ETV Bharat / business

ಎಷ್ಟೇ ಓದಿದ್ರೂ ಸಿಗದ ಉದ್ಯೋಗ; 20ಕ್ಕೂ ಹೆಚ್ಚು ಬಗೆಯ ಚಹಾ ಮಾರಿ ಜೀವನ ಸಾಗಿಸುತ್ತಿರುವ ಯುವಕ - ಉದ್ಯೋಗ

ಮೀರತ್​ನ ಗಂಗಾನಗರದಲ್ಲಿ ನೆಲೆಸಿರುವ ಯುವಕನೊಬ್ಬ ಕೆಲಸ ಸಿಗದ ಹಿನ್ನೆಲೆ ಟೀ ಸ್ಟಾಲ್​ ಅನ್ನು ಆರಂಭಿಸಿದ್ದಾರೆ. ಈ ಟೀ ಸ್ಟಾಲ್​ನಲ್ಲಿ ಇದೀಗ 20ಕ್ಕೂ ಹೆಚ್ಚು ವಿವಿಧ ಫ್ಲೇವರ್‌ಗಳ ಚಹಾ ದೊರೆಯುತ್ತಿದೆ.

New starup  BTech MBA pass  Meerut News  ಉದ್ಯೋಗ  ಟೀ ಸ್ಟಾಲ್​ ಆರಂಭ
ಚಹಾ ಮಾರಿ ಜೀವನ ಸಾಗಿಸುತ್ತಿರುವ ಯುವಕ
author img

By ETV Bharat Karnataka Team

Published : Feb 21, 2024, 3:55 PM IST

ಮೀರತ್ (ಉತ್ತರಪ್ರದೇಶ): ಬಿ.ಟೆಕ್-ಎಂ.ಬಿ.ಎ ಪಾಸ್ ಆಗಿರುವ ಯುವಕನೊಬ್ಬ ಇದೀಗ ಜಿಲ್ಲೆಯಲ್ಲಿ ಟೀ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತನ್ನ ಇಷ್ಟದ ಕೆಲಸ ಸಿಗದಿದ್ದಾಗ ಕೆಟಲ್ ತರಹದ ಟೀ ಸ್ಟಾಲ್​ ಅನ್ನು ವಿನ್ಯಾಸಗೊಳಿಸಿ ಚಹಾ ಮಾರಾಟ ಮಾಡುತ್ತಿದ್ದಾರೆ. ಈ ಟೀ ಸ್ಟಾಲ್​ನಲ್ಲಿ ಸುಮಾರು 20ಕ್ಕೂ ಹೆಚ್ಚು ವಿವಿಧ ಫ್ಲೇವರ್​ಗಳ ಚಹಾ ಸಿಗುತ್ತಿದೆ. ಅಷ್ಟೇ ಅಲ್ಲ, ಈ ಯುವಕ ತನ್ನ ಸ್ಟಾರ್ಟಪ್ ಮೂಲಕ ಹಲವರಿಗೆ ಉದ್ಯೋಗವನ್ನೂ ಸಹಾ ನೀಡಿದ್ದಾರೆ.

ಸ್ಟಾರ್ಟಪ್ ಆರಂಭಿಸಿದ ಯುವಕ: ಮೀರತ್​ನ ಗಂಗಾನಗರದಲ್ಲಿ ನೆಲೆಸಿರುವ ಯುವಕನಿಗೆ ಕೆಲಸ ಸಿಗದೇ ಇದ್ದಾಗ ಸ್ವಂತ ಸ್ಟಾರ್ಟಪ್ ಆರಂಭಿಸಿದ್ದಾರೆ. ಯುವಕನ ಹೆಸರು ಚಿರಾಗ್ ಕಕ್ಕರ್. ಅವರು ಬಿ.ಟೆಕ್ ಮತ್ತು ಎಂಬಿಎ ಪದವಿಧರ. ಚಿರಾಗ್ ಅವರು ಸಾಕಷ್ಟು ಬಾರಿ ಕೆಲಸಕ್ಕಾಗಿ ಇತರೆ ಕಂಪನಿಗಳಿಗೆ ಅಲೆದಾಡಿದರು. ಆದ್ರೂ ಅವರ ಓದಿಗೆ ತಕ್ಕಂತೆ ಯಾವುದೇ ಕೆಲಸ ಸಿಗಲಿಲ್ಲ. ಹೀಗಾಗಿ ಕೆಲ ಯುವಕರಿಗೆ ಉದ್ಯೋಗ ನೀಡುವಂತೆ ಏನಾದರೂ ಮಾಡುಬೇಕೆಂದು ನಿರ್ಧರಿಸಿದರು. ಅದರಂತೆ ಚಿರಾಗ್ ಸಾಕಷ್ಟು ಶ್ರಮ ವಹಿಸಿದರು. ಬಳಿಕ ಕೆಟಲ್ ಆಕಾರದ ಟೀ ಸ್ಟಾಲ್​ ಸಿದ್ಧಪಡಿಸಿ, 20ಕ್ಕೂ ಹೆಚ್ಚು ವಿವಿಧ ರುಚಿಯ ಚಹಾದ ವ್ಯವಸ್ಥೆ ಮಾಡಿ ಮಾರಾಟ ಶುರು ಮಾಡಿದರು.

ಮೂವರು ಯುವಕರಿಗೆ ಉದ್ಯೋಗ: ಮೂವರು ಯುವಕರಿಗೆ ಉದ್ಯೋಗವನ್ನೂ ಕಲ್ಪಿಸಿರುವುದು ಒಳ್ಳೆಯ ಸಂಗತಿ ಎನ್ನುತ್ತಾರೆ ಚಿರಾಗ್. ಈಗ ಅವರು ತಮ್ಮ ಕೆಟಲ್ ಆಕಾರದ ಅಂಗಡಿಗೆ ಪೇಟೆಂಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದೇಶದ ವಿವಿಧ ಪ್ರಾಂತ್ಯಗಳಲ್ಲಿ ಚಹಾದೊಂದಿಗೆ ನೀಡುವ ಉತ್ಪನ್ನಗಳ ಬಗ್ಗೆಯೂ ನಾನು ಸಾಕಷ್ಟು ಸಂಶೋದನೆ ನಡೆಸಿದ್ದೇನೆ. ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇನೆ. ನಮ್ಮಲ್ಲಿ ಚಹಾ ಮಾತ್ರವಲ್ಲದೇ ಕಾಫಿಯಲ್ಲೂ ವಿಭಿನ್ನ ಫ್ಲೇವರ್‌ಗಳಿವೆ ಎಂದು ಹೇಳಿದರು.

ನಮ್ಮ ಟೀ ಸ್ಟಾಲ್​ನಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳಿಗೆ ಮಾತ್ರ ಸ್ಥಾನ ನೀಡಿದ್ದೇನೆ. ತಮ್ಮ ವಿಶೇಷ ಬ್ರಾಂಡ್ 'ಚಾಯ್ ಜಿ' ಯ ಫ್ರಾಂಚೈಸಿಯನ್ನು ವಿವಿಧ ಸ್ಥಳಗಳಲ್ಲಿ ನೀಡಲು ಯೋಜಿಸುತ್ತಿದ್ದೇನೆ. ಪ್ರತಿ ಕೆಟಲ್ ಆಕಾರದ ಚಾಯ್​ ಜಿ ಸ್ಟಾಲ್ ಮೂರರಿಂದ ನಾಲ್ಕು ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂದು ಅವರು ಹೇಳಿದರು. ಸದ್ಯ ಚಿರಾಗ್ ಅವರ ವಿಶೇಷ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

New starup  BTech MBA pass  Meerut News  ಉದ್ಯೋಗ  ಟೀ ಸ್ಟಾಲ್​ ಆರಂಭ
ಚಹಾ ಮಾರಿ ಜೀವನ ಸಾಗಿಸುತ್ತಿರುವ ಯುವಕ

ಟೀ ಕುಡಿಯಲು ಬಂದ ಗ್ರಾಹಕ ರವಿ ಮಾತನಾಡಿ, ನಿರುದ್ಯೋಗ ದೊಡ್ಡ ಸಮಸ್ಯೆ. ಇಂತಹ ಪರಿಸ್ಥಿತಿಯಲ್ಲಿ ಯುವಕರು ತಮ್ಮ ದಾರಿಗಳನ್ನು ತಾವೇ ರೂಪಿಸಿಕೊಂಡು ಮುನ್ನಡೆಯುತ್ತಿರುವುದು ಸಂತಸ ತಂದಿದೆ. ಪ್ರಸ್ತುತ, ಚಿರಾಗ್ ವಿಶಿಷ್ಟವಾದ ಟೀ ಕೆಟಲ್ ತರಹದ ಅಂಗಡಿಯನ್ನು ತೆರೆಯುವ ಮೂಲಕ ಗಮನ ಸೆಳೆದಿದ್ದಾರೆ ಎಂದು ಹೇಳಿದರು.

ಓದಿ: 395ಕ್ಕೆ ತಲುಪಿದ ಪೇಟಿಎಂ ಷೇರು ಬೆಲೆ: ಭಾರಿ ಕುಸಿತದ ಬಳಿಕ ಸತತ ನಾಲ್ಕನೇ ದಿನವೂ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.