ETV Bharat / business

ಕಚ್ಚಾ ತೈಲ ಬೆಲೆ ಇಳಿಕೆ: ಕೇಂದ್ರ ಸರ್ಕಾರಕ್ಕೆ ಈ ವರ್ಷ ₹60 ಸಾವಿರ ಕೋಟಿ ಉಳಿತಾಯ - Crude Oil Prices Fall - CRUDE OIL PRICES FALL

ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ ಕೇಂದ್ರ ಸರ್ಕಾರಕ್ಕೆ 60 ಸಾವಿರ ಕೋಟಿ ರೂ. ಲಾಭವಾಗಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ANI

Published : Sep 27, 2024, 2:04 PM IST

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಕಚ್ಚಾ ತೈಲ ಆಮದಿನಲ್ಲಿ ಸರಕಾರಕ್ಕೆ 60,000 ಕೋಟಿ ರೂ.ಗಳಷ್ಟು ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದಾಜಿನ ಪ್ರಕಾರ, ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್​ಗೆ 1 ಡಾಲರ್ ಕುಸಿತವಾದಲ್ಲಿ ಭಾರತದ ವಾರ್ಷಿಕ ಆಮದು ವೆಚ್ಚ ಸುಮಾರು 13,000 ಕೋಟಿ ರೂ.ಗಳಷ್ಟು ಕಡಿಮೆಯಾಗುತ್ತದೆ.

ಈ ಹಣಕಾಸು ವರ್ಷದಲ್ಲಿ ಸರಾಸರಿ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ 84 ಡಾಲರ್ ಆಗಿರಲಿದೆ ಎಂದು 2024 ರ ಆರ್ಥಿಕ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಆದರೆ ಪ್ರಸ್ತುತ ಕಚ್ಚಾ ಬೆಲೆಗಳು ಇದಕ್ಕಿಂತಲೂ ಕೆಳಗಿಳಿದಿದ್ದು, ಈಗ ಬ್ಯಾರೆಲ್​ಗೆ 70 ರಿಂದ 75 ಡಾಲರ್ ವ್ಯಾಪ್ತಿಯಲ್ಲಿ ಹೊಯ್ದಾಡುತ್ತಿವೆ. ಇದೇ ವ್ಯಾಪ್ತಿಯಲ್ಲಿ ಬೆಲೆಗಳು ಸ್ಥಿರಗೊಂಡರೆ, ಈ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಭಾರತವು ಕಚ್ಚಾ ತೈಲ ಆಮದಿನಲ್ಲಿ ಗಣನೀಯ ಉಳಿತಾಯ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

"ಭಾರತ ಸರ್ಕಾರವು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 85 ಯುಎಸ್​ ಡಾಲರ್ ಬೆಲೆಯನ್ನು ನಿಗದಿಪಡಿಸಿದೆ. ಆದರೆ ಪ್ರಸ್ತುತ ಬೆಲೆಗಳು 70 ರಿಂದ 72 ಯುಎಸ್​ ಡಾಲರ್​ಗೆ ಹತ್ತಿರದಲ್ಲಿವೆ. ಇದು ಗಮನಾರ್ಹ ಲಾಭವನ್ನು ಸೂಚಿಸುತ್ತದೆ. 2025 ರಲ್ಲಿಯೂ ಕಚ್ಚಾ ತೈಲ ಬೆಲೆಗಳು 80 ಡಾಲರ್​ಗಿಂತ ಕಡಿಮೆ ಮಟ್ಟದಲ್ಲಿಯೇ ಇರಲಿವೆ ಎಂದು ನಿರೀಕ್ಷಿಸಲಾಗಿದೆ. ಇದು ಮಾರ್ಚ್ 2025 ರವರೆಗೆ ಹೀಗೆಯೇ ಮುಂದುವರಿದರೆ ಭಾರತೀಯ ಆರ್ಥಿಕತೆಗೆ ಬಹುದೊಡ್ಡ ಲಾಭವಾಗಲಿದೆ" ಎಂದು ಕೆಡಿಯಾ ಅಡ್ವೈಸರಿ ನಿರ್ದೇಶಕ ಅಜಯ್ ಕೇಡಿಯಾ ಎಎನ್ಐ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹೇಳಿದರು.

ಭಾರತದ ವಿದೇಶಿ ವಿನಿಮಯ ಮೀಸಲುಗಳ ಗಮನಾರ್ಹ ಭಾಗವನ್ನು ಕಚ್ಚಾ ತೈಲವನ್ನು ಖರೀದಿಸಲು ಬಳಸಲಾಗುತ್ತದೆ. ಆದರೆ ಒಂದೊಮ್ಮೆ ಆಮದು ವೆಚ್ಚಗಳು ಕಡಿತಗೊಂಡರೆ ವಿಶ್ವದ ಇತರ ಪ್ರಮುಖ ಕರೆನ್ಸಿಗಳ ಎದುರು ಭಾರತೀಯ ರೂಪಾಯಿ ಬಲವಾಗಲಿದೆ. ಪ್ರಸ್ತುತ, ಭಾರತೀಯ ರೂಪಾಯಿ ಯುಎಸ್ ಡಾಲರ್ ವಿರುದ್ಧ 83.60 ರಲ್ಲಿ ಸ್ಥಿರವಾಗಿದೆ.

"ಕಚ್ಚಾ ತೈಲ ಬೆಲೆಗಳು ಬ್ಯಾರೆಲ್​ಗೆ 75 ಡಾಲರ್​ಗೆ ಇಳಿದಿರುವುದರಿಂದ ಭಾರತದ ಆರ್ಥಿಕತೆಗೆ ಗಮನಾರ್ಹ ಲಾಭವಾಗಲಿದೆ. ಇದರಿಂದ ವಾರ್ಷಿಕವಾಗಿ ಆಮದು ವೆಚ್ಚವು 15 ರಿಂದ 18 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ. ಜೊತೆಗೆ ಹಣದುಬ್ಬರ ಕೂಡ ಕಡಿಮೆಯಾಗಲಿದ್ದು, ಇತರ ಪ್ರಮುಖ ಯೋಜನಾ ವೆಚ್ಚಗಳಿಗೆ ಹಣಕಾಸು ಒದಗಿಸಲು ಅನುಕೂಲವಾಗಲಿದೆ" ಎಂದು ಕೇಡಿಯಾ ಹೇಳಿದರು.

ಇದನ್ನೂ ಓದಿ: ಮೂರು ದಿನಗಳಲ್ಲಿ ಮುಂಗಾರು ಅಂತ್ಯ: ರಾಜ್ಯದ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - Karnataka Rain Forecast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.