ETV Bharat / business

2025ರ ವೇಳೆಗೆ ಎಂಎಸ್​ಎಂಇ ವಲಯದಲ್ಲಿ 2 ಲಕ್ಷ ಹೊಸ ಉದ್ಯೋಗ ಸೃಷ್ಟಿ: ವರದಿ - Indian MSME Jobs

author img

By IANS

Published : Jun 27, 2024, 1:16 PM IST

2025ರ ವೇಳೆಗೆ ಭಾರತದ ಎಂಎಸ್​ಎಂಇ ವಲಯವು 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ವರದಿ ಹೇಳಿದೆ.

2025ರ ವೇಳೆಗೆ ಎಂಎಸ್​ಎಂಇ ವಲಯದಲ್ಲಿ 2 ಲಕ್ಷ ಹೊಸ ಉದ್ಯೋಗ ಸೃಷ್ಟಿ
2025ರ ವೇಳೆಗೆ ಎಂಎಸ್​ಎಂಇ ವಲಯದಲ್ಲಿ 2 ಲಕ್ಷ ಹೊಸ ಉದ್ಯೋಗ ಸೃಷ್ಟಿ (IANS)

ನವದೆಹಲಿ: ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವಲಯವು ಸುಮಾರು 1.2 ಕೋಟಿ ಜನರಿಗೆ ಉದ್ಯೋಗ ನೀಡಿದ್ದು, 2025 ರ ವೇಳೆಗೆ ಉದ್ಯಮವು ಎರಡು ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ವರದಿಯೊಂದು ಗುರುವಾರ ಹೇಳಿದೆ. ಹೊಸ ಉದ್ಯೋಗವಕಾಶಗಳು ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ಸೇವಾ ವಲಯಗಳು ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಸೃಷ್ಟಿಯಾಗಲಿವೆ ಎಂದು ಜಾಗತಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಟ್ಯಾಲೆಂಟ್ ಸೊಲ್ಯೂಷನ್ಸ್ ಪ್ರೊವೈಡರ್ ಎನ್​​ಎಲ್​​ಬಿ ಸರ್ವೀಸಸ್ (NLB Services) ವರದಿ ತಿಳಿಸಿದೆ.

ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯಂತಹ ಎಂಎಸ್ಎಂಇ ವಲಯದ ಅನೇಕ ಉದಯೋನ್ಮುಖ ಕೈಗಾರಿಕೆಗಳಲ್ಲಿ ಹೊಸ ಉದ್ಯೋಗಗಳ ಸಂಖ್ಯೆಯು ಏರಿಕೆಯಾಗುವ ಸಾಧ್ಯತೆಯಿದೆ.

"633.9 ಲಕ್ಷ ಉದ್ಯಮಗಳಿಗೆ ನೆಲೆಯಾಗಿರುವ ಭಾರತವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಲವಾದ ಹಾಗೂ ಬೆಳೆಯುತ್ತಿರುವ ಸಮೂಹವನ್ನು ಹೊಂದಿದೆ. ಇದು ಭಾರತದಾದ್ಯಂತ, ವಿಶೇಷವಾಗಿ ಶ್ರೇಣಿ 2 ಮತ್ತು 3 ಪ್ರದೇಶಗಳಲ್ಲಿ ಸಾಮೂಹಿಕ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ" ಎಂದು ಎನ್ಎಲ್​ಬಿ ಸರ್ವೀಸಸ್​ನ ಸಿಇಒ ಸಚಿನ್ ಅಲುಗ್ ಹೇಳಿದರು.

ಇಂದು ಒಟ್ಟಾರೆ ಕೈಗಾರಿಕೆಗಳ ಪೈಕಿ ಶೇಕಡಾ 96 ರಷ್ಟು ಸಣ್ಣ ಉದ್ಯಮಗಳಾಗಿದ್ದು, ಇವು ದೇಶದ ಎರಡನೇ ಅತಿದೊಡ್ಡ ಉದ್ಯೋಗ ಉತ್ಪಾದಕ ಕಂಪನಿಗಳಾಗಿವೆ. ಒಟ್ಟಾರೆಯಾಗಿ ಎಂಎಸ್ಎಂಇ ವಲಯವು ದೇಶದ ಜಿಡಿಪಿಗೆ ಶೇಕಡಾ 33 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಅಲ್ಲದೇ ಇದು ದೇಶೀಯ ರಂಗದಲ್ಲಿ ಶೇಕಡಾ 62 ರಷ್ಟು ಉದ್ಯೋಗಗಳನ್ನು ನೀಡಿದೆ.

ಡಿಜಿಟಲೀಕರಣದ ಹೆಚ್ಚಳ ಮತ್ತು ಕೊರೊನಾ ಸಾಂಕ್ರಾಮಿಕದ ನಂತರ ಉದ್ಯೋಗಿಗಳ ಬದಲಾವಣೆಯಿಂದ ಪ್ರೇರಿತವಾದ ಎಂಎಸ್ಎಂಇಗಳು ನಿರ್ಮಾಣ, ಉತ್ಪಾದನೆ, ಸಾರಿಗೆ ಮತ್ತು ಪೂರೈಕೆ ಸರಪಳಿ ಇತ್ಯಾದಿ ವಲಯಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಿವೆ. ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಹೆಚ್ಚಿನ ಹೊಸ ಉದ್ಯೋಗಗಳು ಲಭ್ಯವಾಗಲಿವೆ ಎಂದು ವರದಿ ತಿಳಿಸಿದೆ.

ಮಹಿಳಾ ನೇತೃತ್ವದ ಉದ್ಯಮಗಳು ಸೂಕ್ಷ್ಮ ಉದ್ಯಮಗಳ ಪೈಕಿ ಶೇಕಡಾ 20.44, ಸಣ್ಣ ವ್ಯವಹಾರಗಳ ಪೈಕಿ ಶೇಕಡಾ 5.26 ಮತ್ತು ಮಧ್ಯಮ ವ್ಯವಹಾರಗಳ ಪೈಕಿ ಶೇಕಡಾ 2.77 ರಷ್ಟಿವೆ. ಪುರುಷ ಮಾಲೀಕತ್ವದ ಎಂಎಸ್ಎಂಇಗಳಿಗೆ ಹೋಲಿಸಿದರೆ, ಮಹಿಳಾ ನೇತೃತ್ವದ ಎಂಎಸ್ಎಂಇಗಳು ಆದಾಯದಲ್ಲಿ ಉತ್ತಮ ಬೆಳವಣಿಗೆಯನ್ನು ದಾಖಲಿಸಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : 5ಜಿ ಸ್ಪೆಕ್ಟ್ರಮ್ ಹರಾಜು ಮುಕ್ತಾಯ: ₹11 ಸಾವಿರ ಕೋಟಿ ಮೌಲ್ಯದ ಬಿಡ್, ಮುಂಚೂಣಿಯಲ್ಲಿ ಏರ್​ಟೆಲ್ - 5G Spectrum Auction

ETV Bharat Logo

Copyright © 2024 Ushodaya Enterprises Pvt. Ltd., All Rights Reserved.