ETV Bharat / bharat

ಮಗನ ಶಿಕ್ಷಣಕ್ಕಾಗಿ ಜಮೀನು ಅಡವಿಟ್ಟ ಪೋಷಕರು: ಕೆಲ ವರ್ಷಗಳಲ್ಲೇ ಉದ್ಯಮಿಯಾಗಿ ನೂರಾರು ಜನರಿಗೆ ನೌಕರಿ ಕೊಟ್ಟ ಸಾಧಕ - Nilesh Sabe Young Businessman

author img

By ETV Bharat Karnataka Team

Published : Jul 24, 2024, 3:21 PM IST

Updated : Jul 24, 2024, 4:53 PM IST

Nilesh Sabe Young Businessman : ಮಗ ಎಂಜಿನಿಯರ್ ಆಗಬೇಕೆಂದು ಪೋಷಕರು ಎರಡು ಎಕರೆ ಜಮೀನನ್ನು ಅಡಮಾನ ಇಟ್ಟಿದ್ದರು. ಆದರೆ ಮಗ ಇಂಜಿನಿಯರ್ ಆದ ನಂತರ ಆ ಕೆಲಸ ಬಿಟ್ಟು ಉದ್ಯಮಿಯಾಗಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಅವರ ಯಶೋಗಾಥೆ ಹಿಂದಿನ ಪರಿಶ್ರಮ ಹೇಗಿತ್ತು ಅನ್ನೋದನ್ನು ತಿಳಿಯೋಣ.

YOUNG BUSINESSMAN  NILESH SABE YOUNG BUSINESSMAN  NILESH SABE SUCCESS STORY
ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಸಂದರ್ಶಿಸುತ್ತಿರುವ ಯುವ ಉದ್ಯಮಿ (ETV Bharat)
ಉದ್ಯೋಗ ಬಿಟ್ಟು ಉದ್ಯಮಿಯಾದ ರೈತನ ಮಗ; ಐದಾರು ವರ್ಷಗಳಲ್ಲೇ 400ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟ ಸಾಧಕ! (ETV Bharat)

ಅಮರಾವತಿ (ಮಹಾರಾಷ್ಟ್ರ): ಮಗ ಎಂಜಿನಿಯರ್ ಆಗಬೇಕೆಂದು ಪೋಷಕರು ತಮ್ಮ ಎರಡು ಎಕರೆ ಜಮೀನನ್ನು ಅಡಮಾನವಿಟ್ಟು ವ್ಯಾಸಂಗ ಮಾಡಿಸಿದ್ದರು. ಮಗನೂ ಸಹ ತಂದೆ-ತಾಯಿ ಆಸೆಯಂತೆ ಇಂಜಿನಿಯರ್​ ಪದವಿ ಪಡೆದನು. ಪುಣೆಯಲ್ಲಿ 12 ಸಾವಿರ ರೂ. ವೇತನದ ಕೆಲಸವೂ ಸಿಕ್ಕಿತ್ತು. ಆದ್ರೆ ಮಗನ ಕನಸಿನ ಹಾದಿಯೇ ಬೇರೆಯಾಗಿತ್ತು. ಈಗ ಆತ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದು, ತಾನು ಓದಿದ್ದ ಕಾಲೇಜ್​ನಲ್ಲೇ ನೂರಾರು ವಿದ್ಯಾರ್ಥಿಗಳಿಗೆ ಕೆಲಸ ಕೊಡಲು ಮುಂದಾಗಿದ್ದಾರೆ. ಅವರ ಯಶೋಗಾಥೆ ಕುರಿತ ವಿವರ ಇಲ್ಲಿದೆ..

ಪ್ರೊ. ರಾಮ್ ಮೇಘೆ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆ (ETV Bharat)

ಸ್ವಂತ ಉದ್ಯಮದ ಕಲ್ಪನೆ: ಅಕೋಲಾ ಜಿಲ್ಲೆಯ ಬಾಲಾಪುರ ತಾಲೂಕಿನ ಕೊಲಸಾ ಎಂಬ ಪುಟ್ಟ ಗ್ರಾಮದ ನಿವಾಸಿ ರಾಮದಾಸ್ ಸಾಬೆ ಮತ್ತು ನಿರ್ಮಲಾ ಸಾಬೆ ಅವರ ಮಗ ನಿಲೇಶ್ ಸಾಬೆ. ತಮ್ಮ ಮಗ ಇಂಜಿನಿಯರ್​ ಆಗಿ ಒಳ್ಳೆಯ ಕೆಲಸ ಪಡೆದು ತಮ್ಮ ಕಷ್ಟಗಳನ್ನು ನಿವಾರಿಸುತ್ತಾನೆ ಎಂದು ಪೋಷಕರು ಎರಡು ಎಕರೆ ಜಮೀನನ್ನು ಅಡಮಾನವಿಟ್ಟು ವ್ಯಾಸಂಗ ಮಾಡಿಸಿದರು. ತಂದೆ-ತಾಯಿ ಆಸೆಯಂತೆ ಮಗ 2018ರಲ್ಲಿ ಪ್ರೊ. ರಾಮ್ ಮೇಘೆ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದರು. ನಂತರ ಪುಣೆಯ ಕಂಪನಿಯೊಂದರಲ್ಲಿ 12 ಸಾವಿರ ರೂಪಾಯಿ ಸಂಬಳದ ಕೆಲಸ ಪಡೆದರು. ಕೆಲಸ ಸಿಕ್ಕಿದ ಎರಡ್ಮೂರು ತಿಂಗಳಲ್ಲೇ ಅದಕ್ಕೆ ಗುಡ್​ಬೈ ಹೇಳಿದರು. ಬಳಿಕ ಸ್ವಂತ ವ್ಯಾಪಾರ ಮಾಡಬೇಕು ಎಂದು ನಿರ್ಧರಿಸಿದರು.

ಮಗನ ನಿರ್ಧಾರ ಪ್ರೋತ್ಸಾಹಿಸಿದ ಅಪ್ಪ-ಅಮ್ಮ; ಮಗನ ಈ ನಿರ್ಧಾರದಿಂದ ತಂದೆ ರಾಮದಾಸ್ ಸಾಬೆ ಮತ್ತು ತಾಯಿ ನಿರ್ಮಲಾ ಸಾಬೆ ಕೊಂಚ ಆಘಾತಕ್ಕೊಳಗಾದರು. ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಅವರಲ್ಲಿತ್ತು. ಆದರೂ ಸಹ ಅವರು ತಮ್ಮ ಪುತ್ರನ ಮೇಲೆ ವಿಶ್ವಾಸ ಹೊಂದಿದ್ದರು. ಪುತ್ರನ ನಿರ್ಧಾರವನ್ನು ಪ್ರೋತ್ಸಾಹಿಸಿದ ಪೋಷಕರು ಅವನ ಬೆನ್ನು ತಟ್ಟಿ ಮುನ್ನಡೆವಂತೆ ಆಶೀರ್ವದಿಸಿದರು. ಆಗ ಆತನಿಗೆ ತನ್ನ ಹೆತ್ತವರ ಆಶೀರ್ವಾದ ಪ್ರಮುಖ ಶಕ್ತಿಯಾಯಿತು.

ಬಡತನದಲ್ಲಿ ಅರಳಿದ ಪ್ರತಿಭೆ: ನಿಲೇಶ್ ಸಾಬೆ ಅವರು ಆರಂಭದಲ್ಲಿ ದೇಶದ ಪ್ರಮುಖ ಉದ್ಯಮಿಗಳ ಕುರಿತು 'ಸ್ವಿಫ್ಟ್ ಎನ್ ಲಿಫ್ಟ್' ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ಉದ್ಯಮಿಗಳ ಯಶೋಗಾಥೆಯನ್ನು ಪ್ರಸ್ತುತಪಡಿಸುತ್ತಿದ್ದರು. ಇದರೊಂದಿಗೆ ಅನೇಕ ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಹೆಚ್ಚಿನ ಲಾಭವನ್ನು ತರುವ ಮಾಹಿತಿಯನ್ನು ಪ್ರಕಟಿಸಲು ಪ್ರಾರಂಭಿಸಿದರು. ಈ ವ್ಯವಹಾರದಲ್ಲಿ ಯಶಸ್ಸು ಸಿಕ್ಕಿತು. ಇದಕ್ಕಾಗಿ ನೀಲೇಶ್ ಕೆಲವರಿಗೆ ತಮ್ಮ ಜೊತೆ ಕೆಲಸ ಮಾಡುವ ಅವಕಾಶ ಕೊಟ್ಟರು.

ಕೊರೊನಾ ಎಫೆಕ್ಟ್​ಗೆ ಅಂಜದ ಉದ್ಯಮಿ: 2020 ರಲ್ಲಿ ಕೊರೊನಾ ಕಾಡಿತ್ತು. ಆಗ ಎಲ್ಲವೂ ಲಾಕ್​ಡೌನ್ ಆಯಿತು. ನೀಲೇಶ್ ಸಾಬೆಯ ವ್ಯಾಪಾರವೂ ನಿಂತುಹೋಯಿತು. ಮುಂದೆ ಹೇಗೆ ಎಂಬ ಪ್ರಶ್ನೆಯೂ ಅವರ ಮುಂದೆ ಎದುರಾಯಿತು. ಎಲ್ಲೆಡೆ ಲಾಕ್‌ಡೌನ್ ಇದ್ದರೂ ಅಮೆರಿಕದಲ್ಲಿ ಕೆಲವು ಕೈಗಾರಿಕೆಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆಗ ನೀಲೇಶ್ ಅಮೆರಿಕದಲ್ಲಿರುವ ಉದ್ಯಮಿಗಳನ್ನು ಸಂಪರ್ಕಿಸಿದರು. ಅಮೆರಿಕದ ಹಲವು ಉದ್ಯಮಿಗಳು ನೀಲೇಶ್ ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ನೀಲೇಶ್ ಅವರ ನಿಯತಕಾಲಿಕೆಗಳಲ್ಲಿ ಅಮೆರಿಕದ ಉದ್ಯಮಿಗಳ ಯಶೋಗಾಥೆಗಳು ಪ್ರಕಟವಾಗತೊಡಗಿದವು. ಕೊರೊನಾ ಅವಧಿಯು ಅನೇಕರಿಗೆ ಬಿಕ್ಕಟ್ಟಾಗಿದ್ದರೂ, ನೀಲೇಶ್​ಗೆ ಮಾತ್ರ ವರವಾಯಿತು.

ಸ್ವಿಫ್ಟ್​ ಎನ್​ ಲಿಫ್ಟ್ ಕಂಪನಿ ಆರಂಭ:​ ಆರಂಭದಲ್ಲಿ, ನೀಲೇಶ್ ಸಾಬೆ ಉದ್ಯಮ ಜಗತ್ತಿಗೆ ಸಂಬಂಧಿಸಿದ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರ ನಿಯತಕಾಲಿಕವು ಅಮೆರಿಕದಲ್ಲಿ ಪ್ರಕಟವಾದ ನಂತರ, ಅವರ ವ್ಯವಹಾರವು ಅಮೆರಿಕ ಮತ್ತು ಭಾರತದಲ್ಲಿನ ವ್ಯಾಪಾರ ಜಗತ್ತಿನಲ್ಲಿ ಪ್ರಸಿದ್ಧವಾಯಿತು. ನಂತರ, ನೀಲೇಶ್ ಸಾಬೆ ಅವರ 'ಸ್ವಿಫ್ಟ್ ಎನ್ ಲಿಫ್ಟ್' ಕಂಪನಿಯು ಈ ಮಾಸಿಕ ಪ್ರಕಟಣೆಯೊಂದಿಗೆ ಉದ್ಯಮಿಗಳ ಸರಕುಗಳ ಪ್ರದರ್ಶನವನ್ನು ಆಯೋಜಿಸಲು ಪ್ರಾರಂಭಿಸಿತು. ಸ್ವಿಫ್ಟ್ ಎನ್ ಲಿಫ್ಟ್ ಕಂಪನಿಯು ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಜಗತ್ತಿಗೆ ತಿಳಿಸಲು ವಿಶೇಷ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿತು. ಇದು ಉದ್ಯಮಿಗಳಿಗೆ ಸಾಫ್ಟ್‌ವೇರ್, ಅಭಿವೃದ್ಧಿ ಭದ್ರತೆ, ಸಿಸಿಟಿವಿ ಭದ್ರತೆಯಂತಹ ಸೌಲಭ್ಯಗಳನ್ನು ನೀಡಲು ಪ್ರಾರಂಭಿಸಿತು. ತಮ್ಮ ಕಂಪನಿಯ ಉದ್ಯೋಗಿಗಳ ಹೊರತಾಗಿ ಸಮಾಜದಲ್ಲಿ ಉದ್ಯಮಿಗಳಿಗೆ ಹೊಸ ಗುರುತನ್ನು ನೀಡುವ ಸಲುವಾಗಿ, ಸ್ವಿಫ್ಟ್ ಎನ್ ಲಿಫ್ಟ್ ಅವರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲು ಪ್ರಾರಂಭಿಸಿತು. ಈ ಪ್ರಶಸ್ತಿ ಪ್ರದರ್ಶನವು ಕಂಪನಿಯ ಬೆಳವಣಿಗೆಗೆ ಪ್ರಮುಖವಾಯಿತು.

ನೂರಾರು ಯುವಕರಿಗೆ ಉದ್ಯೋಗ: 2018ರಲ್ಲಿ ಪುಣೆಯಲ್ಲಿ ಐಟಿ ಇಂಜಿನಿಯರ್ ಆಗಿ ಎರಡರಿಂದ ಮೂರು ತಿಂಗಳ ಕಾಲ 12 ಸಾವಿರ ರೂ.ಗೆ ಕೆಲಸ ಮಾಡಿದ ನೀಲೇಶ್ ಸಾಬೆ ಈಗ ತಮ್ಮ ಕಂಪನಿಯಲ್ಲಿ ನೂರಾರು ಯುವಕರಿಗೆ ಉದ್ಯೋಗಾವಕಾಶ ಒದಗಿಸುತ್ತಿದ್ದಾರೆ. ಇಂದು ನೀಲೇಶ್ ಸಾಬೆ ಅವರ ಸ್ವಿಫ್ಟ್ ಎನ್ ಲಿಫ್ಟ್ ಕಂಪನಿಯು 70ಕ್ಕೂ ಹೆಚ್ಚು ಐಟಿ ಇಂಜಿನಿಯರ್‌ಗಳನ್ನು ನೇಮಿಸಿಕೊಂಡಿದೆ. ಈ ಕಂಪನಿಯಲ್ಲಿ 350ಕ್ಕೂ ಹೆಚ್ಚು ಎಂಬಿಎ ಪದವೀಧರರಿದ್ದಾರೆ. ಸಮೂಹ ಸಂವಹನ ಕ್ಷೇತ್ರದಲ್ಲಿ 12 ವ್ಯಕ್ತಿಗಳು ಮತ್ತು ಗ್ರಾಫಿಕ್ಸ್ ಮತ್ತು ವಿಡಿಯೋ ಎಡಿಟಿಂಗ್ ಕ್ಷೇತ್ರದಲ್ಲಿ 11 ಜನರು ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ನೀಲೇಶ್ ಸಾಬೆ, ಸಂಸ್ಥೆಗೆ ಇನ್ನೂ 100 ರಿಂದ 150 ಯುವಕರ ಅಗತ್ಯವಿದ್ದು, ತಮ್ಮ ಕಾಲೇಜಿನ ಯುವಕರಿಗೆ ಉದ್ಯೋಗ ನೀಡಲು ಅಮರಾವತಿಗೆ ಬಂದಿರುವುದಾಗಿ ತಿಳಿಸಿದರು.

60 ಕೋಟಿ ರೂ. ವಹಿವಾಟು: ತೀರಾ ಸಾಮಾನ್ಯ ರೈತನ ಮಗನೊಬ್ಬ ಇಂದು 60 ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮವನ್ನು ಹೊಂದಿರುವುದು ಸರಳ ವಿಷಯವೇನಲ್ಲ. ಅವರು 2018 ರಲ್ಲಿ ಪದವಿ ಪಡೆದರು. ಕೇವಲ ಐದಾರು ವರ್ಷಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ವಿದ್ಯಾರ್ಥಿ ನಿಲೇಶ್ ಸಾಬೆ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ವಿದರ್ಭ ಯೂತ್ ವೆಲ್ಫೇರ್ ಸೊಸೈಟಿ ನಡೆಸುತ್ತಿರುವ ಪ್ರೊ. ರಾಮ್ ಮೇಘೆ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಪ್ರಾಂಶುಪಾಲ ಡಾ. ದಿನೇಶ್ ಹರ್ಕುಟ್ ಮೆಚ್ಚುಗೆಯ ಮಾತುಗಳನ್ನಾಡಿದರು.

ಸಂತಸ ವ್ಯಕ್ತಪಡಿಸಿದ ಶಿಕ್ಷಕರು: ಸಂಸ್ಥೆಯ ಅಧ್ಯಕ್ಷ ಡಾ. ನಿತಿನ್ ದಾಂಡೆ, ಉಪಾಧ್ಯಕ್ಷ ಡಾ. ಉದಯ್​ ದೇಶಮುಖ್​, ಖಜಾಂಚಿ ಡಾ. ಹೇಮಂತ್ ದೇಶಮುಖ್​, ಕಾರ್ಯದರ್ಶಿ ಯುವರಾಜ್ ಚೌಧರಿ, ಸದಸ್ಯರಾದ ನಿತಿನ್ ಹಿವ್ಸೆ, ಡಾ. ಪೂನಮ್ ಚೌಧರಿ, ಪಂಕಜ್ ದೇಶಮುಖ್, ಪ್ರೊ. ವಿನಯ್ ಗೋಹಾಡ್ ಪ್ರೈ. ಗಜಾನನ ಕಾಳೆ ಸೇರಿದಂತೆ ಶಿಕ್ಷಕ ವೃಂದ ನೀಲೇಶ್ ಸಾಬೆ ಅವರನ್ನು ಕಾಲೇಜಿಗೆ ಸ್ವಾಗತಿಸಿದರು. ಬಳಿಕ ಮಾತನಾಡಿದ ಪ್ರೊ. ಭಗತ್, ತಮ್ಮ ಕಾಲೇಜಿನ ವಿದ್ಯಾರ್ಥಿಯಾಗಿರುವ ಉದ್ಯಮಿ ನೀಲೇಶ್ ಸಾಬೆ ಅವರ ಸಾಧನೆಯನ್ನು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಮಾದರಿಯಾಗಿ ಅನುಸರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಓದಿ: ಬಡತನದಲ್ಲಿ ಅರಳಿದ ಯುವ ಪ್ರತಿಭೆ: ಪ್ರತಿಷ್ಠಿತ ಕಂಪನಿಯಲ್ಲಿ ₹ 52 ಲಕ್ಷ ಪ್ಯಾಕೇಜ್‌, ರೈತನ ಮಗಳ ಯಶೋಗಾಥೆ - Young Woman Got Rs 52 Lakhs Package

Last Updated : Jul 24, 2024, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.