LPG Price Hike: ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಷ್ಟೇ ಅಲ್ಲ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 12 ರೂಪಾಯಿ ಹೆಚ್ಚಿಸಲಾಗಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 48.50 ರೂ. ಆದರೆ, 14.2 ಕೆಜಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ವೆಬ್‌ಸೈಟ್ ಪ್ರಕಾರ, ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ.
ವಾಣಿಜ್ಯ ಸಿಲಿಂಡರ್ ಬೆಲೆ 48.50 ರೂ. ಏರಿಸುವ ಮೂಲಕ ದೆಹಲಿಯಲ್ಲಿ, 19 ಕೆಜಿ ಸಿಲಿಂಡರ್ ಈಗ ರೂ 1740 ಗೆ ಲಭ್ಯವಾಗುತ್ತಿದೆ. ಆದರೆ, ಮೊದಲು ಅದರ ಬೆಲೆ 1691 ಆಗಿತ್ತು. ಕೋಲ್ಕತ್ತಾದಲ್ಲಿ ಇದರ ಬೆಲೆ 1850.50 ರೂ ಆಗಿದ್ದು, ಮೊದಲು 1802 ರೂ ಇತ್ತು. ಮುಂಬೈನಲ್ಲಿ 1692.50 ರೂ ಆಗಿದ್ದು, ಚೆನ್ನೈನಲ್ಲಿ 1903 ರೂ ಆಗಿದೆ.
ಗೃಹಬಳಕೆ ಗ್ಯಾಸ್ ಸಿಲಿಂಡರ್ ದರ ಸ್ಥಿರ: 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಸಿಲಿಂಡರ್ ದೆಹಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ, ಮುಂಬೈನಲ್ಲಿ 802.50 ರೂ. ಮತ್ತು ಚೆನ್ನೈನಲ್ಲಿ 818.50 ರೂ. ಕ್ಕೆ ಲಭ್ಯವಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 603 ರೂ. ಆಗಿದೆ.
ಮೊದಲು ಬೆಲೆಗಳು ಯಾವುವು?: ಸೆಪ್ಟೆಂಬರ್ 1, 2024 ರಂದು ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1691 ರೂ, ಕೋಲ್ಕತ್ತಾದಲ್ಲಿ 1802 ರೂ, ಮುಂಬೈನಲ್ಲಿ 1644 ರೂ ಮತ್ತು ಚೆನ್ನೈನಲ್ಲಿ 1855 ರೂ. ಆಗಸ್ಟ್‌ನಲ್ಲಿ ದೆಹಲಿಯಲ್ಲಿ 1652.50 ರೂ., ಕೋಲ್ಕತ್ತಾದಲ್ಲಿ 1764.50 ರೂ., ಮುಂಬೈನಲ್ಲಿ 1605 ರೂ. ಮತ್ತು ಚೆನ್ನೈನಲ್ಲಿ 1817 ರೂ.ಆಗಿತ್ತು.
ಮಾರ್ಚ್‌ನಲ್ಲಿ ಇಳಿಕೆಯಾಗಿದ್ದ ಗೃಹಬಳಕೆಯ ಸಿಲಿಂಡರ್ ದರ: ಈ ವರ್ಷ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಹಲವಾರು ಬಾರಿ ಹೆಚ್ಚಿಸಿವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಹಳ ದಿನಗಳಿಂದ ಯಾವುದೇ ಬದಲಾವಣೆಯಾಗಿಲ್ಲ. ಮಹಿಳಾ ದಿನಾಚರಣೆಯಂದು ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಸರ್ಕಾರವು ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 100 ರೂ.ವರೆಗೆ ಕಡಿಮೆ ಮಾಡಿತ್ತು.