UPI ಪಾವತಿ ಲಭ್ಯವಾದ ನಂತರ ಹಣಕಾಸಿನ ವಹಿವಾಟುಗಳು ತುಂಬಾ ಸುಲಭವಾಗಿದೆ. ನಮ್ಮ ಕೈಯಲ್ಲಿ ಹಣವಿಲ್ಲದಿದ್ದರೂ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬಹಳ ಸುಲಭವಾಗಿ ಬಿಲ್ ಪಾವತಿ ಮಾಡುತ್ತೇವೆ. UPI ಅಪ್ಲಿಕೇಶನ್‌ಗಳ ಮೂಲಕ ನಾವು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ನಾವು ಡೆಬಿಟ್ ಕಾರ್ಡ್‌ಗಳನ್ನು UPI ಅಪ್ಲಿಕೇಶನ್‌ಗಳಿಗೆ ಲಿಂಕ್ ಮಾಡುತ್ತೇವೆ. ಆದರೆ, ಕ್ರೆಡಿಟ್ ಕಾರ್ಡ್‌ಗಳನ್ನು ಸಹ ಲಿಂಕ್ ಮಾಡಬಹುದು. ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ ಮೂಲಕ UPI ಪಾವತಿಗಳನ್ನು ಮಾಡಬಹುದು.
ರುಪೇ ಕ್ರೆಡಿಟ್ ಕಾರ್ಡ್‌ಗಳೊಂದಿಗೆ UPI ಪಾವತಿ: ಮೊದಲು ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳನ್ನು ಮಾತ್ರ UPI ಪ್ಲಾಟ್‌ಫಾರ್ಮ್‌ಗೆ ಲಿಂಕ್ ಮಾಡಬಹುದಾಗಿತ್ತು. ಆದರೆ, 2022ರ ಜೂನ್ 8ರ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಪ್ಲಾಟ್‌ಫಾರ್ಮ್‌ಗಳಿಗೆ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡುವ ಸೌಲಭ್ಯವನ್ನು ನೀಡಿದೆ. ಆದ್ದರಿಂದ ನೀವು ರುಪೇ ಕ್ರೆಡಿಟ್ ಕಾರ್ಡ್ ಅನ್ನು UPI ಅಪ್ಲಿಕೇಶನ್‌ಗಳಿಗೆ ಲಿಂಕ್ ಮಾಡಬಹುದು ಮತ್ತು ಪಾವತಿಗಳನ್ನು ಮಾಡಬಹುದು.
ಕ್ರೆಡಿಟ್ ಕಾರ್ಡ್ ಬಳಸಿ UPI ಪಾವತಿಗಳನ್ನು ಮಾಡುವುದು ಹೇಗೆ?:
- ಮೊದಲು ನಿಮ್ಮ ಆಯ್ಕೆಯ UPI ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
- ಉದಾಹರಣೆಗೆ, Gpay, Phonepay, Paytm ನಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು.
- ನಂತರ ಆಯಾ UPI ಅಪ್ಲಿಕೇಶನ್‌ನಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ ಮತ್ತು ನೋಂದಾಯಿಸಿ.
- ಅದರ ನಂತರ ನೀವು ನಿಮ್ಮ ಬ್ಯಾಂಕ್ ಖಾತೆ ಮತ್ತು ಫೋನ್ ಸಂಖ್ಯೆಗಳನ್ನು ಲಿಂಕ್ ಮಾಡಬೇಕು.
- ಪರಿಶೀಲನೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಬೇಕು.
- ಇದೆಲ್ಲವನ್ನೂ ಪೂರ್ಣಗೊಳಿಸಿದ ನಂತರ, UPI ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರೊಫೈಲ್ ಅಥವಾ ಸೆಟ್ಟಿಂಗ್‌ಗಳಿಗೆ ಹೋಗಿ.
- ಪಾವತಿ ವಿಧಾನಗಳನ್ನು ಹೊಂದಿಸಿ ಅಥವಾ ಪಾವತಿ ವಿಧಾನವನ್ನು ಸೇರಿಸಿ ಕ್ಲಿಕ್ ಮಾಡಿ.
- ಅದರಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಿ.
- ತಕ್ಷಣವೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನು ನೋಂದಾಯಿಸಬೇಕು.
- ಈಗ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ UPI ಪಾವತಿಗಳನ್ನು ಮಾಡಬಹುದು.
- ಒಮ್ಮೆ ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಪಾವತಿ ಆಯ್ಕೆಯು ಕಾಣಿಸಿಕೊಳ್ಳುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಮೊತ್ತವನ್ನು ನಮೂದಿಸಿದ ನಂತರ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
- ನೀವು ಕ್ರೆಡಿಟ್ ಕಾರ್ಡ್ ಮೇಲೆ ಕ್ಲಿಕ್ ಮಾಡಿದರೆ, UPI ಪಾವತಿಯನ್ನು ಮಾಡಲಾಗುತ್ತದೆ.
ಯಾವ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು: UPI ಪಾವತಿಗಳಿಗಾಗಿ ನೀವು ಕೆಳಗೆ ನೀಡಿರುವ ಪಟ್ಟಿಯಲ್ಲಿ ಬ್ಯಾಂಕ್‌ಗಳು ನೀಡುವ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು.
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
- ಇಂಡಿಯನ್ ಬ್ಯಾಂಕ್
- HDFC ಬ್ಯಾಂಕ್
- ಆಕ್ಸಿಸ್ ಬ್ಯಾಂಕ್
- ಕೋಟಕ್ ಮಹೀಂದ್ರ
- ಕೆನರಾ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಯೆಸ್ ಬ್ಯಾಂಕ್
- BOB ಫೈನಾನ್ಶಿಯಲ್ ಸೊಲ್ಯೂಷನ್ಸ್ ಲಿಮಿಟೆಡ್
ಕ್ರೆಡಿಟ್ ಕಾರ್ಡ್‌ಗಳನ್ನು ಸಪೋರ್ಟ್ UPI ಅಪ್ಲಿಕೇಶನ್‌ಗಳು:
- ಭೀಮ್ ಆಪ್
- ಭೀಮ್ ಪಿಎನ್ಬಿ
- ಕ್ರೆಡ್
- ಕೆನರಾ ಎ1
- ಗೋಕಿವಿ (Gokiwi)
- ಗೂಗಲ್ ಪಿ
- PayZapp
- PhonePe
- ಮೊಬಿಕ್ವಿಕ್
- Paytm
- ಸ್ಲೈಸ್
Google Pay ವೆಬ್‌ಸೈಟ್ ಪ್ರಕಾರ: Visa ಮತ್ತು MasterCard ಬಳಕೆದಾರರು UPI ಅಪ್ಲಿಕೇಶನ್‌ಗಳೊಂದಿಗೆ ವಿವಿಧ ಬ್ಯಾಂಕ್‌ಗಳು ನೀಡಿದ ಕ್ರೆಡಿಟ್ ಕಾರ್ಡ್‌ಗಳನ್ನು ಸಹ ಲಿಂಕ್ ಮಾಡಬಹುದು. ಆ ಬ್ಯಾಂಕುಗಳು ಯಾವುವು ಅಂದ್ರೆ, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಎಸ್‌ಬಿಐ ಕಾರ್ಡ್, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಒನ್‌ಕಾರ್ಡ್ (ವೀಸಾ ಕ್ರೆಡಿಟ್ ಕಾರ್ಡ್).
ಇದನ್ನೂ ಓದಿ: ಪೆಗಾಟ್ರಾನ್ನ ಐಫೋನ್ ತಯಾರಿಕಾ ಘಟಕ ಸ್ವಾಧೀನಕ್ಕೆ ಮುಂದಾದ ಟಾಟಾ ಗ್ರೂಪ್: ವರದಿ - iPhone