ETV Bharat / business

ಪ್ರಯಾಣ ಭತ್ಯೆ ನೀಡದ ಆರೋಪ: ಪೇಟಿಎಂಗೆ ಲೀಗಲ್​ ನೋಟಿಸ್​ ಕಳುಹಿಸಿದ ಮಾಜಿ ಉದ್ಯೋಗಿ - legal notice to paytm - LEGAL NOTICE TO PAYTM

ಪೇಟಿಎಂ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ಕಂಪನಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಂಪನಿಯು ನಿಯಮಗಳ ಪ್ರಕಾರ, ತಮಗೆ ಪ್ರಯಾಣದ ಭತ್ಯೆಯನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಪೇಟಿಎಂಗೆ ಲೀಗಲ್​ ನೋಟಿಸ್​ ಕಳುಹಿಸಿದ ಮಾಜಿ ಉದ್ಯೋಗಿ
ಪೇಟಿಎಂಗೆ ಲೀಗಲ್​ ನೋಟಿಸ್​ ಕಳುಹಿಸಿದ ಮಾಜಿ ಉದ್ಯೋಗಿ (File Photo ETV Bharat)
author img

By ETV Bharat Karnataka Team

Published : May 18, 2024, 5:07 PM IST

ಪೋರಬಂದರ್ (ಗುಜರಾತ್‌): ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ (ಆರ್​ಬಿಐ)ದಿಂದ ದಂಡೆನೆಗೆ ಒಳಗಾಗಿರುವ ಆನ್​ಲೈನ್​ ಪಾವತಿ ಸಂಸ್ಥೆಯಾದ ಪೇಟಿಎಂ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ತನ್ನ ಸಂಸ್ಥೆಯ ಉದ್ಯೋಗಿಗೆ ವಂಚನೆ ಮಾಡಿದ ಆರೋಪ ಇದಾಗಿದ್ದು, ಸಂಸ್ಥೆಯ ವಿರುದ್ಧ ಲೀಗಲ್​ ನೋಟಿಸ್​ ಜಾರಿ ಮಾಡಲಾಗಿದೆ.

ಆನ್‌ಲೈನ್ ಪಾವತಿ ಸಂಸ್ಥೆಯಾದ ಪೇಟಿಎಂ ಫೀಲ್ಡ್ ವರ್ಕ್ ಉದ್ಯೋಗಿಗಳಿಗೆ ಪ್ರಯಾಣ ಭತ್ಯೆ (ಟಿಎ) ಪಾವತಿಸುವುದನ್ನು ನಿಲ್ಲಿಸಿದೆ. ಉದ್ಯೋಗ ನೀಡುವ ವೇಳೆ ಪ್ರಯಾಣ ಭತ್ಯೆಯ ಭರವಸೆ ನೀಡಿದ್ದ ಕಂಪನಿ ಈಗ, ವಂಚಿಸಿದೆ ಎಂದು ಆರೋಪಿಸಿ ಪೋರಬಂದರ್‌ನಲ್ಲಿನ ಉದ್ಯೋಗಿಯೊಬ್ಬ ಕಂಪನಿಗೆ ಹಣ ಪಾವತಿಸುವಂತೆ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾನೆ.

ಮಾಹಿತಿಯ ಪ್ರಕಾರ, ಪೋರಬಂದರ್‌ನ ವಾಸಿಯಾಗಿರುವ ನಿಹಾರ್ ಮೊನಾನಿ ಎಂಬ ವ್ಯಕ್ತಿ ಪೇಟಿಎಂನ ಮಾಜಿ ಉದ್ಯೋಗಿಯಾಗಿದ್ದಾರೆ. 2023 ರಲ್ಲಿ ಅವರು 4 ತಿಂಗಳವರೆಗೆ ಸಂಸ್ಥೆಯಲ್ಲಿ ದುಡಿದಿದ್ದಾರೆ. ಕಂಪನಿಯೂ ಈ ವ್ಯಕ್ತಿಯನ್ನು ಆನ್‌ಲೈನ್ ಮೂಲಕ ನೇಮಕಾತಿ ಮಾಡಿಕೊಂಡಿದೆ. ಹೆದ್ದಾರಿಗಳಲ್ಲಿನ ಎಲ್ಲಾ ಟೋಲ್​ಗಳಲ್ಲಿ ಫಾಸ್ಟ್​ಟ್ಯಾಗ್ ಮಾರಾಟ ಮಾಡುವ ಕೆಲಸ ಇವರದ್ದಾಗಿತ್ತು. ಫೀಲ್ಡ್​ ವರ್ಕ್​ ಇದಾಗಿದ್ದರಿಂದ ಪ್ರಯಾಣ ಭತ್ಯೆ ನೀಡುವುದಾಗಿ ಸಂಸ್ಥೆ ಮೊದಲು ಭರವಸೆ ನೀಡಿತ್ತು ಎನ್ನಲಾಗಿದೆ.

ನಿಹಾರ್ ಮೊನಾನಿ ಅವರು 2023 ರಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿದ್ದು, ಕಂಪನಿಯ ಕೆಲಸದ ವೇಳೆ ಓಡಾಟದಿಂದ 50 ಸಾವಿರ ಖರ್ಚು ಪ್ರಯಾಣ ವೆಚ್ಚವಾಗಿದೆ. ಇದನ್ನ ತಮ್ಮ ಸ್ವತಃ ಹಣದಲ್ಲಿ ಭರಿಸಿದ್ದು, ಸಂಸ್ಥೆಯು ಈವರೆಗೂ ಪ್ರಯಾಣ ಭತ್ಯೆ ನೀಡಿಲ್ಲ.

ಇದೀಗ ಪ್ರಯಾಣ ಭತ್ಯೆಯನ್ನು ನೀಡಲಾಗಲ್ಲ ಎಂದು ಸಂಸ್ಥೆ ಹೇಳಿದ್ದು, ಮಾಜಿ ಸಿಬ್ಬಂದಿಯ ಕೋಪಕ್ಕೆ ಕಾರಣವಾಗಿದೆ. ಸಂಸ್ಥೆಯ ಇಂತಹ ನಡೆಯಿಂದ ವಂಚನೆಗೀಡಾದ ನಿಹಾರ್ ಅವರು ಕಂಪನಿಯ ವಿರುದ್ಧ ತಮ್ಮ ವಕೀಲ ವಿಜಯ್ ಕುಮಾರ್ ಪಾಂಡ್ಯ ಅವರ ಮೂಲಕ ಪೇಟಿಎಂಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಬಾಕಿ ಉಳಿಸಿಕೊಂಡಿರುವ ಪ್ರಯಾಣ ಭತ್ಯೆಯನ್ನು ಪಾವತಿಸುವಂತೆ ಅದರಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್​ ಫಾಸ್ಟಾಗ್​ ನಿಷ್ಕ್ರಿಯ ಮಾಡುವುದೇಗೆ? ಇಲ್ಲಿದೆ ಸರಳ ವಿಧಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.