು ಸರಿ ಮಾಡಲು ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಕೋನದಿಂದ ಚಿನ್ನವನ್ನು ಖರೀದಿಸುತ್ತಿವೆ.

ಭಾರತದ ಬಳಿ ಇರುವ ಚಿನ್ನದ ಸಂಗ್ರಹವೆಷ್ಟು?: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಮೇ 3, 2024 ರಂತೆ, ಸಾರ್ವಭೌಮ ಚಿನ್ನದ ಸಂಗ್ರಹದಲ್ಲಿ ಭಾರತವು ಒಂಬತ್ತನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಅಗ್ರಸ್ಥಾನದಲ್ಲಿದೆ. ಅಮೆರಿಕದ ಬಳಿ 8,133.5 ಮೆಟ್ರಿಕ್ ಟನ್‌ಗಳಷ್ಟು ಚಿನ್ನದ ಸಂಗ್ರಹವಿದೆ. ಅದರ ವಿದೇಶೀ ವಿನಿಮಯ ಮೀಸಲಿನ ಶೇ 71.3 ರಷ್ಟನ್ನು ಒಳಗೊಂಡಿವೆ. ಮತ್ತೊಂದೆಡೆ, ಭಾರತದ ಚಿನ್ನದ ಸಂಗ್ರಹದ ಮೊತ್ತವು 827.69 ಮೆಟ್ರಿಕ್ ಟನ್‌ಗಳಾಗಿದ್ದು, ಅದರ ವಿದೇಶೀ ವಿನಿಮಯ ಮೀಸಲಿನ ಶೇ 8.9ರಷ್ಟನ್ನು ಒಳಗೊಂಡಿದೆ. ಜರ್ಮನಿ, ಇಟಲಿ, ಫ್ರಾನ್ಸ್, ರಷ್ಯಾ, ಚೀನಾ, ಸ್ವಿಟ್ಜರ್ಲೆಂಡ್ ಮತ್ತು ಜಪಾನ್ ಚಿನ್ನದ ಸಂಗ್ರಹದಲ್ಲಿ ಭಾರಿ ಮುಂದಿವೆ.

ಆರ್‌ಬಿಐ ತನ್ನ ಚಿನ್ನವನ್ನು ಸಂಗ್ರಹಾಗಾರದಲ್ಲಿಡುವುದೇಕೆ? : ಇತರ ದೇಶಗಳಂತೆ ಭಾರತವು ಬಾರಿ ಪ್ರಮಾಣದ ಚಿನ್ನದ ಸಂಗ್ರಹವನ್ನು ಹೊಂದಿದೆ. ಈ ಮೂಲಕ ಭಾರತವು ತನ್ನ ಆರ್ಥಿಕ ಸ್ಥಿತಿಯನ್ನು ಸುಭದ್ರವಾಗಿ ಇಟ್ಟುಕೊಳ್ಳುವುದರತ್ತ ಗಮನ ಹರಿಸಿದೆ. ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಚಿನ್ನದ ಸಂಗ್ರಹ ಮಾಡುವ ಮೂಲಕ, ಭಾರತವು ಭೌಗೋಳಿಕ ರಾಜಕೀಯ ಅಸ್ಥಿರತೆ ಅಥವಾ ಪ್ರಾದೇಶಿಕ ಘರ್ಷಣೆಗಳಿಗೆ ಸಂಬಂಧಿಸಿದ ಅಪಾಯವನ್ನು ತಗ್ಗಿಸಲು ಸದಾ ಸನ್ನದತೆಯಲ್ಲಿರಲು ಬಯಸುತ್ತದೆ. ಅದು ತನ್ನ ಸ್ವಂತ ಗಡಿಯೊಳಗೆ ಮಾತ್ರ ಬಂಗಾರ ಸಂಗ್ರಹಿಸಿಟ್ಟರೆ ಅದರ ಸುರಕ್ಷತೆ ಮತ್ತು ಪ್ರವೇಶದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ವಿದೇಶಿ ಸಂಗ್ರಹಾಗಾರಗಳಲ್ಲೂ ಚಿನ್ನವನ್ನ ಶೇಖರಣೆ ಮಾಡಿಟ್ಟಿದೆ.

ಲಂಡನ್, ನ್ಯೂಯಾರ್ಕ್ ಮತ್ತು ಜ್ಯೂರಿಚ್‌ನಂತಹ ಪ್ರಮುಖ ಹಣಕಾಸು ಕೇಂದ್ರಗಳಲ್ಲಿ ಇರುವ ಚಿನ್ನವನ್ನು ಅಂತಾರಾಷ್ಟ್ರೀಯ ವಹಿವಾಟುಗಳಿಗೆ ಸುಲಭವಾಗಿ ಪ್ರವೇಶಿಸಬಹುದು. ಈ ನಗರಗಳು ಚಿನ್ನದ ವ್ಯಾಪಾರಕ್ಕೆ ಪ್ರಮುಖ ಕೇಂದ್ರಗಳಾಗಿವೆ, ಇತರ ದೇಶಗಳಿಗೆ ತಮ್ಮ ಚಿನ್ನವನ್ನು ನಗದು ರೂಪದಲ್ಲಿ ಪರಿವರ್ತಿಸಲು ಅಥವಾ ಸಾಲಗಳು ಮತ್ತು ಇತರ ಹಣಕಾಸು ಸಾಧನಗಳಿಗೆ ಮೇಲಾಧಾರವಾಗಿ ಬಳಸಲು ಚಿನ್ನ ಸುಲಭದ ಮಾರ್ಗವಾಗಿದೆ. ಭಾರತವು ತನ್ನ ಚಿನ್ನದ ಸಂಗ್ರಹದ ಬಹು ಭಾಗವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ನಲ್ಲಿ ಸಂಗ್ರಹಿಸಿಡಲು ಆಯ್ಕೆ ಮಾಡಿಕೊಂಡಿದೆ.

ವಸಾಹತುಶಾಹಿ ಯುಗದಿಂದಲೂ ಭಾರತವು ಯುಕೆ ಅಂದರೆ ಇಂಗ್ಲೆಂಡ್​​​ ಜತೆ ಐತಿಹಾಸಿಕ ಸಂಬಂಧಗಳನ್ನು ಹೊಂದಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಚಿನ್ನದ ಸಂಗ್ರಹದ ವಿಶ್ವಾಸಾರ್ಹ ಪಾಲಕನಾಗಿ ದೀರ್ಘಕಾಲದ ಖ್ಯಾತಿಯನ್ನು ಹೊಂದಿದೆ, ಇದು ತನ್ನ ನಿಕ್ಷೇಪಗಳ ಒಂದು ಭಾಗವನ್ನು ಅಲ್ಲಿ ಸಂಗ್ರಹಿಸುವ ಭಾರತದ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದು. ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿರುವ ಸಂಗ್ರಹಾಗಾರಗಳು ಸಮಗ್ರ ಕಣ್ಗಾವಲು ವ್ಯವಸ್ಥೆಗಳನ್ನು ಹೊಂದಿದೆ, ಬಲವರ್ಧಿತ ಬಾಗಿಲುಗಳು ಮತ್ತು ಕಟ್ಟುನಿಟ್ಟಾದ ಪ್ರವೇಶ ಪ್ರೋಟೋಕಾಲ್‌ಗಳು ಸೇರಿದಂತೆ ವಿವಿಧ ಭದ್ರತಾ ಕ್ರಮಗಳಿಂದ ರಕ್ಷಿಸಲಾಗಿದೆ.

ಬ್ಯಾಂಕ್ ಫಾರ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ಸ್ ಒಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದ್ದು, ಇದು ಸದಸ್ಯ ಕೇಂದ್ರ ಬ್ಯಾಂಕ್‌ಗಳ ಒಡೆತನದಲ್ಲಿದೆ. ಕೇಂದ್ರೀಯ ಬ್ಯಾಂಕುಗಳಿಗೆ ಬ್ಯಾಂಕ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಅಂತಾರಾಷ್ಟ್ರೀಯ ವಿತ್ತೀಯ ಮತ್ತು ಆರ್ಥಿಕ ಸಹಕಾರವನ್ನು ಬೆಳೆಸುವುದು ಇದರ ಪ್ರಾಥಮಿಕ ಗುರಿಯಾಗಿದೆ. 1929 ರಲ್ಲಿ ಅದರ ಸ್ಥಾಪನೆಯಾಗಿದೆ. ಮೊದಲನೆಯ ಮಹಾಯುದ್ಧದ ಯುದ್ಧ ಪರಿಹಾರಗಳ ಇತ್ಯರ್ಥವನ್ನು ಮೇಲ್ವಿಚಾರಣೆ ಮಾಡುವುದು ಇದರ ಆರಂಭಿಕ ಉದ್ದೇಶವಾಗಿತ್ತು.

BIS ತನ್ನ ಸಭೆಗಳು, ಕಾರ್ಯಕ್ರಮಗಳು ಮತ್ತು ಬಾಸೆಲ್ ಪ್ರಕ್ರಿಯೆಯ ಮೂಲಕ ತನ್ನ ಕಾರ್ಯವನ್ನು ಮಾಡುತ್ತದೆ. ಜಾಗತಿಕ ಆರ್ಥಿಕ ಸ್ಥಿರತೆಯನ್ನು ಅನುಸರಿಸುವ ಅಂತಾರಾಷ್ಟ್ರೀಯ ಗುಂಪುಗಳನ್ನು ಆಯೋಜಿಸುತ್ತದೆ ಮತ್ತು ಅವರ ಪರಸ್ಪರ ಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದು ಬ್ಯಾಂಕಿಂಗ್ ಸೇವೆಗಳನ್ನು ಸಹ ಒದಗಿಸುತ್ತದೆ, ಆದರೆ ಕೇಂದ್ರೀಯ ಬ್ಯಾಂಕುಗಳು ಮತ್ತು ಇತರ ಅಂತರರಾಷ್ಟ್ರೀಯಗಳಿಗೆ ಮಾತ್ರ ಇದು ಬ್ಯಾಂಕಿಂಗ್​ ಸೇವೆ ನೀಡುತ್ತದೆ.

ಇದನ್ನು ಓದಿ: ಇಂಗ್ಲೆಂಡ್​​​​​​ನಲ್ಲಿದ್ದ 1 ಟನ್ ಚಿನ್ನ ಮರಳಿ ತಂದ ಭಾರತ: ಸ್ಥಳೀಯ ಖಜಾನೆಗೆ ರವಾನೆ; 822 ಮೆಟ್ರಿಕ್ ಟನ್​ಗೆ ಏರಿದ ಬಂಗಾರ ಸಂಗ್ರಹ! - India brings back gold from UK

ETV Bharat Logo

Copyright © 2025 Ushodaya Enterprises Pvt. Ltd., All Rights Reserved.