ಸ್ವಂತ ಮನೆ, ಜಮೀನು ಖರೀದಿಸಬೇಕು ಎಂಬ ಕನಸು ಎಲ್ಲರಿಗೂ ಇರುತ್ತೆ. ಅದಕ್ಕಾಗಿ ತಾವು ದುಡಿದು ಗಳಿಸಿದ ಹಣವನ್ನು ಅದಕ್ಕಾಗಿಯೇ ತೆಗೆದಿರಿಸುತ್ತಾರೆ. ಹೀಗೆ ಕನಸಿದ ಆಸ್ತಿ ಖರೀದಿಸುವಾಗ ಗ್ರಾಹಕರು ತುಂಬಾ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿರುತ್ತೆ. ಇಲ್ಲದಿದ್ದರೆ, ಜೀವನಪೂರ್ತಿ ಕಷ್ಟ ಎದುರಿಸಬೇಕಾಗುತ್ತೆ. ಹೀಗಾಗಿ ಆಸ್ತಿ ಖರೀದಿಸುವ ಆಕಾಂಕ್ಷಿಗಳಿಗೆ ಮುನ್ನೆಚ್ಚರಿಕೆಯ ಕೆಲ ಟಿಪ್ಸ್ ಅನ್ನು ಇಲ್ಲಿ ನೀಡಿದ್ದೇವೆ..
ಆಸ್ತಿ ಖರೀದಿ ದಾಖಲೆಗಳ ಪಟ್ಟಿ: ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಆದರೆ, ಭೂಮಿಯ ಬೆಲೆಯಂತೆ ಅದರ ಸುತ್ತಲಿನ ವಿವಾದಗಳೂ ಹೆಚ್ಚಾಗುತ್ತಿವೆ. ನೋಂದಣಿ ಸಮಯದಲ್ಲಿ ವಂಚನೆಯಿಂದಾಗಿ ಖರೀದಿದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಯಾವುದೇ ಆಸ್ತಿ ಖರೀದಿಸುವಾಗ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಕಾನೂನು ತಜ್ಞರು ಸಲಹೆ ನೀಡುತ್ತಾರೆ. ಅವರು ನೀಡಿರುವ ಆ ಮಹತ್ವದ ಸಲಹೆಗಳೇನು ಅನ್ನೋದನ್ನು ನಾವ್ ವಿವರಿಸುತ್ತೇವೆ..
ಈ ದಾಖಲೆ ಕಡ್ಡಾಯ : ಜಮೀನು ಖರೀದಿಸುವ ಮುನ್ನ ನೋಡಬೇಕಾದ ಪ್ರಮುಖ ದಾಖಲೆ ಎಂದರೆ ಸೇಲ್ ಡೀಡ್. ಇದನ್ನು ಮದರ್ ಡೀಡ್ ದಾಖಲೆ ಅಂತಲೂ ಹೇಳಲಾಗಿದ್ದು, ಇದನ್ನು ಪರಿಶೀಲಿಸಬೇಕು. ಈ ದಾಖಲೆಯ ಮೂಲಕ ಭೂಮಿಯ ಮಾಲೀಕರು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಯಬಹುದು. ಇದಲ್ಲದೇ ಜಮೀನಿನ ಮಾಲೀಕರು ಮಾರಾಟ ಮಾಡಿದರೆ ಖರೀದಿದಾರರಿಗೆ ವರ್ಗಾವಣೆಯಾಗುವ ಸೇಲ್ ಡೀಡ್ ದಾಖಲೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಜಮೀನು ಖರೀದಿಸುವ ಮೊದಲು, ಆ ಸಮಯದಲ್ಲಿ ಹಳೆಯ ದಾಖಲಾತಿಯನ್ನು ಪರಿಶೀಲಿಸಿದರೆ, ನೀವು ಖರೀದಿಸುತ್ತಿರುವ ಜಮೀನು ಯಾರ ಹೆಸರಿನಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.
NOC ಪ್ರಮಾಣಪತ್ರ; ಬೇರೆಯವರ ಹೆಸರಿನಲ್ಲಿರುವ ಜಮೀನನ್ನು ನಿಮಗೆ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಹಲವರು ಸಲಹೆ ನೀಡುತ್ತಾರೆ. ಈ ಪ್ರಮಾಣಪತ್ರವು ಭೂಮಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳ ದಾಖಲೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಈ ಜಮೀನು ಮಾರಾಟ ಅಥವಾ ಖರೀದಿಗೆ ಯಾವುದೇ ಆಕ್ಷೇಪಣೆ ಇಲ್ಲದಿದ್ದಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರ(NOC)ವನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ.
ಗುರುತಿನ ದಾಖಲೆಗಳು; ಜಮೀನಿನ ಮಾಲೀಕರು ಯಾರೆಂದು ಗೊತ್ತಿಲ್ಲದಿದ್ದರೆ ಮೊದಲು ಗುರುತಿನ ದಾಖಲೆಗಳನ್ನು ಪರಿಶೀಲಿಸಿ ಎನ್ನುತ್ತಾರೆ ಕಾನೂನು ತಜ್ಞರು. ಜಮೀನು ಖರೀದಿಸುವ ಮೊದಲು ಮಾಲೀಕರ ಸಂಪೂರ್ಣ ವಿಳಾಸವನ್ನು ಪರಿಶೀಲಿಸಲು ಸೂಚಿಸಲಾಗುತ್ತದೆ. ಇದಕ್ಕಾಗಿ ವಿಳಾಸ ಪುರಾವೆ, ಬಿಲ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಗುರುತಿನ ದಾಖಲೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಖರೀದಿಸುವ ಆಸ್ತಿಗೆ ತೆರಿಗೆ ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಅನ್ನೋದನ್ನು ಸಹ ಮುಖ್ಯವಾಗಿ ಪರಿಶೀಲಿಸಬೇಕು.
ಯಾವುದೇ ಆಸ್ತಿಯನ್ನು ಖರೀದಿಸುವ ಮೊದಲು ಯಾವುದೇ ತೊಂದರೆಯಿಲ್ಲದೆ ಈ ಪ್ರಮುಖ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಕಾನೂನು ತಜ್ಞರು ಹೇಳುತ್ತಾರೆ. ಆದ್ದರಿಂದ ತರಾತುರಿಯಲ್ಲಿ ಅಲ್ಲ, ಎಲ್ಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಜಮೀನು ಖರೀದಿಸಬೇಕು ಅನ್ನುವ ಸಲಹೆಯನ್ನು ಪಾಲಿಸುವ ಮೂಲಕ ವಂಚನೆಗಳ ಕಪಿಮುಷ್ಠಿಯಿಂದ ಪಾರಾಗಬಹುದು ಅನ್ನೋದು ಕಾನೂನು ತಜ್ಞರ ಅಭಿಮತವಾಗಿದೆ.
ಗಮನಿಸಿ: ಎಲ್ಲಾ ದಾಖಲೆಗಳು ಮತ್ತು ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಆಸ್ತಿಯನ್ನು ಖರೀದಿಸಬೇಕು. ಈ ಲೇಖನದಲ್ಲಿ ಉಲ್ಲೇಖಿಸಲಾದ ಅಂಶಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಸಮಗ್ರ ಮಾಹಿತಿಗಾಗಿ ರಿಯಲ್ ಎಸ್ಟೇಟ್ ತಜ್ಞರು ಮತ್ತು ಕಾನೂನು ತಜ್ಞರನ್ನು ಸಂಪರ್ಕಿಸುವುದು ಸೂಕ್ತ.