ETV Bharat / business

6,456 ಕೋಟಿ ರೂ. ಮೊತ್ತದ 3 ರೈಲು ಯೋಜನೆಗಳಿಗೆ ಅನುಮೋದನೆ: 114 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿ - New Railways Projects

author img

By ETV Bharat Karnataka Team

Published : Aug 28, 2024, 4:27 PM IST

ರೈಲ್ವೆ ಸಚಿವಾಲಯದ ಒಟ್ಟು 6,456 ಕೋಟಿ ರೂ.ಗಳ ಅಂದಾಜು ವೆಚ್ಚದ ಮೂರು ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ)ಯು ಬುಧವಾರ ಅನುಮೋದನೆ ನೀಡಿದೆ.

ರೈಲು
ರೈಲು (IANS)

ನವದೆಹಲಿ: ರೈಲ್ವೆ ಸಚಿವಾಲಯದ ಒಟ್ಟು 6,456 ಕೋಟಿ ರೂ. ಗಳ ಅಂದಾಜು ವೆಚ್ಚದ ಮೂರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಯು ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆಗಳ ನಿರ್ಮಾಣದ ಸಮಯದಲ್ಲಿ ಸುಮಾರು 114 ಲಕ್ಷ ಮಾನವ-ದಿನಗಳವರೆಗೆ ನೇರ ಉದ್ಯೋಗ ಸೃಷ್ಟಿಯಾಗಲಿವೆ.

ಈ ಮೂರು ಯೋಜನೆಗಳು ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಢದ ಏಳು ಜಿಲ್ಲೆಗಳನ್ನು ಒಳಗೊಂಡಿವೆ ಮತ್ತು ಭಾರತೀಯ ರೈಲ್ವೆಯ ಜಾಲವನ್ನು ಸುಮಾರು 300 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ. ಈ ಯೋಜನೆಗಳ ಅಡಿಯಲ್ಲಿ ಬಹು ಮಾದರಿ ಸಂಪರ್ಕಕ್ಕಾಗಿ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನ ಭಾಗವಾಗಿ 14 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಇದು ಎರಡು ಪ್ರಮುಖ ಜಿಲ್ಲೆಗಳಾದ ನುವಾಪಾಡಾ ಮತ್ತು ಪೂರ್ವ ಸಿಂಗ್ ಬುಮ್​ಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.

"ಹೊಸ ರೈಲು ಮಾರ್ಗ ಯೋಜನೆಗಳು ಸರಿಸುಮಾರು 1,300 ಗ್ರಾಮಗಳು ಮತ್ತು ಸುಮಾರು 11 ಲಕ್ಷ ಜನಸಂಖ್ಯೆಗೆ ಸಂಪರ್ಕವನ್ನು ಒದಗಿಸುತ್ತವೆ. ಮಲ್ಟಿ ಟ್ರ್ಯಾಕಿಂಗ್ ಯೋಜನೆಯು ಸುಮಾರು 1,300 ಗ್ರಾಮಗಳು ಮತ್ತು ಸುಮಾರು 19 ಲಕ್ಷ ಜನಸಂಖ್ಯೆಗೆ ಸಂಪರ್ಕವನ್ನು ಹೆಚ್ಚಿಸುತ್ತದೆ" ಎಂದು ಸಿಸಿಇಎ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಅನುಮೋದಿತ ರೈಲು ಯೋಜನೆಗಳು ಸಂಪರ್ಕವಿಲ್ಲದ ಪ್ರದೇಶಗಳನ್ನು ಸಂಪರ್ಕಿಸುವ ಮೂಲಕ ವ್ಯವಸ್ಥಾಪನಾ ದಕ್ಷತೆಯನ್ನು ಸುಧಾರಿಸಲಿವೆ, ಅಸ್ತಿತ್ವದಲ್ಲಿರುವ ಲೈನ್ ಸಾಮರ್ಥ್ಯವನ್ನು ಹೆಚ್ಚಿಸಲಿವೆ ಮತ್ತು ಸಾರಿಗೆ ಜಾಲಗಳನ್ನು ಕೂಡ ಹೆಚ್ಚಿಸಲಿವೆ. ಇದರ ಪರಿಣಾಮವಾಗಿ ಸರಕು ಪೂರೈಕೆ ಸರಪಳಿಗಳು ಸುವ್ಯವಸ್ಥಿತವಾಗಲಿದ್ದು, ಇದು ತ್ವರಿತ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ.

ಹೊಸ ರೈಲು ಮಾರ್ಗಗಳು ವಿವಿಧ ಪ್ರದೇಶಗಳ ನಡುವೆ ನೇರ ಸಂಪರ್ಕವನ್ನು ಒದಗಿಸುತ್ತವೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತವೆ. ಆ ಮೂಲಕ ಭಾರತೀಯ ರೈಲ್ವೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ.

ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್ ಮತ್ತು ಸುಣ್ಣದ ಕಲ್ಲು ಮುಂತಾದ ಸರಕುಗಳ ಸಾಗಣೆಗೆ ಈ ಮಾರ್ಗಗಳ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಸರ್ಕಾರ ಹೇಳಿದೆ. ಹೊಸ ಮಾರ್ಗಗಳ ನಿರ್ಮಾಣದ ನಂತರ ವಾರ್ಷಿಕವಾಗಿ 45 ಎಂಟಿಪಿಎ (ವಾರ್ಷಿಕ ಮಿಲಿಯನ್ ಟನ್) ಪ್ರಮಾಣದ ಹೆಚ್ಚುವರಿ ಸರಕು ಸಾಗಣೆ ಮಾಡಬಹುದು.

ಇದನ್ನೂ ಓದಿ : ಸೆಪ್ಟೆಂಬರ್​ 9ರಂದು ಜಿಎಸ್​ಟಿ ಕೌನ್ಸಿಲ್ ಸಭೆ: ದರ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಚರ್ಚೆ - GST COUNCIL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.