ETV Bharat / business

ಷೇರು ಮಾರುಕಟ್ಟೆ ಸ್ಥಿರ: ಬಿಎಸ್​ಇ ಸೆನ್ಸೆಕ್ಸ್​ ಕೇವಲ 1 ಅಂಕ ಏರಿಕೆ, ನಿಫ್ಟಿ ಅಲ್ಪ ಇಳಿಕೆ - STOCK MARKET

ಭಾರತದ ಷೇರು ಮಾರುಕಟ್ಟೆಗಳು ಬುಧವಾರ ಯಾವುದೇ ಬದಲಾವಣೆಯಿಲ್ಲದೆ ಕೊನೆಗೊಂಡಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (IANS)
author img

By ETV Bharat Karnataka Team

Published : Dec 10, 2024, 7:48 PM IST

ಮುಂಬೈ: ಹೂಡಿಕೆದಾರರು ಜಾಗರೂಕತೆಯಿಂದ ವಹಿವಾಟು ನಡೆಸಿದ್ದರಿಂದ ಐಟಿ ಮತ್ತು ಎಫ್‌ಎಂಸಿಜಿ ವಲಯದ ಷೇರುಗಳಲ್ಲಿನ ಲಾಭದ ಹೊರತಾಗಿಯೂ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಮಂಗಳವಾರ ಫ್ಲಾಟ್ ಆಗಿ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ 1.59 ಪಾಯಿಂಟ್ಸ್ ಏರಿಕೆಯಾಗಿ 81,510.05ರಲ್ಲಿ ಕೊನೆಗೊಂಡರೆ, ಎನ್ಎಸ್ಇ ನಿಫ್ಟಿ 50 8.95 ಪಾಯಿಂಟ್ಸ್ ಕಳೆದುಕೊಂಡು 24,610.05 ರಲ್ಲಿ ಕೊನೆಗೊಂಡಿದೆ.

ಶ್ರೀರಾಮ್ ಫೈನಾನ್ಸ್ ಶೇ.2.40, ಬಜಾಜ್ ಫಿನ್ ಸರ್ವ್ ಶೇ 1.65, ಹನಿವೆಲ್ ಆಟೋಮೇಷನ್ ಶೇ 1.42, ವಿಪ್ರೋ ಶೇ 1.40, ಇನ್ಫೋಸಿಸ್ ಶೇ 1.22ರಷ್ಟು ಏರಿಕೆ ಕಂಡಿವೆ. ಭಾರ್ತಿ ಏರ್ ಟೆಲ್ ಶೇ 1.40, ಡ್ರೆಡ್ಡಿ ಶೇ 1.33, ಅದಾನಿ ಪೋರ್ಟ್ಸ್ ಶೇ.1.17, ಅದಾನಿ ಎಂಟರ್ ಪ್ರೈಸಸ್ ಶೇ 1.14 ಮತ್ತು ಎಚ್​ಡಿಎಫ್​ಸಿ ಲೈಫ್ ಶೇ 1.09 ರಷ್ಟು ಕುಸಿತ ಕಂಡಿವೆ.

ಮುಂಬರುವ ಯುಎಸ್ ಮತ್ತು ಭಾರತ ಸಿಪಿಐ ದತ್ತಾಂಶ ಬಿಡುಗಡೆಗೆ ಮುಂಚಿತವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರದ ಹೆಚ್ಚಿನ ವಹಿವಾಟು ಅವಧಿಯಲ್ಲಿ ಎಚ್ಚರಿಕೆಯಿಂದ ವಹಿವಾಟು ನಡೆಸಿದವು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಬದಲಾವಣೆಯು ಆರ್​ಬಿಐನ ಹಣಕಾಸು ನೀತಿಯಲ್ಲಿ ಬದಲಾವಣೆ ತರಬಹುದೆಂಬ ನಿರೀಕ್ಷೆಗಳನ್ನು ಹೆಚ್ಚಿಸಿದ್ದರಿಂದ ಮಂಗಳವಾರ (ಡಿಸೆಂಬರ್ 10, 2024) ಯುಎಸ್ ಡಾಲರ್ ವಿರುದ್ಧ ರೂಪಾಯಿ ಕೇವಲ 1 ಪೈಸೆ ಏರಿಕೆಯಾಗಿ 84.85 (ತಾತ್ಕಾಲಿಕ) ಕ್ಕೆ ತಲುಪಿದೆ. ಇದು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕಿಂತ ಕೊಂಚ ಹೆಚ್ಚಾಗಿದೆ.

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 84.80 ಕ್ಕೆ ಪ್ರಾರಂಭವಾಯಿತು ಮತ್ತು ಇಂಟ್ರಾ-ಡೇ ವಹಿವಾಟಿನಲ್ಲಿ ಡಾಲರ್ ವಿರುದ್ಧ 84.86 ರ ಕನಿಷ್ಠ ಮಟ್ಟವನ್ನು ಮುಟ್ಟಿತು. ಅಂತಿಮವಾಗಿ ರೂಪಾಯಿ ಡಾಲರ್ ವಿರುದ್ಧ 84.85 (ತಾತ್ಕಾಲಿಕ) ರಲ್ಲಿ ವಹಿವಾಟು ಕೊನೆಗೊಳಿಸಿತು. ಇದು ಹಿಂದಿನ ಮುಕ್ತಾಯಕ್ಕಿಂತ ಕೇವಲ 1 ಪೈಸೆ ಹೆಚ್ಚಾಗಿದೆ. ಸೋಮವಾರ (ಡಿಸೆಂಬರ್ 9, 2024) ರೂಪಾಯಿ ಒಂದು ತಿಂಗಳ ತೀವ್ರ ಕುಸಿತ ಕಂಡಿತ್ತು ಮತ್ತು ಯುಎಸ್ ಡಾಲರ್ ವಿರುದ್ಧ 20 ಪೈಸೆ ಕುಸಿದು 84.86 ಕ್ಕೆ ಇಳಿದಿತ್ತು.

ಕಂದಾಯ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 26 ನೇ ಗವರ್ನರ್ ಆಗಿ ಸರ್ಕಾರ ಸೋಮವಾರ (ಡಿಸೆಂಬರ್ 9, 2024) ನೇಮಿಸಿದೆ.

ಇದನ್ನೂ ಓದಿ : ಆರ್​ಬಿಐನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.