ETV Bharat / business

ಆಧಾರ್, ಪ್ಯಾನ್​ ವಿವರ ಬಹಿರಂಗಪಡಿಸಿದ ವೆಬ್​ಸೈಟ್​ಗಳಿಗೆ ನಿರ್ಬಂಧ: ಸಮಸ್ಯೆಯಾದವರು ದೂರು ನೀಡಲು ಸಲಹೆ - websites exposing Aadhaar PAN

author img

By ETV Bharat Karnataka Team

Published : 2 hours ago

Updated : 2 hours ago

ಜನರ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸಿದ ಕೆಲ ವೆಬ್​ಸೈಟ್​ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ (IANS)

ನವದೆಹಲಿ: ಭಾರತೀಯ ನಾಗರಿಕರ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಸೇರಿದಂತೆ ಸೂಕ್ಷ್ಮ ವೈಯಕ್ತಿಕ ಮಾಹಿತಿಗಳನ್ನು ಬಹಿರಂಗಪಡಿಸುವ ಕೆಲ ವೆಬ್ ಸೈಟ್​ಗಳನ್ನು ಸರ್ಕಾರ ನಿರ್ಬಂಧಿಸಿದೆ. ಗುರುವಾರ ಸರ್ಕಾರ ಅಧಿಕೃತವಾಗಿ ಈ ಮಾಹಿತಿ ನೀಡಿದೆ. ಈ ವೆಬ್​ಸೈಟ್​ಗಳಲ್ಲಿ ಭದ್ರತಾ ಲೋಪಗಳು ಕಂಡು ಬಂದಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ಹೇಳಿದೆ. ಇದರ ನಂತರ ಸರ್ಕಾರವು ಈ ವೆಬ್ ಸೈಟ್​ಗಳನ್ನು ನಿರ್ಬಂಧಿಸಿದೆ.

ಜನರ ಡೇಟಾ ಮಾರಾಟ ಮಾಡುವ ವೆಬ್​ಸೈಟ್​ಗಳು: "ಕೆಲ ವೆಬ್​ಸೈಟ್​ಗಳು ಭಾರತೀಯ ನಾಗರಿಕರ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಸೇರಿದಂತೆ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುತ್ತಿವೆ ಎಂಬ ವಿಚಾರ ಸಚಿವಾಲಯದ ಗಮನಕ್ಕೆ ಬಂದಿದೆ. ಸುರಕ್ಷಿತ ಸೈಬರ್ ಭದ್ರತಾ ಕ್ರಮಗಳು ಮತ್ತು ವೈಯಕ್ತಿಕ ಡೇಟಾದ ರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಈ ವೆಬ್​ಸೈಟ್​ಗಳನ್ನು ನಿರ್ಬಂಧಿಸಲು ತ್ವರಿತ ಕ್ರಮ ಕೈಗೊಳ್ಳಲಾಗಿದೆ." ಎಂದು ಸರ್ಕಾರ ಹೇಳಿದೆ.

ಪೊಲೀಸರಿಗೆ ದೂರು ಸಲ್ಲಿಕೆ: ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ, 2016 ರ ಅಡಿ ಆಧಾರ್ ಸಂಬಂಧಿತ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಿಷೇಧಿಸುವ ನಿಬಂಧನೆ ಉಲ್ಲಂಘಿಸಿದ್ದಕ್ಕಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದೆ.

"ಈ ವೆಬ್​ಸೈಟ್​ಗಳು ಭದ್ರತಾ ಲೋಪಗಳನ್ನು ಹೊಂದಿರುವುದು ಸಿಇಆರ್​ಟಿ - ಇನ್ ನ ವಿಶ್ಲೇಷಣೆಯಲ್ಲಿ ಕಂಡು ಬಂದಿದೆ. ಐಸಿಟಿ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ನ್ಯೂನತೆಗಳನ್ನು ಸರಿಪಡಿಸಲು ತಮ್ಮ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ವೆಬ್​ಸೈಟ್ ಮಾಲೀಕರಿಗೆ ಮಾರ್ಗದರ್ಶನ ನೀಡಲಾಗಿದೆ." ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಮಸ್ಯೆಯಾದವರು ದೂರು ನೀಡಬಹುದು: "ವೈಯಕ್ತಿಕ ಡೇಟಾ ಬಹಿರಂಗದಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಅಂಥವರು ಐಟಿ ಕಾಯ್ದೆಯಡಿ ದೂರು ದಾಖಲಿಸಲು ಮತ್ತು ಪರಿಹಾರವನ್ನು ಪಡೆಯಲು ನ್ಯಾಯನಿರ್ಣಯ ಅಧಿಕಾರಿಯನ್ನು ಸಂಪರ್ಕಿಸಬಹುದು. ರಾಜ್ಯಗಳ ಐಟಿ ಕಾರ್ಯದರ್ಶಿಗಳಿಗೆ ತೀರ್ಪು ನೀಡುವ ಅಧಿಕಾರ ನೀಡಲಾಗಿದೆ. ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಅಧಿಕಾರಿಗಳು 3.1 ಕೋಟಿ ಗ್ರಾಹಕರ ಡೇಟಾವನ್ನು ಮಾರಾಟ ಮಾಡಿದ್ದಾರೆ ಎಂದು ಕಳೆದ ವಾರ ಸೈಬರ್ ಭದ್ರತಾ ಸಂಶೋಧಕರು ಬಹಿರಂಗ ಪಡಿಸಿದ್ದಾರೆ" ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಪ್ರಯಾಣಿಕರಿಗೆ ಖುಷಿ ಸುದ್ದಿ: ದೀಪಾವಳಿ ಹಬ್ಬದ ಸೀಸನ್​ನಲ್ಲಿ 5,975 ವಿಶೇಷ ರೈಲು ಸಂಚಾರ - SPECIAL TRAINS

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.