ETV Bharat / business

ರಕ್ಷಣಾ ವಲಯದಲ್ಲಿ ದೇಶೀಯ ಕಂಪನಿಗಳಿಗೆ ಬಲ: ಆಮದು ತಗ್ಗಿಸಿ ಬಲಿಷ್ಠ ರಾಷ್ಟ್ರಗಳಿಗೆ ಪರಿಕರ ರಫ್ತು - Defense Manufacturing - DEFENSE MANUFACTURING

ದೇಶದ ರಕ್ಷಣಾ ಉಪಕರಣಗಳನ್ನು ಉತ್ಪಾದನೆ ಮಾಡುವ ಕಂಪನಿಗಳು ಆರ್ಥಿಕವಾಗಿ ಬಲಿಷ್ಠವಾಗುತ್ತಿವೆ. ಸ್ವದೇಶವಲ್ಲದೇ, ವಿದೇಶಗಳಿಗೂ ಉಪಕರಣಗಳನ್ನು ರಫ್ತು ಮಾಡುತ್ತಿವೆ.

ರಕ್ಷಣಾ ವಲಯದಲ್ಲಿ ದೇಶೀಯ ಕಂಪನಿಗಳಿಗೆ ಬಲ
ರಕ್ಷಣಾ ವಲಯದಲ್ಲಿ ದೇಶೀಯ ಕಂಪನಿಗಳಿಗೆ ಬಲ
author img

By ETV Bharat Karnataka Team

Published : Apr 3, 2024, 8:17 PM IST

ಭಾರತದ ಬದಲಾಗಿದೆ. ಇದು ರಕ್ಷಣಾ ವಲಯದ ಉತ್ಪಾದನೆ ಕಂಡಾಗ ಅನಿಸುತ್ತದೆ. ಸಾರ್ವಜನಿಕ ವಲಯಕ್ಕೆ ಸೇರಿದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಕಳೆದ ಹಣಕಾಸು ವರ್ಷಕ್ಕಿಂತ ಈ ಬಾರಿ ಅಧಿಕ ಪಟ್ಟು ರಕ್ಷಣಾ ಪರಿಕರಗಳ ಉತ್ಪಾದನೆಗೆ ಆರ್ಡರ್​ ಪಡೆದಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು, ಆಮದಿಗಿಂತ ರಫ್ತು ಹೆಚ್ಚಾಗುತ್ತಿರುವುದನ್ನು ತೋರಿಸುತ್ತದೆ.

ಬಿಡಿಎಲ್​ ಕಳೆದ ವರ್ಷ 2,350 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳ ತಯಾರಿಕೆ ಒಪ್ಪಂದ ಮಾಡಿಕೊಂಡಿತ್ತು. ಈ ವರ್ಷ ಅದು 19,468 ಕೋಟಿಯಷ್ಟು ಏರಿಕೆ ಕಂಡಿದೆ. ಕಳೆದ ವರ್ಷಕ್ಕಿಂತ ಇದು ಹಲವು ಪಟ್ಟು ಹೆಚ್ಚಾಗಿದೆ. ಇದರಲ್ಲಿ ರಫ್ತು ಆರ್ಡರ್​ಗಳು 2,500 ಕೋಟಿ ರೂಪಾಯಿವರೆಗೆ ಇರುವುದು ಗಮನಾರ್ಹ. ಬಿಡಿಎಲ್ ಮಾತ್ರವಲ್ಲದೇ, ರಕ್ಷಣಾ ಕ್ಷೇತ್ರಕ್ಕೆ ಸೇರಿದ ಹಲವು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆದಾಯ ಮತ್ತು ಲಾಭ ದಾಖಲಿಸುತ್ತಿವೆ.

ಈ ಹಿಂದೆ ದೇಶವು ರಕ್ಷಣಾ ಸಾಧನಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಹಲವಾರು ದಶಕಗಳಿಂದ ರಷ್ಯಾ, ಇಸ್ರೇಲ್ ಮತ್ತು ಫ್ರಾನ್ಸ್‌ನಂತಹ ದೇಶಗಳಿಂದ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಯುದ್ಧನೌಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಮೇಕ್​ ಇನ್​ ಇಂಡಿಯಾದ ಪ್ರಭಾವದಿಂದ ಸ್ವದೇಶಿ ನಿರ್ಮಾಣ ದುಪ್ಪಟ್ಟಾಗಿದೆ.

₹21 ಸಾವಿರ ಕೋಟಿಗೂ ಅಧಿಕ ರಫ್ತು: ಕಳೆದ 4-5 ವರ್ಷಗಳಿಂದ ರಕ್ಷಣಾ ಉತ್ಪನ್ನಗಳ ರಫ್ತು ವೇಗವಾಗಿ ಹೆಚ್ಚುತ್ತಿದೆ. 2023-24ರಲ್ಲಿ ದೇಶದಿಂದ 21,083 ಕೋಟಿ ರೂಪಾಯಿ ಮೌಲ್ಯದಷ್ಟು ರಫ್ತು ದಾಖಲಾಗಿದೆ. 2022-23ರಲ್ಲಿ ರಕ್ಷಣಾ ರಫ್ತು 15,918 ಕೋಟಿಗಳಾಗಿತ್ತು. ರಕ್ಷಣಾ ಸಾಧನಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಭಾರತ ರಫ್ತು ಮಾಡುವಷ್ಟು ಬಲಿಷ್ಠವಾಗಿ ಬೆಳೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕೇಂದ್ರ ಸರ್ಕಾರದ ಬೆಂಬಲ, ದೇಶೀಯ ಕಂಪನಿಗಳಿಂದ ಹೊಸ ತಂತ್ರಜ್ಞಾನ ಬಳಕೆ, ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆ, ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಕಾರಣಗಳಿಂದಾಗಿ ಈ ಬದಲಾವಣೆ ಗೋಚರವಾಗಿದೆ.

ಇತರ ದೇಶಗಳಿಗೆ ಪೂರೈಕೆ: ಆಮದನ್ನು ಕಡಿಮೆ ಮಾಡಿಕೊಳ್ಳುವ ಜತೆಗೆ ದೇಶಿ ನಿರ್ಮಿತ ರಕ್ಷಣಾ ಉತ್ಪನ್ನಗಳು ವಿವಿಧ ದೇಶಗಳಿಗೆ ರಫ್ತಾಗುತ್ತಿವೆ. ಈಜಿಪ್ಟ್, ಇಟಲಿ, ಯುಎಇ, ಭೂತಾನ್, ಇಥಿಯೋಪಿಯಾ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ. ಕೊಲ್ಲಿ ರಾಷ್ಟ್ರಗಳಿಗೆ ರಕ್ಷಣಾ ಉತ್ಪನ್ನಗಳ ರಫ್ತು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜೆಫರೀಸ್ ಕಂಪನಿ ಹೇಳಿದೆ.

ಗಲ್ಫ್ ರಾಷ್ಟ್ರಗಳು ಅಮೆರಿಕ, ಚೀನಾ, ರಷ್ಯಾ ಮತ್ತು ಫ್ರಾನ್ಸ್‌ನಂತಹ ದೇಶಗಳಿಂದ 11 ಬಿಲಿಯನ್​ ಡಾಲರ್‌ಗಳಿಗಿಂತ ಹೆಚ್ಚು (ಸುಮಾರು 91,500 ಕೋಟಿ ರೂಪಾಯಿ) ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಭಾರತವು ಆ ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುವ ಸಾಧ್ಯತೆಯಿದೆ. ಭಾರತದಿಂದ ಪ್ರಸ್ತುತ, ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು ಮತ್ತು ಗಸ್ತು ಹಡಗುಗಳನ್ನು ರಫ್ತು ಮಾಡಲಾಗುತ್ತಿದೆ. ಭವಿಷ್ಯದಲ್ಲಿ, ಯುದ್ಧವಿಮಾನಗಳು ಮತ್ತು ಯುದ್ಧನೌಕೆಗಳನ್ನು ಸಹ ರಫ್ತು ಮಾಡುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್, ಬಿಇಎಲ್, ಮಜಗಾಂವ್ ಶಿಪ್‌ಯಾರ್ಡ್, ಬಿಡಿಎಲ್, ಕೊಚ್ಚಿನ್ ಶಿಪ್‌ಯಾರ್ಡ್, ಎಲ್ ಆಂಡ್ ಟಿ, ಭಾರತ್ ಫೋರ್ಜ್ ಕಂಪನಿಗಗಳಿಗೆ ಸರ್ಕಾರಿ ಮತ್ತು ಖಾಸಗಿ ವಲಯದ ಸಂಸ್ಥೆಗಳು ಹಾಗೂ ಸಣ್ಣ ಮತ್ತು ಮಧ್ಯಮ ರಕ್ಷಣಾ ವಲಯದ ಸಂಸ್ಥೆಗಳಿಂದ ಹೆಚ್ಚಿನ ಆರ್ಡರ್‌ಗಳು ಬರುತ್ತಿವೆ. ಇದು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರಫ್ತಿನ ಶಕ್ತಿಯನ್ನೂ ದ್ವಿಗುಣಗೊಳಿಸಿವೆ.

ರಕ್ಷಣಾ ಉತ್ಪಾದನಾ ಕಂಪನಿಗಳನ್ನು ಹೆಚ್ಚು ಹೊಂದಿರುವ ನಗರಗಳಲ್ಲಿ ಹೈದರಾಬಾದ್ ಒಂದಾಗಿದೆ. ಇಲ್ಲಿ ಮಿಧಾನಿ, ಬಿಡಿಎಲ್, ಆರ್ಡನೆನ್ಸ್ ಫ್ಯಾಕ್ಟರಿ, ಖಾಸಗಿ ವಲಯದ ಬಿಇಎಲ್ ಘಟಕಗಳಲ್ಲದೆ, ಅಸ್ಟ್ರಾ ಮೈಕ್ರೋವೇವ್, ಭಾರತ್ ಫೋರ್ಜ್​ನ ಅಂಗಸಂಸ್ಥೆಗಳು, ಇತರ ಕಂಪನಿಗಳು ಇಲ್ಲಿ ನೆಲೆಗೊಂಡಿವೆ. ರಕ್ಷಣಾ ಉತ್ಪನ್ನಗಳ ಉತ್ಪಾದನಾ ಹೆಚ್ಚಳವು ಈ ಕಂಪನಿಗಳಿಗೆ ಹೆಚ್ಚಿನ ಆದಾಯ ಮತ್ತು ಲಾಭಗಳನ್ನು ತಂದುಕೊಡಲಿದೆ ಎಂದು ಜೆಫರೀಸ್ ಭವಿಷ್ಯ ನುಡಿದಿದೆ.

ಇದನ್ನೂ ಓದಿ: ಮುಂಬೈ ಷೇರು ಮಾರುಕಟ್ಟೆ ಇಂದು: ಇಳಿಕೆಯಲ್ಲಿ ದಿನದ ವಹಿವಾಟು ಮುಗಿಸಿದ ಸೆನ್ಸೆಕ್ಸ್,​ ನಿಫ್ಟಿ - Mumbai Share Market

ETV Bharat Logo

Copyright © 2025 Ushodaya Enterprises Pvt. Ltd., All Rights Reserved.